ಡಿಕೆಶಿಗೆ ಮತ್ತೆ ಸಂಕಷ್ಟ; ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಇ.ಡಿ. ತನಿಖೆಗಿಲ್ಲ ತಡೆ

ಹೈಕೋರ್ಟ್​ ಏಕಸದಸ್ಯ ಪೀಠ ನೀಡಿರುವ ಆದೇಶವನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್​, ಸುಪ್ರೀಂಕೋರ್ಟ್​ ಮೆಟ್ಟಿಲೇರಬಹುದು. ಡಿಕೆಶಿ ಸುಪ್ರೀಂಕೋರ್ಟ್​ಗೆ ಹೋಗುವ ಮುನ್ನ ಇಡಿ ನೊಟೀಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಆಗ ಇಡಿ ಮುಂದೆ ಡಿಕೆಶಿ ವಿಚಾರಣೆಗೆ ಹಾಜರಾಗಲೇಬೇಕಿದೆ. 

news18-kannada
Updated:August 29, 2019, 4:21 PM IST
ಡಿಕೆಶಿಗೆ ಮತ್ತೆ ಸಂಕಷ್ಟ; ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಇ.ಡಿ. ತನಿಖೆಗಿಲ್ಲ ತಡೆ
ಡಿ.ಕೆ.ಶಿವಕುಮಾರ್
  • Share this:
ಬೆಂಗಳೂರು: ದೆಹಲಿ ನಿವಾಸದಲ್ಲಿ ಸಿಕ್ಕ ಅಕ್ರಮ ಹಣ ಸಂಬಂಧ ಇ.ಡಿ. ನೀಡಿರುವ ಸಮನ್ಸ್​ ರದ್ದು ಮಾಡುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ಹೈಕೋರ್ಟ್​ ಇಂದು ರದ್ದು ಮಾಡಿದೆ.

ಸಮನ್ಸ್​ ರದ್ದು ಕೋರಿ ಡಿ.ಕೆ.ಶಿವಕುಮಾರ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಏಕಸದಸ್ಯ ಪೀಠ, 7 ಕೋಟಿಗೂ ಅಧಿಕ ಹಣ ಸಿಕ್ಕಿದೆ ಎಂಬ ಅಂಶ ಇದೆ. ಇ.ಡಿ. ಸಮನ್ಸ್​ ಸರಿಯಾಗಿದೆ. ಹೀಗಾಗಿ ಈ ಪ್ರಕರಣ ಇ.ಡಿ. ವಿಚಾರಣೆ ಅರ್ಹವಾಗಿದೆ ಎಂದು ಹೇಳಿ, ಡಿಕೆಶಿ ರಿಟ್​ ಅರ್ಜಿಯನ್ನು ವಜಾಗೊಳಿಸಿತು.

ಹೈಕೋರ್ಟ್​ ಏಕಸದಸ್ಯ ಪೀಠ ನೀಡಿರುವ ಆದೇಶವನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್​, ಸುಪ್ರೀಂಕೋರ್ಟ್​ ಮೆಟ್ಟಿಲೇರಬಹುದು. ಡಿಕೆಶಿ ಸುಪ್ರೀಂಕೋರ್ಟ್​ಗೆ ಹೋಗುವ ಮುನ್ನ ಇಡಿ ನೊಟೀಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಆಗ ಇಡಿ ಮುಂದೆ ಡಿಕೆಶಿ ವಿಚಾರಣೆಗೆ ಹಾಜರಾಗಲೇಬೇಕಿದೆ.

ಡಿಕೆಶಿ ಮುಂದೇನು ಮಾಡಬಹುದು?

ಡಿಕೆಶಿ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್ ಆದೇಶ ಪ್ರತಿಯನ್ನು ಇಂದು ಸಂಜೆ ಅಥವಾ ನಾಳೆ ಡಿಕೆಶಿ ಪರ ವಕೀಲರು ಪಡೆದುಕೊಂಡು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ನಂತರ ಹೈಕೋರ್ಟ್​ ಆದೇಶ ಪ್ರಶ್ನಿಸಿ, ಸುಪ್ರೀಂಕೋರ್ಟ್​ ಮೆಟ್ಟಿಲೇರುತ್ತಾರೆ. ಡಿಕೆಶಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದರೂ ವಿಚಾರಣೆಗೆ ಬರಲು ಒಂದು ವಾರವಾದರೂ ಬೇಕಾಗುತ್ತದೆ. ಈ ವೇಳೆಗೆ ಇಡಿ ಅಧಿಕಾರಿಗಳ ಸಮನ್ಸ್​ಗೆ ಡಿಕೆಶಿ ಉತ್ತರ ನೀಡಲೇಬೇಕಾಗುತ್ತದೆ. ಇಡಿ ವಿಚಾರಣೆಗೆ ಹಾಜರಾಗಲು ತಮ್ಮ ವಕೀಲರ ಮೂಲಕ ಡಿಕೆಶಿ ಕಾಲಾವಕಾಶ ಕೇಳುವ ಸಾಧ್ಯತೆಯೂ ಇದೆ. ಅದಕ್ಕೆ ಇಡಿ ಅವಕಾಶ ನೀಡಿದಿದ್ದರೆ ಡಿಕೆಶಿ ಇ.ಡಿ.ಸಮನ್ಸ್​ಗೆ ಉತ್ತರ ನೀಡಬೇಕಾಗುತ್ತದೆ. ಒಂದು ವೇಳೆ ನೀಡದಿದ್ದರೆ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆಯಬಹುದು.

ಇದನ್ನು ಓದಿ: ಡಿಕೆಶಿಗೆ ಮತ್ತೆ ಐಟಿ ಸಂಕಷ್ಟ; ಬಿಎಸ್​ವೈ ವಿರುದ್ಧ ಬಿಡುಗಡೆಯಾದ ಡೈರಿ ನಕಲಿ ಎಂದ ಇಲಾಖೆಯ ಡಿಜಿ ಬಾಲಕೃಷ್ಣನ್​

ಡಿಕೆಶಿ ಅರ್ಜಿ ವಜಾಗೊಂಡ ಬಳಿಕ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್, ನ್ಯಾಯಾಲಯದ ಆದೇಶ, ನಿರ್ದೇಶನದ ಬಗ್ಗೆ ಮಾತನಾಡಲ್ಲ. ಆದರೆ ಕೇಂದ್ರ ಸರ್ಕಾರ ಸಿಬಿಐ ,ಇಡಿ, ಐಟಿ ಸೇರಿ ಎಲ್ಲ‌ ಸಂಸ್ಥೆಗಳನ್ನ‌ ಬಳಸಿಕೊಂಡು ಪ್ರಭಾವಿ ನಾಯಕರನ್ನು ಹೆದರಿಸೋ ಕೆಲಸ ಮಾಡುತ್ತಿದೆ. ಇದು ಸರಿಯಲ್ಲ. ಡಿಕೆ ಶಿವಕುಮಾರ್ ಕಾನೂನು ರೀತಿಯಲ್ಲಿ ಹೋರಾಟ ಮಾಡ್ತಾರೆ ಎಂದು ಹೇಳಿದ್ದಾರೆ. 

First published: August 29, 2019, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading