• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Media Academy Awards: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ, ನೆಟ್‌ವರ್ಕ್‌ 18ಗೆ ಒಲಿದು ಬಂತು 2 ಅವಾರ್ಡ್ಸ್

Media Academy Awards: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ, ನೆಟ್‌ವರ್ಕ್‌ 18ಗೆ ಒಲಿದು ಬಂತು 2 ಅವಾರ್ಡ್ಸ್

ಡಿಪಿ ಸತೀಶ್, ಗ್ರೂಪ್ ಎಡಿಟೋರಿಯಲ್ ಅಡ್ವೈಸರ್ -Network18

ಡಿಪಿ ಸತೀಶ್, ಗ್ರೂಪ್ ಎಡಿಟೋರಿಯಲ್ ಅಡ್ವೈಸರ್ -Network18

ನೆಟ್‌ವರ್ಕ್ 18 (Network 18) ಮುಡಿಗೆ ಈ ಬಾರಿ 2 ಪ್ರಶಸ್ತಿಗಳು ಸೇರಿವೆ. ಹಿರಿಯ ಪತ್ರಕರ್ತ (Senior Journalist) ಹಾಗೂ ನೆಟ್‌ವರ್ಕ್ 18ನ ಗ್ರೂಪ್ ಎಡಿಟೋರಿಯಲ್ ಅಡ್ವೈಸರ್ (ಸೌತ್) ಡಿಪಿ ಸತೀಶ್, ನ್ಯೂಸ್ 18 ಕನ್ನಡ ವಾಹಿನಿ ಹಿರಿಯ ರಾಜಕೀಯ ವರದಿಗಾರ ಚಿದಾನಂದ ಪಟೇಲ್‌ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ (Karnataka Media Academy Award) ಪ್ರಕಟಗೊಂಡಿದೆ. 2019, 2020, 2021 ಮತ್ತು, 2022ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ. ನಾಲ್ಕು ವರ್ಷಗಳ ಪ್ರಶಸ್ತಿಗೆ ವಿವಿಧ ಸುದ್ದಿವಾಹಿನಿ (news channels), ಪತ್ರಿಕೆಗಳ (Paper) ಒಟ್ಟು 124 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ನೆಟ್‌ವರ್ಕ್ 18 (Network 18) ಮುಡಿಗೆ ಈ ಬಾರಿ 2 ಪ್ರಶಸ್ತಿಗಳು ಸೇರಿವೆ. ಹಿರಿಯ ಪತ್ರಕರ್ತ (Senior Journalist) ಹಾಗೂ ನೆಟ್‌ವರ್ಕ್ 18ನ ಗ್ರೂಪ್ ಎಡಿಟೋರಿಯಲ್ ಅಡ್ವೈಸರ್ (ಸೌತ್) ಡಿಪಿ ಸತೀಶ್, ನ್ಯೂಸ್ 18 ಕನ್ನಡ ವಾಹಿನಿ ಹಿರಿಯ ರಾಜಕೀಯ ವರದಿಗಾರ ಚಿದಾನಂದ ಪಟೇಲ್‌ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


    4 ವರ್ಷದ ಪ್ರಶಸ್ತಿ ಪ್ರಕಟ


    ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ ಈ ಬಾರಿ 4 ವರ್ಷಗಳ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ. ಈ ಹಿಂದೆ ರಾಜ್ಯಾದ್ಯಂತ ಕೊರೊನಾ ಅಬ್ಬರ ಇದ್ದ ಕಾರಣ ಮಾಧ್ಯಮ ಅಕಾಡೆಮಿ ಕಳೆದ ಎರಡು ವರ್ಷ ಪ್ರಶಸ್ತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ 2019, 2020, 2021 ಹಾಗೂ 2022ರ ವರೆಗೆ ಒಟ್ಟು ನಾಲ್ಕು ವರ್ಷಗಳ ಪ್ರಶಸ್ತಿಯನ್ನು ಈ ಬಾರಿ ನೀಡಲಾಗುತ್ತದೆ.


    ಡಿಪಿ ಸತೀಶ್, ಗ್ರೂಪ್ ಎಡಿಟೋರಿಯಲ್ ಅಡ್ವೈಸರ್ -Network18


    ಮಾಧ್ಯಮ ವಾರ್ಷಿಕ ಪ್ರಶಸ್ತಿಗೆ ಒಟ್ಟು 124 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ನ್ಯೂಸ್ ಚಾನೆಲ್, ಪತ್ರಿಕೆ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಕಾರ್ಯ ಸಾಧನೆ ಪರಿಗಣಿಸಿ ಈ ಪ್ರಶಸ್ತಿಗೆ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ಇನ್ನು 21 ಪತ್ರಕರ್ತರನ್ನು ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


    ಇದನ್ನೂ ಓದಿ: Padma Awards: ಪದ್ಮ ಪ್ರಶಸ್ತಿಗಳು ಏಕೆ ಶ್ರೇಷ್ಠ? ಈ ಅವಾರ್ಡ್‌ಗೆ ಸಾಧಕರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?


    ನೆಟ್‌ವರ್ಕ್ 18 ಗರಿಗೆ ಎರಡು ಪ್ರಶಸ್ತಿಗಳು


    ಈ ಹಿಂದೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನವಾದ ನಿಮ್ಮ ನೆಟ್‌ವರ್ಕ್ 18ಗೆ ಈ ಬಾರಿ 2 ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಅರಸಿ ಬಂದಿವೆ. ರಾಜ್ಯದ ಹಿರಿಯ ಪತ್ರಕರ್ತ ಹಾಗೂ ನೆಟ್‌ವರ್ಕ್ 18ನ ಗ್ರೂಪ್ ಎಡಿಟೋರಿಯಲ್ ಅಡ್ವೈಸರ್ (ಸೌತ್) ಡಿಪಿ ಸತೀಶ್, ನ್ಯೂಸ್ 18 ಕನ್ನಡ ವಾಹಿನಿ ಹಿರಿಯ ರಾಜಕೀಯ ವರದಿಗಾರ ಚಿದಾನಂದ ಪಟೇಲ್‌ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.


    ಚಿದಾನಂದ ಪಟೇಲ್, ಹಿರಿಯ ರಾಜಕೀಯ ವರದಿಗಾರ, ನ್ಯೂಸ್ 18 ಕನ್ನಡ


    ಸಭೆಯಲ್ಲಿ ಪತ್ರಕರ್ತರ ಆಯ್ಕೆ


    ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ 2019 ಮಾಧ್ಯಮ ವಾರ್ಷಿಕ ಪ್ರಶಸ್ತಿಗೆ ವಿವಿಧ ಸಾಧಕ ಪತ್ರಕರ್ತರನ್ನು ಆಯ್ಕೆ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

    Published by:Annappa Achari
    First published: