ಚುನಾವಣೆ 2019: ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಮತದಾನ; ನೀವು ಗಮನಿಸಬೇಕಾದ ವಿಷಯಗಳು

14 ಕ್ಷೇತ್ರಗಳಲ್ಲಿ ಒಟ್ಟು 2.43 ಲಕ್ಷ ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಒಟ್ಟು 241 ಅಭ್ಯರ್ಥಿಗಳ ಹಣೆಬರಹವನ್ನು ಜನರು ನಿರ್ಧರಿಸಲಿದ್ದಾರೆ.

Vijayasarthy SN | news18
Updated:April 18, 2019, 8:46 AM IST
ಚುನಾವಣೆ 2019: ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಮತದಾನ; ನೀವು ಗಮನಿಸಬೇಕಾದ ವಿಷಯಗಳು
ಪ್ರಾತಿನಿಧಿಕ ಚಿತ್ರ
Vijayasarthy SN | news18
Updated: April 18, 2019, 8:46 AM IST
ಬೆಂಗಳೂರು(ಏ.18): ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ಗುರುವಾರ ನಡೆಯುತ್ತಿದೆ. ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶಾದ್ಯಂತ 95 ಲೋಕಸಭಾ ಕ್ಷೇತ್ರಗಳಿಗೆ ಮತದಾನವಾಗುತ್ತಿದೆ. ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ ಸೇರಿ ದಕ್ಷಿಣ ಕರ್ನಾಟಕದ 18 ಜಿಲ್ಲೆಗಳ 14 ಕ್ಷೇತ್ರಗಳಲ್ಲಿ ಜನರು ವೋಟ್ ಮಾಡಲಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲಿ ಒಟ್ಟು 5,10,98,509 ಮತದಾರರಿದ್ದಾರೆ. ಈ ಪೈಕಿ ಗುರುವಾರ ಚುನಾವಣೆ ನಡೆಯಲಿರುವ 14 ಕ್ಷೇತ್ರಗಳಲ್ಲಿ 2,43,03,279 ಜನರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಹಾಗೆಯೇ, ಮತ ಚಲಾಯಿಸಿದವರಿಗೆ ಈ ಬಾರಿ ಎಡಗೈ ತೋರು ಬೆರಳಿಗೆ ಶಾಹಿ ಹಾಕಲಾಗುತ್ತಿದೆ.

ರಾಜ್ಯದಲ್ಲಿರುವ ಲೋಕಸಭಾ ಕ್ಷೇತ್ರಗಳು: 28
ಮತದಾರರ ಪ್ರಮಾಣ: 5,10,98,509

ಮೊದಲ ಬಾರಿ ಮತ ಹಾಕುವವರು: 10,10,040

ಏ. 18ರಂದು ಮತದಾನ ಆಗುವ ಕ್ಷೇತ್ರಗಳು: 14
ಒಟ್ಟು ಮತದಾರರು: 2,42,03,279
Loading...

ಒಟ್ಟು ಅಭ್ಯರ್ಥಿಗಳು: 241
ಪುರುಷ ಅಭ್ಯರ್ಥಿಗಳು: 224
ಮಹಿಳಾ ಅಭ್ಯರ್ಥಿಗಳು: 17
ಒಟ್ಟು ಮತಕೇಂದ್ರಗಳು: 30,164
ವ್ಹೀಲ್ ಚೇರ್ ವ್ಯವಸ್ಥೆ ಇರುವ ಮತಕೇಂದ್ರಗಳು: 19,965
ಸಖಿ ಮತಗಟ್ಟೆ (ಮಹಿಳೆಯರಿಗೆ): 393
ದಿವ್ಯಾಂಗರು: 1,95,719
ಕಂಟ್ರೋಲ್ ಯೂನಿಟ್: 36,196
ಬ್ಯಾಲಟ್ ಯೂನಿಟ್: 52,112
ವಿವಿ ಪ್ಯಾಟ್ ಇರುವ ಮತಕೇಂದ್ರಗಳು: 37,705

ರಾಜ್ಯದಲ್ಲಿ ಏ. 18ರಂದು ಮತದಾನವಾಗುತ್ತಿರುವ 14 ಕ್ಷೇತ್ರಗಳ್ಯಾವುವು?
ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು-ಕೊಡುಗು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ತುಮಕೂರು.

ಇವು ನೆನಪಿರಲಿ:

* ಹಳೆಯ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಮಾತ್ರಕ್ಕೆ ಅವಕಾಶ ಖಾತ್ರಿ ಇರುವುದಿಲ್ಲ; ಪರಿಷ್ಕರಿಸಿದ ಮತದಾರರ ಪಟ್ಟಿಯಲ್ಲಿ ಹೆಸರಿರಲೇಬೇಕು. ನಿಮ್ಮ ಬಳಿ ಆಧಾರ್ ಅಥವಾ ವೋಟರ್ ಐಡಿ ಇರಬೇಕು.

* ಚಾಲೆಂಜ್ ವೋಟ್ ಹಾಕಲು ಅವಕಾಶವಿದೆ. ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರ ಮತವನ್ನು ಬೇರೆಯವರು ಹಾಕಿದ್ದರೆ ಆ ವ್ಯಕ್ತಿ ಟೆಂಡರ್ ವೋಟ್ ಹಾಕಬಹುದು. ಈ ಸಂಬಂಧ ಅವರು ಡಿಕ್ಲರೇಶನ್ ನೀಡಿ ಪೇಪರ್ ವೋಟಿಂಗ್ ಮಾಡಬಹುದು. ಇದನ್ನು ಪ್ರತ್ಯೇಕವಾಗಿ ಎಣಿಕೆ ಮಾಡಲಾಗುತ್ತದೆ.

* ನಿಮಗೆ ಯಾವುದೇ ಅಭ್ಯರ್ಥಿ ಇಷ್ಟವಾಗದಿದ್ದಲ್ಲಿ, ಅಥವಾ ಬೇರಾವುದೋ ಕಾರಣಕ್ಕೆ ನೀವು ಬಯಸಿದಲ್ಲಿ ಮತಯಂತ್ರದಲ್ಲಿ NOTAಗೆ ನೀವು ಬಟನ್ ಒತ್ತಬಹುದು. ಇದರಿಂದ ಒಟ್ಟಾರೆ ಚುನಾವಣೆಯ ಮೇಲೆ ಯಾವುದೆ ಪರಿಣಾಮ ಬೀರದೇ ಹೋದರೂ ನೀವು ಮತ ಚಲಾಯಿಸಿದ ಸಮಾಧಾನ ಹಾಗೂ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ ಸಮಾಧಾನ ಎರಡೂ ಸಿಗಬಹುದು.

ಇದನ್ನೂ ಓದಿ: ಎರಡನೇ ಹಂತದ ಚುನಾವಣೆ: 12 ರಾಜ್ಯ; 95 ಲೋಕಸಭೆ ಕ್ಷೇತ್ರಗಳಲ್ಲಿ ಇವತ್ತು ಮತದಾನ

* ಚುನಾವಣಾ ಆಯೋಗ ನಿಯೋಜಿಸಿದ ಸಿಬ್ಬಂದಿಯಾಗಲೀ ಅಥವಾ ವಿವಿಧ ಪಕ್ಷಗಳ ಕಾರ್ಯಕರ್ತರಾಗಲೀ ನಿಮ್ಮ ಮನೆಗೆ ಬಂದು ನಿಮ್ಮ ಬೂತ್ ಸಂಖ್ಯೆ, ಕ್ರಮ ಸಂಖ್ಯೆ, ಬೂತ್ ಸ್ಥಳ ಇತ್ಯಾದಿ ವಿವರ ಇರುವ ಚೀಟಿಯನ್ನು ನೀಡುತ್ತಾರೆ. ಒಂದು ವೇಳೆ ಅದು ಸಿಗದಿದ್ದಲ್ಲಿ ಮತಗಟ್ಟೆ ಸಮೀಪ ಟೇಬಲ್ ಹಾಕಿ ಕೂತಿರುವ ಜನರು ನಿಮಗೆ ಚೀಟಿಯಲ್ಲಿ ವಿವರ ಬರೆದುಕೊಡುತ್ತಾರೆ. ಅಥವಾ ನೀವು ಚುನಾವಣಾ ಆಯೋಗದ ವೆಬ್​ಸೈಟಿಗೆ ಹೋಗಿ ನಿಮ್ಮ ವೋಟರ್ ಲಿಸ್ಟ್ ವಿವರವನ್ನು ಪಡೆದುಕೊಳ್ಳಬಹುದು.

* ಮತ ಚಲಾಯಿಸುವ ಮತದಾರರ ಬೆರಳಿಗೆ ಕಡ್ಡಾಯವಾಗಿ ಶಾಹಿ ಹಾಕಲಾಗುತ್ತದೆ. ಪ್ರತಿಯೊಂದು ಚುನಾವಣೆಯಲ್ಲೂ ಮತದಾರರ ಯಾವ ಬೆರಳಿಗೆ ಗುರುತು ಹಾಕಬೇಕೆಂದು ಚುನಾವಣಾ ಆಯೋಗ ನಿರ್ಧರಿಸುತ್ತದೆ. ಕಳ್ಳ ಮತದಾನ ತಡೆಯಲು ಈ ಕ್ರಮ ಅನುಸರಿಸಲಾಗುತ್ತದೆ. ಈ ಬಾರಿ ಎಡಗೈನ ತೋರು ಬೆರಳಿಗೆ, ಅಂದರೆ ಹೆಬ್ಬಟ್ಟಿನ ಪಕ್ಕದ ಬೆರಳಿಗೆ ಶಾಹಿ ಹಾಕಲಾಗುತ್ತದೆ. ಈ ಶಾಹಿಯನ್ನು ವಾರವಾದರೂ ಅಳಿಸಲು ಸಾಧ್ಯವಿಲ್ಲ.

* ಮಹಿಳೆಯರಿಗೆ ಕಿರಿಕಿರಿಯಾಗಬಾರದೆಂದು ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಸ್ತ್ರೀಯರಿಗೆಂದೇ ಪ್ರತ್ಯೇಕವಾದ ಬೂತ್​ಗಳನ್ನು ಇಡಲಾಗುತ್ತದೆ.

ಇದನ್ನೂ ಓದಿ: Lok Sabha Election Voting Live: 2ನೇ ಹಂತದ ಚುನಾವಣೆ: 95 ಕ್ಷೇತ್ರಗಳಲ್ಲಿ ಮತದಾನಕ್ಕೆ ಕ್ಷಣಗಣನೆ

* ವೋಟ್ ಹಾಕುವವರು ಮೊಬೈಲ್ ಫೋನನ್ನು ಮತಗಟ್ಟೆ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ. 2008ರಿಂದಲೂ ಈ ನಿಯಮ ಇದೆಯಾದರೂ ಈ ಬಾರಿ ಇದು ಕಟ್ಟುನಿಟ್ಟಾಗಿ ಚಾಲ್ತಿಗೆ ಬರುವ ಸಾಧ್ಯತೆ ಇದೆ. ಪ್ರತಿಯೊಬ್ಬ ವ್ಯಕ್ತಿಗೂ ಅವರ ದೇಹದ ಅಂಗದಂತೆ ಮೊಬೈಲ್ ಕೂಡ ಅವಿಭಾಜ್ಯ ಅಂಗವಾಗಿರುವುದರಿಂದ ಮತದಾನದ ದಿನ ಬಹಳಷ್ಟು ಮಂದಿ ಪರದಾಡಬಹುದು.
--------------
First published:April 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626