HOME » NEWS » State » KARNATAKA LEGISLATIVE COUNCIL DEPUTY CHAIRMAN DHARME GOWDA DEATH NOTE SECRET YET TO REVEALED VCTV SCT

ಧರ್ಮೇಗೌಡರ ಆತ್ಮಹತ್ಯೆಗೆ ಕಾರಣ ನಿಗೂಢ!; ಇನ್ನೂ ಬಹಿರಂಗವಾಗಿಲ್ಲ ಡೆತ್ ನೋಟ್ ಸೀಕ್ರೆಟ್

2 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡರ ಸಾವು ಹಲವು ಅನುಮಾನಕ್ಕೆ ಎಡೆಮಾಡೆಕೊಟ್ಟಿದೆ. Death Note ಬಹಿರಂಗಪಡಿಸದೇ ಇರೋದು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.

news18-kannada
Updated:December 31, 2020, 7:51 AM IST
ಧರ್ಮೇಗೌಡರ ಆತ್ಮಹತ್ಯೆಗೆ ಕಾರಣ ನಿಗೂಢ!; ಇನ್ನೂ ಬಹಿರಂಗವಾಗಿಲ್ಲ ಡೆತ್ ನೋಟ್ ಸೀಕ್ರೆಟ್
ಉಪಸಭಾಪತಿ ಎಸ್​.ಎಲ್​.ಧರ್ಮೇಗೌಡ
  • Share this:
ಚಿಕ್ಕಮಗಳೂರು : ಅದು ಅಂತಿಂಥ ಆತ್ಮಹತ್ಯೆಯಲ್ಲ. ಭೀಕರ, ಭಯ ಹುಟ್ಟಿಸುವಂತಹ ಸಾವು. ಯಾರೋ ಸಾಮಾನ್ಯ ಮನುಷ್ಯ ಆ ರೀತಿ ವಿಚಿತ್ರವಾಗಿ ಸಾವನ್ನಪ್ಪಿದರೆ ಆತನ ಮಾನಸಿಕತೆ ಸರಿಯಿರಲಿಲ್ಲವೇನೋ ಎಂದು ಯೋಚಿಸಬಹುದಿತ್ತು. ಆದರೆ ಆ ವ್ಯಕ್ತಿ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ, ಹಾಲಿ ವಿಧಾನ ಪರಿಷತ್ ಉಪಸಭಾಪತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದವರು. ಇಂತಹ ವ್ಯಕ್ತಿ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪುತ್ತಾರೆ ಅಂದರೆ ಅದು ಎಂತಹ ಮನಸ್ಥಿತಿ ಇರಬೇಕು? ಅಷ್ಟು ಕಠೋರವಾದ ನಿರ್ಧಾರ ತೆಗೆದುಕೊಳ್ಳಲು ತುಂಬಾ ಬಲವಾದ ಕಾರಣವೇ ಇರಬೇಕು ಅನ್ನೋ ಮಾತುಗಳು ಜನಸಾಮಾನ್ಯರಲ್ಲಿ ಕೇಳಿಬರುತ್ತಿವೆ. Death Note ಬಹಿರಂಗಪಡಿಸದೇ ಇರೋದು ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.

2 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡರ ಸಾವು ಹಲವು ಅನುಮಾನಕ್ಕೆ ಎಡೆಮಾಡೆಕೊಟ್ಟಿದೆ. ಅಷ್ಟಕ್ಕೂ ಈ ಅನುಮಾನಕ್ಕೆ ಕಾರಣವಾಗಿರೋದು Suicideಗೂ ಮುನ್ನ ಎಸ್.ಎಲ್ ಧರ್ಮೇಗೌಡರು ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ ನೋಟ್. ಹೌದು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ ಅನ್ನೋದು ಗೊತ್ತಾಗಿದೆ. ಡೆತ್ ನೋಟ್ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಧರ್ಮೇಗೌಡ ಸಹೋದರ ಎಸ್.ಎಲ್ ಭೋಜೇಗೌಡ ಸೇರಿದಂತೆ ಅಧಿಕಾರಿಗಳು ಕೂಡ ಖಾತ್ರಿ ಪಡಿಸಿದ್ದಾರೆ.

ಸುಮಾರು ಎರಡು ಪುಟದ ಡೆತ್ ನೋಟ್ ಬರೆದಿದ್ದಾರೆ ಅನ್ನೋದು ತಿಳಿದುಬಂದಿದ್ರೂ ನಿಖರವಾಗಿ ಏನು ಬರೆದಿದ್ದರು ಅನ್ನೋದು ಈ ಕ್ಷಣಕ್ಕೂ ಕೂಡ ನಿಗೂಢವಾಗಿದೆ. ಯಾಕಂದ್ರೆ ಡೆತ್ ನೋಟ್ ಪೋಟೋವಾಗಲಿ, ಡೆತ್ ನೋಟ್ನಲ್ಲಿ ಯಾವ ಅಂಶಗಳು ಇದ್ದವು ಅನ್ನೋ ಮಾಹಿತಿಯಾಗಲಿ ಬಹಿರಂಗವಾಗಿಲ್ಲ. ಇತ್ತೀಚೆಗೆ ವಿಧಾನ ಪರಿಷತ್​ನಲ್ಲಿ ನಡೆದ ಗಲಾಟೆ ಧರ್ಮೇಗೌಡರ ಮನಸ್ಸಿಗೆ ಆಘಾತವನ್ನುಂಟು ಮಾಡಿತ್ತು ಅನ್ನೋ ಮಾಹಿತಿ ಡೆತ್ ನೋಟ್​ನ್ಲಲಿತ್ತು ಎಂದು ಹೇಳಲಾಗುತ್ತಿದೆ. ಆದರೆ, ನಿಜಕ್ಕೂ ಅದೇ ಕಾರಣವಾ? ವಿಧಾನ ಪರಿಷತ್​ನಲ್ಲಿ ನಡೆದ ಘಟನೆಗೆ ಮನ ನೊಂದು ಉಪಸಭಾಪತಿ ಆತ್ಮಹತ್ಯೆ ಮಾಡಿಕೊಂಡರಾ ಎಂಬುದನ್ನು ಅಷ್ಟು ಸುಲಭವಾಗಿ ಯಾರೂ ಕೂಡ ಒಪ್ಪಿಕೊಳ್ಳುವಂತಹ ವಿಚಾರವಲ್ಲ. ಭೀಕರ ರೀತಿಯಲ್ಲಿ ಸೂಸೈಡ್ ಮಾಡಿಕೊಂಡಿರೋದು ಇದೀಗ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳು ಮೂಡಲು ಕಾರಣವಾಗಿದೆ.

ಈಗಾಗಲೇ ಎಲ್ಲರಿದೂ ಗೊತ್ತಿರುವಂತೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರ್ಬಲ ಮನಸ್ಸಿನವರು ಎಸ್.ಎಲ್ ಧರ್ಮೇಗೌಡರು ಆಗಿರಲಿಲ್ಲ. ಈ ಸಾವಿನ ಹಿಂದೆ ಇರೋ ರಹಸ್ಯವನ್ನ ಬಹಿರಂಗ ಪಡಿಸಬೇಕು, ಸಾರ್ವಜನಿಕ ಬದುಕಿನಲ್ಲಿ ಇದ್ದವರ ಡೆತ್ ನೋಟನ್ನ ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕೆಂದು ಸಾರ್ವಜನಿಕರು ಮಾತಾನಾಡಿಕೊಳ್ತಾ ಇದ್ದಾರೆ.  ಅಷ್ಟಕ್ಕೂ ಪರಿಷತ್ ಗಲಾಟೆ ನಡೆದಿದ್ದು, ಡಿಸೆಂಬರ್ 15ರಂದು. ಅಂದರೆ ಎರಡು ವಾರಗಳು ಕಳೆದಿವೆ. ಒಬ್ಬ ವ್ಯಕ್ತಿ ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದೇ ನಿಜವಾಗಿದ್ರೆ ಇಷ್ಟು ಸಮಯವನ್ನ ಆತ್ಮಹತ್ಯೆ ಮಾಡಿಕೊಳ್ಳೊದಕ್ಕೆ ತೆಗೆದುಕೊಳ್ತಿರಲಿಲ್ಲ ಅನ್ನೋದು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿರೋ ಮಾತುಗಳು.

ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನರಾದ ಧರ್ಮೇಗೌಡರು; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ವಿಧಾನ ಪರಿಷತ್ ಗಲಾಟೆ ನಡೆದ ಬಳಿಕ ಧರ್ಮೇಗೌಡರು, ಚಿಕ್ಕಮಗಳೂರಿನ ಸರಪನಹಳ್ಳಿಗೆ ಆಗಮಿಸಿದ್ದರು. ಡಿಸೆಂಬರ್ 25ರಂದು ಸಿಎಂ ಜಿಲ್ಲೆಗೆ ಬಂದು ಹೋಗಿದ್ದ ಕಾರ್ಯಕ್ರಮದಲ್ಲೂ ಲವಲವಿಕೆಯಿಂದ ಭಾಗವಹಿಸಿದ್ದರು. ಮೊನ್ನೆ ಅಂದ್ರೆ ಡಿಸೆಂಬರ್ 28ರಂದು ಫಾರ್ಮ್​ಹೌಸ್​ನಲ್ಲೇ ಮತ್ತೊಂದು ಮನೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಅಲ್ಲದೇ ಅದೇ ದಿನ ಚಿಕ್ಕಮಗಳೂರಿನಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ತುಂಬಾ ಉತ್ಸುಕತೆಯಿಂದ ಭಾಗವಹಿಸಿದಲ್ಲದೇ ಭಾಷಣ ಕೂಡ ಮಾಡಿದ್ರು. ಇಷ್ಟೆಲ್ಲ ಸಕ್ರಿಯವಾಗಿದ್ದ ವ್ಯಕ್ತಿ ಅದೇ ದಿನ ಸಂಜೆ, ಯಾವುದೋ ಒಂದು ಕ್ಷುಲ್ಲಕ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಳ್ತಾರೆ ಅನ್ನೋದನ್ನ ಯಾರೂ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ.

ಡೆತ್ ನೋಟ್ ನ ಮಾಹಿತಿಯನ್ನ ಜಿಲ್ಲಾಡಳಿತ ಬಿಟ್ಟು ಕೊಡ್ತಿಲ್ಲ, ಇನ್ನೊಂದೆಡೆ ಪರಿಷತ್ ಫೈಟ್, ಧರ್ಮೇಗೌಡರ ಸಾವಿಗೆ ಕಾರಣವಾಯ್ತಾ ಅನ್ನೋದು ಕೂಡ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವಂತಹ ಸತ್ಯವಾಗಿ ಸದ್ಯಕ್ಕೆ ಕಾಣ್ತಿಲ್ಲ. ಆದರೆ ಈ ಕ್ಷಣದವರೆಗೂ ನಿಗೂಢವಾಗಿರುವ ಪರಿಷತ್ ಉಪಸಭಾಪತಿಯವರ ಆತ್ಮಹತ್ಯೆಯ ಹಿಂದೆ ಏನೋ ಬಲವಾದ ಕಾರಣವಿದೆ ಅನ್ನೋದಂತೂ ಸ್ಪಷ್ಟ. ಇನ್ನು ಧರ್ಮಗೌಡರ ಮನೆಯಲ್ಲಿ ಏನದ್ರಾ ಸಮಸ್ಯೆ ಇತ್ತಾ, ಸಾವಿಗೆ ನಿಖರ ಕಾರಣವಾದರೂ ಏನು ಅನ್ನೋದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಒಟ್ಟಿನಲ್ಲಿ ಧರ್ಮೇಗೌಡರ ಆತ್ಮಹತ್ಯೆ ಕುರಿತು ಸೂಕ್ತ ತನಿಖೆಯಾಗಬೇಕಾದ ಅವಶ್ಯಕತೆ ಇದ್ದು, ಸಾರ್ವಜನಿಕ ಜೀವನದಲ್ಲಿ ಇದ್ದ ವ್ಯಕ್ತಿಯ ಸೂಸೈಡ್ ಸೀಕ್ರೆಟ್ ಜನಸಾಮಾನ್ಯರಿಗೆ ತಿಳಿಯಬೇಕಿದೆ.
Published by: Sushma Chakre
First published: December 31, 2020, 7:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories