Indian Divorce Act: ಬೆಂಗಳೂರು: ದಂಪತಿಗಳ (Couple) ನಡುವಿನ ಪ್ರಕರಣವೊಂದರಲ್ಲಿ ವಿವಾಹದ (Marriage) ಸಂದರ್ಭದಲ್ಲಿ ಮಹಿಳೆ ತನ್ನ ನೈಜ ವಯಸ್ಸಿನ (Real Age) ಬಗ್ಗೆ ಸುಳ್ಳು ಹೇಳಿದ್ದಾಳೆ ಮತ್ತು ಆಕೆಗಿರುವ ಕೆಲ ಕಾಯಿಲೆಗಳ (Health Problems) ಬಗ್ಗೆಯೂ ಮರೆಮಾಚಿ ಮದುವೆಯಾಗಿದ್ದಾಳೆ. ಇದು ಒಂದು ವಂಚನೆ ಪ್ರಕರಣ (Cheating Case) ಎಂದು ಅಭಿಪ್ರಾಯ ಪಟ್ಟಿರುವ ಕರ್ನಾಟಕ ಹೈಕೋರ್ಟ್ (Karnataka High Court) ಕ್ರಿಶ್ಚಿಯನ್ ಜೋಡಿಯ (Christian Couple Wedding) ವಿವಾಹವೊಂದನ್ನು ಅಸಿಂಧು ಎಂದು ತೀರ್ಪು ನೀಡಿದೆ.
ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಪಾಟೀಲ್ ಅವರ ವಿಭಾಗೀಯ ಪೀಠ ಭಾರತೀಯ ವಿಚ್ಛೇದನ ಕಾಯ್ದೆಯ ಸೆಕ್ಷನ್ 18 ರ ಅಡಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿ ಮದುವೆಯನ್ನು ಅಸಿಂಧು ಎಂದು ತೀರ್ಪು ನೀಡಿದೆ.
ಪ್ರಕರಣ ಏನು?
ಮೇಲ್ಮನವಿದಾರರು (ಪತಿ) ಮತ್ತು ಪ್ರತಿವಾದಿ (ಪತ್ನಿ)ಗಳು ಭಾರತೀಯ ಕ್ರಿಶ್ಚಿಯನ್ನರು ಮತ್ತು ಅವರ ವಿವಾಹವು 2014ರಲ್ಲಿ ಭದ್ರಾವತಿಯಲ್ಲಿ ಹಿರಿಯರ ಸಮ್ಮುಖದಲ್ಲಿ ನೆರವೇರಿಸಲಾಗಿತ್ತು.
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸು ಎಂದಂತೆ ಹುಡುಗಿಯ ಕಡೆಯವರು ವಧುವಿನ ವಯಸ್ಸಿನಿಂದ ಹಿಡಿದು ಆಕೆಗಿರುವ ಕಾಯಿಲೆಗಳ ಬಗ್ಗೆಯೂ ವರನಿಗೆ ಮುಚ್ಚಿಟ್ಟು ಹಲವು ಸುಳ್ಳುಗಳನ್ನು ಹೇಳಿದ್ದಾರೆ.
ಭದ್ರಾವತಿಯ ಚರ್ಚ್ ನಲ್ಲಿ ಮದುವೆ
ವರ ಹುಡುಗಿಯನ್ನು ನೋಡಲು ವಧುವಿನ ಮನೆಗೆ ತೆರಳಿದಾಗ ಆ ಸಮಯದಲ್ಲಿ ವಧುವಿನ ವಯಸ್ಸು 36 ವರ್ಷ ಎಂದು ತಿಳಿಸಲಾಗಿತ್ತು. ಹೀಗೆ ಎಲ್ಲಾ ಮಾತುಕತೆ ನಡೆದ ಬಳಿಕ ಮದುವೆಗೆ ಎರಡೂ ಕುಟುಂಬವೂ ಒಪ್ಪಿಗೆ ನೀಡಿತು, ನಂತರ 2014ರಲ್ಲಿ ಭದ್ರಾವತಿಯ ಚರ್ಚ್ ಒಂದರಲ್ಲಿ ವಿವಾಹ ಕೂಡ ನೆರವೇರಿತು.
ಮದುವೆ ನಂತರ ದಂಪತಿ ನಡುವೆ ಸರಿ ಬರದಿದ್ದಾಗ ಕ್ರಮೇಣ ಕೆಲ ಸತ್ಯಗಳು ಹೊರಬೀಳಲು ಆರಂಭಿಸಿದವು. ವೈದ್ಯಕೀಯ ಪರೀಕ್ಷೆಯಲ್ಲೂ ಪತ್ನಿಗೆ ಇರುವ ಹಲವು ಕಾಯಿಲೆಗಳ ಬಗ್ಗೆ ಗೊತ್ತಾಗಿದೆ.
ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದ ಪತ್ನಿ
ಪತಿ, ಪತ್ನಿಯ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದಾಗ, ಮಡದಿ ದೀರ್ಘಕಾಲದವರೆಗೆ ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೇ ಮದುವೆ ವೇಳೆ ಆಕೆಯ ವಯಸ್ಸು 36 ಆಗಿರಲಿಲ್ಲ 41 ವರ್ಷ ಆಗಿತ್ತು ಎಂಬ ಸತ್ಯ ಕೂಡ ಹೊರಬಿದ್ದಿತ್ತು. ಈ ಎಲ್ಲಾ ವಿಚಾರಗಳನ್ನು ವರನಿಂದ ಮುಚ್ಚಿಟ್ಟು ಮದುವೆ ಮಾಡಲಾಗಿತ್ತು.
ಪತಿಗಿಂತ 4 ವರ್ಷ ದೊಡ್ಡವಳು
ಪತ್ನಿಯು, ಮೇಲ್ಮನವಿದಾರ ಪತಿಗಿಂತ 4 ವರ್ಷ ದೊಡ್ಡವಳಾಗಿದ್ದು, ವಂಚನೆ, ತಪ್ಪು ನಿರೂಪಣೆ ಮತ್ತು ವಸ್ತು ಸಂಗತಿಗಳನ್ನು ಮರೆಮಾಚುವ ಮೂಲಕ ಮದುವೆ ಮಾಡಲಾಗಿದೆ ಎಂದು ಪತಿ ಆರೋಪಿಸಿದ್ದನು.
ಹೀಗೆ ಮೇಲ್ಮನವಿದಾರ ಪತಿ ಪ್ರತಿವಾದಿ (ಪತ್ನಿ)ಯ ವಯಸ್ಸು ಮತ್ತು ಆರೋಗ್ಯ ಸಮಸ್ಯೆಗಳ ಭೌತಿಕ ಸಂಗತಿಗಳನ್ನು ಮರೆಮಾಚುವ ಮೂಲಕ ಮದುವೆ ಮಾಡಿದ್ದಾರೆ. ಪ್ರತಿವಾದಿ ಮತ್ತು ಅವರ ಕುಟುಂಬ ಸದಸ್ಯರ ಕೃತ್ಯವು ವಂಚನೆಯಾಗಿದೆ ಎಂದು ಆರೋಪಿಸಿ ಪತಿ ಕೋರ್ಟ್ ಮೆಟ್ಟಿಲೇರಿದ್ದರು.
ಕೋರ್ಟ್ ಹೇಳಿದ್ದೇನು?
ಪತಿಯ ಅರ್ಜಿ ಮತ್ತು ಆರೋಪಗಳನ್ನು, ದಾಖಲೆಗಳನ್ನು ಪರಿಶೀಲಿಸಿದ ರಾಜ್ಯ ಹೈಕೋರ್ಟ್ ಪೀಠವು ಪತ್ನಿ ವಯಸ್ಸಿಗೆ ಸಂಬಂಧಿಸಿದಂತೆ ಮತ್ತು ಕಾಯಿಲೆಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಮರೆಮಾಚುವ ಮೂಲಕ ಪತಿಗೆ ವಂಚಿಸಿದ್ದಾರೆ ಎಂದು ಮೇಲ್ಮನವಿದಾರ ಮತ್ತು ಪ್ರತಿವಾದಿಯ ವಿವಾಹವನ್ನು ಶೂನ್ಯ ಮತ್ತು ಅನೂರ್ಜಿತ ಎಂದು ನಿರ್ಣಯಿಸಿದೆ.
ಇದನ್ನೂ ಓದಿ: Karnataka High Court: 3 ದಿನಕ್ಕೆ ಇಳಿಕೆಯಾದ 2 ವರ್ಷದ ಶಿಕ್ಷೆ; ಕರುಣೆ ತೋರಿದ ಹೈಕೋರ್ಟ್
"ಪ್ರತಿವಾದಿ ಪತ್ನಿ (RW1) ತನ್ನ ಪರೀಕ್ಷೆಯಲ್ಲಿ ಮದುವೆಯ ಪ್ರಸ್ತಾಪದ ಸಮಯದಲ್ಲಿ ತನಗೆ 36 ವರ್ಷ ಆಗಿರಲಿಲ್ಲ 41 ವರ್ಷ ವಯಸ್ಸಾಗಿತ್ತು ಎಂದು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾಳೆ.
"ನಮ್ಮ ದೃಷ್ಟಿಯಲ್ಲಿ, ಕುಟುಂಬ ನ್ಯಾಯಾಲಯವು ದಾಖಲಾತಿ ಮತ್ತು ಸಾಕ್ಷ್ಯವನ್ನು ಪರಿಶೀಲಿಸುವಲ್ಲಿ ತಪ್ಪಾಗಿದೆ. ಭಾರತೀಯ ವಿಚ್ಛೇದನ ಕಾಯಿದೆಯ ಸೆಕ್ಷನ್ 18 ಪತಿ ಅಥವಾ ಹೆಂಡತಿಗೆ ಜಿಲ್ಲಾ ನ್ಯಾಯಾಲಯ ಅಥವಾ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಲು ಅನುವು ಮಾಡಿಕೊಡುತ್ತದೆ.
ಎಲ್ಲಾ ಹೇಳಿಕೆ, ದಾಖಲೆ ಪರಿಶೀಲಿಸಿ ನ್ಯಾಯಾಲಯವು, 01.05.2014 ರಂದು ನಡೆದ ದಂಪತಿಗಳ ವಿವಾಹವನ್ನು ಅನೂರ್ಜಿತ" ಎಂದು ಘೋಷಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ