Karnataka Dams Water Level: ಜಲಾಶಯಗಳಿಂದ ಹೊರ ಹರಿವು ಹೆಚ್ಚಳ; ಡ್ಯಾಂಗಳ ಇಂದಿನ ನೀರಿನ ಮಟ್ಟ ಹೀಗಿದೆ

ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಮಾನ್ಸೂನ್ ಆರಂಭವಾಗಿದ್ದು ನಿತ್ಯ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಇದರ ಪರಿಣಾಮದಿಂದಾಗಿ ಮತ್ತೆ ನೀರಿನ ಹರಿವು ಏರಿದ್ದು ರಾಜ್ಯದ ವಿವಿಧ ಜಲಾಶಯಗಳು ಮತ್ತೆ ತುಂಬಲು ಪ್ರಾರಂಭಿಸಿವೆ.

ತುಂಗಭದ್ರಾ ಜಲಾಶಯ

ತುಂಗಭದ್ರಾ ಜಲಾಶಯ

  • Share this:
ರಾಜ್ಯದೆಲ್ಲೆಡೆ ಮಳೆ (Karnataka Rains) ಅಬ್ಬರ ಜೋರಾಗಿದೆ. ಹಳ್ಳ, ಕೆರೆ, ಜಲಪಾತಗಳೆಲ್ಲಾ ಧುಮ್ಮಿಕ್ಕಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ನದಿಗಳಿಗೆ  (Rivers) ಬಾಗೀನ ಸಹ ಅರ್ಪಿಸಲಾಗುತ್ತಿದೆ. ನೀರು, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ (Agriculture) ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು (Water) ಒದಗಿಸುವುದು ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಮಾನ್ಸೂನ್ ಆರಂಭವಾಗಿದ್ದು ನಿತ್ಯ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಇದರ ಪರಿಣಾಮದಿಂದಾಗಿ ಮತ್ತೆ ನೀರಿನ ಹರಿವು ಏರಿದ್ದು ರಾಜ್ಯದ ವಿವಿಧ ಜಲಾಶಯಗಳು ಮತ್ತೆ ತುಂಬಲು ಪ್ರಾರಂಭಿಸಿವೆ.

ಇಂದು ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ.

ಕೆಆರ್ ಎಸ್ ಜಲಾಶಯ - KRS Dam
ಗರಿಷ್ಠ ಮಟ್ಟ - 124.80 ಅಡಿ
ಒಟ್ಟು ಸಾಮರ್ಥ್ಯ - 49.45 ಟಿಎಂಸಿ
ಇಂದಿನ ನೀರಿನ ಮಟ್ಟ – 48.34 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 15.713 ಟಿಎಂಸಿ
ಇಂದಿನ ಒಳಹರಿವು – 81,930 ಕ್ಯೂಸೆಕ್ಸ್
ಇಂದಿನ ಹೊರಹರಿವು – 72,466 ಕ್ಯೂಸೆಕ್ಸ್

ಇದನ್ನೂ ಓದಿ:  Shiradi Ghat: ಶಿರಾಡಿ ಘಾಟ್ ಬಂದ್; ಮಂಗಳೂರು ತಲುಪಲು ಈ ರಸ್ತೆ ಬಳಸಿ

ತುಂಗಭದ್ರಾ ಜಲಾಶಯ - Tungabhadra Dam
ಗರಿಷ್ಠ ನೀರಿನ ಮಟ್ಟ - 1,633 ಅಡಿ
ಒಟ್ಟು ಸಾಮರ್ಥ್ಯ- 100.86 ಟಿಎಂಸಿ
ಇಂದಿನ ನೀರಿನ ಮಟ್ಟ – 99.58 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 36.37 ಟಿಎಂಸಿ
ಇಂದಿನ ಒಳಹರಿವು – 1,06,132 ಕ್ಯೂಸೆಕ್ಸ್
ಇಂದಿನ ಹೊರಹರಿವು – 1,43,441 ಕ್ಯೂಸೆಕ್ಸ್

ಕಬಿನಿ ಜಲಾಶಯ-Kabini Dam
ಗರಿಷ್ಠ ನೀರಿನ ಮಟ್ಟ - 2,284 ಅಡಿ
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ನೀರಿನ ಮಟ್ಟ – 18.28 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 16.31 ಟಿಎಂಸಿ
ಇಂದಿನ ಒಳಹರಿವು – 33,455 ಕ್ಯೂಸೆಕ್ಸ್
ಇಂದಿನ ಹೊರಹರಿವು – 30,458 ಕ್ಯೂಸೆಕ್ಸ್

ಆಲಮಟ್ಟಿ ಜಲಾಶಯ-Almatti Dam
ಗರಿಷ್ಠ ಮಟ್ಟ - 1,704 ಅಡಿ
ಒಟ್ಟು ಸಾಮರ್ಥ್ಯ - 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 87.61 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 91.66 ಟಿಎಂಸಿ
ಇಂದಿನ ಒಳಹರಿವು- 1,21,029 ಕ್ಯೂಸೆಕ್ಸ್
ಇಂದಿನ ಹೊರಹರಿವು – 1,25,451 ಕ್ಯೂಸೆಕ್ಸ್

ಭದ್ರಾ ಜಲಾಶಯ-Bhadra Dam
ಗರಿಷ್ಠ ಮಟ್ಟ - 657.73 ಮೀಟರ್
ಒಟ್ಟು ಸಾಮರ್ಥ್ಯ - 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 69.22 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 40.48 ಟಿಎಂಸಿ
ಇಂದಿನ ಒಳಹರಿವು- 47,236 ಕ್ಯೂಸೆಕ್ಸ್
ಇಂದಿನ ಹೊರಹರಿವು – 33,255 ಕ್ಯೂಸೆಕ್ಸ್

ಘಟಪ್ರಭಾ ಜಲಾಶಯ-Ghataprabha Dam
ಗರಿಷ್ಠ ಮಟ್ಟ - 662.91 ಮೀಟರ್
ಒಟ್ಟು ಸಾಮರ್ಥ್ಯ - 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 22.93 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 26.08 ಟಿಎಂಸಿ
ಇಂದಿನ ಒಳಹರಿವು – 25,726 ಕ್ಯೂಸೆಕ್ಸ್
ಇಂದಿನ ಹೊರಹರಿವು – 119 ಕ್ಯೂಸೆಕ್ಸ್

ಮಲಪ್ರಭಾ ಜಲಾಶಯ-Malaprabha Dam
ಗರಿಷ್ಠ ಮಟ್ಟ-633.80 ಮೀಟರ್
ಒಟ್ಟು ಸಾಮರ್ಥ್ಯ - 37.73 ಟಿಎಂಸಿ
ಇಂದಿನ ನೀರಿನ ಮಟ್ಟ – 18.66 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 19.89 ಟಿಎಂಸಿ
ಇಂದಿನ ಒಳಹರಿವು – 14,939 ಕ್ಯೂಸೆಕ್ಸ್
ಇಂದಿನ ಹೊರಹರಿವು - 194 ಕ್ಯೂಸೆಕ್ಸ್

ಹೇಮಾವತಿ ಜಲಾಶಯ-Hemavathi Dam
ಗರಿಷ್ಠ ಮಟ್ಟ - 2,922 ಅಡಿ
ಒಟ್ಟು ಸಾಮರ್ಥ್ಯ - 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 35.56 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 18.38 ಟಿಎಂಸಿ
ಇಂದಿನ ಒಳಹರಿವು – 41,420 ಕ್ಯೂಸೆಕ್ಸ್
ಇಂದಿನ ಹೊರಹರಿವು – 40,250 ಕ್ಯೂಸೆಕ್ಸ್

ಇದನ್ನೂ ಓದಿ: Karnataka Weather Report: ನಿರಂತರ ಮಳೆಗೆ ತುಂಬಿ ಹರಿಯುತ್ತಿರೋ ನದಿಗಳು; ಇಂದು ಸಹ ಈ ಭಾಗದಲ್ಲಿ ವರುಣನ ಅಬ್ಬರ

ವರಾಹಿ ಜಲಾಶಯ-Varahi Dam
ಗರಿಷ್ಠ ಮಟ್ಟ - 594.36 ಮೀಟರ್
ಒಟ್ಟು ಸಾಮರ್ಥ್ಯ - 31.10 ಟಿಎಂಸಿ
ಇಂದಿನ ನೀರಿನ ಮಟ್ಟ- 11.38 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 5.15 ಟಿಎಂಸಿ
ಇಂದಿನ ಒಳಹರಿವು – 8794 ಕ್ಯೂಸೆಕ್ಸ್
ಇಂದಿನ ಹೊರಹರಿವು - 0 ಕ್ಯೂಸೆಕ್ಸ್

ಹಾರಂಗಿ ಜಲಾಶಯ-Harangi Dam
ಗರಿಷ್ಠ ಮಟ್ಟ - 871.38 ಮೀಟರ್
ಒಟ್ಟು ಸಾಮರ್ಥ್ಯ - 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 6.93 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 6.77 ಟಿಎಂಸಿ
ಇಂದಿನ ಒಳಹರಿವು – 13,602 ಕ್ಯೂಸೆಕ್ಸ್
ಇಂದಿನ ಹೊರಹರಿವು – 15,520 ಕ್ಯೂಸೆಕ್ಸ್

ಲಿಂಗನಮಕ್ಕಿ ಜಲಾಶಯ-Linganamakki Dam
ಗರಿಷ್ಠ ಮಟ್ಟ - 554.44 ಮೀಟರ್
ಒಟ್ಟು ಸಾಮರ್ಥ್ಯ - 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 72.61 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 65.5 ಟಿಎಂಸಿ
ಇಂದಿನ ಒಳಹರಿವು – 56,012 ಕ್ಯೂಸೆಕ್ಸ್
ಇಂದಿನ ಹೊರಹರಿವು - 1697 ಕ್ಯೂಸೆಕ್ಸ್

ಸೂಪಾ ಜಲಾಶಯ-Supa Dam
ಗರಿಷ್ಠ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ - 145.33 ಟಿಎಂಸಿ
ಇಂದಿನ ನೀರಿನ ಮಟ್ಟ- 52.74 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 58 ಟಿಎಂಸಿ
ಇಂದಿನ ಒಳಹರಿವು – 44,637 ಕ್ಯೂಸೆಕ್ಸ್
ಇಂದಿನ ಹೊರಹರಿವು - 00 ಕ್ಯೂಸೆಕ್ಸ್
Published by:Mahmadrafik K
First published: