HOME » NEWS » State » KARNATAKA LOCKDOWN PEOPLE ROAMING AROUND BANGALORE IN LOCKDOWN SCT

ಲಾಕ್​ಡೌನ್​ಗೆ ಡೋಂಟ್ ಕೇರ್; ಬೆಂಗಳೂರಲ್ಲಿ ಅನಾವಶ್ಯಕವಾಗಿ ತಿರುಗುವವರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

ಪೊಲೀಸರಲ್ಲಿ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ನಗರದ ಎಲ್ಲಾ ಕಡೆ ವಾಲೆಂಟರ್ಸ್ ನ ಬಳಸಿಕೊಳ್ಳಲಾಗುತ್ತಿದೆ. 1500 ಮಂದಿ ಯುವಕರು ಸ್ವಯಂಪ್ರೇರಿತರಾಗಿ ಬಂದಿದ್ದು, ಅವರಿಗೆ ಪೊಲೀಸರ ಜೊತೆ ಕರ್ತವ್ಯ ನಿರ್ವಹಿಸುವ ಅವಕಾಶ ನೀಡಲಾಗಿದೆ.

news18-kannada
Updated:July 15, 2020, 4:20 PM IST
ಲಾಕ್​ಡೌನ್​ಗೆ ಡೋಂಟ್ ಕೇರ್; ಬೆಂಗಳೂರಲ್ಲಿ ಅನಾವಶ್ಯಕವಾಗಿ ತಿರುಗುವವರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜು.15): ಬೆಂಗಳೂರಿನ‌ಲ್ಲಿ ಕಠಿಣ ಲಾಕ್​ಡೌನ್ ಇದ್ರೂ ಹೆಚ್ಚಿನ‌ ಸಂಖ್ಯೆಯಲ್ಲಿ ವಾಹನಗಳು ರಸ್ತೆಯಲ್ಲಿ‌ ಸಂಚರಿಸುತ್ತಿವೆ. ಈ‌ ನಡುವೆ ಪೊಲೀಸರು ಪ್ರಮುಖ ಜಂಕ್ಷನ್​ಗಳಲ್ಲಿ ಬ್ಯಾರಿಕೇಡ್ ಹಾಕಿ, ಕಾರ್ಯಾಚರಣೆಗೆ ಇಳಿದಿದ್ದಾರೆ. ಹೀಗೆ ಪ್ರತಿಯೊಬ್ಬರ ಐಡಿ ಪ್ರತಿ ಹಾಗೂ ಏನಾದರೂ‌ ದಾಖಲೆ ಇದ್ದರೆ ಮಾತ್ರ ಅಂಥವರನ್ನು ಕಳಿಸಲಾಗುತ್ತಿದೆ. ಈ ನಡುವೆ ಮಲ್ಲೇಶ್ವರಂ, ಕೊಡಿಗೇಹಳ್ಳಿ, ಯಶವಂತಪುರದಲ್ಲಿ ಅರ್ಧ ಗಂಟೆಗೆ 80ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಿದ್ದರು.

ಅದೇ ರೀತಿ ಕೊಡಿಗೇಹಳ್ಳಿ ಬಳಿ ಹೆಬ್ಬಾಳ ಇನ್ಸ್ ಪೆಕ್ಟರ್ ಫಿರೋಜ್ ಮಾಸ್ಕ್ ಹಾಕದೆ ಕಾರಿನಲ್ಲಿ ಬಂದ ವ್ಯಕ್ತಿಗೆ ತರಾಟೆಗೆ ತೆಗೆದುಕೊಂಡರು. ಮಾಸ್ಕ್ ಹಾಕದೆ, ಕೇವಲ ಕರ್ಚಿಫ್ ಕಟ್ಟಿದ್ದಕ್ಕೆ ಆರೋಗ್ಯಕ್ಕೋಸ್ಕರ ಸುರಕ್ಷಿತವಾದ ಮಾಸ್ಕ್ ಕೊಳ್ಳಲು ಆಗಲ್ವಾ? ಅದನ್ನೂ ನಾವೇ ಹೇಳ್ಬೇಕಾ? ಎಂದು ಸ್ವತಃ  ಇನ್​ಸ್ಪೆಕ್ಟರ್ ಮಾಸ್ಕ್ ಕೊಟ್ಟು‌ಕಳಿಸಿದರು. ಹೀಗೆ ಯಶವಂತಪುರದಿಂದ ಗೊರಗುಂಟೆಪಾಳ್ಯದ ಕಡೆ ಹೋಗುವ ಮಾರ್ಗದಲ್ಲೂ ಹೆಚ್ಚಿನ‌ ವಾಹನಗಳು ರಸ್ತೆಗೆ ಇಳಿದಿದ್ದವು. ಎಷ್ಟೇ ತಪಾಸಣೆ ಮಾಡಿದರೂ  ನೆಪ‌ ಮಾತ್ರಕ್ಕೆ ಕುಂಟು ಕಾರಣಗಳನ್ನು ಕೊಟ್ಟು ಓಡಾಡುವರೇ ಹೆಚ್ಚಿದ್ದರು.

ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಗೆ ಡಿಕೆಶಿ ಭೇಟಿ; ಕೊರೋನಾ ವಾರಿಯರ್ಸ್​ಗೆ ಧೈರ್ಯ ತುಂಬಿದ ಕೆಪಿಸಿಸಿ ಅಧ್ಯಕ್ಷ
Youtube Video

ಅನಾವಶ್ಯಕವಾಗಿ ಓಡಾಡಿದರೆ ಶಿಸ್ತುಕ್ರಮದ ಬಗ್ಗೆ ಪೊಲೀಸರು ಸೂಚನೆ‌ ಕೊಟ್ಟರು.  ಕೆಲವರಿಗೆ ಮಾನವೀಯತೆ ಮೇಲೆ ಮತ್ತೆ ಓಡಾಡದಂತೆ ವಾರ್ನ್‌ ಮಾಡಿ ಕಳಿಸಿದರು.  ಪೊಲೀಸರಲ್ಲಿ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ನಗರದ ಎಲ್ಲಾ ಕಡೆ ವಾಲೆಂಟರ್ಸ್ ನ ಬಳಸಿಕೊಳ್ಳಲಾಗುತ್ತಿದೆ. 1500 ಮಂದಿ ಯುವಕರು ಸ್ವಯಂಪ್ರೇರಿತರಾಗಿ ಬಂದಿದ್ದು, ಅವರಿಗೆ ಪೊಲೀಸರ ಜೊತೆ ಕರ್ತವ್ಯ ನಿರ್ವಹಿಸುವ ಅವಕಾಶ ನೀಡಲಾಗಿದೆ. ಠಾಣೆಯಲ್ಲಿ ಬರೆಯುವ, ಹೊಯ್ಸಳ ವಾಹನದಲ್ಲಿ ಓಡಾಡಲು ಅವಕಾಶವಿದ್ದು, ಜಾಕೆಟ್ ಮತ್ತು ಐಡಿ ನೀಡಲಾಗಿದೆ.
Published by: Sushma Chakre
First published: July 15, 2020, 4:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories