ಬೆಂಗಳೂರು(ಡಿ.22): 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections) ರಾಜಕೀಯ ನಾಯಕರು ಸಜ್ಜಾಗುತ್ತಿದ್ದಾರೆ. ಎಲ್ಲಾ ರೀತಿಯ ತಯಾರಿ ಆರಂಭಿಸಿದ್ದಾರೆ. ಆದರೀಗ ಈ ಸಿದ್ಧತೆಗಳ ನಡುವೆಯೇ ಅವಧಗೂ ಮೊದಲೇ ಚುನಾವಣೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ. ಹೌದು ಚೀನಾ ಸೇರಿದಂತೆ ವಿಶ್ವದ ಒಟ್ಟು ಐದು ರಾಷ್ಟ್ರಗಳಲ್ಲಿ ಕೊರೋನಾ (Coronavirus) ನಿಯಂತ್ರಣ ಮೀರಿ ವ್ಯಾಪಿಸಿದೆ. ವೈದ್ಯಕೀಯ ಸೌಲಭ್ಯಗಳ ಕೊರತೆಯೂ ಕೂಡ ಬಂದಿದೆ. ಹೀಗಿರುವಾಗ ಭಾರತದಲ್ಲೂ ಈ ಹೊಸ ತಳಿ ಹರಡುವ ಶಂಕೆ ವ್ಯಕ್ತವಾಗಿದ್ದು, ಈಗಾಗಲೇ ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಟ್ಟು ನಿಟ್ಟಿನ ಕ್ರಮ ವಹಿಸುವಂತೆ ಆದೇಶ ಜಾರಿಗೊಳಿಸಿದೆ. ಈ ಆದೇಶದ ಬೆನ್ನಲ್ಲೇ ರಾಜ್ಯದಲ್ಲಿ ಚುನಾವಣಾ ಸಿದ್ಧತೆ ನಡೆಸುವಂತೆ ಸಿಎಂ ಬೊಮ್ಮಾಯಿ (CM Basavaraj Bommai) ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ಗೆ ಸೂಚನೆ ನೀಡಿದ್ದಾರೆ.
ಹೌದು ಸಿಎಂ ಬಸವರಾಜ್ ಬೊಮ್ಮಾಯಿ ಅವಧಿಗೂ ಮುನ್ನ ಚುನಾವಣೆ ನಡೆಯುವ ಸುಳಿವು ನೀಡಿದ್ದಾರೆ. ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ಗೆ ಚುನಾವಣೆಗೆ ಎಲ್ಲಾ ತಯಾರಿ ಮಾಡಿಕೊಳ್ಳಲು, ಇದಕ್ಕಾಗಿ ಪೊಲೀಸ್ ಇಲಾಖೆ ಸಜ್ಜುಗೊಳಿಸಲು ಸಿಎಂ ಸೂಚನೆ ನೀಡಿದ್ದಾರೆನ್ನಲಾಗಿದೆ. ಕೋವಿಡ್ನ ಹೊಸ ತಳಿ ವ್ಯಾಪಿಸುವ ಮುನ್ನ ಚುನಾವಣೆ ನಡೆಯಬಹುದು ಎಂದು ಬೊಮ್ಮಾಯಿ ಡಿಜಿಗೆ ಸುಳಿವು ಕೊಟ್ಟಿದ್ದಾರೆ.
Election Analyst Career: ಚುನಾವಣಾ ವಿಶ್ಲೇಷಕರಾಗುವುದು ಹೇಗೆ? ಎಲೆಕ್ಷನ್ ಸೀಸನ್ನಲ್ಲಿ ಭರ್ಜರಿ ಆದಾಯ
ಕೊರೋನಾ ವ್ಯಾಪಿಸುವ ಮುನ್ನ ಚುನಾವಣೆ: ಡಿಕೆಶಿ
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಅವಧಿಗೂ ಮುನ್ನ ಚುನಾವಣೆ ನಡೆಯೋ ಮಾಹಿತಿ ಬಂದಿದೆ. ದೆಹಲಿಯಿಂದಲೂ ಪದೇ ಪದೆ ಕರೆ ಬರುತ್ತಿದೆ. ಕೋವಿಡ್ ಬರುವ ಮುಂಚೆ ಚುನಾವಣೆ ನಡೆಸಬೇಕು ಎಂದುಕೊಂಡಿದ್ದಾರೆ. ನನಗೂ ಸಿಎಂ ಡಿಜಿ ಜೊತೆ ಮೀಟಿಂಗ್ ಮಾಡಿರೋ ಮಾಹಿತಿ ಬಂದಿದೆ. ರಾಹುಲ್ ಗಾಂಧಿ ಪಾದಯಾತ್ರೆ ನಿಲ್ಲಿಸಿ ಎಂದು ನೋಟೀಸ್ ನೀಡಿದ್ದಾರೆ. ಪಾದಯಾತ್ರೆ ಜನಪ್ರಿಯತೆ ಕಾರಣಕ್ಕಾಗಿ ಕೋವಿಡ್ ಹೆಸರಿನಲ್ಲಿ ನಿಲ್ಲಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ