• Home
  • »
  • News
  • »
  • state
  • »
  • Border Conflict: ಇಂದು ಸುಪ್ರೀಂ ಕೋರ್ಟ್​ನಲ್ಲಿ ಬೆಳಗಾವಿ ಗಡಿ ವಿವಾದ ಕೇಸ್ ವಿಚಾರಣೆ; ಕುತೂಹಲಕ್ಕೆ ಇಂದೇ ಬೀಳಲಿದ್ಯಾ ತೆರೆ?

Border Conflict: ಇಂದು ಸುಪ್ರೀಂ ಕೋರ್ಟ್​ನಲ್ಲಿ ಬೆಳಗಾವಿ ಗಡಿ ವಿವಾದ ಕೇಸ್ ವಿಚಾರಣೆ; ಕುತೂಹಲಕ್ಕೆ ಇಂದೇ ಬೀಳಲಿದ್ಯಾ ತೆರೆ?

ಬೆಳಗಾವಿ

ಬೆಳಗಾವಿ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇಂದು ವಿಚಾರಣೆ ಕೈಗೆತ್ತಿಕೊಳ್ಳಲಿರುವ ಸುಪ್ರೀಂ ಕೋರ್ಟ್​, ಅಂತಿಮ ತೀರ್ಪುನ್ನು ಪ್ರಕಟ ಮಾಡೋ ಸಾಧ್ಯತೆ ಇದೆ.

  • News18 Kannada
  • Last Updated :
  • Karnataka, India
  • Share this:

ಬೆಳಗಾವಿ (ನ.23): ಕರ್ನಾಟಕ ಅವಿಭಾಜ್ಯ ಅಂಗ ಆಗಿರೋ ಬೆಳಗಾವಿಯು (Belagavi) ಮಹಾರಾಷ್ಟ್ರಕ್ಕೆ (Maharashtra) ಸೇರಬೇಕು ಎಂದು ಅನೇಕ ದಶಕಗಳಿಂದ ವಾದ ನಡೆಯುತ್ತಿದೆ. ಈ ಬಗ್ಗೆ ಹೋರಾಟ, ಸಂಘರ್ಷ, ಹಿಂಸಾಚಾರದ ಬಳಿಕ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲು ಏರಿದ್ದು ಮಹಾರಾಷ್ಟ್ರ ಸರ್ಕಾರ. ಕರ್ನಾಟಕ ಸರ್ಕಾರ ಗಡಿ ವಿವಾದ ಇತ್ಯರ್ಥ ಮಾಡೋ ಅಧಿಕಾರ ಕೋರ್ಟ್ ಅಲ್ಲ, ಸಂಸತ್ತಿಗೆ ಇದೆ ಎಂದು ವಾದ ಮಾಡುತ್ತಿದೆ. ಕಳೆದ 18 ವರ್ಷಗಳಿಂದ ಸುಪ್ರೀಂ ಕೋರ್ಟ್ ವ್ಯಾಪ್ತಿಯ ಬಗ್ಗೆ ಇತ್ಯರ್ಥವಾಗಿಲ್ಲ. ಇಂದು ಈ ಬಗ್ಗೆ ಅಂತಿಮ ತೀರ್ಮಾನ (Final Conclusion) ಹೊರ ಬರೋ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರದಲ್ಲಿ ಅನೇಕ ಚಟುವಟಿಕೆಗಳು ಆರಂಭವಾಗಿದ್ದು, ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ನತ್ತ ನೆಟ್ಟಿದೆ.


ಎಲ್ಲರ ಚಿತ್ತ ಸುಪ್ರೀಂ ನತ್ತ


ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇಂದು ಅಂತಿಮ ತೀರ್ಪುನ್ನು ಸುಪ್ರೀಂ ಕೋರ್ಟ್ ಪ್ರಕಟ ಮಾಡೋ ನಿರೀಕ್ಷೆ ಇದೆ. ಗಡಿ ವಿವಾದ ಕೋರ್ಟ್ ವ್ಯಾಪ್ತಿಗೆ ಬರುತ್ತೋ? ಇಲ್ವೋ? ಎಂಬ ಬಗ್ಗೆ ಅಂತಿಮ ತೀರ್ಪು ಪ್ರಕಟವಾಗಲಿದೆ.  ಗಡಿ ವಿವಾದ ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರಲ್ಲ ಎಂದು ಕರ್ನಾಟಕ ಪ್ರಬಲ ವಾದ ಮಾಡುತ್ತಲೇ ಬಂದಿದೆ. ಸುಪ್ರೀಂ ಕೋರ್ಟ್ ಅಂತಿಮ ತೀರ್ಪಿಗೆ ಕೌಂಟ್‌ಡೌನ್ ಹಿನ್ನಲೆ ಕರ್ನಾಟಕ, ಮಹಾರಾಷ್ಟ್ರ ಸರ್ಕಾರ ಅಲರ್ಟ್ ಆಗಿವೆ.


accused deported, belagavi news, belagavi crime news, kannada news, karnataka news, ಬೆಳಗಾವಿ ನ್ಯೂಸ್, ಆರೋಪಿಗಳು ಗಡಿಪಾರು
ಸಾಂದರ್ಭಿಕ ಚಿತ್ರ


ಮಹಾರಾಷ್ಟ್ರದಲ್ಲೂ ಮೀಟಿಂಗ್


ಮಹಾರಾಷ್ಟ್ರದಲ್ಲೂ ಮಹತ್ವದ ಹೈಪವರ್ ಮೀಟಿಂಗ್ ನಡೆಸಲಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ, ಡಿಸಿಎಂ ದೇವೆಂದ್ರ ಫಡ್ನವೀಸ್ ಸೇರಿ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಜತೆಗೆ ಇಬ್ಬರು ಸಚಿವರನ್ನು ಗಡಿ ಉಸ್ತುವಾರಿಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.  ಸಚಿವರಾದ ಚಂದ್ರಕಾಂತ ಪಾಟೀಲ್, ಶಂಭುರಾಜೇ ದೇಸಾಯಿ ನೇಮಕ ಮಾಡಲಾಗಿದೆ.


ಕರ್ನಾಟಕ ಕೂಡ ಫುಲ್​ ಅಲರ್ಟ್


ಇನ್ನೂ ಸುಪ್ರೀಂ ತೀರ್ಪು ಪ್ರಕಟದ ನಂತರ ಕಾನೂನು ಕ್ರಮಗಳ ಬಗ್ಗೆ ತಜ್ಞರ ಜೊತೆಗೂ ಸಿಎಂ ಸಭೆ ನಡೆಸಿದ್ದಾರೆ. ಇನ್ನೂ ಕರ್ನಾಟಕ ಸಹ ಅಲರ್ಟ್ ಆಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿ ಕಾನೂನು ಕ್ರಮಗಳ ಗಂಭೀರ ಚರ್ಚೆ ನಡೆಸಿದ್ದಾರೆ. ಗಡಿ ವಿವಾದವನ್ನು ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರ ಬಳಕೆ ಮಾಡಿಕೊಳ್ಳುತ್ತಿದ್ದು, ನೆಲ ಜಲ ಭಾಷೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎನ್ನುವ ಎಚ್ಚರಿಕೆ ರವಾನೆ ಮಾಡಿದ್ದಾರೆ.


ಕೇಂದ್ರ ಸರ್ಕಾರ ರಚಿಸಿದ್ದ ಎರಡೂ ಸಮಿತಿಗಳ ವರದಿಯೂ ಕನ್ನಡಿಗರ ಪರ ಬಂದಿವೆ. ಭಾಷಾವಾರು ಪ್ರಾಂತ್ಯ ರಚನೆಗಾಗಿ ಕೇಂದ್ರದಿಂದ 1953ರಲ್ಲಿ ಫಸಲ್ ಅಲಿ ನೇತೃತ್ವದ ಸಮಿತಿ ರಚನೆ. 1955ರಲ್ಲಿ ಫಸಲ್ ಅಲಿ ಆಯೋಗದ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು. ಮುಂಬೈ ಪ್ರಾಂತ್ಯದಲ್ಲಿದ್ದ ಬೆಳಗಾವಿ ಸೇರಿ 865 ಗಡಿ ಪ್ರದೇಶಗಳು ಮೈಸೂರು ರಾಜ್ಯಕ್ಕೆ ಸೇರ್ಪಡೆ
ಫಸಲ್ ಅಲಿ ಆಯೋಗದ ವರದಿಗೆ ಮಹಾರಾಷ್ಟ್ರ ಆಕ್ಷೇಪ, ಒಂದು ದಶಕಗಳ ಕಾಲ ಹೋರಾಟ ನಡಸುತ್ತಿವೆ. ಫಸಲ್ ಅಲಿ ಆಯೋಗದ  ಹಾಗೂ ಮಹಾಜನ್ ಆಯೋಗ ಎರಡುರಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಎಂದು ಹೇಳಲಾಗಿದೆ.


ಇದನ್ನೂ ಓದಿ: Karnataka Rajyotsava: ಬೆಳಗಾವಿಯಲ್ಲಿ 1 ಲಕ್ಷ ಹೋಳಿಗೆ ತಯಾರಿ, ಎಲ್ಲಾ ಕನ್ನಡಕ್ಕಾಗಿ!


ಮಹಾಜನ್ ವರದಿಯನ್ನು ಕೇಂದ್ರ ಸರ್ಕಾರ ಒಪ್ಪಿಲ್ಲ, ತಿರಸ್ಕಾರವು ಮಾಡಿಲ್ಲ. ಮಹಾಜನ್ ವರದಿ ವಿರುದ್ದ 2004ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಮಹಾರಾಷ್ಟ್ರ ಸರ್ಕಾರ. 18 ವರ್ಷಗಳ ಬಳಿಕ ಗಡಿ-ವಿವಾದ ಸಂಬಂಧ ಅಂತಿಮ ತೀರ್ಪು ಪ್ರಕಟಿಸಲಿರುವ ಸುಪ್ರೀಂ ಕೋರ್ಟ್. ರಾಜ್ಯದಲ್ಲಿ ಈವರೆಗೆ ಆಗಿಲ್ಲ ಗಡಿ ಉಸ್ತುವಾರಿ ಸಚಿವ ನೇಮಕ. ಸರ್ಕಾರದ ನಿರ್ಲಕ್ಷ್ಯದ ಧೋರಣೆಗೆ ಗಡಿ ಭಾಗದಲ್ಲಿ ತೀವ್ರ ಆಕ್ರೋಶ. ಸುಪ್ರಿಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲರ್ಟ್ ಅಗಿಲ್ಲ. ಕನ್ನಡ ಪರ ಹೋರಾಟಗಾರರು, ಗಡಿ ಭಾಗದ ಜನರನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Published by:ಪಾವನ ಎಚ್ ಎಸ್
First published: