ಕರ್ನಾಟಕದ ಆದಾಯ ತೆರಿಗೆ ಆಯುಕ್ತ ಪತಂಜಲಿ ಝಾ ಪ್ರಕೃತಿ ಪ್ರೀತಿ; ನೈಸರ್ಗಿಕವಾಗಿ ಕೊರೋನಾ ವಿರುದ್ಧ ಹೋರಾಟ

ಜಪಾನಿನಲ್ಲಿ ನೈಸರ್ಗಿಕ ಕೃಷಿ ಕ್ರಾಂತಿ ಮಾಡಿದ್ದ ಫುಕೊಕಾ ಪತಂಜಲಿ ಝಾ ಅವರಿಗೆ ಸ್ಫೂರ್ತಿ. ಭೂಮಿ ಅಗೆಯದೆ, ಗೊಬ್ಬರ ಹಾಕದೇ ಪ್ರಕೃತಿಯ ನಿಯಮಗಳಂತೆಯೇ ಬೆಳೆಯುವ ಬೆಳೆ ಇವರ ಹೆಗ್ಗಳಿಕೆ.

news18-kannada
Updated:June 27, 2020, 8:04 AM IST
ಕರ್ನಾಟಕದ ಆದಾಯ ತೆರಿಗೆ ಆಯುಕ್ತ ಪತಂಜಲಿ ಝಾ ಪ್ರಕೃತಿ ಪ್ರೀತಿ; ನೈಸರ್ಗಿಕವಾಗಿ ಕೊರೋನಾ ವಿರುದ್ಧ ಹೋರಾಟ
ಪತಂಜಲಿ ಝಾ
  • Share this:
ಬೆಂಗಳೂರು (ಜೂ. 27):  ನೀವೇನಾದರೂ ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಪ್ರಧಾನ ಕಚೇರಿಗೆ ಹೋದರೆ ಹೊಸ ಬಗೆಯ ಸುಗಂಧವೊಂದು ನಿಮ್ಮನ್ನು ಸ್ವಾಗತಿಸುತ್ತದೆ. ಅಲ್ಲಿರುವ ಸಿಬ್ಬಂದಿ ಕೂಡ ಕೊರೋನಾ ಟೈಮಲ್ಲೂ ಖುಷಿಯಾಗಿ ಆರೋಗ್ಯವಾಗಿ ಓಡಾಡಿಕೊಂಡಿರೋದು ನೋಡಿ ನಿಮಗೆ ಒಂದು ಕ್ಷಣ ಅಚ್ಚರಿಯಾಗೋದು ಗ್ಯಾರಂಟಿ. ಯಾಕಂದರೆ, ಇಡೀ ಆಫೀಸ್ ವಾತಾವರಣವೇ ಕೊರೋನಾ ವಿರುದ್ಧ ನೈಸರ್ಗಿಕವಾಗಿ ಬದಲಾಗಿಬಿಟ್ಟಿದೆ. ಇದಕ್ಕೆಲ್ಲ ಕಾರಣ ಇಲಾಖೆಯ ಪ್ರಧಾನ ಆಯುಕ್ತ ಪತಂಜಲಿ ಝಾ.

ಅಮೃತಬಳ್ಳಿ ಗುಣಗಳ ಜೇನುತುಪ್ಪ, ಕರ್ಪೂರ ಹಾಕಿದ ಶುದ್ಧ ಹಸುವಿನ ತುಪ್ಪ, ಯಾವುದೇ ರಾಸಾಯನಿಕ-ಗೊಬ್ಬರ ಹಾಕದೇ ಸಂಪೂರ್ಣ ನೈಸರ್ಗಿಕವಾಗಿ ಬೆಳೆದ ಅರಿಶಿನ, ನುಗ್ಗೆಕಾಯಿ ಸೊಪ್ಪಿನ ಪುಡಿ... ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಅತ್ಯುತ್ತಮ ಮಟ್ಟದಲ್ಲಿ ಇರಿಸೋಕೆ ಪ್ರಕೃತಿಯಲ್ಲಿ ಏನೆಲ್ಲಾ ವಸ್ತುಗಳು ಲಭ್ಯವೋ ಅದೆಲ್ಲವನ್ನೂ ಇಲ್ಲಿನ ಸಿಬ್ಬಂದಿ ಬಳಸುತ್ತಿದ್ದಾರೆ. ಕೊರೋನಾ ಬಂದಾಗ ಇವರೆಲ್ಲರಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳೋಕೆ ನಿಸರ್ಗದ ಅದ್ಭುತ ಮಾರ್ಗ ತೋರಿಸಿಕೊಟ್ಟಿದ್ದು ಕರ್ನಾಟಕ ಮತ್ತು ಗೋವಾ ಸರ್ಕಲ್ ನ ಆದಾಯ ತೆರಿಗೆ ಪ್ರಧಾನ ಆಯುಕ್ತರಾದ ಪತಂಜಲಿ ಝಾ.

ಇದನ್ನೂ ಓದಿ: Coronavirus: ವಿಚಿತ್ರ ಎನಿಸಿದರೂ ಸತ್ಯ; ಟಾಯ್ಲೆಟ್​ ಫ್ಲಶ್​ ಮಾಡೋದ್ರಿಂದ ಕೊರೋನಾ ವೈರಸ್​ ಹರಡುತ್ತೆ!

ಇವರು ತಮ್ಮದೇ ಇಲಾಖೆಯಲ್ಲಿರೋ ಕೆಲವು ಪ್ರತಿಭೆಗಳನ್ನು ಹುಡುಕಿ ಅವರಿಂದ ಉಸಿರಾಟದ ವ್ಯಾಯಾಮವನ್ನು ಪರಿಚಯಿಸಿದ್ದಾರೆ. ಹತ್ತಿಯ ಮಾಸ್ಕ್ ತರಿಸಿಕೊಟ್ಟಿದ್ದಾರೆ, ಜೊತೆಗೆ ಬಿಹಾರ, ಮಧ್ಯಪ್ರದೇಶದಲ್ಲಿ ಬಹಳ ಆಸಕ್ತಿಯಿಂದ ತಾವು ಮಾಡುತ್ತಿರುವ ಅರಣ್ಯ ಕೃಷಿಯ ಉತ್ಪನ್ನಗಳನ್ನು ಎಲ್ಲರಿಗೂ ನೀಡಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಆದಾಯ ತೆರಿಗೆಯ ಮುಖ್ಯ ಕಚೇರಿಯ ಹತ್ತಿರಕ್ಕೂ ಕೊರೋನಾ ಬಂದಿಲ್ಲ. ಎಲ್ಲರ ಆರೋಗ್ಯದ ಬಗ್ಗೆ ಪ್ರಧಾನ ಆಯುಕ್ತರ ಕಾಳಜಿ ಸಿಬ್ಬಂದಿಗೂ ಖುಷಿಕೊಟ್ಟಿದೆ.

ಜಪಾನಿನಲ್ಲಿ ನೈಸರ್ಗಿಕ ಕೃಷಿ ಕ್ರಾಂತಿ ಮಾಡಿದ್ದ ಫುಕೊಕಾ ಪತಂಜಲಿ ಝಾ ಅವರಿಗೆ ಸ್ಫೂರ್ತಿ. ಭೂಮಿ ಅಗೆಯದೆ, ಗೊಬ್ಬರ ಹಾಕದೇ ಪ್ರಕೃತಿಯ ನಿಯಮಗಳಂತೆಯೇ ಬೆಳೆಯುವ ಬೆಳೆ ಇವರ ಹೆಗ್ಗಳಿಕೆ. ಇದು ಕೇವಲ ತನ್ನ ಕೃಷಿ ಮಾತ್ರ ಅಲ್ಲ, ಮುಂದಿನ ಜನಾಂಗಕ್ಕೆ ಶುದ್ಧ ಗಾಳಿ, ನೆಲ ಮತ್ತು ನೀರನ್ನು ಉಳಿಸುವ ಅತ್ಯುತ್ತಮ ಮಾರ್ಗ ಎನ್ನುತ್ತಾರೆ ಇವರು. ಆಸಕ್ತರಿಗೆ ಈ ಬಗ್ಗೆ ಬಹಳ ಉತ್ಸಾಹದಿಂದ ವಿವರಿಸೋದು ಮಾತ್ರವಲ್ಲ, ಎಲ್ಲರೂ ನೈಸರ್ಗಿಕ ಕೃಷಿಯನ್ನು ಅನುಸರಿಸಬೇಕು ಎನ್ನುವ ಕಾಳಜಿಯ ಒತ್ತಾಯ ಇವರದ್ದು. ನೈಸರ್ಗಿಕ ಕೃಷಿಯ ಉತ್ಪನ್ನಗಳು ಕೊರೋನಾದಂಥಾ ಮಹಾಮಾರಿಯನ್ನೇ ದೂರ ಇಡೋಕೆ ಸಾಧ್ಯ ಎಂದಮೇಲೆ ಆರೋಗ್ಯ ಕಾಪಾಡುವಲ್ಲಿ ಇನ್ನೆಷ್ಟು ಅನುಕೂಲಕರ ಎಂದು ತಿಳಿದುಕೊಳ್ಳಿ ಅಂತಾರೆ ಪತಂಜಲಿ ಝಾ.
First published:June 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading