News18 India World Cup 2019

ಇನ್ನೂ ಪತ್ತೆಯಾಗದ ಕರಾವಳಿ ಮೀನುಗಾರರು; ಇಸ್ರೋ ನೆರವು ಪಡೆಯಲು ರಾಜ್ಯ ಗೃಹ ಸಚಿವರ ನಿರ್ಧಾರ

Latha CG | news18india
Updated:January 12, 2019, 12:37 PM IST
ಇನ್ನೂ ಪತ್ತೆಯಾಗದ ಕರಾವಳಿ ಮೀನುಗಾರರು; ಇಸ್ರೋ ನೆರವು ಪಡೆಯಲು ರಾಜ್ಯ ಗೃಹ ಸಚಿವರ ನಿರ್ಧಾರ
ಎಂ.ಬಿ.ಪಾಟೀಲ್​
Latha CG | news18india
Updated: January 12, 2019, 12:37 PM IST
ಕೃಷ್ಣ ಜಿ.ವಿ

ಬೆಂಗಳೂರು,(ಜ.11): ಕರಾವಳಿಯ 7 ಮೀನುಗಾರರು ಕಾಣೆಯಾಗಿ 29 ದಿನಗಳು ಸಂದಿವೆ. ಇನ್ನೂ ಸಹ ಎಲ್ಲಿಯೂ ಪತ್ತೆಯಾಗಿಲ್ಲ. ಹೀಗಾಗಿ ಇಸ್ರೋ ನೆರವು ಪಡೆಯಲು ನಿರ್ಧರಿಸಿದ್ದೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಇಂದು ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮೀನುಗಾರರ ಸುಳಿವು ಸಿಕ್ಕಿದೆ ಎನ್ನುವುದು ಸುಳ್ಳು. ಮಾಧ್ಯಮಗಳಲ್ಲಿ ತಪ್ಪು ವರದಿಯಾಗಿದೆ. ಇದುವರೆಗೂ ಮೀನುಗಾರರ ಸುಳಿವು ಸಿಕ್ಕಿಲ್ಲ. ಮೀನುಗಾರರ ಹುಡುಕಾಟ ಮುಂದುವರಿದಿದೆ ಎಂದರು.

ಮೀನುಗಾರರ ಪತ್ತೆಗೆ ಸರ್ಕಾರ ತೀವ್ರ ಪ್ರಮಾಣದಲ್ಲಿ ಪ್ರಯತ್ನ ನಡೆಸಿದೆ. ಕ್ಯಾಬಿನೆಟ್​ನಲ್ಲೂ ಸುಧೀರ್ಘ ಚರ್ಚೆ ನಡೆಸಿದ್ದೇವೆ. ಮೀನುಗಾರರ ಕುಟುಂಬಗಳು ಆತಂಕದಲ್ಲಿವೆ. ಕೇರಳದ ಕೊಚ್ಚಿನ್​​ನಲ್ಲೂ ಹುಡುಕಾಟ ನಡೆದಿದೆ ಎಂದು ತಿಳಿಸಿದರು.

ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೂ ಸಹಕಾರ ಕೋರಿ ಪತ್ರ ಬರೆಯುತ್ತೇವೆ. ಅಲ್ಲದೇ ಮಾನವೀಯತೆ ದೃಷ್ಟಿಯಿಂದ ಸಹಕಾರ ಕೋರಿ ಇಸ್ರೋ ಗೆ ಪತ್ರ ಬರೆಯಲು ನಿರ್ಧಾರ ಮಾಡಿದ್ದೇವೆ. ಸರ್ಕಾರದ ಮುಖ್ಯಕಾರ್ಯದರ್ಶಿಯಿಂದ ಪತ್ರ ಬರೆಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಕರಾವಳಿ ಮೀನುಗಾರ ನಾಪತ್ತೆ ಪ್ರಕರಣ: ಸುಳಿವು ಸಿಕ್ಕಿಲ್ಲ, ಅಧಿಕಾರಿಗಳ ಜತೆ ಮಾತಾಡಿದ್ದೇನೆ; ಎಂ.ಬಿ. ಪಾಟೀಲ್
Loading...

ಮಾಲ್ವಾನಿ ಸಮುದ್ರ ಪ್ರದೇಶದಲ್ಲಿ ಮೀನುಗಾರರಿಗೆ ಸಂಬಂಧಿಸಿದಂತೆ ಸುಳಿವು ದೊರೆತಿದೆ, ಆದರೆ ವಿವರ ನೀಡಲಾಗದು ಎಂದು ಹೇಳಿದ್ದರು. ಆದರೆ ಇದು ತಪ್ಪು ವರದಿ ಎಂದು ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 7 ಮೀನುಗಾರರು ಸುವರ್ಣ ತ್ರಿಭುಜ ದೋಣಿ ಸಹಿತ ನಾಪತ್ತೆಯಾಗಿ 29 ದಿನಗಳು ಕಳೆದಿವೆ. ಅವರ ಹುಡುಕಾಟಕ್ಕಾಗಿ ನಾಲ್ವರು ಮೀನುಗಾರರು ಮತ್ತು ಪೊಲೀಸರ ತಂಡ ಶುಕ್ರವಾರ ಮಹಾರಾಷ್ಟ್ರಕ್ಕೆ ತೆರಳಿವೆ. ಇವರು ಮಾಲ್ವಾನಿಯ ದುರ್ಗಮ ನದಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತವೆ ಎಂದು ತಿಳಿದು ಬಂದಿದೆ.

ಸುವರ್ಣ ತ್ರಿಭುಜ ದೋಣಿ ಮಾಲೀಕ ಚಂದ್ರಶೇಖರ ಕೋಟ್ಯಾನ್ ಮನೆ ದೇವರು ಏಳು ಮೀನುಗಾರರು ಬಂಧನದಲ್ಲಿದ್ದಾರೆ, ಹುಡುಕಿ ಬಿಡಿಸಿಕೊಂಡು ಬರುವ ಯತ್ನ ಸಾಲದು ಎಂದು ಹೇಳಿತ್ತು.

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...