ಚಾರಿತ್ರ್ಯವಧೆ ಮಾಡಿದ್ರೆ ಅದು ಸಾವಿಗಿಂತ ಕ್ರೂರ; ಭಾವುಕರಾದ ಸ್ಪೀಕರ್​ ರಮೇಶ್​ ಕುಮಾರ್​

ನನಗೆ ಹಣ ನೀಡಿದ್ದಾಗಿ ಅವರು ಆಡಿಯೋದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅವರು ನನಗೆ ನೇರವಾಗಿ ಭೇಟಿಯಾಗಿದ್ರಾ ಅಥವಾ ನನ್ನ ಕುಟುಂಬ ಸದಸ್ಯರನ್ನ ಭೇಟಿಯಾಗಿದ್ರಾ? ಯಾವಾಗ ಕೊಟ್ರು? ಹೇಗೆ ಕೊಟ್ರು? ಯಾವ ಡಿನಾಮಿನೇಷನ್​ನಲ್ಲಿ ಕೊಟ್ರು ಎಂದು ಪ್ರಶ್ನಿಸಿದರು

Seema.R | news18
Updated:February 11, 2019, 12:40 PM IST
ಚಾರಿತ್ರ್ಯವಧೆ ಮಾಡಿದ್ರೆ ಅದು ಸಾವಿಗಿಂತ ಕ್ರೂರ; ಭಾವುಕರಾದ ಸ್ಪೀಕರ್​ ರಮೇಶ್​ ಕುಮಾರ್​
ರಮೇಶ್​ ಕುಮಾರ್​
Seema.R | news18
Updated: February 11, 2019, 12:40 PM IST
ಬೆಂಗಳೂರು (ಫೆ.11): ಬಜೆಟ್​ ಮೇಲಿನ ಚರ್ಚೆ ಮೇಲೆ ಇಂದು ಆರಂಭವಾದ ವಿಧಾನಸಾ ಕಲಾಪದಲ್ಲಿ ಯಡಿಯೂರಪ್ಪ ಅವರ ಆಡಿಯೋ ಕುರಿತು ಸ್ಪೀಕರ್​ ರಮೇಶ್​ ಕುಮಾರ್​ ಪ್ರಸ್ತಾಪಿಸಿದರು. ಆಡಿಯೋದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವ ಕುರಿತು ನೊಂದುಕೊಂಡ ಅವರು, ಭಾವುಕರಾಗಿ ತಮ್ಮ ನೋವು ಹಂಚಿಕೊಂಡರು

ಸಿಎಂ  ಶುಕ್ರವಾರ ನನಗೆ ಒಂದು ಪತ್ರ ರವಾನಿಸಿದ್ದಾರೆ. ಅದರಲ್ಲಿ ಆಡಿಯೋ ಕೂಡ ಕಳುಹಿಸಿದ್ದರು. ಅದರಲ್ಲಿ ಶಾಸಕರ ಮಗನ ಜೊತೆ  ಬಿಎಸ್​ವೈ ಸಂಭಾಷಣೆ ಆರೋಪ ಮಾಡಿದ್ದರು. ಯಾರ ಧ್ವನಿ ಎಂದು ನನಗೆ ಸ್ಪಷ್ಟವಾಗಿ ಗೊತ್ತಿಲ್ಲ ಎಂದಿದ್ದೇನೆ. ಆದರೆ, ಇದರಲ್ಲಿ ದುಃಖ ತರುವ ಸಂಗತಿ ಎಂದರೆ ಆಡಿಯೋದಲ್ಲಿ ನನ್ನ ಹೆಸರು ಹಾಗೂ ಪ್ರಧಾನಿ ಹೆಸರುಗಳ ಪ್ರಸ್ತಾಪ ಎಂದರು

ನನಗೆ 50 ಕೋಟಿ ನೀಡಿರುವುದಾಗಿ ಆಡಿಯೋದಲ್ಲಿ ಹೇಳಿದ್ದಾರೆ. ಈ ಮಾತು ಕೇಳಿ ನನಗೆ ಬೇಸರ ವಾಯಿತು. ಈ ಆರೋಪದಿಂದಾಗಿ ಎರಡು ದಿನ ನಿದ್ದೆ ಇಲ್ಲದೆ ಕಳೆದಿದ್ದೇನೆ. ನಾನು ಶಾಸನಸಭೆಗೆ ಗೌರವಪೂರ್ವವಾಗಿ ಆಯ್ಕೆಯಾಗಿದ್ದೇನೆ. ಈವರೆಗೆ ನನ್ನ ಮೇಲೆ ಇಂಥಾ ಆಪಾದನೆ ಬರುವಂತೆ ಎಂದೂ ನಡೆದುಕೊಂಡಿಲ್ಲ. ಆದರೆ, ನನ್ನನ್ನು ದುಡ್ಡು ತೆಗೆದುಕೊಂಡಿರುವಂತೆ ಆಡಿಯೋದಲ್ಲಿ ಬಿಂಬಿಸಿರುವುದು ನನಗೆ ನೋವು ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನನ್ನ ಪುರಾಣ ಹೇಳಲು ಸದನದ ಸಮಯ ತೆಗೆದುಕೊಳ್ಳಲ್ಲ. ಆದರೆ, ನಿಮಗೆ ನನ್ನ ನೋವು ಹೇಳಿಕೊಳ್ಳಬೇಕು. ನನ್ನ ಹೆಸರು ಪ್ರಸ್ತಾಪ ಆಗಿರುವ ವಿಷಯ ತಿಳಿದು ಬಹಳ ನೊಂದು ಕೊಂಡೆ.  ನನ್ನ ನೋವು ಮನೆಯವರಿಗೂ ಗೊತ್ತಾಗಬಾರದೆಂದು ಕಳೆದೆರಡು ದಿನದ ಹಿಂದೆ ರೈಲಿನಲ್ಲಿ ರಾಯಚೂರಿಗೆ ಹೋಗಿ, ರಸ್ತೆ ಮೂಲಕ ವಾಪಸ್ ಬಂದೆ. ಯಾರು ಮಾತನಾಡಿರಬಹುದು ಅಂತ ನನಗಿನ್ನೂ ಗೊತ್ತಿಲ್ಲ. ಆದರೆ, ಅವರು ಯಾರು ಅಂತ ಸಾಬೀತಾದ್ರೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು.

'ನನ್ನ ಚಾರಿತ್ರ್ಯವಧೆ ಮಾಡಿದ್ರೆ ಸಾವಿಗಿಂಥಾ ಹೆಚ್ಚು ಕ್ರೌರ್ಯ ಆಗುತ್ತೆ'. ಈ ರೀತಿ ಆಪಾದನೆ ಬರುವಂತೆ ನಾನು ಎಂದು ನಡೆದುಕೊಂಡಿಲ್ಲ ಎಂದು ಸದನದಲ್ಲಿ ಭಾವುಕರಾದರು.

ಇದನ್ನು ಓದಿ: ಬಿಎಸ್​ವೈ ಆಡಿಯೋದಲ್ಲಿ ಮೋದಿ, ಷಾ ಹೆಸರು; ತನಿಖೆ ನಡೆಸುವಂತೆ ರಾಜ್ಯ ಸಂಸದರಿಂದ ಪ್ರತಿಭಟ

ನನಗೆ ಹಣ ನೀಡಿದ್ದಾಗಿ ಅವರು ಆಡಿಯೋದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅವರು ನನಗೆ ನೇರವಾಗಿ ಭೇಟಿಯಾಗಿದ್ರಾ ಅಥವಾ ನನ್ನ ಕುಟುಂಬ ಸದಸ್ಯರನ್ನ ಭೇಟಿಯಾಗಿದ್ರಾ? ಯಾವಾಗ ಕೊಟ್ರು? ಹೇಗೆ ಕೊಟ್ರು? ಯಾವ ಡಿನಾಮಿನೇಷನ್​ನಲ್ಲಿ ಕೊಟ್ರು ಎಂದು ಪ್ರಶ್ನಿಸಿದರು
Loading...

ನಾನು ಸಣ್ಣ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಅಕ್ಕಪಕ್ಕದವರಿಗೆ ತೊಂದರೆಯಾಗದಂತೆ ಬೋರ್ಡ್ ಕೂಡ ಹಾಕಿಲ್ಲ. ಅಂತಹದರಲ್ಲಿ ಇಷ್ಟು ದೊಡ್ಡ ಆರೋಪ ನನ್ನ ಮೇಲೆ ಮಾಡಲಾಗಿದೆ. ಅಷ್ಟು ಪ್ರಮಾಣದ ಹಣವನ್ನು ನಾನೆಲ್ಲಿ ಇಟ್ಟುಕೊಳ್ಳಲಿ ಎಂದರು.

ಇದೇ ವೇಳೆ ತಮ್ಮ ತಾಯಿ ಮಾತನ್ನು ನೆನಪಿಸಿಕೊಂಡ ಅವರು, ಇನ್ನೊಬ್ಬರ ಮನೆಯವರ ಧೂಳನ್ನೂ ತೆಗೆದುಕೊಂಡು ಹೋಗಬಾರದು ಎಂದು ಅವರು ಹೇಳಿದ್ದರು. ಇನ್ನೊಬ್ಬರ ಮನೆಗೆ ಹೋದರೆ ಕಾಲ ಧೂಳನ್ನೂ ಅಲ್ಲೇ ಒರೆಸಬೇಕು ಎಂದು ತಾಯಿ ಮಾತು ನೆನಪಿಸಿಕೊಂಡು ಸ್ಪೀಕರ್ ಕಣ್ಣೀರು ಹಾಕಿದರು.

ಈ ಆರೋಪ ಇಟ್ಕೊಂಡು ಈ ಸ್ಥಾನದಲ್ಲಿ ಕೂರುವುದಕ್ಕೆ ಬೇಸರವಾಗುತ್ತದೆ. ಆಪಾದನೆ ನೀಡಿದವರು ರಾಜಕೀಯದಿಂದ ದೂರವಾಗಲಿ. ನಾನು ಈ ಸ್ಥಾನದಲ್ಲಿ ಮುಂದುವರಿಯಲಾಗಲ್ಲ. ನಾನು ರಾಜಕೀಯದಿಂದ ದೂರವಾಗಲು ಸಿದ್ಧ ಎಂದರು.

 

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...