• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • MLC Elections: ವಿಜಯೇಂದ್ರಗೆ ತಪ್ಪಿದ ಟಿಕೆಟ್; ಬಿಜೆಪಿಯ ಟಿಕೆಟ್ ಸಿಕ್ಕಿದ್ದು ಯಾರಿಗೆ?

MLC Elections: ವಿಜಯೇಂದ್ರಗೆ ತಪ್ಪಿದ ಟಿಕೆಟ್; ಬಿಜೆಪಿಯ ಟಿಕೆಟ್ ಸಿಕ್ಕಿದ್ದು ಯಾರಿಗೆ?

ಬಿ.ವೈ. ವಿಜಯೇಂದ್ರ

ಬಿ.ವೈ. ವಿಜಯೇಂದ್ರ

ಕುಟುಂಬ ರಾಜಕಾರಣಕ್ಕೆ ಹೈಕಮಾಂಡ್ (BJP high Command) ನೋ ಅಂದಿದ್ದು, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರಿಗೆ ಟಿಕೆಟ್ ತಪ್ಪಿದೆ.

  • Share this:

MLC Election 2022: ವಿಧಾನ ಪರಿಷತ್ ಚುನಾವಣೆಗೆ (Vidhana Parishat Election) ಬಿಜೆಪಿ ಅಭ್ಯರ್ಥಿಗಳ (BJP Candidates) ಹೆಸರನ್ನು ಘೋಷಣೆ ಮಾಡಿದೆ. ಕುಟುಂಬ ರಾಜಕಾರಣಕ್ಕೆ ಹೈಕಮಾಂಡ್ (BJP high Command) ನೋ ಅಂದಿದ್ದು, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರಿಗೆ ಟಿಕೆಟ್ ತಪ್ಪಿದೆ. ಒಕ್ಕಲಿಗ, ದಲಿತ, ಲಿಂಗಾಯತ ಮತ್ತು ಒಬಿಸಿ ಜಾತಿ ಸಮೀಕರಣದಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ಮಾಡಿದೆ. ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ನಿನ್ನೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿತ್ತು. ಆದ್ರೆ ಜೆಡಿಎಸ್ (JDS) ಇದುವರೆಗೂ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ. 


ಯಾರಿಗೆ ಟಿಕೆಟ್?


ಲಿಂಗರಾಜು ಪಾಟೀಲ್- ಪ್ರಹ್ಲಾದ್ ಜೋಷಿ ಬೆಂಬಲ


ಮಂಜುಳ- ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬೆಂಬಲ


ಕೇಶವಪ್ರಸಾದ್- ಬಿ ಎಲ್ ಸಂತೋಷ್ ಬೆಂಬಲ


ಚಲುವಾದಿ ನಾರಾಯಣಸ್ವಾಮಿ- ರಾಜ್ಯ ಬಿಜೆಪಿ ಘಟಕ


ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರಗೆ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿತ್ತು. ಹಾಗಾಗಿ ವಿಜಯೇಂದ್ರ ಅವರಿಗೆ ಸ್ಥಾನ ನೀಡಬೇಕೇ ಅಥವಾ ಬೇಡವಾ ಎಂಬುದರ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದವು. ಕೊನೆಗೆ ಅಳೆದು ತೂಗಿ ಬಿಜೆಪಿ ನಾಲ್ವರಿಗೆ ಟಿಕೆಟ್ ನೀಡಿದೆ.


ಇದನ್ನೂ ಓದಿ:  DK Shivakumar Vs Siddaramaiah: ಮುಯ್ಯಿಗೆ ಮುಯ್ಯಿ: ಸಿದ್ದರಾಮಯ್ಯಗೆ ಡಿಕೆಶಿ ಚೆಕ್ ಮೇಟ್ ಕೊಟ್ಟಿದ್ದು ಹೇಗೆ ಗೊತ್ತಾ?


ವಿಜಯೇಂದ್ರೆಗೆ ಟಿಕೆಟ್ ತಪ್ಪಿದ್ಯಾಕೆ?


ಒಂದು ವೇಳೆ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ನೀಡಿದ್ರೆ ಮುಂದಿನ ವಿಧಾನಸಭಾ ಚುನಾವಣೆ ಪ್ರಚಾರದಿಂದ ಯಡಿಯೂರಪ್ಪ ಅಂತರ ಕಾಯ್ದುಕೊಳ್ಳಬಹುದು. ಈಗ ಟಿಕೆಟ್ ನೀಡಿದ್ರೆ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಟಿಕೆಟ್ ಕೇಳುವ ಸಾಧ್ಯತೆಗಳಿವೆ. ಹಾಗಾಗಿ ನೇರವಾಗಿ 2023ಕ್ಕೆ ಟಿಕೆಟ್ ನೀಡಿದ್ರೆ ಉತ್ತಮ ಎಂದು ಭಾವಿಸಿ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.


ಪ್ರಬಲ ಸಮುದಾಯದವರಿಗೆ ಹೆಚ್ಚು ಅವಕಾಶ


ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದ 1952ರಿಂದ 2022ರವರೆಗಿನ 70 ವರ್ಷದಲ್ಲಿ ವಿಧಾನ ಪರಿಷತ್‍ನಲ್ಲಿ ದೊರೆತ 802 ಅವಕಾಶಗಳ ಪೈಕಿ ಪ್ರಬಲ ಸಮುದಾಯದವರೇ ಪರಿಷತ್ ಸದಸ್ಯತ್ವದ ಸಿಂಹಪಾಲು ಪಡೆದಿದ್ದಾರೆ. ಅಚ್ಚರಿಯಾಗಬಹುದಾದ ಅಧಿಕೃತ ವಿವರ ಈ ಕೆಳಕಂಡಂತಿದೆ.


ಲಿಂಗಾಯತರು - 141, ಒಕ್ಕಲಿಗ -158, ಬ್ರಾಹ್ಮಣ -91, ಪ.ಜಾ -65, ಮುಸ್ಲಿಂ -54, ಕುರುಬ-20, ಪ.ಪಂ -18, ಈಡಿಗ -18, ಕೊಡವ -15, ಜೈನ್-14, ಬಂಟ -14, ಬಲಿಜ-13, ಕ್ರೈಸ್ತ -12, ಮರಾಠ -12, ಬೆಸ್ತ -11, ವೈಶ್ಯ-10, ರೆಡ್ಡಿ-9, ಗಾಣಿಗ-6, ದೇವಾಂಗ-5, ವಿಶ್ವಕರ್ಮ-4, ಉಪ್ಪಾರ-3, ನಾಯ್ಡು, ತಿಗಳ, ಮಡಿವಾಳ, ಹಿಂದೂ ಸಾದರು, ರಾಜು ಕ್ಷತ್ರಿಯ, ಭಂಡಾರಿ  - ತಲಾ 2, ಗೊಲ್ಲ, ಕುಂಬಾರ, ರಜಪೂತ್, ಮುದಲಿಯಾರ್, ಅರಸು, ದೇವಳಿ, ಸಿಂಧಿ, ಭಾವಸಾರ ಕ್ಷತ್ರಿಯ, ಸವಿತಾ - ತಲಾ 1 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.


ಜೂನ್  ನಲ್ಲಿ ಏಳು ಜನ ನಿವೃತ್ತಿ


ಪ್ರಸ್ತುತ, ವಿಧಾನಪರಿಷತ್ತಿನ 74 ಸದಸ್ಯರ ಸಮುದಾಯದ ವಿವರ ಹೀಗಿದೆ: ಒಕ್ಕಲಿಗ- 21, ಲಿಂಗಾಯತ -20, ಪ.ಜಾ- 5, ಕುರುಬ- 5, ಪ.ಪಂ, ಮುಸ್ಲಿಂ, ಬೆಸ್ತ - ತಲಾ 3, ಈಡಿಗ -3, ಕೊಡವ, ಬಂಟ, ಬ್ರಾಹ್ಮಣ - ತಲಾ 2, ತಿಗಳ, ವೈಶ್ಯ, ರೆಡ್ಡಿ, ವಿಶ್ವಕರ್ಮ ಮತ್ತು ಜೈನ್ - ತಲಾ 1. ಇವರಲ್ಲಿ ಮುಂಬರುವ ಜೂನ್ ತಿಂಗಳಲ್ಲಿ 7 ಮಂದಿ ಸದಸ್ಯರು ನಿವೃತ್ತರಾಗುತ್ತಿದ್ದಾರೆ.


ಇದನ್ನೂ ಓದಿ:  WEF Davos: ಕರ್ನಾಟಕದಲ್ಲಿ 2 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಲುಲು, 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ನಿರೀಕ್ಷೆ


ಕಾಂಗ್ರೆಸ್ ನಿಂದ ಅಚ್ಚರಿ ಅಭ್ಯರ್ಥಿ ಘೋಷಣೆ


ಎರಡು ಸ್ಥಾನಗಳಿಗೆ ಕಾಂಗ್ರೆಸ್ ಹೈಕಮಾಂಡ್ ಯಾದವ ಸಮುದಾಯದ ನಾಗರಾಜ್ ಯಾದವ್ ಮತ್ತು ಅಲ್ಪಸಂಖ್ಯಾತ ಸಮುದಾಯದ ಅಬ್ದುಲ್ ಜಬ್ಬಾರ್ ಗೆ ಮಣೆ ಹಾಕಿದೆ. ಆದ್ರೆ ಸಿದ್ದರಾಮಯ್ಯ ಅವರು ಎಂ.ಆರ್.ಸೀತಾರಂ ಹೆಸರು ಶಿಫಾರಸ್ಸು ಮಾಡಿದ್ದರು. ಇತ್ತ ಅಲ್ಪಸಂಖ್ಯಾತರ ಪೈಕಿ ಆಪ್ತ ಐವಾನ್ ಡಿಸೋಜಾ ಅವರ ಹೆಸರು ಸೂಚಿಸಿದ್ದರು. ಆದ್ರೆ ಹೈಕಮಾಂಡ್ ಮಾತ್ರ ಡಿ.ಕೆ.ಶಿವಕುಮಾರ್ ಸೂಚಿಸಿದ ಹೆಸರುಗಳಿಗೆ ಮಣೆ ಹಾಕಿದಂತೆ ಕಾಣಿಸುತ್ತಿದೆ.

Published by:Mahmadrafik K
First published: