Karnataka Local Body Elections: ಬಿಜೆಪಿ 59, ಕಾಂಗ್ರೆಸ್ 69; ಹೊಸಕೋಟೆ ಬಿಜೆಪಿ ವಶಕ್ಕೆ; ಚಿಕ್ಕಬಳ್ಳಾಪುರ, ಹುಣಸೂರು, ಸಿಂಧಗಿಯಲ್ಲಿ ಕೈ ಮೇಲುಗೈ

Local Body Elections Final Results: ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಅವರಿಗೆ ಸಮಾಧಾನಕರ ಫಲಿತಾಂಶ ಸಿಕ್ಕಿದೆ. ಬಳ್ಳಾರಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿವೆ. ವಿಜಯಪುರದ ಸಿಂಧಗಿಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ.

ಕಾಂಗ್ರೆಸ್​-ಬಿಜೆಪಿ ಚಿಹ್ನೆ

ಕಾಂಗ್ರೆಸ್​-ಬಿಜೆಪಿ ಚಿಹ್ನೆ

 • Share this:
  ಬೆಂಗಳೂರು(ಫೆ. 11): ನಾಲ್ಕು ನಗರಸಭೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿ ನಗರಸಭೆಯಲ್ಲಿ ಅಧಿಕಾರ ಹಿಡಿದಿದೆ. ಚಿಕ್ಕಬಳ್ಳಾಪುರ ಮತ್ತು ಸಿರಗುಪ್ಪ ನಗರಸಭೆಗಳು ಕಾಂಗ್ರೆಸ್ ಪಾಲಾಗಿವೆ. ಹುಣಸೂರು ಮತ್ತು ಸಿಂಧಗಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೂ ಕಾಂಗ್ರೆಸ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಬಳ್ಳಾರಿಯ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಗೆದ್ದು ಬೀಗಿದೆ. ನಗರಸಭೆ ಮತ್ತು ಪುರಸಭೆ ಒಟ್ಟಾರೆ ವಾರ್ಡ್ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಮುಂದಿದೆ. ಇಲ್ಲಿ ಬಿಜೆಪಿ 59, ಕಾಂಗ್ರೆಸ್ 69 ಸ್ಥಾನಗಳನ್ನ ಗೆದ್ದಿವೆ.

  ಮೈಸೂರು ಮಹಾನಗರ ಪಾಲಿಕೆಯ 18ನೇ ವಾರ್ಡ್​ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ರವೀಂದ್ರ ನಾಯಕ್ 103 ಮತಗಳಿಂದ ಗೆಲುವು ಪಡೆದಿದ್ದಾರೆ. ಬಳ್ಳಾರಿಯ ಕರೂರು ತಾ.ಪಂ. ಉಪಚುನಾವಣೆಯಲ್ಲೂ ಬಿಜೆಪಿಯ ವಿ. ಅಮರಮ್ಮ ಜಯ ಸಾಧಿಸಿದ್ದಾರೆ. ಕೋಲಾರದ ಮಾಲೂರು ತಾಲೂಕಿನ ಲಕ್ಕೂರು ತಾ.ಪಂ. ಉಪಚುನಾವಣೆಯಲ್ಲಿ ಬಿಜೆಪಿಯ ಮನೋಹರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕೋಡಿಹಳ್ಳಿ ಮಂಜುನಾಥ್​ಗೆ ಗೆಲುವು ಪಡೆದಿದ್ದಾರೆ. ಇನ್ನು, ಹಾವೇರಿಯ ಹಾನಗಲ್ ತಾಲೂಕಿನ ತಿಳವಳ್ಳಿ ತಾ.ಪಂ. ಉಪಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಭಾರಿಸಿದ್ಧಾರೆ. ಇಲ್ಲಿ ಬಿಜೆಪಿಯ ಸಿ.ಎಂ. ಉದಾಸಿಗೆ ಹಿನ್ನಡೆಯಾದಂತಾಗಿದೆ.

  ಹೊಸಕೋಟೆಯಲ್ಲಿ ಬಿಜೆಪಿ ಗೆಲುವಿನ ಜೊತೆಗೆ ಕಾಂಗ್ರೆಸ್ ಅಕ್ಷರಶಃ ಧೂಳೀಪಟವಾಗಿದೆ. ಇಲ್ಲಿ ಕಾಂಗ್ರೆಸ್ ಸೊನ್ನೆ ಸುತ್ತಿದೆ. ಹಾಲಿ ಶಾಸಕ ಶರತ್ ಬಚ್ಚೇಗೌಡ ಬೆಂಬಲಿತ ಅಭ್ಯರ್ಥಿಗಳು 7ರಲ್ಲಿ ಜಯಪಡೆದಿದ್ದಾರೆ. ಜೆಡಿಎಸ್ 3ರಲ್ಲಿ ಗೆಲುವು ಪಡೆದಿದೆ.

  ಇದನ್ನೂ ಓದಿ: ಬಿಎಸ್​ವೈಗೆ ಮತ್ತೆ ಶುರುವಾಯ್ತ ವಲಸಿಗರ ಕಾಟ?; ಎಂಎಸ್​ಐಎಲ್ ಅಧ್ಯಕ್ಷ ಸ್ಥಾನ ನಿರಾಕರಿಸಿದ ಕುಮಟಳ್ಳಿ

  ಹುಣಸೂರು ನಗರಸಭೆಯಲ್ಲಿ ಕಮಲ ಅರಳಲು ಯಶಸ್ವಿಯಾಗಿದೆ. ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರೂ ಬಿಜೆಪಿ ಇಲ್ಲಿ 3ರಲ್ಲಿ ಗೆಲುವು ಪಡೆದಿರುವುದು ಗಮನಾರ್ಹವೆನಿಸಿದೆ. ಹೆಚ್. ವಿಶ್ವನಾಥ್ ಅವರಿಗೆ ಇದು ನೈತಿಕವಾಗಿ ಉತ್ತೇಜನಕಾರಿ ಫಲಿತಾಂಶ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಮುಖ ನಾಯಕರ ನಿಷ್ಕ್ರಿಯತೆ ನಡುವೆಯೂ ಜೆಡಿಎಸ್ ಇಲ್ಲಿ 7 ಸ್ಥಾನಗಳನ್ನು ಗೆದ್ದಿರುವುದು ಉತ್ತಮ ಫಲಿತಾಂಶ ಎನ್ನಲಾಗಿದೆ. ಹುಣಸೂರು ನಗರಸಭೆಯಲ್ಲಿ ಕಾಂಗ್ರೆಸ್ ಬಹುಮತಕ್ಕೆ 2 ಸ್ಥಾನದ ಕೊರತೆ ಹೊಂದಿದೆ. ಇಲ್ಲಿ ಎಸ್​ಡಿಪಿಐ ಕೂಡ 2 ಸ್ಥಾನ ಗೆದ್ದು ಅಚ್ಚರಿ ಮೂಡಿಸಿದೆ.

  ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್  ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಸಿರಗುಪ್ಪ ನಗರಸಭೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಬಿಜೆಪಿ ಪಾಲಾಗಿದೆ.

  ವಿಜಯಪುರದ ಸಿಂಧಗಿ ಪುರಸಭೆಯಲ್ಲಿ ಬಿಜೆಪಿ ಹೀನಾಯ ಸೋಲನುಭವಿಸಿದೆ. ಇಲ್ಲಿ ಕಾಂಗ್ರೆಸ್ ಅಗ್ರಸ್ಥಾನ ಪಡೆದರೆ, ಜೆಡಿಎಸ್ ಎರಡನೇ ಸ್ಥಾನಕ್ಕೇರಿದೆ.

  ಫಲಿತಾಂಶ ವಿವರ:

  ಮೈಸೂರು ಮಹಾನಗರ ಪಾಲಿಕೆ: ವಾರ್ಡ್ ನಂ. 18ರ ಉಪಚುನಾವಣೆ
  ಬಿಜೆಪಿಯ ಬಿ.ವಿ. ರವೀಂದ್ರ ನಾಯಕ್​ಗೆ 103 ಮತಗಳ ಅಂತರದ ಗೆಲುವು

  ಹುಣಸೂರು ನಗರಸಭೆ ಫಲಿತಾಂಶ:
  ಒಟ್ಟು ವಾರ್ಡ್ 31
  ಕಾಂಗ್ರೆಸ್: 14
  ಬಿಜೆಪಿ: 3
  ಜೆಡಿಎಸ್: 7
  ಎಸ್​ಡಿಪಿಐ: 2
  ಪಕ್ಷೇತರ: 5

  ಚಿಕ್ಕಬಳ್ಳಾಪುರ ನಗರಸಭೆ:
  ಒಟ್ಟು ವಾರ್ಡ್: 31
  ಕಾಂಗ್ರೆಸ್: 16
  ಬಿಜೆಪಿ: 9
  ಜೆಡಿಎಸ್: 2
  ಪಕ್ಷೇತರ: 4

  ಹೊಸಕೋಟೆ ನಗರಸಭೆ:
  ಒಟ್ಟು ವಾರ್ಡ್ 31
  ಬಿಜೆಪಿ 22
  ಶರತ್ ಬಚ್ಚೇಗೌಡ ಗುಂಪು 7
  ಎಸ್​ಡಿಪಿಐ 1
  ಕಾಂಗ್ರೆಸ್ 0
  ಪಕ್ಷೇತರ 1

  ಬಳ್ಳಾರಿಯ ಸಿರಗುಪ್ಪ ನಗರಸಭೆ:
  ಒಟ್ಟು ವಾರ್ಡ್ 31
  ಕಾಂಗ್ರೆಸ್ 19
  ಬಿಜೆಪಿ 11
  ಪಕ್ಷೇತರ 1

  ವಿಜಯಪುರದ ಸಿಂಧಗಿ ಪುರಸಭೆ:
  ಒಟ್ಟು ವಾರ್ಡ್ 23
  ಕಾಂಗ್ರೆಸ್ 11
  ಜೆಡಿಎಸ್ 6
  ಬಿಜೆಪಿ 3
  ಪಕ್ಷೇತರರು 3

  ಬಳ್ಳಾರಿಯ ತೆಕ್ಕಲಕೋಟೆ ಪ.ಪಂ.:
  ಒಟ್ಟು ವಾರ್ಡ್ 20
  ಬಿಜೆಪಿ 11
  ಕಾಂಗ್ರೆಸ್ 9

  ಬಳ್ಳಾರಿಯ ಕರೂರು ತಾ.ಪಂ. ಉಪಚುನಾವಣೆ:
  ಬಿಜೆಪಿಯ ವಿ. ಅಮರಮ್ಮ ಗೆಲುವು

  ಕೋಲಾರದ ಮಾಲೂರು ತಾಲೂಕಿನ ಲಕ್ಕೂರು ತಾ.ಪಂ. ಉಪಚುನಾವಣೆ:
  ಬಿಜೆಪಿಯ ಮನೋಹರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕೋಡಿಹಳ್ಳಿ ಮಂಜುನಾಥ್​ಗೆ ಜಯ

  ಹಾವೇರಿಯ ಹಾನಗಲ್ ತಾಲೂಕಿನ ತಿಳವಳ್ಳಿ ತಾ.ಪಂ. ಉಪಚುನಾವಣೆ:
  ಕಾಂಗ್ರೆಸ್​ನ ಫಯಾಜ್ ಅಹ್ಮದ್ ಲೋಹಾರ್​ಗೆ ಗೆಲುವು

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: