Hijab Row Update: ಹಿಜಾಬ್ ವಿವಾದ; ಸುಪ್ರೀಂಕೋರ್ಟ್​ ಕೇಳಿದ ಮಹತ್ವದ ಪ್ರಶ್ನೆಗಳಿವು

ಸುಪ್ರೀಂ ಕೋರ್ಟ್ ಆದರೆ ನೀವು ಆ ಹಕ್ಕನ್ನು ಸಮವಸ್ತ್ರ ನೀತಿ ಸಂಹಿತೆ ಹೊಂದಿರುವ ಶಾಲೆಗೆ ಅನ್ವಯಿಸಬಹುದೇ? ಎಂದು ಪ್ರಶ್ನಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ (Hijab) ಧರಿಸುವುದರ ಮೇಲಿನ ನಿರ್ಬಂಧವನ್ನು ಬೆಂಬಲಿಸುವ ಕರ್ನಾಟಕ ಹೈಕೋರ್ಟ್‌ನ (Karnataka High Court) ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಯಾವ ಪದ್ಧತಿಯನ್ನು ಬೇಕಾದರೂ ಅನುಸರಿಸುವ ಧಾರ್ಮಿಕ ಹಕ್ಕನ್ನು (Religious Rights) ನೀವು ಹೊಂದಿರಬಹುದು. ಆದರೆ ನೀವು ಆ ಹಕ್ಕನ್ನು ಸಮವಸ್ತ್ರ ನೀತಿ ಸಂಹಿತೆ ಹೊಂದಿರುವ ಶಾಲೆಗೆ ಅನ್ವಯಿಸಬಹುದೇ? ಎಂದು ಪ್ರಶ್ನಿಸಿದೆ. ಎಲ್ಲಿ ಬೇಕಾದರೂ ಸ್ಕಾರ್ಫ್ ಅಥವಾ ಹಿಜಾಬ್ ಧರಿಸಲು ನಿಮಗೆ ಹಕ್ಕಿದೆ ಎಂಬುದನ್ನು ನಾವು ಒಂದು ಕ್ಷಣ ಒಪ್ಪಿಕೊಂಡರೂ, ಸಮವಸ್ತ್ರವನ್ನು ಸೂಚಿಸಿರುವ ಶಾಲೆಗೆ (School) ನೀವು ಹಿಜಾಬ್ ಧರಿಸಿ ಹೋಗಬಹುದೇ ಎಂಬುದಾಗಿ ನ್ಯಾಯಮೂರ್ತಿಗಳು ಅರ್ಜಿದಾರ ಪರ ವಾದಿಸಿದ ಹಿರಿಯ ವಕೀಲರನ್ನು ಪ್ರಶ್ನಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳು ಜಾರಿಗೊಳಿಸಿರುವ ನೀತಿಗೆ ವಿದ್ಯಾರ್ಥಿಗಳು ಬದ್ಧರು
ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಪ್ರಕಾರ ಕೆಲವು ವಿಭಾಗಗಳಿಗೆ ಶಿಕ್ಷಣವನ್ನು ನಿರಾಕರಿಸಲು ಕಾಯ್ದೆಯನ್ನು ಅನ್ವಯಿಸಲಾಗುತ್ತದೆ ಎಂಬುದನ್ನು ಆಧರಿಸಿ ಪೀಠವು ಕೆಲವೊಂದು ಅಂಶಗಳನ್ನು ಒತ್ತಿ ಹೇಳಿದ್ದು, ಯಾವುದೇ ಹಕ್ಕನ್ನು ನ್ಯಾಯಾಲಯವು ನಿರಾಕರಿಸುತ್ತಿಲ್ಲ ಆದರೆ ವಿದ್ಯಾರ್ಥಿಗಳಿಗೆ ಸೂಚಿಸಿರುವ ಸಮವಸ್ತ್ರವನ್ನು ಧರಿಸಿಕೊಂಡು ಶಿಕ್ಷಣ ಸಂಸ್ಥೆಗಳಲ್ಲಿ ಹಾಜರಾಗಬೇಕು ಎಂದು ಹೇಳುತ್ತಿದೆ ಎಂದು ತಿಳಿಸಿದೆ.

ಸಿಖ್ ಮಹಿಳೆಯರ ಉಲ್ಲೇಖ
ಹಿರಿಯರ ಸಮ್ಮುಖದಲ್ಲಿ ಮಹಿಳೆಯರು ತಮ್ಮ ತಲೆಯನ್ನು ಮುಚ್ಚಿಕೊಳ್ಳುವ ಚುನ್ನಿಯ ಪ್ರಸ್ತಾಪವನ್ನು ಮಾಡಿದಾಗ ನ್ಯಾಯಮೂರ್ತಿಗಳು ಪಂಜಾಬ್‌ನ ಉದಾಹರಣೆಯನ್ನು ಬಳಸಿಕೊಂಡಿದ್ದು, ಅಲ್ಲಿ ಚುನ್ನಿ ಸಂಸ್ಕೃತಿಯಲ್ಲ. ಬದಲಿಗೆ ಗುರುದ್ವಾರಕ್ಕೆ ನಮಿಸಲು ಹೋಗುವಾಗ ಸಿಖ್ ಮಹಿಳೆಯರು ತಮ್ಮ ತಲೆಯನ್ನು ಮುಚ್ಚಲು ಮಾತ್ರ ಬಳಸುತ್ತಾರೆ ಅಷ್ಟೇ ಎಂದಿದ್ದಾರೆ. ಇನ್ನು ಹಿಜಾಬ್ ವಿಷಯದಲ್ಲಿ ಇದನ್ನು ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯೇ ಎಂಬಂತಹ ಕ್ಲಿಷ್ಟ ಸಂವಿಧಾನಿಕ ಸಮಸ್ಯೆಗಳನ್ನೊಳಗೊಂಡಿರುವ ಕಾರಣ ಸಂವಿಧಾನ ಪೀಠವು ಅದನ್ನು ಪರಿಶೀಲಿಸುವ ಅಗತ್ಯವಿದೆ ಎಂಬುದಾಗಿ ಹಿರಿಯ ವಕೀಲರು ಅಭಿಪ್ರಾಯ ಪಟ್ಟಿದ್ದಾರೆ.

ಹಿಜಾಬ್ ಧರಿಸುವ ಅಗತ್ಯವನ್ನು ಹೊರತುಪಡಿಸಿ ಶಾಲೆಗಳಲ್ಲಿ ಕೂಡ ಧರಿಸಬೇಕೆಂದು ಒತ್ತಡ ಹೇರುವುದು ಸರಿಯೇ ಎಂಬುದಾಗಿ ನ್ಯಾಯಪೀಠ ಪ್ರಶ್ನಿಸಿದೆ. ಸಂವಿಧಾನದ ಪೀಠಿಕೆಯು ಭಾರತವನ್ನು ಜಾತ್ಯಾತೀತ ದೇಶ ಎಂಬುದಾಗಿ ಉಲ್ಲೇಖಿಸಿದೆ ಈ ಸಂದರ್ಭದಲ್ಲಿ ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸುವುದು ಸಮರ್ಪಕವೇ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.

ಪಗ್ಡಿಗೆ ಹಾಗೂ ಹಿಜಾಬ್‌ಗೆ ವ್ಯತ್ಯಾಸವಿದೆ
ನ್ಯಾಯಾಲಯಕ್ಕೆ ಬರುವ ಕೆಲವು ವಕೀಲರು ತಿಲಕ ಧರಿಸುತ್ತಾರೆ ಇನ್ನು ಕೆಲವರು ಪಗ್ಡಿ ಧರಿಸಿ ಬರುತ್ತಾರೆ ಹಾಗಿದ್ದರೆ ಇದರಂತೆಯೇ ಹಿಜಾಬ್ ಧರಿಸುವುದೂ ಕೂಡ ಅವರ ಅಗತ್ಯತೆ ಅಲ್ಲವೇ ಎಂಬ ಹಿರಿಯ ವಕೀಲರ ಪ್ರಶ್ನೆಗೆ ಉತ್ತರಿಸಿರುವ ನ್ಯಾಯ ಪೀಠವು, ಪಗ್ಡಿ ಧರಿಸುವುದು ಆಯಾ ರಾಜ್ಯಕ್ಕೆ ಸಂಬಂಧಪಟ್ಟ ಸಂಪ್ರದಾಯವಾಗಿದೆ ಇದನ್ನು ಧಾರ್ಮಿಕ ಚಿಹ್ನೆಗಳೊಂದಿಗೆ ಹೋಲಿಸಬೇಡಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Praveen Nettaru: ಪ್ರವೀಣ್ ನೆಟ್ಟಾರು ಹತ್ಯೆ‌ ಪ್ರಕರಣ; PFI ಮುಖಂಡರ ಮನೆ ಮೇಲೆ NIA ದಾಳಿ

ಬೇರೆ ದೇಶಗಳ ಉದಾಹರಣೆಯನ್ನು ನೀಡಿದ ಅರ್ಜಿದಾರ ಪರ ವಕೀಲರು ಫ್ರಾನ್ಸ್‌ ಜಾತ್ಯಾತೀತತೆಯ ಕಟ್ಟುನಿಟ್ಟಾದ ರೂಪವನ್ನು ಆಚರಿಸುತ್ತದೆ ಎಂಬುದಕ್ಕೆ ಒತ್ತು ನೀಡಿದರು. ಸುಪ್ರೀಂ ಕೋರ್ಟ್ ಮುಂದಿರುವ ಸಮಸ್ಯೆಯು ಬೃಹತ್ ಸಂಖ್ಯೆಯ ಲಕ್ಷಾಂತರ ಜನರಿಗೆ ಸಂಬಂಧಿಸಿದ್ದಾಗಿದೆ ಏಕೆಂದರೆ ಅವರುಗಳು ಕಟ್ಟುನಿಟ್ಟಾದ ವಸ್ತ್ರಸಂಹಿತೆಯನ್ನು ಅನುಸರಿಸುತ್ತಾರೆ, ಜೊತೆಗೆ ಹಿಜಾಬ್ ಕೂಡ ಧರಿಸಲು ಬಯಸುತ್ತಾರೆ. ಇದೊಂದು ರೀತಿಯಲ್ಲಿ ಸಂವಿಧಾನಕ ಪ್ರಶ್ನೆಯಾಗಿದೆ ಎಂಬುದಾಗಿ ಪೀಠಕ್ಕೆ ಸವಾಲು ಹಾಕಿದ್ದಾರೆ.

ಸರ್ವೋಚ್ಛ ನ್ಯಾಯಾಲಯ ನೀಡುವ ತೀರ್ಪನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ಹಿಜಾಬ್ ಎಂಬುದು ಹೆಚ್ಚಿನ ಸಂಖ್ಯೆಯ ದೇಶಗಳು ಹಾಗೂ ನಾಗರಿಕತೆಗಳ ಮೇಲೆ ಪರಿಣಾಮ ಬೀರುವ ವಿಷಯವಾಗಿದೆ ಎಂಬುದಾಗಿ ಹೇಳಿದ ವಕೀಲರು ಸುಪ್ರೀಂ ಕೋರ್ಟ್‌ನ ತೀರ್ಪು ಪ್ರಮುಖ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಗಮನ ಸೆಳೆದಿದ್ದಾರೆ.

ಸರಕಾರಕ್ಕೆ ಪತ್ರ ಬರೆದ ಶಾಲೆಗಳು
ಈ ವರ್ಷದ ಫೆಬ್ರವರಿ 5 ರಂದು ಸರಕಾರಿ ಆದೇಶಕ್ಕೆ ಕಾರಣವಾದ ಕೆಲವೊಂದು ಬೆಳವಣಿಗೆಗಳನ್ನು ಗಮನಿಸಿದಾಗ ರಾಜ್ಯದಲ್ಲಿ ಅಶಾಂತಿ ಉಂಟಾಗಿದೆ ಹಾಗೂ ಕೆಲವು ಶಿಕ್ಷಣ ಸಂಸ್ಥೆಗಳು ಮತ್ತು ಜಿಲ್ಲಾಧಿಕಾರಿಗಳು ಮಾರ್ಗದರ್ಶನ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದಾರೆ ಎಂಬುದಾಗಿ ಕರ್ನಾಟಕ ಅಡ್ವೊಕೇಟ್ ಜನರಲ್ ಪಿ ಕೆ ನಾವಡಗಿ ತಿಳಿಸಿದ್ದಾರೆ. ವಿದ್ಯಾರ್ಥಿಗಳು ತಮಗೆ ಸಂಬಂಧಪಟ್ಟ ಆಡಳಿತ ಮಂಡಳಿಗಳು ಸೂಚಿಸಿದ ಸಮವಸ್ತ್ರವನ್ನು ಧರಿಸಬೇಕು ಎಂಬುದಾಗಿ ಸರಕಾರಿ ಆದೇಶ ಹೇಳುತ್ತದೆ. ಎಲ್ಲಾ ಸಂಸ್ಥೆಗಳಿಗೆ ಸಮವಸ್ತ್ರವನ್ನು ಶಿಫಾರಸು ಮಾಡುವುದಿಲ್ಲ, ಈ ನಿಟ್ಟಿನಲ್ಲಿ ರಾಜ್ಯವು ಕೆಲವೊಂದು ಜಾಗರೂಕ ಅಂಶಗಳನ್ನು ಅನುಸರಿಸುತ್ತದೆ.

ಪಠ್ಯಕ್ರಮದ ನಿಯಮಗಳ ಕರ್ನಾಟಕ ಶಿಕ್ಷಣ ನಿಯಮ 11 ರಲ್ಲಿ ತಿಳಿಸಿರುವಂತೆ ಪ್ರತಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಸೂಚಿಸಬೇಕು ಎಂದು ಉಲ್ಲೇಖಿಸಿದೆ. ಹಾಗಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ಜಾರಿಮಾಡಬೇಕು ಎಂಬುದಾಗಿ ಅವರು ವಿನಂತಿಸಿದ್ದಾರೆ. ಇದಕ್ಕೆ ಅನುಗುಣವಾಗಿ, ರಾಜ್ಯದ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಸೂಚಿಸಿವೆ. ಅವರಲ್ಲಿ ಕೆಲವರು ಹಿಜಾಬ್ ಧರಿಸುವುದನ್ನು ನಿಷೇಧಿಸಲು ನಿರ್ಧರಿಸಿದರು. ಸರ್ಕಾರಿ ಅಥವಾ ಖಾಸಗಿ ಶಾಲೆಗಳ ಆ ನಿರ್ಣಯಗಳು ಅಥವಾ ನಿರ್ಧಾರಗಳನ್ನು ಪ್ರಶ್ನಿಸಲಾಗಿಲ್ಲ.

ಸಮವಸ್ತ್ರ ನಿಗದಿ ಮಾಡುವ ಅಧಿಕಾರ ಹೇಗಿರುತ್ತದೆ?
ಹೈಕೋರ್ಟ್‌ನ ಮುಂದೆ ತಮ್ಮ ವಾದ ಮಂಡಿಸಿದ ನಾವಡಗಿ, ಸರಕಾರಿ ಆದೇಶವು ಅರ್ಜಿದಾರರ ಯಾವುದೇ ಹಕ್ಕುಗಳನ್ನು ಪ್ರತಿಬಂಧಿಸುವುದಿಲ್ಲ. ನಾವು ಹಿಜಾಬ್ ಧರಿಸಿ ಅಥವಾ ಧರಿಸಬೇಡಿ ಎಂದು ಹೇಳುವುದಿಲ್ಲ ಬದಲಿಗೆ ನಾವು ಹೇಳುವುದೆಲ್ಲವೂ ನಿಯಮ 11 ಅನ್ನು ಅನುಸರಿಸಿ ಎಂದಾಗಿದೆ ಎಂದು ಅವರು ಹೇಳಿದರು.

ಹಿಜಾಬ್ ಧರಿಸುವುದನ್ನು ನಿಷೇಧಿಸಲು ಸಂಸ್ಥೆಗಳು ನಿಯಮ 11 ಅನ್ನು ಅನ್ವಯಿಸಿವೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಂಡಾಗ, ಇದು ಧಾರ್ಮಿಕ ಆಚರಣೆಗಳ ಭಾಗವಾಗಿದೆ ಮತ್ತು ಆರ್ಟಿಕಲ್ 25 ರ ಅಡಿಯಲ್ಲಿ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಿದ್ಯಾರ್ಥಿಗಳು ತಮ್ಮ ವಾದವನ್ನು ಹೆಚ್ಚಿಸಿದರು ಎಂದು ನಾವಡಗಿ ಹೇಳಿದರು.

ಇದನ್ನೂ ಓದಿ:  Bengaluru Buildings: ಸಿಲಿಕಾನ್‌ ಸಿಟಿಯಲ್ಲಿ ಅಕ್ರಮ ಬಿಲ್ಡಿಂಗ್‌ಗಳ ಕಾರುಬಾರು! ನಿಮ್ಮ ಮನೆ ಪಕ್ಕದಲ್ಲಿಯೇ ಇರಬಹುದು ಶಿಥಿಲಾವಸ್ಥೆ ಕಟ್ಟಡ!

ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ಸ್ಥಳೀಯ ಶಾಸಕರು, ಇಬ್ಬರು ಪರಿಶಿಷ್ಟ ಜಾತಿ, ಇಬ್ಬರು ಪರಿಶಿಷ್ಟ ಪಂಗಡದ ಸದಸ್ಯರು ಸೇರಿದಂತೆ ಕಾಲೇಜು ಅಭಿವೃದ್ಧಿ ಮಂಡಳಿಗೆ ಸಮವಸ್ತ್ರ ನಿಗದಿ ಮಾಡುವ ಅಧಿಕಾರ ನೀಡಲಾಗಿದೆ ಎಂದರು. ಖಾಸಗಿ ಶಿಕ್ಷಣ ಸಂಸ್ಥೆಗಳ ವಿಷಯದಲ್ಲಿ, ಅವರು ಉಡುಗೆಯನ್ನು ಸೂಚಿಸುವ ಆಡಳಿತ ಮಂಡಳಿಯನ್ನು ಹೊಂದಿದ್ದಾರೆ.

ಹಿಜಾಬ್ ಧರಿಸುವ ವಿಷಯದಲ್ಲಿ ಆಯಾ ಶಿಕ್ಷಣ ಸಂಸ್ಥೆ ಸ್ವತಂತ್ರರು
ಇದೇ ಸಮಯದಲ್ಲಿ ಪೀಠದ ಪ್ರಶ್ನೆಗೆ, ಕೆಲವು ಮಾನ್ಯತೆ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಗಳು ಹಿಜಾಬ್ ಅನ್ನು ಅನುಮತಿಸಿವೆ ಎಂದು ಅವರು ಹೇಳಿದರು. ಮತ್ತು ಅವರು ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು ಎಂಬುದನ್ನು ಈ ಸಮಯದಲ್ಲಿ ತಿಳಿಸಿದ್ದು, ಇಸ್ಲಾಮಿಕ್ ಮ್ಯಾನೇಜ್‌ಮೆಂಟ್‌ಗಳು ನಡೆಸುವ ಶಿಕ್ಷಣ ಸಂಸ್ಥೆಗಳು ಹಿಜಾಬ್ ಧರಿಸಲು ಅವಕಾಶ ಮಾಡಿಕೊಟ್ಟಿರಬಹುದು ಎಂದು ನಾವಡಗಿ ಹೇಳಿದ್ದಾರೆ.

ಹಿಂದಿನ ವಿಚಾರಣೆಯಲ್ಲಿ, ನ್ಯಾಯಾಧೀಶರು ಕರ್ನಾಟಕ ಶಿಕ್ಷಣ ಕಾಯಿದೆ ಮತ್ತು ನಿಯಮಗಳ ವ್ಯಾಪ್ತಿಯನ್ನು ಪ್ರಶ್ನಿಸಿದ್ದು “ವಿದ್ಯಾರ್ಥಿಯು ನಿರ್ದಿಷ್ಟ ಉಡುಗೆಯನ್ನು ಧರಿಸಿದರೆ ಅವರನ್ನು (ವಿದ್ಯಾರ್ಥಿ) ತರಗತಿಯಿಂದ ಡಿಬಾರ್ ಮಾಡಬಹುದೇ? ನೀವು ಮಹಿಳೆಯರಿಗೆ ಶಿಕ್ಷಣವನ್ನು ಅವರ ಉಡುಪಿನ ಮೇಲೆ ಅನಿಶ್ಚಿತಗೊಳಿಸಬಹುದೇ? ವಸ್ತ್ರ ಸಂಹಿತೆಗೆ ಸರಿಹೊಂದುವ ಸಮವಸ್ತ್ರವನ್ನು ಧರಿಸಿಲ್ಲ ಎಂದು ನೀವು ಭಾವಿಸುವ ಕಾರಣದಿಂದ ನೀವು ಯಾರನ್ನಾದರೂ ಕಾಲೇಜಿನಿಂದ ಹೊರಗಿಡಬಹುದೇ? ವಯಸ್ಕ ಮಹಿಳೆಗೆ ತನ್ನ ನಮ್ರತೆಯ ಕಲ್ಪನೆಯ ಮೇಲೆ ನಿಯಂತ್ರಣವಿಲ್ಲ ಎಂದು ನೀವು ಹೇಳಬಹುದೇ? ಎಂದು ಕೇಳಿದ್ದಾರೆ.

ಕಾಲೇಜು ಅಭಿವೃದ್ಧಿ ಮಂಡಳಿಯು ಸ್ಥಳೀಯ ಶಾಸಕರು ಮತ್ತು ರಾಜಕಾರಣಿಗಳನ್ನು ಒಳಗೊಂಡಿದ್ದು, ಕಾಯ್ದೆಯಡಿ ಯಾವುದೇ ಕಾನೂನು ಪಾವಿತ್ರ್ಯತೆ ಹೊಂದಿಲ್ಲ ಎಂದು ಅವರು ಪ್ರತಿಪಾದಿಸಿದರು. ನಂತರ ಪೀಠವು ಡ್ರೆಸ್ ಕೋಡ್ ಹೊಂದಿರುವ ರೆಸ್ಟೋರೆಂಟ್‌ಗಳನ್ನು ಉಲ್ಲೇಖಿಸಿತು. ಎಲ್ಲವೂ ಸಂದರ್ಭಕ್ಕೆ ತಕ್ಕಂತೆ ಹೊಂದಿಕೆಯಾಗುತ್ತದೆ ಎಂದು ನ್ಯಾಯಾಧೀಶರು ಉತ್ತರಿಸಿದರು.

ಸರಕಾರದ ಆದೇಶಕ್ಕೆ ಅಸ್ತು ಎಂದ ಹೈಕೋರ್ಟ್
ನ್ಯಾಯಾಧೀಶರು ಹಾಗೂ ಹಿರಿಯ ವಕೀಲರುಗಳ ನಡುವಿನ ವಾದಗಳು ಮುಂದುವರಿದಿವೆ. ಮಾರ್ಚ್ 15 ರಂದು ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠವು ಉಡುಪಿಯ ಪದವಿ ಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ಮುಸ್ಲಿಂ ಹುಡುಗಿಯರು ತರಗತಿಯಲ್ಲಿ ಹಿಜಾಬ್ ಧರಿಸುವ ಹಕ್ಕನ್ನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತ್ತು.

ಇದನ್ನೂ ಓದಿ: Kannada Compulsory: ಕೇಂದ್ರ, ರಾಜ್ಯ ಸರ್ಕಾರಗಳ ಕಾರ್ಯಕ್ರಮದಲ್ಲಿ ಕನ್ನಡ ಕಡ್ಡಾಯ; ಅಧಿಕೃತ ಆದೇಶ

ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ತಿಳಿಸಿತ್ತು. ಫೆಬ್ರವರಿ 5 ರಂದು ಹೊರಡಿಸಲಾದ ಸರಕಾರಿ ಆದೇಶಕ್ಕೆ ಹೈಕೋರ್ಟ್ ಪ್ರಾಮುಖ್ಯತೆ ನೀಡಿದೆ ಅಂತೆಯೇ ಸಮವಸ್ತ್ರ ಕಡ್ಡಾಯಗೊಳಿಸಿರುವ ಸರಕಾರಿ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಬಹುದು ಎಂಬುದಾಗಿಯೂ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಮತ್ತು ಮೇಲ್ಮನವಿಗಳು ಸಲ್ಲಿಕೆಯಾಗಿದ್ದವು.
Published by:Ashwini Prabhu
First published: