Session: ಸದನದಲ್ಲಿಂದು ಪ್ರತಿಧ್ವನಿಸಲಿದೆ PSI ಅಕ್ರಮ ಕೇಸ್​,  40 ಪರ್ಸೆಂಟ್​ ಪ್ರಸ್ತಾಪಿಸಿ ಬಿಜೆಪಿಗೆ ಕಾಂಗ್ರೆಸ್ ಡಿಚ್ಚಿ; ಭೂ ಹಗರಣ ಬಿಚ್ಚಿಡ್ತಾರಾ HDK?

ಈ ಹಿಂದೆ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರದಲ್ಲಿ ನಡೆದಿರುವ ಹಗರಣಗಳ ವಿಷಯವನ್ನು ಮುನ್ನಲೆಗೆ ತರಲು ಕಮಲ ಪಾಳಯ ಸಿದ್ಧತೆ ಮಾಡಿಕೊಂಡಿದೆ.

ಅಧಿವೇಶನ

ಅಧಿವೇಶನ

  • Share this:
    ಇಂದು ವಿಧಾನಮಂಡಲ ಅಧಿವೇಶನದ (Assembly Session) ಆರನೇ ದಿನ. ಇವತ್ತು ಸರ್ಕಾರವನ್ನು (Government) ಕಟ್ಟಿ ಹಾಕಲು ವಿಪಕ್ಷಗಳು (Opposition Party) ಸಿದ್ಧತೆ ನಡೆಸಿವೆ. ಇತ್ತ ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಲು ಸಚಿವ ಸಂಪುಟ ಸಿದ್ಧವಾಗಿದೆ. ಇಂದು ಸದನದಲ್ಲಿ ಪಿಎಸ್​ಐ ನೇಮಕಾತಿ (PSI Recruitment Scam) ವೇಳೆ ನಡೆದ ಅಕ್ರಮವನ್ನು ಪ್ರಸ್ತಾಪಿಸಲು ಕಾಂಗ್ರೆಸ್ (Congress) ಪ್ಲಾನ್ ಮಾಡಿಕೊಂಡಿದೆ. ಇತ್ತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಭೂ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡ್ತಾರಾ ಅನ್ನೋ ಕುತೂಹಲ ಸಹ ಮನೆ ಮಾಡಿದೆ. ಬಿಜೆಪಿಯ ಸಚಿವರು ಯಾರ ಪ್ರಶ್ನೆಗೆ ಯಾರು ಮತ್ತು ಹೇಗೆ ಉತ್ತರಿಸಬೇಕೆಂದು ಪೂರ್ವ ತಯಾರಿ ಸಹ ಮಾಡಿಕೊಂಡಿದ್ದಾರೆ.  ಇದರ ಜೊತೆಗೆ ಈ ಹಿಂದೆ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರದಲ್ಲಿ ನಡೆದಿರುವ ಹಗರಣಗಳ ವಿಷಯವನ್ನು ಮುನ್ನಲೆಗೆ ತರಲು ಕಮಲ ಪಾಳಯ ಸಿದ್ಧತೆ ಮಾಡಿಕೊಂಡಿದೆ.

    ಸರ್ಕಾರದಿಂದ‌ ಅತಿವೃಷ್ಟಿ ಕುರಿತ ಉತ್ತರದ ಬಳಿಕ ಸದನದಲ್ಲಿ PSI ಅಕ್ರಮ ಪ್ರಕರಣ ಪ್ರಸ್ತಾಪಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಕಾಂಗ್ರೆಸ್​ಗೆ ಎದುರೇಟು ಕೊಡಲು ಸಜ್ಜಾಗಿರುವ ಬಿಜೆಪಿ ಶಿಕ್ಷಕರ ಅಕ್ರಮ ನೇಮಕಾತಿ ಪ್ರತ್ಯಾಸ್ತ್ರ ಪ್ರಯೋಗಿಸಲಿದೆ ಎನ್ನಲಾಗಿದೆ. ಸದನದಲ್ಲಿ ಕಮಲ ನಾಯಕರು ಶಿಕ್ಷಕರ ನೇಮಕಾತಿ ಹಗರಣದ ದಾಖಲೆ ಹಿಡಿದು ಕೌಂಟರ್ ಕೊಡುವ ಸಾಧ್ಯತೆಗಳಿವೆ.

    ಶಿಕ್ಷಕರ ನೇಮಕಾತಿ ಹಗರಣ ಪ್ರಸ್ತಾಪಿಸಲು ಬಿಜೆಪಿ ಪ್ಲಾನ್

    PSI ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಗೃಹ ಸಚಿವರ ರಾಜೀನಾಮೆ ಕೇಳುವ ಸಾಧ್ಯತೆಗಳಿವೆ. ಇದಕ್ಕೆ ಪ್ರತ್ಯುತ್ತರವಾಗಿ ಶಿಕ್ಷಕರ ನೇಮಕಾತಿ ಹಗರಣವಾದಾಗ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ರಾ ಎಂದು ಬಿಜೆಪಿ ಪ್ರಶ್ನೆ ಮಾಡಬಹುದು.

    Karnataka Legislative Assembly Session Day six today mrq
    ಅಧಿವೇಶನ


    ರಾಜಕೀಯ ವಾಕ್ಸಮರಕ್ಕೂ ವೇದಿಕೆ ಆಗುತ್ತಾ ಸದನ?

    ಕಳೆದ ಎರಡು ದಿನಗಳಿಂದ ರಾಜ್ಯ ಕಾಂಗ್ರೆಸ್​ನಲ್ಲಿಯ ಆಂತರಿಕ ಕಲಹ ಮಾಧ್ಯಮಗಳ ಮುಂದೆ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳ ನಡುವಿನ ಟಾಕ್ ಫೈಟ್ ಜೋರಾಗಿದೆ. ಮಾಜಿ ಸಚಿವ ದಿನೇಶ್ ಗುಂಡೂರಾವ್, ನೇರವಾಗಿಯೇ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ವಿಪಕ್ಷವನ್ನು ಬಿಜೆಪಿ ಕಟ್ಟಿ ಹಾಕಬಹುದು.

    ಇದನ್ನೂ ಓದಿ:  Karnataka Assembly Elections: ಪದ್ಮನಾಭನಗರದಲ್ಲಿ ಮತ್ತೆ ಕಮಲ ಅರಳುವುದೇ? ಸಾಮ್ರಾಟ್ ಅಶೋಕನ ವಿರುದ್ಧ ಕೈ-ದಳ ಕಹಳೆ!

    ಸದನ ಕದನ - ಕಾಂಗ್ರೆಸ್ ಅಸ್ತ್ರ

    PSI ಹಗರಣ ಪ್ರಸ್ತಾಪ, 40% ಕಮಿಷನ್ ವಿಷಯ, ಸರ್ಕಾರದ ವೈಫಲ್ಯಗಳು, ಸಂಪುಟ ವಿಸ್ತರಣೆ ಅಸ್ತ್ರ

    Karnataka Legislative Assembly Session Day six today mrq
    ಅಧಿವೇಶನ


    ಸದನ ಕದನ - ಬಿಜೆಪಿ ಪ್ರತ್ಯಸ್ತ್ರ

    ಸಿದ್ದರಾಮಯ್ಯ ಕಾಲದ ಶಿಕ್ಷಕರ ನೇಮಕಾತಿ ಅಕ್ರಮ, ಕಾಂಗ್ರೆಸ್ ಒಳಜಗಳ, ಭಾರತ್ ಜೋಡೋ ಯಾತ್ರೆಯಲ್ಲಿ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಕಡೆಗಣಿಸಲಾಗಿರುವ ವಿಷಯಗಳ ಮೂಲಕ ಕಾಂಗ್ರೆಸ್ ನಾಯಕರನ್ನು ಕಟ್ಟಿ ಹಾಕಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ.

    ರಥಯಾತ್ರೆ ಮಾಡ್ತಾರಾ ಸಿದ್ದರಾಮಯ್ಯ?

    ಬಿಜೆಪಿ ಸರ್ಕಾರಕ್ಕೆ (Karnataka BJP Government) 40% ಕಮಿಷನ್ (Commission Allegation) ಕಪ್ಪು ಚುಕ್ಕೆ ಅಂಟಿಕೊಂಡಿದ್ರೆ. ಮತ್ತೊಂದೆಡೆ ಇದನ್ನೇ ಅಸ್ತ್ರ ಮಾಡಿಕೊಳ್ಳಲು ಕಾಂಗ್ರೆಸ್ (Congress) ತಂತ್ರ ಹೆಣೆದಿದೆ. 2023ರ ಚುನಾವಣೆಗೆ (Assembly Election 2023) ಕಾಂಗ್ರೆಸ್‌ ಭಾರೀ ಸಿದ್ಧತೆ ಮಾಡಿಕೊಳ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ರಥಯಾತ್ರೆಗೆಂದೇ ಪ್ರತ್ಯೇಕ ಬಸ್​ ವ್ಯವಸ್ಥೆ ಮಾಡಲಾಗಿದೆ.

    ಇದನ್ನೂ ಓದಿ: ಸದನದಲ್ಲಿಂದು ಪ್ರತಿಧ್ವನಿಸಲಿದೆ PSI ಅಕ್ರಮ ಕೇಸ್​,  40 ಪರ್ಸೆಂಟ್​ ಪ್ರಸ್ತಾಪಿಸಿ ಬಿಜೆಪಿಗೆ ಕಾಂಗ್ರೆಸ್ ಡಿಚ್ಚಿ

    40% ಕಮಿಷನ್​ ಆರೋಪ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಹೋರಾಡಲಿದ್ದು, ನವೆಂಬರ್ ಅಂತ್ಯಕ್ಕೆ ಸಿದ್ದರಾಮಯ್ಯ ಅವರ ರಥಯಾತ್ರೆ (Siddaramaiah Rathayatre) ಶುರುವಾಗುತ್ತೆ ಎನ್ನಲಾಗ್ತಿದೆ. ಈ ಹೋರಾಟ ಕೃಷ್ಣ ಪಾಂಚಜನ್ಯ ಮಾದರಿಯಲ್ಲಿ ನಡೆಯಲಿದೆ ಎನ್ನಲಾಗ್ತಿದೆ.
    Published by:Mahmadrafik K
    First published: