• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ramanagar: ಡಿಕೆಶಿ ಕರ್ಮಕಾಂಡಕ್ಕೆ ಪರ್ಮನೆಂಟ್ ಜಾಗ ತಿಹಾರ್ ಜೈಲು ಎಂದ ಅಶ್ವಥ್ ನಾರಾಯಣ್

Ramanagar: ಡಿಕೆಶಿ ಕರ್ಮಕಾಂಡಕ್ಕೆ ಪರ್ಮನೆಂಟ್ ಜಾಗ ತಿಹಾರ್ ಜೈಲು ಎಂದ ಅಶ್ವಥ್ ನಾರಾಯಣ್

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ಅದೊಂದು ಜೈಲುಹಕ್ಕಿ ಈಗ ಬೇಲ್ ನಲ್ಲಿ ಆಚೆ ಇದೇ. ಅವರ ಕರ್ಮಕಾಂಡಕ್ಕೆ ಪರ್ಮನೆಂಟ್ ಜಾಗ ತಿಹಾರ್ ಜೈಲು. ನಮಗೆ ಗೌರವ ಹೆಚ್ಚಿಸುವ ರೀತಿ ಮೊದಲು ಕರ್ನಾಟಕದಿಂದ ತಿಹಾರ್ ಜೈಲಿಗೆ ಹೋಗಿದ್ದು ಡಿ.ಕೆ.ಶಿವಕುಮಾರ್ ಎಂದಿದ್ದಾರೆ ಅಶ್ವಥ್ ನಾರಾಯಣ್

  • Share this:

ರಾಮನಗರ(ಮೇ.13) ಸಚಿವ ಅಶ್ವಥ್ ನಾರಾಯಣ (Ashwath Narayan) ಕಾಂಗ್ರೆಸ್ ನಾಯಕ (Congress Leader) ಎಂ.ಬಿ.ಪಾಟೀಲ್ ಭೇಟಿ ವಿಚಾರವಾಗಿ ಕೆ.ಪಿ.ಸಿ.ಸಿ ಅಧ್ಯಕ್ಷ (KPCC President) ಡಿ.ಕೆ.ಶಿವಕುಮಾರ್ (DK Shivakumar) ಆರೋಪಕ್ಕೆ ರಾಮನಗರದಲ್ಲಿ (Ramnagar) ಅಶ್ವಥ್ ನಾರಾಯಣ ತಿರುಗೇಟು ನೀಡಿದ್ದಾರೆ. ಇದು ಶುದ್ಧು ಸುಳ್ಳು, ಅವರನ್ನ ಭೇಟಿಯಾಗುವ ಅವಶ್ಯಕತೆ ನನಗೆ ಇಲ್ಲ, ಸ್ನೇಹಿತರು, ಆದರೆ ನಾನು ಭೇಟಿ ಆಗಿಲ್ಲ. ಭೇಟಿ ಆಗಬೇಕು ಅಂದರೆ ಅಗ್ತೀನಿ, ಇವರನ್ನ ಕೇಳಿ ಭೇಟಿ ಆಗಬೇಕಾ ನಾನು ಎಂದರು. ಇನ್ನು ಆಗಸ್ಟ್ ನಲ್ಲಿ ಮತ್ತೆ ಬಿಜೆಪಿ ಟಾರ್ಗೆಟ್ (BJP Target) ವಿಚಾರವಾಗಿ  ಡಿ.ಕೆ.ಶಿವಕುಮಾರ್ ಹೇಳಿಕೆ ಗೆ ಮಾತನಾಡಿ ಸ್ವಾಮಿ‌ ಟಾರ್ಗೆಟ್ ಅಲ್ಲ, ಅದೊಂದು ಜೈಲುಹಕ್ಕಿ ಈಗ ಬೇಲ್ ನಲ್ಲಿ ಆಚೆ ಇದೇ. ಅವರ ಕರ್ಮಕಾಂಡಕ್ಕೆ ಪರ್ಮನೆಂಟ್ ಜಾಗ ತಿಹಾರ್ ಜೈಲು (Prison). ನಮಗೆ ಗೌರವ ಹೆಚ್ಚಿಸುವ ರೀತಿ ಮೊದಲು ಕರ್ನಾಟಕದಿಂದ (Karnataka) ತಿಹಾರ್ ಜೈಲಿಗೆ ಹೋಗಿದ್ದು ಡಿ.ಕೆ.ಶಿವಕುಮಾರ್. ಭ್ರಷ್ಟಾಚಾರಕ್ಕೆ (Corruption) ಇನ್ನೊಂದು ಹೆಸರೇ ಶಿವಕುಮಾರ್, ಶಿವಕುಮಾರ್ ಅಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದರೆ ಶಿವಕುಮಾರ್ ಎಂದಿದ್ದಾರೆ.


ಜೈಲಿಹಕ್ಕಿಗೆ ಯಾವುದೇ ರೂಪುರೇಷೆ ಮಾಡಬೇಕಿಲ್ಲ, ಅವರೇ ಮಾಡಿಕೊಂಡಿದ್ದಾರೆ. ಸಿಕ್ಕಿದ್ದೆಲ್ಲ ಲೂಟಿ ಹೊಡೆಯೋದು, ಭ್ರಷ್ಟಾಚಾರ ಅಂದರೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿ. ನಾನು ಗಲೀಜು ಇನ್ನೊಬ್ಬರ ಮೇಲೂ ಮಸಿ ಬಳಿಯಲು ಪ್ರಯತ್ನ ಮಾಡಿದ್ದಾರೆ.


ನಾನು ಬಂದಿರೋದು ಕೊಡೋದಕ್ಕೆ, ಅವರು ಬಂದಿರೋದು ತಗೊಳೋದಕ್ಕೆ


ಅಶ್ವಥ್ ನಾರಾಯಣ ರಾಜಕೀಯಕ್ಕೆ ಬಂದಿರೋದು ಕೊಡೋದಕ್ಕೆ, ಶಿವಕುಮಾರ್ ನಂಗೆ ತಗೊಳ್ಳಲು ಅಲ್ಲ. ಇಂತಹ ನೂರು ಜನ ಹುಟ್ಟಿ ಬಂದರೂ, ಶಿವಕುಮಾರ್ ನೂರು ಜನ್ಮ ಎತ್ತಿ ಬಂದರೂ ಮಸಿ ಬಳಿಯಲು ಆಗಲ್ಲ ನನಗೆ ಎಂದಿದ್ದಾರೆ.


ಇದನ್ನೂ ಓದಿ: Tumakuru: ಅವಳ ಜೊತೆಯಲ್ಲೇ ಮದ್ವೆ ಆಗ್ತೀನಿ: ಪೊಲೀಸರ ಮುಂದೆ ಬಂದ ಗೆಳತಿಯರು


ಸ್ವಲ್ಪ ಮಾನಮರ್ಯಾದೆ ಇದ್ದರೆ ದಾಖಲೆ ಬಿಡುಗಡೆ ಮಾಡಲಿ. ಮಾನಮರ್ಯಾದೆ ಇರೋರು ಮಾಡೋ ಕೆಲಸ ನಾ ಇದು, ಪಕ್ಷಕ್ಕಾದರೂ (Party) ಮಾನಮರ್ಯಾದೆ ಬೇಡ್ವಾ ಅವರಿಗೆ. ಮಾನಮರ್ಯಾದೆ ಇಲ್ಲದೆ ಒಬ್ಬ ವ್ಯಕ್ತಿಯ ತೇಜೋವಧೆ ಮಾಡಲು ಹೊರಟ್ಟಿದ್ದಾರೆ ಎಷ್ಟು ಸರಿ.‌ ಸಿದ್ದರಾಮಯ್ಯ (Siddaramaiah) ಜೈಲಿಗೆ ಹೋದವರು ಅಂತಾರೆ ಆದರೆ ಅವರ ಅಧ್ಯಕ್ಷನೆ ಜೈಲಿಗೆ ಹೋದವನು ಎಂದಿದ್ದಾರೆ


ಜನರಿಗಾಗಿ ಬಂದವನು ನಾನು


ಶಿವಕುಮಾರ್ ಒಬ್ಬ ನಮಗೆ ಅವಮಾನ ಎಂದಿದ್ದಾರೆ. ಹಣಕ್ಕೆ, ಅಧಿಕಾರಕ್ಕೆ, ಕುಟುಂಬ ರಾಜಕಾರಣಕ್ಕೆ (Politics) ಬಂದಿಲ್ಲ ನಾನು.  ನಾನು ಜನರಿಗಾಗಿ ಬಂದಿರುವವನು, ಸ್ಪಷ್ಟತೆ ಇದೇ, ಬೆಳಗ್ಗೆ ಎದ್ದರೆ ಏನ್ ಸಿಗುತ್ತೆ ಹಾಕೋಳೋಣ, ಜೇಬಿಗೆ ಕೈಹಾಕೋಣ, ಲೂಟಿ ಮಾಡೋಣ ಅಂತಾ ಇರಬಾರದು. ರಾಜಕಾರಣಿ ಅಂದರೆ ಸ್ವಲ್ಪವಾದರೂ ಗೌರವ (Respect) ಇರಬೇಕು ಎಂದಿದ್ದಾರೆ.


ಇದನ್ನೂ ಓದಿ: Women's Awareness: ಮಹಿಳೆಯರಲ್ಲಿನ ಭಯ ಓಡಿಸಲು ಬೈಕ್ ರೈಡಿಂಗ್! ಪ್ರತಿ ಜಿಲ್ಲೆಯನ್ನೂ ತಲುಪುತ್ತಿದ್ದಾರೆ ಈ ನಾರಿಯರು


ಜೈಲುಹಕ್ಕಿಯ ಮಾತನ್ನ ಯಾರು ನಂಬಲ್ಲ, ಕೇಳೋದು ಇಲ್ಲ. ಎಲ್ಲಿದ್ದರೂ, ಹೇಗಿದ್ದರೂ ಅಂತಾ ಎಲ್ಲರಿಗೂ ಗೊತ್ತಿದೆ, ಮನೆಮನೆ ಮಾತು ಜೈಲುಹಕ್ಕಿ. ನಮ್ಮ ಪಕ್ಷದಲ್ಲಿ ನನ್ನ ವಿರುದ್ಧ ಇರೋರು ಯಾರು ಇಲ್ಲ ಎಂದರು. ಇನ್ನು ಸಿಎಂ ಸ್ಥಾನಕ್ಕೆ ಅರ್ಜಿ (Application) ಹಾಕಿಲ್ಲ, ಈಗ ಖಾಲಿಯೂ ಇಲ್ಲ, ಪಕ್ಷ ನಿಶ್ಚಯ ಮಾಡಲಿದೆ ಸಿಎಂ ಯಾರು ಎಂದು ರಾಮನಗರದಲ್ಲಿ ಸಚಿವ ಅಶ್ವಥ್ ನಾರಾಯಣ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದರು.

Published by:Divya D
First published: