Karnataka KSEEB SSLC Result 2020: ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ

KSEEB Class 10 Result 2020 Live Update: ಎಸ್​ಎಸ್​ಎಲ್​ಸಿ ಫಲಿತಾಂಶವನ್ನು ನೀವು kseeb.kar.nic.in ಅಥವಾ karresults.nic.in. ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲದೆ, examresults.net ಮತ್ತು indiaresults.com ವೆಬ್​ಸೈಟ್​ನಲ್ಲಿ ಕೂಡ ರಿಸಲ್ಟ್​ ನೋಡಬಹುದು.

ಎಸ್​ಎಸ್​ಎಲ್​ಸಿ

ಎಸ್​ಎಸ್​ಎಲ್​ಸಿ

  • Share this:
    Karnataka KSEEB SSLC 10th Result 2020: ಬೆಂಗಳೂರು (ಆ.10): ಕೊರೋನಾ ವೈರಸ್​ ಉಲ್ಬಣಗೊಂಡ ಮಧ್ಯೆಯೂ ರಾಜ್ಯದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಫಲಿತಾಂಶ ಏನಾಗುತ್ತದೆಯೋ ಎಂದು ಕಾದು ಕೂತಿದ್ದವರ ಭವಿಷ್ಯ ಈಗ ಹೊರ ಬಿದ್ದಿದೆ.  ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಿದೆ.  ಶಿಕ್ಷಣ ಸಚಿವ ಸುರೇಶ್ ಕುಮಾರ್​ ಫಲಿತಾಂಶ ಪ್ರಕಟ ಮಾಡಿದ್ದಾರೆ. 3:30ರ ಸುಮಾರಿಗೆ ವೆಬ್​ಸೈಟ್​ನಲ್ಲಿ  ಫಲಿತಾಂಶ ವೀಕ್ಷಣೆ ಮಾಡಬಹುದಾಗಿದೆ. 

    ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ಭಾರಿ ವಿರೋಧ ವ್ಯಕ್ತವಾಗಿತ್ತು. ಈ ವಿರೋಧದ ನಡುವೆಯೇ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಸರ್ಕಾರ ನಡೆಸಿತ್ತು. ಈಗ ಫಲಿತಾಂಶವನ್ನು ನೀವು ಮೊಬೈಲ್​ನಲ್ಲೇ ನೋಡಬಹುದಾಗಿದೆ.

    ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾದ ಬಳಿಕ ಫಲಿತಾಂಶವನ್ನು ನೀವು kseeb.kar.nic.in ಅಥವಾ karresults.nic.in. ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲದೆ, examresults.net ಮತ್ತು indiaresults.com ವೆಬ್​ಸೈಟ್​ನಲ್ಲಿ ಕೂಡ ರಿಸಲ್ಟ್​ ನೋಡಬಹುದು.

    ಇನ್ನು, ಪರೀಕ್ಷೆಯ ಫಲಿತಾಂಶ ಏನೇ ಬಂದರೂ ಆ ಬಗ್ಗೆ ಮಕ್ಕಳಿಗೆ ಆತಂಕ ಬೇಡ. ಪಾಲಕರು ಕೂಡ ಮಕ್ಕಳು ಕಡಿಮೆ ಅಂಕ ಪಡೆದರೆ ಹೊಡೆಯುವುದು, ಬಡಿಯುವುದು ಮಾಡುವ ಬದಲು ಅವರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು.

    examresults.net​ ವೆಬ್​ಸೈಟ್​ನಲ್ಲಿ ನಿಮ್ಮ ಫಲಿತಾಂಶವನ್ನು ವೀಕ್ಷಿಸಲು ಇಲ್ಲಿದೆ ಸುಲಭ ವಿಧಾನ.

    • ಮೊದಲು examresults.net ವೆಬ್​ಸೈಟ್​ಗೆ ಹೋಗಿ.

    • ಹೋಂ ಪೇಜ್​ನಲ್ಲಿ ಎಸ್​ಎಸ್​ಎಲ್​ಸಿ ರಿಸಲ್ಟ್​ 2020 ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.

    • ಅಥವಾ ಹೋಂ ಪೇಜ್​ನಲ್ಲಿರುವ Karnataka ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

    • ಈ ಪೇಜ್​ನಲ್ಲಿ Karnataka SSLC Exam ಎಂಬ ಆಯ್ಕೆ ಇರುತ್ತದೆ.

    • ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕೇಳುವ ನಿಮ್ಮ ಮಾಹಿತಿಯನ್ನು ಪೂರ್ತಿ ಮಾಡಿದರೆ ನಿಮ್ಮ ಫಲಿತಾಂಶ ಸಿಗುತ್ತದೆ.


    indiaresults.com​ ವೆಬ್​ಸೈಟ್​ನಲ್ಲಿ ನಿಮ್ಮ ಫಲಿತಾಂಶವನ್ನು ನೋಡುವ ವಿಧಾನ ಹೀಗಿದೆ...

    • indiaresults.com ವೆಬ್​ಸೈಟ್​ಗೆ ಹೋಗಿ.

    • ಅಲ್ಲಿರುವ ರಾಜ್ಯಗಳ ಪೈಕಿ ಕರ್ನಾಟಕವನ್ನು ಆಯ್ಕೆ ಮಾಡಿಕೊಳ್ಳಿ. ಹಾಗೇ karnataka.indiaresults.com ಎಂದು ಟೈಪ್ ಮಾಡಿ ಎಂಟರ್ ಬಟನ್ ಒತ್ತಿ.

    • ಅಲ್ಲಿ ಕರ್ನಾಟಕ ಸೆಕೆಂಡರಿ ಎಜುಕೇಷನ್ ಎಕ್ಸಾಮಿನೇಷನ್ ಬೋರ್ಡ್​ ಎಂಬ ಆಯ್ಕೆ ಇರುತ್ತದೆ. ಅದರ ಜೊತೆಗೆ ಕರ್ನಾಟಕ ಎಸ್​ಎಸ್​ಎಲ್​ಸಿ ರಿಸಲ್ಟ್​ 2020 ಎಂಬ ಆಯ್ಕೆ ಇರುತ್ತದೆ.

    • ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಗ ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ವಿವರಗಳನ್ನು ತುಂಬಿದರೆ ರಿಸಲ್ಟ್​ ಸಿಗುತ್ತದೆ. 


    kseeb.kar.nic.in ಅಥವಾ karresults.nic.in ವೆಬ್​ಸೈಟ್​ನಲ್ಲಿ ರಿಸಲ್ಟ್​ ವೀಕ್ಷಿಸಲು ಹೀಗೆ ಮಾಡಿ.

    • ವೆಬ್​ಸೈಟ್​ ಓಪನ್ ಮಾಡಿ ನಂತರ ಹೋಂ ಪೇಜ್​ನಲ್ಲಿ ಎಸ್​ಎಸ್​ಎಲ್​ಸಿ ರಿಸಲ್ಟ್​ ಎಂಬ ಆಯ್ಕೆಯನ್ನು ಒತ್ತಿ.

    • ನಿಮ್ಮ ಪರೀಕ್ಷೆಯ ರೋಲ್ ನಂಬರ್ ಮತ್ತು ಪೇಜ್​ನಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಿ.

    • ಹಾಲ್​ ಟಿಕೆಟ್​ನ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ವೇರಿಫೈ ಮಾಡಿಕೊಳ್ಳಿ.

    • ಆಗ ನಿಮ್ಮ ಪರೀಕ್ಷೆ ಫಲಿತಾಂಶ ಸಿಗುತ್ತದೆ.

    • ನಂತರ ಆ ಫಲಿತಾಂಶವನ್ನು ಪಿಡಿಎಫ್​ ಫಾರ್ಮಾಟ್​ನಲ್ಲಿಯೇ ಡೌನ್​ಲೋಡ್ ಮಾಡಿಕೊಳ್ಳಿ. ಹಾಗೇ, ಒಂದು ಕಾಪಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.


    Published by:Rajesh Duggumane
    First published: