ಸ್ಥಳೀಯ ನಗರ ಸಂಸ್ಥೆ, ಪಂಚಾಯತ್ ಚುನಾವಣಾ ಫಲಿತಾಂಶ ಇಂದು ಪ್ರಕಟ

ಫೆಬ್ರವರಿ 9ರಂದು 4 ನಗರಸಭೆ, 1 ಪುರಸಭೆ ಮತ್ತು 1 ಪಟ್ಟಣ ಪಂಚಾಯತಿ ಸ್ಥಾನಗಳ ಒಟ್ಟು 167 ವಾರ್ಡ್​ಗಳಿಗೆ ಚುನಾವಣೆ ನಡೆದಿತ್ತು. ಹಾಗೆಯೇ, ಮಹಾನಗರ ಪಾಲಿಕೆಯ ಒಂದು ವಾರ್ಡ್, ಪಟ್ಟಣ ಪಂಚಾಯತ್​ನ ಒಂದು ವಾರ್ಡ್, 1 ಜಿ.ಪಂ., 7 ತಾ.ಪಂ., 13 ಗ್ರಾ.ಪಂ. ಸ್ಥಾನಗಳಿಗೆ ಉಪಚುನಾವಣೆಗಳು ನಡೆದಿದ್ದವು.

ಇವಿಎಂ ಮೆಷೀನ್

ಇವಿಎಂ ಮೆಷೀನ್

 • News18
 • Last Updated :
 • Share this:
  ಬೆಂಗಳೂರು(ಫೆ. 11): ಒಂಬತ್ತು ಜಿಲ್ಲೆಗಳಾದ್ಯಂತ ವಿವಿಧ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ನಗರ ಸಂಸ್ಥೆಗಳಿಗೆ ನಡೆದ ಸಾರ್ವತ್ರಿಕ ಚುನಾವಣೆ ಮತ್ತು ಉಪಚುನಾವಣೆಯ ಫಲಿತಾಂಶ ಇವತ್ತು ಪ್ರಕಟವಾಗಲಿದೆ. ಬೆಳಗ್ಗೆ 8ಗಂಟೆಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

  ಫೆಬ್ರವರಿ 9ರಂದು 4 ನಗರಸಭೆ, 1 ಪುರಸಭೆ ಮತ್ತು 1 ಪಟ್ಟಣ ಪಂಚಾಯತಿ ಸ್ಥಾನಗಳ ಒಟ್ಟು 167 ವಾರ್ಡ್​ಗಳಿಗೆ ಚುನಾವಣೆ ನಡೆದಿತ್ತು. ಹಾಗೆಯೇ, ಮಹಾನಗರ ಪಾಲಿಕೆಯ ಒಂದು ವಾರ್ಡ್, ಪಟ್ಟಣ ಪಂಚಾಯತ್​ನ ಒಂದು ವಾರ್ಡ್, 1 ಜಿ.ಪಂ., 7 ತಾ.ಪಂ., 13 ಗ್ರಾ.ಪಂ. ಸ್ಥಾನಗಳಿಗೆ ಉಪಚುನಾವಣೆಗಳು ನಡೆದಿದ್ದವು.

  ಸಾರ್ವತ್ರಿಕ ಚುನಾವಣೆ ನಡೆದಿರುವ ಸ್ಥಾನಗಳು:

  ಹೊಸಕೋಟೆ ನಗರಸಭೆ: 31 ವಾರ್ಡ್
  ಚಿಕ್ಕಬಳ್ಳಾಪುರ ನಗರಸಭೆ: 31 ವಾರ್ಡ್
  ಹುಣಸೂರು ನಗರಸಭೆ: 31 ವಾರ್ಡ್
  ಸಿರಗುಪ್ಪ ನಗರಸಭೆ: 31 ವಾರ್ಡ್
  ಸಿಂಧಗಿ ಪುರಸಭೆ: 23 ವಾರ್ಡ್
  ತೆಕ್ಕಲಕೋಟೆ ಪ.ಪಂ: 20 ವಾರ್ಡ್

  ಇದನ್ನೂ ಓದಿ: ಎಸ್‌ಸಿ/ಎಸ್‌ಟಿ ತಿದ್ದುಪಡಿ ಕಾಯ್ದೆ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿಗೆ ಸಿದ್ದರಾಮಯ್ಯ ಅಸಮಾಧಾನ

  ಉಪಚುನಾವಣೆ ನಡೆದಿರುವ ಸ್ಥಾನಗಳು:

  ಮೈಸೂರು ಮಹಾನಗರ ಪಾಲಿಕೆ: 1 ವಾರ್ಡ್
  ಖಾನಾಪುರ ಪ.ಪಂ.: 1 ವಾರ್ಡ್
  ಹುಕ್ಕೇರಿ ಜಿ.ಪಂ: 35
  ಮಾಚೋಹಳ್ಳಿ ತಾ.ಪಂ.: 9
  ಲಕ್ಕೂರು ತಾ.ಪಂ.: 8
  ಕುರಬೂರು ತಾ.ಪಂ.: 9
  ಶ್ಯಾಂಪುರ ತಾ.ಪಂ.: 10
  ಕಟಕೋಳ ತಾ.ಪಂ.: 13
  ತಿಳವಳ್ಳಿ ತಾ.ಪಂ.: 8
  ಕರೂರು ತಾ.ಪಂ.: 8

  ಇದನ್ನೂ ಓದಿ: ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ಬ್ಲೇಡ್ ಬಾಬಾ ಅಸ್ಲಂ ಈಗ ಸಿಎಎ ಹೋರಾಟದಲ್ಲಿ ಪ್ರತ್ಯಕ್ಷ

  ಇದರ ಜೊತೆಗೆ ಮೈಸೂರಿನ 6, ಬೆಳಗಾವಿಯ 2 ಹಾಗೂ ಉತ್ತರ ಕನ್ನಡದ 2 ಗ್ರಾಮ ಪಂಚಾಯಿತಿಗಳಲ್ಲಿ ಉಪಚುನಾವಣೆಗಳು ನಡೆದಿವೆ. ಹಾಗೆಯೇ, ಚಿಕ್ಕಬಳ್ಳಾಪುರ, ಬೆಂಗಳೂರು ಮತ್ತು ಹಾವೇರಿಯಲ್ಲಿ ಒಂದೊಂದು ಗ್ರಾ.ಪಂ. ಸ್ಥಾನಗಳಿಗೆ ಬೈ ಎಲೆಕ್ಷನ್ಸ್ ಆಗಿವೆ.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: