• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Smart City Project: ಪ್ರಧಾನಿ ಮೋದಿ ಮಹತ್ವಾಕಾಂಕ್ಷೆಯ ಸ್ಮಾರ್ಟ್‌ ಸಿಟಿ ಯೋಜನೆ ಕರ್ನಾಟಕದಲ್ಲಿ ಈ ವರ್ಷನೂ ಪೂರ್ಣಗೊಳ್ಳಲ್ವಂತೆ!

Smart City Project: ಪ್ರಧಾನಿ ಮೋದಿ ಮಹತ್ವಾಕಾಂಕ್ಷೆಯ ಸ್ಮಾರ್ಟ್‌ ಸಿಟಿ ಯೋಜನೆ ಕರ್ನಾಟಕದಲ್ಲಿ ಈ ವರ್ಷನೂ ಪೂರ್ಣಗೊಳ್ಳಲ್ವಂತೆ!

ಸ್ಮಾರ್ಟ್‌ ಸಿಟಿ ಯೋಜನೆ

ಸ್ಮಾರ್ಟ್‌ ಸಿಟಿ ಯೋಜನೆ

ಸ್ಮಾರ್ಟ್‌ ಸಿಟಿ ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿರುವ ನಗರಾಭಿವೃದ್ಧಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ರಾಜ್ಯದ ಇತರ ನಗರಗಳಲ್ಲಿ ಕೆಲಸಗಳು ಪೂರ್ಣಗೊಳ್ಳುವ ಹಂತದಲ್ಲಿದ್ದರೆ, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಕ್ರಮವಾಗಿ ಶೇಕಡಾ 68 ಮತ್ತು ಶೇಕಡಾ 56 ಮಾತ್ರ ಕೆಲಸಗಳು ಪೂರ್ಣಗೊಂಡಿವೆ.

ಮುಂದೆ ಓದಿ ...
  • Trending Desk
  • 5-MIN READ
  • Last Updated :
  • Bangalore, India
  • Share this:

2015 ರಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಸ್ಮಾರ್ಟ್ ಸಿಟಿ ಮಿಷನ್ (Smart City Mission) (ಎಸ್‌ಸಿಎಂ) ಯೋಜನೆ ಕರ್ನಾಟಕದಲ್ಲಿ ಯಾವಾಗಪ್ಪಾ ಪೂರ್ತಿಯಾಗುತ್ತೆ ಅಂತ ಕಾದು ಕುಳಿತಿರುವ ಜನರಿಗೆ ಇಲ್ಲೊಂದು ಸುದ್ದಿ ಇದೆ. ಮೂಲ ಸೌಕರ್ಯಗಳನ್ನು ಹೊಂದಿರುವ ನಗರಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಮತ್ತು ಅಲ್ಲಿ ವಾಸಿಸುತ್ತಿರುವ ನಾಗರಿಕರಿಗೆ ಯೋಗ್ಯ ಗುಣಮಟ್ಟದ ಜೀವನವನ್ನು ನೀಡಲು 'ಸ್ಮಾರ್ಟ್' ಪರಿಹಾರಗಳ (Smart City Project) ಅನ್ವಯದ ಮೂಲಕ ಸ್ವಚ್ಛ ಮತ್ತು ಸುಸ್ಥಿರ ಪರಿಸರವನ್ನು ಖಚಿತಪಡಿಸುವ ಈ ಯೋಜನೆ ಕರ್ನಾಟಕದಲ್ಲಿ ಈ ವರ್ಷ ಪೂರ್ತಿ ಆಗುವುದಿಲ್ಲವಂತೆ.


ಕಳೆದ ವಾರವಷ್ಟೆ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಒಟ್ಟು 7,804 ಯೋಜನೆಗಳಲ್ಲಿ ಮೂರನೇ ಎರಡರಷ್ಟು ಯೋಜನೆಗಳು ಇಲ್ಲಿಯವರೆಗೆ ಪೂರ್ಣಗೊಂಡಿವೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಲೋಕಸಭೆಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿತ್ತು.


ಇದನ್ನೂ ಓದಿ: 2024 Election Survey: ಮುಂದಿನ ಪ್ರಧಾನಿ ಯಾರು? 6 ತಿಂಗಳಲ್ಲಿ ಕುಗ್ಗಿದ ಮೋದಿ ಜನಪ್ರಿಯತೆ, ರಾಹುಲ್ ಗಾಂಧಿಗೆ ಲಾಭ!


ಕೇಂದ್ರವು ನಿಗದಿಪಡಿಸಿದ ಗಡುವನ್ನು ಕರ್ನಾಟಕ ತಪ್ಪಿಸಿಕೊಳ್ಳಲಿದೆ?


ಸದ್ಯದ ಮಾಹಿತಿ ಪ್ರಕಾರ ಈ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರವು ನಿಗದಿಪಡಿಸಿದ ಜೂನ್ 2023 ರ ಗಡುವನ್ನು ಕರ್ನಾಟಕ ತಪ್ಪಿಸಿಕೊಳ್ಳಲಿದೆಯಂತೆ. 2015 ರಲ್ಲಿ ಪ್ರಾರಂಭಿಸಲಾದ ಯೋಜನೆಗೆ ರಾಜ್ಯದ ಏಳು ನಗರಗಳನ್ನು ಆಯ್ಕೆ ಮಾಡಲಾಗಿತ್ತು. ಬೆಂಗಳೂರು ಮತ್ತು ಮಂಗಳೂರು ಈ ಯೋಜನೆಯ ಕೆಲಸಗಳಲ್ಲಿ ಬಹಳ ಹಿಂದುಳಿದಿವೆ, ಆದರೆ ಇತರ ನಗರಗಳಲ್ಲಿ ಕೆಲಸವು ಪೂರ್ಣಗೊಳ್ಳುವ ವಿವಿಧ ಹಂತಗಳಲ್ಲಿದೆ ಎಂದು ಹೇಳಲಾಗುತ್ತಿದೆ.


ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿರುವ ನಗರಾಭಿವೃದ್ಧಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ರಾಜ್ಯದ ಇತರ ನಗರಗಳಲ್ಲಿ ಕೆಲಸಗಳು ಪೂರ್ಣಗೊಳ್ಳುವ ಹಂತದಲ್ಲಿದ್ದರೆ, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಕ್ರಮವಾಗಿ 68% ಮತ್ತು 56% ಮಾತ್ರ ಕೆಲಸಗಳು ಪೂರ್ಣಗೊಂಡಿವೆ. ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕವು ಈ ಸ್ಮಾರ್ಟ್ ಸಿಟಿ ಮಿಷನ್ ಯೋಜನೆಯ ಅಡಿಯಲ್ಲಿ 460 ಕೋಟಿ ರೂಪಾಯಿಗಳನ್ನು ಪಡೆದಿದೆ, ಇದರಲ್ಲಿ ರಾಜ್ಯದ ಪಾಲು 215 ಕೋಟಿ ರೂಪಾಯಿ ಆಗಿದೆ.


ಸ್ಮಾರ್ಟ್ ಸಿಟಿ ಮಿಷನ್ ಯೋಜನೆ ಬಗ್ಗೆ ನಗರಾಭಿವೃದ್ಧಿ ಸಚಿವರು ಹೇಳುವುದೇನು?


ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿ 'ಕಾನೂನು ತೊಡಕುಗಳು ಮತ್ತು ನೋಡಲ್ ಏಜೆನ್ಸಿಗಳಿಂದ ಅನುಮೋದನೆ ಪಡೆಯುವಲ್ಲಿನ ವಿಳಂಬದಿಂದಾಗಿ ಈ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ಏಳು ನಗರಗಳಲ್ಲಿನ ಸುಮಾರು 11 ಕೆಲಸಗಳು ಬಾಧಿತವಾಗಿವೆ' ಎಂದು ಅವರು ಹೇಳಿದರು.


'ಜೂನ್ 2023 ರೊಳಗೆ ಈ ಯೋಜನೆಗಳನ್ನು ಪೂರ್ಣಗೊಳಿಸುವುದು ಅಸಾಧ್ಯ. ಈ 11 ಯೋಜನೆಗಳನ್ನು ಏಪ್ರಿಲ್ 2024 ರೊಳಗೆ ಪೂರ್ಣಗೊಳಿಸಲು ನಾವು ಉದ್ದೇಶಿಸಿದ್ದೇವೆ. ನಾವು ಈ ವಿಳಂಬವನ್ನು ಕೇಂದ್ರಕ್ಕೆ ಈಗಾಗಲೇ ತಿಳಿಸಿದ್ದೇವೆ ಮತ್ತು ಅದರ ಅನುಮೋದನೆಯನ್ನು ಸಹ ನಾವು ಕೋರಿದ್ದೇವೆ' ಎಂದು ಹೇಳಿದರು.


ಇದನ್ನೂ ಓದಿ: Tejasvi Surya: ತೇಜಸ್ವಿ ಸೂರ್ಯ ಆಕಸ್ಮಿಕವಾಗಿ ವಿಮಾನ ತುರ್ತು ಬಾಗಿಲು ತೆರೆದಿದ್ದರು, ಸಂಸತ್​ನಲ್ಲಿ ಕೇಂದ್ರ ಸ್ಪಷ್ಟನೆ


ಫೆಬ್ರುವರಿ 2023 ರ ವರೆಗೆ 522 ಯೋಜನೆಗಳು ಪೂರ್ಣ?


ಈ ಮಿಷನ್ ಅಡಿಯಲ್ಲಿ ಒಟ್ಟು 651 ಯೋಜನೆಗಳನ್ನು ಪ್ರಾರಂಭಿಸಲಾಯಿತು, ಮತ್ತು ಫೆಬ್ರವರಿ 2023 ರ ಹೊತ್ತಿಗೆ, 522 ಯೋಜನೆಗಳು ಪೂರ್ಣಗೊಂಡಿವೆ ಮತ್ತು ಇನ್ನೂ 127 ಪ್ರಗತಿಯಲ್ಲಿವೆ. ಎರಡು ಯೋಜನೆಗಳು ಇನ್ನೂ ಟೆಂಡರ್ ಹಂತದಲ್ಲಿವೆ ಎಂದು ಹೇಳಲಾಗುತ್ತಿದೆ.


ತುಮಕೂರಿನಲ್ಲಿ ಶೇಕಡಾ 88 ರಷ್ಟು, ಶಿವಮೊಗ್ಗದಲ್ಲಿ ಶೇಕಡಾ 82 ರಷ್ಟು ಮತ್ತು ಬೆಳಗಾವಿಯಲ್ಲಿ ಶೇಕಡಾ 81 ರಷ್ಟು ಕೆಲಸ ಈಗಾಗಲೇ ಮುಗಿದಿದ್ದು, ನಂತರದ ಸ್ಥಾನಗಳಲ್ಲಿವೆ. ದಾವಣಗೆರೆ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ತಲಾ 80 ಪ್ರತಿಶತದಷ್ಟು ಕೆಲಸ ಈಗಾಗಲೇ ಮುಗಿದಿದೆ ಎಂದು ಹೇಳಲಾಗುತ್ತಿದೆ.




ಬೆಂಗಳೂರು 68 ಪ್ರತಿಶತ ಕೆಲಸ ಪೂರ್ಣಗೊಂಡಿರುವುದರೊಂದಿಗೆ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ (ಬೆನ್‌ಎಸ್‌ಸಿಎಲ್) ಒಟ್ಟು 44 ಯೋಜನೆಗಳ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಅವುಗಳಲ್ಲಿ 30 ಪೂರ್ಣಗೊಂಡಿವೆ. ಉಳಿದ ಯೋಜನೆಗಳು ಅಂತಿಮ ಹಂತದಲ್ಲಿದ್ದು, ಗಡುವಿನ ಮೊದಲು ಅವುಗಳನ್ನು ಪೂರ್ಣಗೊಳಿಸುವ ಭರವಸೆ ನಮಗಿದೆ" ಎಂದು ಬಸವರಾಜ್ ತಿಳಿಸಿದರು.

First published: