Bangalore Lockdown: ಬೆಂಗಳೂರಿನಲ್ಲಿ ನಾಳೆಯಿಂದ ಲಾಕ್​ಡೌನ್; ತಮಿಳುನಾಡಿನತ್ತ ವಲಸೆ ಹೊರಟ ಜನರು

Karnataka Lockdown: ರಾಜ್ಯ ಸರ್ಕಾರ ಒಂದು  ವಾರಗಳ ಕಾಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್​ಡೌನ್ ಜಾರಿಗೊಳಿಸುತ್ತಿರುವುದರಿಂದ ಜನ ಪುನಃ ತಮ್ಮ ಊರುಗಳತ್ತ ವಾಪಾಸ್ ಹೊರಟಿದ್ದಾರೆ.

news18-kannada
Updated:July 13, 2020, 9:31 PM IST
Bangalore Lockdown: ಬೆಂಗಳೂರಿನಲ್ಲಿ ನಾಳೆಯಿಂದ ಲಾಕ್​ಡೌನ್; ತಮಿಳುನಾಡಿನತ್ತ ವಲಸೆ ಹೊರಟ ಜನರು
ಲಾಕ್​ಡೌನ್​ನಿಂದಾಗಿ ಬೆಂಗಳೂರಿನಿಂದ ಊರುಗಳತ್ತ ತೆರಳುತ್ತಿರುವ ಜನರು
  • Share this:
ಬೆಂಗಳೂರು (ಜು. 13): ನಾಳೆ ರಾತ್ರಿ 8ರಿಂದ ಮುಂದಿನ ಒಂದು ವಾರಗಳ ಕಾಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್​ಡೌನ್ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿರುವುದರಿಂದ ಸಾವಿರಾರು ಮಂದಿ ಬೆಂಗಳೂರು ಬಿಟ್ಟು ತಮಿಳುನಾಡಿನತ್ತ ವಲಸೆ ಹೊರಟಿದ್ದಾರೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಚೆಕ್​ಪೋಸ್ಟ್ ಮೂಲಕ ಮುಂಜಾನೆಯಿಂದಲೇ ಸಾವಿರಾರು ಮಂದಿ ಗಂಟು ಮೂಟೆ ಸಮೇತ ತಮ್ಮ ಗ್ರಾಮಗಳತ್ತ ಹೊರಟಿದ್ದಾರೆ. ವಾರದ ಹಿಂದೆ ಇದೆ ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ ಹತ್ತು ಸಾವಿರಕ್ಕೂ ಅಧಿಕ ಮಂದಿ ರಾಜ್ಯ ಪ್ರವೇಶ ಮಾಡಿದ್ದರು. ಇದೀಗ ರಾಜ್ಯ ಸರ್ಕಾರ ಒಂದು  ವಾರಗಳ ಕಾಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್​ಡೌನ್ ಜಾರಿಗೊಳಿಸುತ್ತಿರುವುದರಿಂದ ಜನ ಪುನಃ ತಮ್ಮ ತಮ್ಮ ಊರುಗಳತ್ತ ವಾಪಾಸ್ ಹೊರಟಿದ್ದಾರೆ.

ಇದನ್ನೂ ಓದಿ: ಜು.14ರಿಂದ ಒಂದು ವಾರ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಲಾಕ್​ಡೌನ್​ - ಸರ್ಕಾರ ಅಧಿಕೃತ ಆದೇಶ​

ಈ ಹಿಂದೆ ಜಾರಿಗೊಳಿಸಿದ್ದ ತಿಂಗಳಿಗೂ ಅಧಿಕ ಸುದೀರ್ಘ ಲಾಕ್​ಡೌನ್​ನಿಂದ ಬೇರೆ ಬೇರೆ ರಾಜ್ಯದ ಜನ ಮೂಲಭೂತ ವ್ಯವಸ್ಥೆ ಇಲ್ಲದೆ ಹೈರಾಣಾಗಿದ್ದರು. ಇತ್ತ ಇದ್ದ ಕಡೆಯು ನೆಮ್ಮದಿಯಾಗಿ ಜೀವಿಸುವಂತಿಲ್ಲ, ಅತ್ತ ತಮ್ಮ ಊರುಗಳಿಗೂ ಹೋಗುವಂತಿಲ್ಲ. ಜನರು ಅತಂತ್ರ ಸ್ಥಿತಿಯಲ್ಲಿ ಬದುಕುವಂತಾಗಿತ್ತು. ಹಾಗಾಗಿ, ಜನ ಲಾಕ್ ಡೌನ್ ಗೂ ಮೊದಲೇ ತಮ್ಮ ತಮ್ಮ ಊರುಗಳನ್ನು ಸೇರಿಕೊಳ್ಳುವ ಧಾವಂತದಲ್ಲಿದ್ದರು.

ಅಂದಹಾಗೆ, ಈಗಾಗಲೇ ಅಂತರ್ ರಾಜ್ಯಕ್ಕೆ ಪ್ರಯಾಣಿಸುವ ಸರ್ಕಾರಿ ವಾಹನಗಳು ಸಹ ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ಸಂಚಾರ ಮಾಡುತ್ತಿದ್ದು, ರಾಜ್ಯದ ಗಡಿಯಲ್ಲಿ ಇಳಿದು ತಮಿಳುನಾಡು ಗಡಿಯತ್ತ ಜನ ನಡೆದೇ ಸಾಗುತ್ತಿದ್ದಾರೆ. ಮಕ್ಕಳು, ವೃದ್ಧರು ಎನ್ನದೆ ಎಲ್ಲರೂ ತಮ್ಮ ತಮ್ಮ ಊರುಗಳತ್ತ ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಕೋವಿಡ್​​-19 ಕಾವು: ಇಂದು 2,738 ಹೊಸ ಕೇಸ್​​, 40 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ
ಇನ್ನೂ ಕೊರೋನಾ ಮಹಾಮಾರಿಯನ್ನು ತಡೆಗಟ್ಟಲು ಲಾಕ್​ಡೌನ್ ಅನಿವಾರ್ಯ. ಕೊರೋನಾದಿಂದಾಗಿ ಮಕ್ಕಳು, ವಯೋವೃದ್ದರಿಗೆ ತೊಂದರೆಯಾಗುತ್ತಿದೆ. ಆದರೆ, ಲಾಕ್ ಡೌನ್ ಆದರೆ ಅಂಗಡಿಗಳು ಬಂದ್ ಆಗುತ್ತವೆ. ಊಟ ಇತ್ಯಾದಿಗೆ ತೊಂದರೆಯಾಗುತ್ತದೆ. ಹಾಗಾಗಿ ನಮ್ಮ ಊರುಗಳತ್ತ ಹೊರಟಿದ್ದೇವೆ. ಅಲ್ಲಿ ಗಂಜಿಯಾದರೂ ಕುಡಿದು ಜೀವ ಉಳಿಸಿಕೊಳ್ಳಬಹುದು. ಇಲ್ಲಿಯೇ ಇದ್ದರೆ ಊಟ ವಸತಿಗೆ ಪರದಾಡಬೇಕಾಗುತ್ತದೆ ಎಂದು ತಮಿಳುನಾಡಿನತ್ತ ಹೊರಟ ವಲಸಿಗರು ನ್ಯೂಸ್ 18ಗೆ ತಿಳಿಸಿದ್ದಾರೆ.

(ವರದಿ: ಆದೂರು ಚಂದ್ರು)
Published by: Sushma Chakre
First published: July 13, 2020, 9:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading