ಸ್ಥಳೀಯ ಚುನಾವಣೆ ಫಲಿತಾಂಶ; ಮಂಗಳೂರು, ದಾವಣಗೆರೆಯಲ್ಲಿ ಬಿಜೆಪಿ ಮುನ್ನಡೆ

ಮಂಗಳವಾರ(ನ.12) ನಡೆದ ಸ್ಥಳೀಯ ಸಂಸ್ಥೆಗಳ 1388 ಮತಗಟ್ಟೆಗಳಲ್ಲಿ, 13, 04,614 ಮತದಾರರು ಮತ ಚಲಾವಣೆ ಮಾಡಿದ್ದರು. ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆದಿತ್ತು.  ಈ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ.

Rajesh Duggumane | news18-kannada
Updated:November 14, 2019, 12:50 PM IST
ಸ್ಥಳೀಯ ಚುನಾವಣೆ ಫಲಿತಾಂಶ; ಮಂಗಳೂರು, ದಾವಣಗೆರೆಯಲ್ಲಿ ಬಿಜೆಪಿ ಮುನ್ನಡೆ
ಇವಿಎಂ ಮೆಷೀನ್
  • Share this:
ಬೆಂಗಳೂರು (ನ.14): ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮಹಾನಗರ ಪಾಲಿಕೆಗಳಾದ ಮಂಗಳೂರು ಹಾಗೂ ದಾವಣಗೆರೆಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ಮಂಗಳವಾರ(ನ.12) ರಾಜ್ಯದ 2 ಮಹಾನಗರ ಪಾಲಿಕೆ, 6 ನಗರಸಭೆ, 3 ಪುರಸಭೆ, 3 ಪಟ್ಟಣ ಪಂಚಾಯಿತಿಗಳಿಗೆ 409 ಕ್ಷೇತ್ರಗಳ ಮತದಾನವಾಗಿತ್ತು.  ಚುನಾವಣಾ ಕಣದಲ್ಲಿರುವ 1587 ಅಭ್ಯರ್ಥಿಗಳಿದ್ದರು. ಈಗಾಗಲೇ ಮತ ಎಣಿಕೆ ಆರಂಬವಾಗಿದ್ದು, 11 ಗಂಟೆ ವೇಳೆಗೆ ಸಂಪೂರ್ಣ ಫಲಿತಾಂಶದ ಚಿತ್ರಣ ಸಿಗಲಿದೆ.

ಮಂಗಳೂರು ಮಹಾನಾಗರ ಪಾಲಿಕೆಯ 60 ವಾರ್ಡ್​ಗಳ ಪೈಕಿ ಬಿಜೆಪಿ 14, ಕಾಂಗ್ರೆಸ್​ 6 ಸ್ಥಾನಗಳನ್ನು ಗೆದ್ದಿದೆ.  ದಾವಣೆಗೆರೆ ಮಹಾನಗರ ಪಾಲಿಕೆಯ 45 ವಾರ್ಡ್​ಗಳ ಪೈಕಿ ಬಿಜೆಪಿ 15, ಕಾಂಗ್ರೆಸ್​ 11, ಜೆಡಿಎಸ್​ 2, ಇತರೆ 3 ಗೆಲುವು ಸಾಧಿಸಿದೆ.

ಕಾರ್ಗಲ್ ಜೋಗ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ.  11 ವಾರ್ಡ್​ಗಳ ಪೈಕಿ 9 ಬಿಜೆಪಿ ಗೆದ್ದಿದ್ದು, 2 ಕ್ಷೇತ್ರ ಕಾಂಗ್ರೆಸ್​ ಪಾಲಾಗಿದೆ. ಕಳೆದ ಬಾರಿ ಕಾರ್ಗಲ್ ಜೋಗ ಪಟ್ಟಣ ಪಂಚಾಯತ್ ಕಾಂಗ್ರೆಸ್​ ವಶದಲ್ಲಿತ್ತು.

ಮುಳಬಾಗಿಲು ನಗರಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು ಬಿಜೆಪಿ 02, ಜೆಡಿಎಸ್  10, ಕಾಂಗ್ರೆಸ್ 07, ಪಕ್ಷೇತರ 12 ಗೆಲುವು ಸಾಧಿಸಿದೆ.

ಮಂಗಳವಾರ(ನ.2) ನಡೆದ ಸ್ಥಳೀಯ ಸಂಸ್ಥೆಗಳ 1388 ಮತಗಟ್ಟೆಗಳಲ್ಲಿ, 13, 04,614 ಮತದಾರರು ಮತ ಚಲಾವಣೆ ಮಾಡಿದ್ದರು. ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆದಿತ್ತು. ದಾವಣಗೆರೆ ಮಹಾನಗರ ಪಾಲಿಕೆಗೆ ಶೇ.56.31, ಮಂಗಳೂರು ಮಹಾನಗರ ಪಾಲಿಕೆಗೆ ಶೇ.59.57 ರಷ್ಟು ಮತದಾನವಾಗಿದ್ದರೆ, ನಗರಸಭೆಗಳಾದ ಕನಕಪುರ-ಶೇ.69.71, ಕೋಲಾರ-ಶೇ.68.15 ಮತದಾನ ಆಗಿತ್ತು. ಮುಳಬಾಗಿಲು ಶೇ.74.28, ರಾಬರ್ಟ್‍ಸನ್‍ಪೇಟೆ ಶೇ.56.51, ಗೌರಿಬಿದನೂರು ಶೇ.75.31, ಚಿಂತಾಮಣಿ ಶೇ.65.31 ರಷ್ಟು ಮತದಾನವಾಗಿತ್ತು.

ಇನ್ನು ಪುರಸಭೆಗಳಾದ ಮಾಗಡಿ ಶೇ.81.42, ಬೀರೂರು ಶೇ.77.84 ಮತದಾನವಾಗಿದೆ. ಹಾಗೆಯೇ ಕಂಪ್ಲಿ ಶೇ.69.36ರಷ್ಟು ಮತದಾನವಾಗಿದೆ. ಪಟ್ಟಣ ಪಂಚಾಯ್ತಿಗಳಾದ ಜೋಗ್-ಕಾರ್ಗಲ್ ಶೇ.73.80, ಕುಂದಗೋಳ ಶೇ.72.48, ಕೂಡ್ಲಗಿ ಶೇ.75.71ರಷ್ಟು ಮತದಾನ ನಡೆದಿದೆ ಎಂದು ರಾಜ್ಯ ಚುನಾವಣಾ ಆಯೋಗದ ಹೇಳಿದೆ.ನಗರ ಸ್ಥಳೀಯ ಸಂಸ್ಥೆಗಳ 418 ವಾರ್ಡ್‍ಗಳ ಪೈಕಿ 386ರಲ್ಲಿ ಕಾಂಗ್ರೆಸ್, 363ರಲ್ಲಿ ಬಿಜೆಪಿ, 233ರಲ್ಲಿ ಜೆಡಿಎಸ್, 475 ಪಕ್ಷೇತರರು ಸೇರಿ ಒಟ್ಟು 1587 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಈ ಪೈಕಿ ಕನಕಪುರ ನಗರಸಭೆಯ 7, ಬೀರೂರು ಪುರಸಭೆಯ 1 ಹಾಗೂ ಕೂಡ್ಲಗಿ ಪಟ್ಟಣ ಪಂಚಾಯ್ತಿಯ 1 ಸ್ಥಾನ ಸೇರಿ 9 ವಾರ್ಡ್‍ಗಳಿಗೆ ಅವಿರೋಧ ಆಯ್ಕೆಯಾಗಿದೆ.

First published:November 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ