ಇಂದಿನಿಂದ ಬಸ್​ ಟಿಕೆಟ್​ ದರ ಶೇ.12ರಷ್ಟು ತುಟ್ಟಿ; ಪ್ರಯಾಣಿಕರಿಗೆ ತಟ್ಟಲಿಗೆ ಬೆಲೆ ಏರಿಕೆ ಬಿಸಿ

ಬಿಎಂಟಿಸಿ ಹಾಗೂ ಕೆಎಸ್​ಆರ್​ಟಿಸಿ ಕಳೆದ ಹಲವು ವರ್ಷಗಳಿಂದ ವಾರ್ಷಿಕ ನೂರಾರು ಕೋಟಿ ನಷ್ಟದಲ್ಲಿದೆ. ಆದರೂ ಈವರೆಗೆ ಟಿಕೆಟ್​ ದರವನ್ನು ಏರಿಸಲಾಗಿರಲಿಲ್ಲ.ಆದರೆ, ಈ ಬಾರಿ ನಷ್ಟದ ಪ್ರಮಾಣ ಅಧಿಕವಾಗಿದ್ದು, ಬಸ್​ ಪ್ರಯಾಣ ದರ ಹೆಚ್ಚಳ ಅನಿವಾರ್ಯ ಎನ್ನಲಾಗುತ್ತಿದೆ. ಪರಿಷ್ಕೃತ ದರ ಇಂದಿನಿಂದ ಚಾಲ್ತಿಗೆ ಬರಲಿದ್ದು, ಬಸ್​ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

news18-kannada
Updated:February 26, 2020, 8:50 AM IST
ಇಂದಿನಿಂದ ಬಸ್​ ಟಿಕೆಟ್​ ದರ ಶೇ.12ರಷ್ಟು ತುಟ್ಟಿ; ಪ್ರಯಾಣಿಕರಿಗೆ ತಟ್ಟಲಿಗೆ ಬೆಲೆ ಏರಿಕೆ ಬಿಸಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಫೆಬ್ರವರಿ. 25); ಕೆಎಸ್​ಆರ್​ಟಿಸಿ ಈಶಾನ್ಯ, ವಾಯುವ್ಯ ಸಾರಿಗೆ ಮತ್ತು ಬಿಎಂಟಿಸಿ ಬಸ್ ​ಟಿಕೆಟ್ ಪ್ರಯಾಣ ದರವನ್ನು ಶೇ.12ರಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು ಪರಿಷ್ಕೃತ ದರ ಇಂದಿನಿಂದ ಚಾಲ್ತಿಗೆ ಬರಲಿದೆ.

ನಿರಂತರವಾಗಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಏರಿಕೆ ಮತ್ತು ಕಳೆದ ಕೆಲ ವರ್ಷಗಳಿಂದ ಬಸ್ ಟಿಕೆಟ್​ ದರ ಏರಿಕೆ ಮಾಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಸ್ತುತ ಬಸ್ ಟಿಕೆಟ್​ ದರ ಏರಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ಆದರೆ, ಪ್ರಯಾಣ ದರ ಏರಿಸಿರುವ ಸರ್ಕಾರ ವಿದ್ಯಾರ್ಥಿಗಳ ಹಾಗೂ ವಿಕಲಚೇತನರ ಪಾಸ್ ದರವನ್ನು ಏರಿಸಲು ಮುಂದಾಗಿಲ್ಲ.

ksrtc-01
ಬಸ್​ ಟಿಕೆಟ್​ ದರವನ್ನು ಹೆಚ್ಚಿಸಿ ಸರ್ಕಾರ ಹೊರಡಿಸಿರುವ ಆದೇಶ.

ಬಿಎಂಟಿಸಿ ಹಾಗೂ ಕೆಎಸ್​ಆರ್​ಟಿಸಿ ಕಳೆದ ಹಲವು ವರ್ಷಗಳಿಂದ ವಾರ್ಷಿಕ ನೂರಾರು ಕೋಟಿ ನಷ್ಟದಲ್ಲಿದೆ. ಆದರೂ ಈವರೆಗೆ ಟಿಕೆಟ್​ ದರವನ್ನು ಏರಿಸಲಾಗಿರಲಿಲ್ಲ.ಆದರೆ, ಈ ಬಾರಿ ನಷ್ಟದ ಪ್ರಮಾಣ ಅಧಿಕವಾಗಿದ್ದು, ಬಸ್​ ಪ್ರಯಾಣ ದರ ಹೆಚ್ಚಳ ಅನಿವಾರ್ಯ ಎನ್ನಲಾಗುತ್ತಿದೆ. ಪರಿಷ್ಕೃತ ದರ ಇಂದಿನಿಂದ ಚಾಲ್ತಿಗೆ ಬರಲಿದ್ದು, ಬಸ್​ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಇದನ್ನೂ ಓದಿ : RCB - ಈ ಸಲ ಕಪ್ ನಮ್ದೆ: ಮಹದೇಶ್ವರನ ಮೊರೆಹೋದ ಆರ್​ಸಿಬಿ ಅಭಿಮಾನಿ
First published:February 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading