HOME » NEWS » State » KARNATAKA LOCKDOWN PEOPLE LEAVE BANGALORE AND TRAVELLING TO THEIR HOMETOWNS DUE TO LOCKDOWN LG

Karnataka Lockdown: ಇಂದಿನಿಂದ ಲಾಕ್​ಡೌನ್​; ಬೆಂಗಳೂರು ತೊರೆದು ತಮ್ಮ-ತಮ್ಮ ಊರು ಸೇರಿಕೊಳ್ಳುತ್ತಿರುವ ಜನರು

ವಲಸೆ ಬಂದಿದ್ದ ಜನರು ತಮ್ಮ ತಮ್ಮ ಗೂಡು ಸೇರಿಕೊಳ್ಳುತ್ತಿದ್ದಾರೆ. ಮೆಜೆಸ್ಟಿಕ್, ಮೈಸೂರು ರಸ್ತೆಯ ಸ್ಯಾಟಲೈಟ್, ಗೊರಗುಂಟೆ ಪಾಳ್ಯದಲ್ಲಿ ಜನವೋ ಜನ.  ಬೆಂಗಳೂರು ಸಹವಾಸ ಸದ್ಯಕ್ಕಂತು ಬೇಡ ಎಂದು ನಿರ್ಧರಿಸಿ ಜನರು ಗುಳೆ ಹೊರಟಿದ್ದಾರೆ. 

news18-kannada
Updated:April 27, 2021, 10:19 AM IST
Karnataka Lockdown: ಇಂದಿನಿಂದ ಲಾಕ್​ಡೌನ್​; ಬೆಂಗಳೂರು ತೊರೆದು ತಮ್ಮ-ತಮ್ಮ ಊರು ಸೇರಿಕೊಳ್ಳುತ್ತಿರುವ ಜನರು
ಊರುಗಳತ್ತ ಹೊರಟ ಜನ
  • Share this:
ಬೆಂಗಳೂರು(ಏ.27): ಕರ್ನಾಟಕ ಲಾಕ್​ಡೌನ್​ಗೆ ಕೆಲವೇ ಗಂಟೆಗಳು ಬಾಕಿ ಇವೆ. ಇಂದು ರಾತ್ರಿ 9 ಗಂಟೆಯಿಂದ 14 ದಿನಗಳ ಕಾಲ ಇಡೀ ರಾಜ್ಯ ಲಾಕ್​ ಆಗಲಿದೆ. ಬಳಿಕ ಇಡೀ ಕರ್ನಾಟಕ ಸ್ತಬ್ಧವಾಗಲಿದೆ. ಸಾರಿಗೆ ಸೇವೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಹೀಗಾಗಿ ಉದ್ಯೋಗ ನಿಮಿತ್ತ ನಗರಗಳತ್ತ(ಬೆಂಗಳೂರು) ಬಂದಿದ್ದ ಜನರು ಈಗ ಗಂಟು-ಮೂಟೆ ಸಮೇತ ತಮ್ಮ-ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಮೆಜೆಸ್ಟಿಕ್, ಸ್ಯಾಟಲೈಟ್​ ಬಸ್ ನಿಲ್ದಾಣಗಳಲ್ಲಿ ಜನರು ತಮ್ಮ ಊರುಗಳ ಬಸ್​ ಹಿಡಿದು ಹೊರಡುತ್ತಿದ್ದಾರೆ.

ಇಂದು ಸಂಜೆ ವೇಳೆ ಸಾರಿಗೆ ಸೇವೆ ಸಂಪೂರ್ಣ ಸ್ಥಗಿತವಾಗಲಿದೆ. ಒಂಬತ್ತು ಗಂಟೆಗೆ ಕೆಎಸ್ ಆರ್ ಟಿಸಿ ಬಿಎಂಟಿಸಿ ಬಸ್ ಸೇವೆ ಕೊನೆಯಾಗಲಿದೆ. ಸಂಜೆ 7:30ಕ್ಕೆ ಮೆಟ್ರೋ ಸೇವೆ ಅಂತ್ಯವಾಗಲಿದೆ.  ಆಟೋ, ಟ್ಯಾಕ್ಸಿ, ಆ್ಯಪ್ ಆಧಾರಿತ ಓಲಾ ಊಬರ್ ವ್ಯವಸ್ಥೆ ಎಲ್ಲವೂ ಬಂದ್ ಆಗಲಿದೆ. ಜೊತೆಗೆ ಖಾಸಗಿ ಬಸ್ ಕಾರ್ಯಾಚರಣೆ ರಾತ್ರಿ 9ರ ಬಳಿಕ ಇರುವುದಿಲ್ಲ. ಹೀಗಾಗಿ ಜನರು ಬೆಂಗಳೂರನ್ನು ತೊರೆಯುತ್ತಿದ್ದಾರೆ.

ಕೊರೋನಾ ಅಂಟಿಸಿಕೊಳ್ಳದೆ ಲಸಿಕೆ ಪಡೆಯುವುದು ಹೇಗೆ..? ವ್ಯಾಕ್ಸಿನ್‌ ಪಡೆಯುವ ವೇಳೆ ಅನುಸರಿಸಬೇಕಾದ ಕ್ರಮಗಳೇನು?

ವಲಸೆ ಬಂದಿದ್ದ ಜನರು ತಮ್ಮ ತಮ್ಮ ಗೂಡು ಸೇರಿಕೊಳ್ಳುತ್ತಿದ್ದಾರೆ. ಮೆಜೆಸ್ಟಿಕ್, ಮೈಸೂರು ರಸ್ತೆಯ ಸ್ಯಾಟಲೈಟ್, ಗೊರಗುಂಟೆ ಪಾಳ್ಯದಲ್ಲಿ ಜನವೋ ಜನ.  ಬೆಂಗಳೂರು ಸಹವಾಸ ಸದ್ಯಕ್ಕಂತು ಬೇಡ ಎಂದು ನಿರ್ಧರಿಸಿ ಜನರು ಗುಳೆ ಹೊರಟಿದ್ದಾರೆ.  ಬೆಳಗ್ಗೆ 5 ಗಂಟೆಯಿಂದಲೇ ಕೆಎಸ್ ಆರ್ ಟಿಸಿ ಬಸ್ ಗಳು ಕಾರ್ಯಾಚರಣೆಗಿಳಿದಿವೆ. ನಗರದ ವಿವಿಧ ಭಾಗಗಳಲ್ಲಿ ಬಿಎಂಟಿಸಿ ಬಸ್​​ಗಳು ಸಂಚಾರ ಮಾಡುತ್ತಿವೆ. ನಗರದ ಕೆಎಸ್​ಆರ್​​ ರೈಲ್ವೆ ನಿಲ್ದಾಣದಲ್ಲಿ ಬಸ್ ಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ತಮ್ಮ ಲಗೇಜ್ ಗಳನ್ನ ಪ್ಯಾಕ್ ಮಾಡಿಕೊಂಡು ಪ್ರೈವೇಟ್ ಗಾಡಿ, ಕ್ಯಾಬ್ ಗಳಲ್ಲಿ ಸಾರ್ವಜನಿಕರು ಹೊರಟಿದ್ದಾರೆ.

ಗಂಟೆಮೂಟೆ ಸಮೇತ ಜನರು ರಾಜ್ಯದ ವಿವಿಧ ಜಿಲ್ಲೆಗಳ ಕಡೆ ಪಯಣ ಬೆಳೆಸಿದ್ದಾರೆ.  ಯಶವಂತಪುರ, ಗುರುಗುಂಟೆಪಾಳ್ಯದಿಂದ ಜನರು ತೆರಳುತ್ತಿದ್ದಾರೆ. ಬಸ್, ಖಾಸಗಿ ಬಸ್, ಕ್ಯಾಬ್, ಗೂಡ್ಸ್ ವೆಹಿಕಲ್, ಬೈಕ್​ಗಳಲ್ಲಿ ಹೋಗುತ್ತಿದ್ದಾರೆ.  ರಾತ್ರಿ 9 ಗಂಟೆಯೊಳಗೆ ತಮ್ಮೂರಿಗೆ ತೆರಳಲು ಬೆಳಗ್ಗೆಯೇ ಜನರು ಹೊರಟಿದ್ದಾರೆ.  ಸರಕು-ಸಾಗಾಟ ವಾಹನಗಳಲ್ಲಿ ಮನೆಯ ದಿನಬಳಕೆ ವಸ್ತುಗಳ ಸಹಿತ ಮನೆ ಖಾಲಿ ಮಾಡಿಕೊಂಡು ಊರುಗಳತ್ತ ಪಯಣ ಬೆಳಸಿದ್ದಾರೆ.
Youtube Video

ಎಲ್ಲಿ, ಯಾವಾಗ ಸಂಕಷ್ಟದ ಪರಿಸ್ಥಿತಿ ಉದ್ಭವಿಸುತ್ತೋ ಅನ್ನೋ ಆತಂಕದಿಂದ ಜನರು ಬೆಂಗಳೂರು ತೊರೆಯುತ್ತಿದ್ದಾರೆ. ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ವಲಸೆ ಬಂದಿದ್ದ ಜನರು ಮರಳಿ ಊರಿಗೆ ತೆರಳುತ್ತಿದ್ದಾರೆ.  ಸಂಬಳವಿಲ್ಲದೆ, ಬಾಡಿಕೆ ಕಟ್ಟಲಾಗದ ಸಂಕಷ್ಟ ಎಲ್ಲಿ ಎದುರಾಗುತ್ತೋ ಎನ್ನುವ ಭೀತಿಯಿಂದ ಜನರು ಬೆಂಗಳೂರನ್ನು ತೊರೆಯುತ್ತಿದ್ದಾರೆ.
Published by: Latha CG
First published: April 27, 2021, 10:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories