• Home
  • »
  • News
  • »
  • state
  • »
  • MLC Election Results: ಇಂದು ವಿಧಾನ ಪರಿಷತ್ ಚುನಾವಣೆ ಫಲಿತಾಂಶ; 4 ಸ್ಥಾನ, 49 ಅಭ್ಯರ್ಥಿಗಳು

MLC Election Results: ಇಂದು ವಿಧಾನ ಪರಿಷತ್ ಚುನಾವಣೆ ಫಲಿತಾಂಶ; 4 ಸ್ಥಾನ, 49 ಅಭ್ಯರ್ಥಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಟ್ಟು ನಾಲ್ಕು ಸ್ಥಾನಗಳ 607 ಬೂತ್‌ ಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿತ್ತು. ನಾಲ್ವರು ಮಹಿಳೆಯರು ಸೇರಿದಂತೆ 49 ಅಭ್ಯರ್ಥಿಗಳು ಕಣದಕಲ್ಲಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 2,84,922 ಮತದಾರರಿದ್ದಾರೆ.

  • Share this:

ಕರ್ನಾಟಕ ವಿಧಾನ ಪರಿಷತ್ತಿನ (Karnataka Vidhan Parishath) ನಾಲ್ಕು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ (Election) ಸೋಮವಾರ ನಡೆದಿದ್ದು, ಇಂದು ಫಲಿತಾಂಶ (Election Result) ಪ್ರಕಟವಾಗಲಿದೆ. ನಾಲ್ಕು ಕ್ಷೇತ್ರಗಳಲ್ಲಿ ಶೇ.73ರಷ್ಟು ಮತದಾನವಾಗಿದೆ. ಇಂದು ಬೆಳಗ್ಗೆ ಮತ ಎಣಿಕೆ (Counting) ಆರಂಭವಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರ ಶೇ.84 ರಷ್ಟು ಅತಿ ಹೆಚ್ಚು ಮತದಾನವಾಗಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರ ಶೇ.80 ಮತ್ತು ದಕ್ಷಿಣ ಪದವೀಧರರ ಕ್ಷೇತ್ರ ಶೇ.70  ಮತ್ತು  ವಾಯವ್ಯ ಪದವೀಧರರ ಕ್ಷೇತ್ರದಲ್ಲಿ ಶೇ.59ರಷ್ಟು ಮತದಾನವಾಗಿದೆ. ಮತಪತ್ರಗಳ ಎಣಿಕೆ ಜೊತೆ ಪ್ರಾಶಸ್ತ್ರ ಮತಗಳ ಎಣಿಕೆ ನಡೆಯೋದರಿಂದ ಇಂದು ಸಂಜೆ ಅಥವಾ ಗುರುವಾರ ಬೆಳಗ್ಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ.


75 ಸದಸ್ಯರ ಮೇಲ್ಮನೆಯಲ್ಲಿನ ಮೂರು ಪಕ್ಷಗಳ ಮೇಲೆ ಈ ಚುನಾವಣೆ ಅಷ್ಟೇನೂ ಬದಲಾವಣೆ ತರದಿದ್ರೂ, ಆಡಳಿತರೂಢ ಬಿಜೆಪಿಗೆ ವಿಧಾನ ಪರಿಷತ್ತಿನಲ್ಲಿ ಸ್ಪಷ್ಟ ಬಹುಮತವನ್ನು ಪಡೆಯಲು ಸಹಾಯ ಮಾಡಲಿದೆ.


607 ಮತಗಟ್ಟೆಗಳಲ್ಲಿ ಮತದಾನ


ಒಟ್ಟು ನಾಲ್ಕು ಸ್ಥಾನಗಳ 607 ಬೂತ್‌ ಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿತ್ತು. ನಾಲ್ವರು ಮಹಿಳೆಯರು ಸೇರಿದಂತೆ 49 ಅಭ್ಯರ್ಥಿಗಳು ಕಣದಕಲ್ಲಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 2,84,922 ಮತದಾರರಿದ್ದಾರೆ.


ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದ್ರೆ ಜೆಡಿಎಸ್ ವಾಯುವ್ಯ ಶಿಕ್ಷಕರ ವಿಭಾಗದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.


ಇದನ್ನೂ ಓದಿ:  Chitradurga: Chitradurga: ನಾವು ಇನ್ನೊಬ್ಬರ ಆಸ್ತಿ, ಮಠ ಆಕ್ರಮಿಸಲ್ಲ, ನಮ್ಮದನ್ನು ಬಿಡಲ್ಲ ಎಂದ ಡಾ. ಶಿವಮೂರ್ತಿ ಮುರುಘಾ ಶ್ರೀಗಳು


ಅನಿಲ್ ಬೆನಕೆ ವಿರುದ್ಧ ಪ್ರಕರಣ


ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅನಿಲ್ ಬೆನಕೆ ಮತಗಟ್ಟೆಯೊಳಗೆ ತೆಗೆದುಕೊಂಡು ಹೋಗಿದ್ದು, ಮಾಸ್ಕ್  ಧರಿಸದೇ ಕೋವಿಡ್ -19 ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕೆ ಪ್ರಕರಣ ದಾಖಲಾಗಿದೆ.


ಬಿಜೆಪಿಯಿಂದ ಎಂಟನೇ ಬಾರಿಗೆ ಬಸವರಾಜ್ ಹೊರಟ್ಟಿ ಪುನರಾಯ್ಕೆ ಬಯಸಿರೋದರಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಫಲಿತಾಂಶ ವಿಶೇಷ ಕುತೂಹಲ ಮೂಡಿಸಿದೆ. ಕಳೆದ ತಿಂಗಳು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.


ವಾಯುವ್ಯ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ


ಇನ್ನು ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಪ್ರಕಾಶ್ ಹುಕ್ಕೇರಿ ಕಣದಲ್ಲಿದ್ದಾರೆ. ಪ್ರಕಾಶ್ ಹುಕ್ಕೇರಿ  ಅವರು ಮೂರನೇ ಅವಧಿಗೆ ಮರು ಆಯ್ಕೆ ಬಯಸುತ್ತಿರುವ ಹಾಲಿ ಎಂಎಲ್‌ಸಿ ಬಿಜೆಪಿಯ ಅರುಣ್ ಶಹಾಪುರ ಅವರನ್ನು ಎದುರಿಸುತ್ತಿದ್ದಾರೆ.


ಮತ್ತೊಮ್ಮೆ ಮುಖಾಮುಖಿಯಾದ ಶ್ರೀಕಂಠೇಗೌಡ, ಎಂವೈ ರವಿಶಂಕರ್


ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್‌ ನಲ್ಲಿನ ಅಸಮಾಧಾನದ ಲಾಭ ಪಡೆದು ಕಾಂಗ್ರೆಸ್ ಮಧು ಮಾದೇಗೌಡರನ್ನು ಕಣಕ್ಕಿಳಿಸಿದ್ದು, ಅಭ್ಯರ್ಥಿ ಪರ ಕೈ ನಾಯಕರು ಭರ್ಜರಿ ಪ್ರಚಾರ ನಡೆಸಿದರು. 2016ರಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಟಿ.ಶ್ರೀಕಂಠೇಗೌಡ ಅವರು ಬಿಜೆಪಿಯ ಎಂ ವೈ ರವಿಶಂಕರ್ ವಿರುದ್ಧ ಅಲ್ಪಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಈಗ ಮತ್ತೆ ಇಬ್ಬರು ಮುಖಾಮುಖಿಯಾಗಿದ್ದಾರೆ.


ಯಾವ ಜಿಲ್ಲೆಗಳಲ್ಲಿ ಚುನಾವಣೆ?


*ಕರ್ನಾಟಕ ವಾಯುವ್ಯ ಪದವೀಧರರ ಕ್ಷೇತ್ರ: ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ


*ಕರ್ನಾಟಕ ದಕ್ಷಿಣ ಪದವೀಧರ ಕ್ಷೇತ್ರ: ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ


*ಕರ್ನಾಟಕ ವಾಯುವ್ಯ ಶಿಕ್ಷಕರ ಕ್ಷೇತ್ರ: ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ


*ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರ: ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ


ಇದನ್ನು ಓದಿ:  Chitradurga: ಕಾಂಗ್ರೆಸ್​​​ನವರಿಗೂ ನೋವು ಗೊತ್ತಾಗಲಿ! ಪ್ರತಿಭಟನೆಗೆ ರಾಮುಲು ಟಾಂಗ್


ವಾಯವ್ಯ ಶಿಕ್ಷಕ ಕ್ಷೇತ್ರದ ಚುನಾವಣಾ ಕಣದಲ್ಲಿ ಅರುಣ ಶಹಪುರ (ಬಿಜೆಪಿ), ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್) ಮತ್ತು ಚಂದ್ರಶೇಖರ್ ಲೋಣ (ಜೆಡಿಎಸ್) ಇದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ನಿಂಗಪ್ಪ ಬನ್ನೂರು,. ಶ್ರೀಕಾಂತ್ ಪಾಟೀಲ್, ಬಸಪ್ಪ ಮನಿಗಾರ, ಜಯಪಾಲ್ ದೇಸಾಯಿ, ಅಪ್ಪಾಸಾಹೇಬ್ ಕರುಣೆ, ಚಂದ್ರಶೇಖರ್ ಗಡಸಿ, ಸಂಗಮೇಶ್ ಚಿಕ್ಕನರಗುಂದ ಮತ್ತು ಶ್ರೇಣೀಕ್ ಜಾಂಗಟೆ ಕಣದಲ್ಲಿದ್ದಾರೆ.

Published by:Mahmadrafik K
First published: