• Home
  • »
  • News
  • »
  • state
  • »
  • Electricity: ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವೇ ನಂಬರ್‌ ಒನ್!

Electricity: ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವೇ ನಂಬರ್‌ ಒನ್!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇತ್ತ ಕರ್ನಾಟಕದ ವಿದ್ಯುತ್ ವಿತರಣಾ ಕಂಪನಿಗಳು ದೇಶದಲ್ಲಿಯೇ ಅತಿಹೆಚ್ಚು ಪ್ರಮಾಣದಲ್ಲಿ ಪರಿಸರಸ್ನೇಹಿ ಮೂಲಗಳಿಂದ ಉತ್ಪಾದಿಸಿದ ವಿದ್ಯುತ್ ಮಾರಾಟ ಮಾಡುತ್ತಿವೆ ಎಂದು ವರದಿಗಳು ಹೇಳಿವೆ.

  • Trending Desk
  • Last Updated :
  • Karnataka, India
  • Share this:

ವಿದ್ಯುತ್ ಜಾಲ ಪ್ರಭಾವಿತ ಮರುಬಳಕೆ ಇಂಧನದ (ಗ್ರಿಡ್-ಇಂಟರಾಕ್ಟಿವ್ ರಿನೀವೆಬಲ್‌ ಎನರ್ಜಿ) ಉತ್ಪಾದನಾ ಸಾಮರ್ಥ್ಯದಲ್ಲಿ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ(Karnataka) ಅಗ್ರಸ್ಥಾನ ಪಡೆದಿದೆ ಎಂದು ಆರ್‌ಬಿಐ(RBI) ವರದಿ ಹೇಳಿದೆ.


ಪರಿಸರ ಸ್ನೇಹಿ ಮೂಲಗಳಿಂದ ಉತ್ಪಾದಿಸುವ ವಿದ್ಯುತ್​ ಪ್ರಮಾಣದಲ್ಲಿ ಕರ್ನಾಟಕ ಮುಂಚೂಣಿ


ಆರ್‌ಬಿಐನ ಪ್ರಕಟಣೆಯೊಂದು ಈ ಮಾಹಿತಿ ನೀಡಿದ್ದು, ದೇಶದ ಎಲ್ಲಾ ರಾಜ್ಯಗಳ ಗ್ರಿಡ್-ಇಂಟರಾಕ್ಟಿವ್ ನವೀಕರಿಸಬಹುದಾದ ಶಕ್ತಿಯ ಒಟ್ಟು ಸ್ಥಾಪಿತ ಸಾಮರ್ಥ್ಯವನ್ನು ಹೋಲಿಸಿದಾಗ ಕರ್ನಾಟಕವು ಮುಂಚೂಣಿಯಲ್ಲಿದೆ ಎಂದಿದೆ. ಪ್ರಕಟಣೆಯ ಪ್ರಕಾರ ರಾಜ್ಯವು ಹೆಚ್ಚು ಪರಿಸರಸ್ನೇಹಿ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಹೊಂದಿದ್ದು ಇವು ಒಟ್ಟು 15,463 ಮೆಗಾವ್ಯಾಟ್ (mw) ಸಾಮರ್ಥ್ಯದಷ್ಟು ವಿದ್ಯುತ್ ಉತ್ಪಾದನಾ ಮಾಡುತ್ತವೆ ಎನ್ನಲಾಗಿದೆ. ಈ ಅಂಕಿಅಂಶಗಳ ಆಧಾರದ ಮೇಲೆ ಕರ್ನಾಟಕ ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಿಗಿಂತ ಕರ್ನಾಟಕ ಹೆಚ್ಚು ಮುಂಚೂಣಿಯಲ್ಲಿದೆ.


ಭಾರತೀಯ ರಾಜ್ಯಗಳ ಹ್ಯಾಂಡ್‌ಬುಕ್ ಆಫ್ ಸ್ಟ್ಯಾಟಿಸ್ಟಿಕ್ಸ್ 2021-22 ರ ಪ್ರಕಾರ, ಇದು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಅಂಕಿಅಂಶ ಪ್ರಕಟಣೆಯ ಏಳನೇ ಆವೃತ್ತಿಯಾಗಿದೆ. ಈ ಪ್ರಕಟಣೆಯ ಮೂಲಕ, ರಿಸರ್ವ್ ಬ್ಯಾಂಕ್ ಭಾರತದ ಪ್ರಾದೇಶಿಕ ಆರ್ಥಿಕತೆಗಳ ಮೇಲೆ ಡೇಟಾವನ್ನು ಪ್ರಸಾರ ಮಾಡುತ್ತಿದೆ.


ಇದನ್ನೂ ಓದಿ: Coffee: ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಕಾಫಿ ಬೆಳೆದ ರೈತ- ಕ್ವಾಲಿಟಿ ಓಕೆ ಆದ್ರೆ ಬದಲಾವಣೆಯ ಪರ್ವ ಶುರು


ವರದಿ ಏನು ಹೇಳಿದೆ?
ಆರ್‌ಬಿಐ ವರದಿ ಪ್ರಕಾರ ಕರ್ನಾಟಕದಲ್ಲಿ ಗ್ರಿಡ್ ಇಂಟರಾಕ್ಟಿವ್ ಮರುಬಳಕೆಯ ಇಂಧನ ಉತ್ಪಾದನೆ ಸಾಮರ್ಥ್ಯ 15,463 ಮೆಗಾವ್ಯಾಟ್ ಇದ್ದರೆ, ತಮಿಳುನಾಡು 15,225 ಮೆಗಾವ್ಯಾಟ್ ಸಾಮರ್ಥ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ಹಾಗೆಯೇ ಗುಜರಾತ್‌ 13,153 ಮೆಗಾ ವ್ಯಾಟ್ ಹೊಂದಿರುವುದರ ಜೊತೆ ಮೂರನೇ ಸ್ಥಾನ ಪಡೆದಿದೆ. ಇನ್ನೂ ಮಹಾರಾಷ್ಟ್ರ 10,267 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿದ್ದು 4ನೇ ಸ್ಥಾನ ಪಡೆದಿವೆ.


ಇತರ ರಾಜ್ಯಗಳ ಉತ್ಪಾದನೆ ಎಷ್ಟು?
ಮಹಾರಾಷ್ಟ್ರದ ನಂತರ ರಾಜಸ್ಥಾನ 10,205 ಮೆಗಾವ್ಯಾಟ್ , ಆಂಧ್ರ ಪ್ರದೇಶ 8,969 ಮೆಗಾವ್ಯಾಟ್, ಮಧ್ಯಪ್ರದೇಶ 5,206 ಮೆಗಾವ್ಯಾಟ್, ತೆಲಂಗಾಣ 4,378 ಮೆಗಾವ್ಯಾಟ್ , ಉತ್ತರ ಪ್ರದೇಶ 3,879 ಮೆಗಾವ್ಯಾಟ್, ಪಂಜಾಬ್ 1,617 ಮೆಗಾವ್ಯಾಟ್ ಮತ್ತು ಹಿಮಾಚಲ ಪ್ರದೇಶ 988 ಮೆಗಾವ್ಯಾಟ್ ಮತ್ತು ಉತ್ತರಾಖಂಡ 713 ಮೆಗಾವ್ಯಾಟ್ ಉತ್ಪಾದಿಸುತ್ತದೆ.


ವಿದ್ಯುತ್ ವಿತರಣಾ ಕಂಪನಿಗಳು ಸಹ ನಂಬರ್‌ ಒನ್
ಇತ್ತ ಕರ್ನಾಟಕದ ವಿದ್ಯುತ್ ವಿತರಣಾ ಕಂಪನಿಗಳು ದೇಶದಲ್ಲಿಯೇ ಅತಿಹೆಚ್ಚು ಪ್ರಮಾಣದಲ್ಲಿ ಪರಿಸರಸ್ನೇಹಿ ಮೂಲಗಳಿಂದ ಉತ್ಪಾದಿಸಿದ ವಿದ್ಯುತ್ ಮಾರಾಟ ಮಾಡುತ್ತಿವೆ ಎಂದು ವರದಿಗಳು ಹೇಳಿವೆ. ನಿನ್ನೆ ಪ್ರಕಟವಾದ ಎಎನ್‌ಐ ವರದಿಯಲ್ಲಿ ಇಂಡಿಯನ್ ಎನರ್ಜಿ ಎಕ್ಸ್‌ಚೇಂಜ್‌ನ ಅಂಕಿ ಅಂಶವನ್ನೂ ಉಲ್ಲೇಖಿಸಲಾಗಿದೆ. ಐಇಎಕ್ಸ್ ಪ್ರಕಾರ ಮರುಬಳಕೆ ಇಂಧನದ ಮಾರಾಟ ವಿಚಾರದಲ್ಲಿ ಕರ್ನಾಟಕದ ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಂಗಳು) ಅಗ್ರಸ್ಥಾನ ಪಡೆದಿವೆ.

2021 ಮಾರ್ಚ್‌ವರೆಗಿನ ಅಂಕಿ ಅಂಶವನ್ನು ಆಧರಿಸಿ ಈ ವರದಿ ಬಂದಿದೆ. ಕೇಂದ್ರ ಸರ್ಕಾರದ ಅಂಕಿ ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಇಂಧನ ಅಂಕಿಅಂಶಗಳಿಂದ ಮಾಹಿತಿಯನ್ನು ಆರ್‌ಬಿಐ ಶನಿವಾರ ಪ್ರಕಟಿಸಿದ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಂಕಿಅಂಶಗಳ ಪ್ರಕಟಣೆಯ ಏಳನೇ ಆವೃತ್ತಿಯನ್ನು 'ಭಾರತೀಯ ರಾಜ್ಯಗಳ ಮೇಲಿನ ಅಂಕಿಅಂಶಗಳ ಕೈಪಿಡಿ 2021-22' ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಿದೆ. ಈ ಪ್ರಕಟಣೆಯು 1951 ರಿಂದ 2021-22 ರವರೆಗಿನ ವಿವಿಧ ಅವಧಿಗಳಲ್ಲಿ ಭಾರತೀಯ ರಾಜ್ಯಗಳಾದ್ಯಂತ ಸಾಮಾಜಿಕ-ಜನಸಂಖ್ಯಾಶಾಸ್ತ್ರ, ರಾಜ್ಯ ದೇಶೀಯ ಉತ್ಪನ್ನ, ಕೃಷಿ, ಬೆಲೆ ಮತ್ತು ವೇತನಗಳು, ಉದ್ಯಮ, ಮೂಲಸೌಕರ್ಯ, ಬ್ಯಾಂಕಿಂಗ್ ಮತ್ತು ಹಣಕಾಸಿನ ಸೂಚಕಗಳ ಮೇಲಿನ ಉಪ-ರಾಷ್ಟ್ರೀಯ ಅಂಕಿಅಂಶಗಳನ್ನು ಒಳಗೊಂಡಿದೆ. ಹ್ಯಾಂಡ್‌ಬುಕ್‌ನ ಪ್ರಸ್ತುತ ಆವೃತ್ತಿಯಲ್ಲಿ, ಆರೋಗ್ಯ ಮತ್ತು ಪರಿಸರ ಎಂಬ ಎರಡು ಹೊಸ ವಿಭಾಗಗಳನ್ನು ಪರಿಚಯಿಸಲಾಗಿದೆ.


ಇದನ್ನೂ ಓದಿ: Bengaluru: ಬೇಗೂರು ಕೋಟೆಯಲ್ಲಿದೆ ಬೆಂಗಳೂರಿನ ಇತಿಹಾಸ, ಮುಂದಿನ ವೀಕೆಂಡ್​​​​ಗೆ ಭೇಟಿ ನೀಡಿ!


ಆರ್​ಬಿಐ ಹೇಳಿಕೆಯ ಪ್ರಕಾರ ನವೀಕರಣಗೊಳ್ಳುವ ಮೂಲಗಳು ಎಂದರೆ ಬಯೋವಿದ್ಯುತ್, ಸೌರಶಕ್ತಿ, ಸಣ್ಣ ಪ್ರಮಾಣದ ಜಲವಿದ್ಯುತ್ ಘಟಕ, ತ್ಯಾಜ್ಯದಿಂದ ವಿದ್ಯುತ್ ಮತ್ತು ಪವನಶಕ್ತಿಯಿಂದ ಉತ್ಪಾದಿಸುವ ವಿದ್ಯುತ್ ಸೇರುತ್ತದೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು