Karnataka Lockdown Extension: ಲಾಕ್‌ಡೌನ್ ವಿಸ್ತರಿಸಲು ಕರ್ನಾಟಕ ಸರ್ಕಾರ ಮೀನಾಮೇಷ ಎಣಿಸುತ್ತಿರುವುದೇಕೆ? ದೇಶದ ಚಿತ್ರಣ ಹೇಗಿದೆ?

ಪಾಸಿಟಿವಿಟಿ ಪ್ರಮಾಣ ಕುಸಿಯುತ್ತಿದ್ದರೂ ಬೇರೆ ರಾಜ್ಯಗಳು ಅನ್ಲಾಕ್‌ ಮಾಡಲು ಮುಂದಾಗುತ್ತಿಲ್ಲ. ಆದರೆ ಕರ್ನಾಟಕ ಅನ್​ಲಾಕ್​ ಮಾಡಲು ಆತುರ ಪಡುತ್ತಿರುವುದು ಏಕೆ? ಎಂಬುದೇ ಕುತೂಹಲಕಾರಿ ಸಂಗತಿಯಾಗಿದೆ.

ಸಿಎಂ ಬಿಎಸ್ ಯಡಿಯೂರಪ್ಪ.

ಸಿಎಂ ಬಿಎಸ್ ಯಡಿಯೂರಪ್ಪ.

  • Share this:
ನವದೆಹಲಿ(ಜೂ. 1): ಪ್ರತಿ ದಿನ 20 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದ ಕರ್ನಾಟಕದಲ್ಲಿ ನಿನ್ನೆ  16,604 ಪ್ರಕರಣಗಳು ಕಂಡುಬಂದಿದ್ದು ತುಸು ಆಶಾವಾದ ಮೂಡಿದೆ. ಈ ನಡುವೆ ಸಾವಿನ ಸಂಖ್ಯೆ ಕಡಿಮೆ ಆಗಿಲ್ಲ. ನಿನ್ನೆ ಒಂದೇ ದಿನ ಬರೋಬ್ಬರಿ 411 ಜನ ಕೊರೋನಾಗೆ ಬಲಿ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ದರ ಇನ್ನೂ ಶೇಕಡಾ 13.57ರಷ್ಟಿದೆ. ಆದರೂ ಕರ್ನಾಟಕ ಸರ್ಕಾರ ಲಾಕ್ಡೌನ್ ವಿಸ್ತರಣೆ ಮಾಡುವ ಬಗ್ಗೆ ಮೀನಾಮೇಷ ಎಣಿಸುತ್ತಿದೆ.

ಇದಲ್ಲದೆ ಇತ್ತೀಚೆಗೆ ಕೊರೋನಾ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಕೇಂದ್ರ ಸರ್ಕಾರ ಪಾಸಿಟಿವಿಟಿ ದರ ಶೇಕಡಾ 5ಕ್ಕಿಂತ ಕಡಿಮೆ ಆಗುವುದರತ್ತ ಗಮನ ಕೊಡಿ. ಅಲ್ಲಿಯವರೆಗೂ ಬಿಗಿ ನಿಯಮಗಳನ್ನು ಮುಂದುವರೆಸಿ ಎಂದು ಹೇಳಿತ್ತು. ಕೇಂದ್ರ ಗೃಹ ಇಲಾಖೆಯ ಸುತ್ತೋಲೆ ಕೂಡ ಜೂನ್ 30ರವರೆಗೂ ಕಂಟೋನ್ಮೆಂಟ್ ಜೋನ್ ಗಳಲ್ಲಿ ಬಿಗಿ ನಿಯಮಗಳನ್ನು ಸಡಿಲಸಬಾರದು ಎಂಬುದಾಗಿಯೇ ಇದೆ. ಜೊತೆಗೆ ಕರ್ನಾಟಕ ಸರ್ಕಾರ ರಚಿಸಿರುವ ಟಾಸ್ಕ್ ಫೋರ್ಸ್ ಕೂಡ ಲಾಕ್ಡೌನ್ ವಿಸ್ತರಣೆ ಮಾಡುವುದೇ ಸೂಕ್ತ ಎಂಬ ಸಲಹೆ ನೀಡಿದೆ. ಆದರೂ ರಾಜ್ಯ ಸರ್ಕಾರ ಲಾಕ್​ಡೌನ್​ ವಿಸ್ತರಣೆಗೆ ಯೋಚಿಸುತ್ತಿರುವುದೇಕೆ? ಎಂಬುದೇ ತಿಳಿಯದಾಗಿದೆ.

ಇದನ್ನೂ ಓದಿ:Global Day of Parents: ಪೋಷಕರಿಗಾಗಿ ಒಂದು ದಿನ, ಏನಿದರ ಮಹತ್ವ? ಈ ದಿನ ಯಾಕೆ ಮುಖ್ಯ ? ಇಲ್ಲಿದೆ ಡೀಟೆಲ್ಸ್

ಹಲವು ರಾಜ್ಯಗಳಲ್ಲಿ ಲಾಕ್​ಡೌನ್​ ವಿಸ್ತರಣೆ

ದೇಶದ ಚಿತ್ರಣವನ್ನು ನೋಡುವುದಾದರೆ ಹಲವಾರು ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದ್ದರೂ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ.‌ ಪಾಸಿಟಿವಿಟಿ ದರ ಕಡಿಮೆ ಆಗಿದ್ದರೂ ಅನ್​ಲಾಕ್ ಮಾಡಲು ಹಿಂದೇಟು ಹಾಕಲಾಗುತ್ತಿದೆ. ಉದಾಹರಣೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಾಸಿಟಿವಿಟಿ ದರ ಶೇಕಡಾ 1.25ಕ್ಕೆ ಕುಸಿದರೂ ಲಾಕ್ಡೌನ್ ನಿಯಮಗಳನ್ನು ಸಡಿಲಿಸಿಲ್ಲ. ಜೂನ್ 7 ವರೆಗೂ ಲಾಕ್ಡೌನ್ ಮುಂದುವರಿಸಲಾಗುತ್ತಿದೆ. ಆರು ವಾರಗಳಿಂದ ದೆಹಲಿಯಲ್ಲಿ ಲಾಕ್​ಡೌನ್ ಮುಂದುವರೆದಿದೆ.

ದೇಶದಲ್ಲಿ ಎರಡನೇ ಅಲೆಯ ಕೊರೋನಾ ಶುರುವಾದ ಬಳಿಕ ಮೊದಲು ಲಾಕ್ಡೌನ್ ಘೋಷಿಸಿದ ಮಹಾರಾಷ್ಟ್ರದಲ್ಲಿ ಮತ್ತೆ 15 ದಿನ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಪಾಸಿಟಿವಿಟಿ ದರ ಶೇ. 16.5ರಷ್ಟಿದ್ದರೂ ನಿಯಮಗಳನ್ನು ಸಡಿಲಿಸಿಲ್ಲ. ಒಡಿಶಾದಲ್ಲಿ ಜೂನ್ 17ರವರೆಗೂ ಲಾಕ್ಡೌನ್ ಮುಂದುವರೆಸಲಾಗಿದೆ. ಪಶ್ಚಿಮ ಬಂಗಾಳ, ಆಂಧ್ರಗಳಲ್ಲಿ ಜೂನ್ 15ರವರೆಗೆ, ತೆಲಂಗಾಣ, ಕೇರಳದಲ್ಲಿ ಜೂನ್ 9ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಗುಜರಾತಿನ 36 ನಗರಗಳಲ್ಲಿ ಜೂನ್ 4 ವರೆಗೂ ಲಾಕ್ಡೌನ್ ಇರಲಿದೆ. ಇದೇ ರೀತಿ ಹರಿಯಾಣ, ಸಿಕ್ಕಿಂ, ಪುದುಚೇರಿ, ಮೇಘಾಲಯ, ಗೋವಾ ಮತ್ತು ಮಿಜೋರಾಂಗಳಲ್ಲೂ ಲಾಕ್‌ಡೌನ್ ವಿಸ್ತರಣೆ ಆಗಿದೆ.

ಅನ್​ಲಾಕ್ ಪ್ರಕ್ರಿಯೆ ಶುರು ಮಾಡಿರುವ ರಾಜ್ಯಗಳೆಂದರೆ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಮಾತ್ರ. ಅಲ್ಲೂ ಕೂಡ ಅನ್ಲಾಕ್ ನಡುವೆ ವಿಕೇಂಡ್ ಲಾಕ್ಡೌನ್, ನೈಟ್  ಕರ್ಫ್ಯೂ ಮುಂದುವರೆಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಪಾಸಿಟಿವಿಟಿ ದರ ಶೇಕಡಾ 0.8ಕ್ಕೆ ಇಳಿದ ಹಿನ್ನಲೆಯಲ್ಲಿ ಅನ್ಲಾಕ್ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಪಾಸಿಟಿವಿಟಿ ದರ ಶೇಕಡಾ 2.1ಕ್ಕೆ ಇಳಿಕೆ ಆಗಿದೆ.  ಪಾಸಿಟಿವಿಟಿ ಪ್ರಮಾಣ ಕುಸಿಯುತ್ತಿದ್ದರೂ ಬೇರೆ ರಾಜ್ಯಗಳು ಅನ್ಲಾಕ್‌ ಮಾಡಲು ಮುಂದಾಗುತ್ತಿಲ್ಲ. ಆದರೆ ಕರ್ನಾಟಕ ಅನ್​ಲಾಕ್​ ಮಾಡಲು ಆತುರ ಪಡುತ್ತಿರುವುದು ಏಕೆ? ಎಂಬುದೇ ಕುತೂಹಲಕಾರಿ ಸಂಗತಿಯಾಗಿದೆ.
Published by:Latha CG
First published: