• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • High Court: ಉತ್ಸವಗಳಿಗೆ ಕೋಟಿಗಟ್ಟಲೆ ಖರ್ಚು ಮಾಡ್ತೀರಿ, ಮಕ್ಕಳ ಯೂನಿಫಾರ್ಮ್‌ಗೆ ಹಣ ಇಲ್ವೇ? ಸರ್ಕಾರಕ್ಕೆ ಹೈಕೋರ್ಟ್ ಕ್ಲಾಸ್‌

High Court: ಉತ್ಸವಗಳಿಗೆ ಕೋಟಿಗಟ್ಟಲೆ ಖರ್ಚು ಮಾಡ್ತೀರಿ, ಮಕ್ಕಳ ಯೂನಿಫಾರ್ಮ್‌ಗೆ ಹಣ ಇಲ್ವೇ? ಸರ್ಕಾರಕ್ಕೆ ಹೈಕೋರ್ಟ್ ಕ್ಲಾಸ್‌

ಕರ್ನಾಟಕ ಹೈಕೋರ್ಟ್‌

ಕರ್ನಾಟಕ ಹೈಕೋರ್ಟ್‌

ಸರ್ಕಾರಿ ಶಾಲಾ ಮಕ್ಕಳಿಗೆ ಯೂನಿಫಾರ್ಮ್ ವಿತರಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿಯ ಕುರಿತು ಕಿಡಿಕಾರಿದ ನ್ಯಾಯಾಲಯ, ನೀವು ಉತ್ಸವಗಳನ್ನು ನಡೆಸಲು ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತೀರಿ. ಆದರೆ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಲು ನಿಮ್ಮಲ್ಲಿ ಹಣವಿಲ್ಲ. ಸರ್ಕಾರಕ್ಕೆ ನಾಚಿಕೆ ಆಗುವುದಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿತು

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Bangalore, India
 • Share this:

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ (Govt School Students) ಕೇವಲ ಒಂದು ಜೊತೆ ಸಮವಸ್ತ್ರ (Uniform) ಮತ್ತು ಶೂ ವಿತರಣೆ ಮಾಡಿರುವ ರಾಜ್ಯ ಸರ್ಕಾರದ (Karnataka Government) ಕ್ರಮ ಖಂಡಿಸಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿರುವ ಹೈಕೋರ್ಟ್‌ (Karnataka high court) ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಕಟುವಾಗಿ ಟೀಕಿಸಿದೆ.


ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ಮತ್ತು ಒಂದು ಜೊತೆ ಶೂ ಹಾಗೂ 2 ಜೊತೆ ಸಾಕ್ಸ್‌ ನೀಡಬೇಕೆಂದು 2018ರ ಆಗಸ್ಟ್‌ ತಿಂಗಳಲ್ಲಿ ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶ ಪಾಲನೆ ಆಗಿಲ್ಲವೆಂದು ಆರೋಪಿಸಿ ಕೊಪ್ಪಳದ ಮಾಸ್ಟರ್‌ ಮಂಜುನಾಥ್ ಎಂಬುವವರು ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ಕಾರ್ಯ ವೈಖರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ತರಾಟೆಗೆ ತೆಗೆದುಕೊಂಡಿತು.


ಇದನ್ನೂ ಓದಿ: Hindu Marriage Act: ದುಡಿಯಲು ಸಶಕ್ತನಾದ ಪತಿ ಪತ್ನಿಯಿಂದ ಜೀವನಾಂಶ ಕೇಳುವಂತಿಲ್ಲ: ಹೈಕೋರ್ಟ್ ಆದೇಶ


ನ್ಯಾಯಮೂರ್ತಿ ಬಿ ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿದಾಗ ಸರ್ಕಾರ ಸಲ್ಲಿಸಿದ್ದ ಪ್ರಮಾಣ ಪತ್ರದ ಪ್ರಕಾರ 2019-20 ಮತ್ತು 20-21ನೇ ಸಾಲಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ಕೊಟ್ಟಿದ್ದು ಬಿಟ್ಟರೆ, ಎರಡನೇ ಜೊತೆ ಸಮವಸ್ತ್ರ ಖರೀದಿಗೆ ಶಾಲಾ ಮುಖ್ಯಸ್ಥರ ಎಸ್‌ಡಿಎಂಸಿ ಖಾತೆಗೆ ಹಣ ವರ್ಗಾಯಿಸಿರುವ ವಿಚಾರ ಬಹಿರಂಗವಾಯಿತು.


ಈ ವೇಳೆ ಸಿಟ್ಟಾದ ನ್ಯಾ.ಬಿ ವೀರಪ್ಪ ಅವರು, ಸರ್ಕಾರ 2 ಜೊತೆ ಸಮವಸ್ತ್ರಕ್ಕೆ ಹಣ ಕಳುಹಿಸಿರುವುದಾಗಿ ಹೇಳಿದೆ. ಆದರೆ ಇಲ್ಲಿ ಒಂದು ಜೊತೆ ಸಮವಸ್ತ್ರಕ್ಕೆ ನೀಡಿದ ರಿಪೋರ್ಟ್ ಮಾತ್ರ ಇದೆ. ಶಾಲಾ ಮಕ್ಕಳಿಗೆ ಸಮವಸ್ತ್ರದ ಜೊತೆಗೆ ಶೂ ಮತ್ತು ಸಾಕ್ಸ್ ಸಿಕ್ಕಿದೆಯೇ ಅನ್ನೋದು ದೇವರಿಗೇ ಗೊತ್ತು. ಸಮರ್ಪಕ ರೀತಿಯಲ್ಲಿ ಸಮವಸ್ತ್ರ ವಿತರಣೆ ಯಾಕೆ ಮಾಡಿಲ್ಲ? ಇದರ ವಿತರಣೆಯ ಜವಾಬ್ದಾರಿ ಹೊತ್ತಿದ್ದ ಅಧಿಕಾರಿ ಯಾರು ತಿಳಿಸಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡ್ತೀವಿ ಎಂದು ಕಿಡಿಕಾರಿದರು.


'ಉತ್ಸವಕ್ಕೆ ಕೋಟ್ಯಂತರ ಖರ್ಚು ಮಾಡ್ತೀರಿ'


ರಾಜ್ಯ ಸರ್ಕಾರದ ಬೇಜವಾಬ್ದಾರಿಯ ವಿರುದ್ಧವೂ ಕಿಡಿಕಾರಿದ ನ್ಯಾಯಾಲಯ, ನೀವು ಉತ್ಸವಗಳನ್ನು ನಡೆಸಲು ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತೀರಿ. ಆದರೆ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಲು ನಿಮ್ಮಲ್ಲಿ ಹಣವಿಲ್ಲ. ಸರ್ಕಾರಕ್ಕೆ ನಾಚಿಕೆ ಆಗುವುದಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿತು. ಅಲ್ಲದೇ, ಅಧಿಕಾರಿಗಳಿಗೆ ಮಾನ, ಮರ್ಯಾದೆ, ಆತ್ಮಸಾಕ್ಷಿ ಅನ್ನೋದು ಇಲ್ಲ. ಅವರು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಬಗ್ಗೆ ಮಾನವೀಯತೆ ಹೊಂದಿಲ್ಲ. ಸರ್ಕಾರ ಇನ್ನಾದರೂ ಸಮವಸ್ತ್ರ ನೀಡಬೇಕು ಎಂದು ಆಗ್ರಹಿಸಿತು.


ಇದನ್ನೂ ಓದಿ: Traffic Rules Break: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಬ್ರಿಟನ್‌ ದಳಪತಿ, ಖಡಕ್ ತೀರ್ಪು ನೀಡಿದ ನ್ಯಾಯಾಲಯ


ಅಲ್ಲದೇ, ಅಧಿಕಾರಿಗಳಿಗೆ ಮಾನ ಮರ್ಯಾದೆ, ಆತ್ಮಸಾಕ್ಷಿ ಅನ್ನೋದು ಇದ್ದರೆ ಕೂಡಲೇ ಮಕ್ಕಳಿಗೆ ಯೂನಿಫಾರ್ಮ್, ಶೂ ಮತ್ತು ಸಾಕ್ಸ್ ವಿತರಿಸಬೇಕು. ನಿಮಗೆ ಎರಡು ವಾರ ಕಾಲವಕಾಶ ನೀಡ್ತೀವಿ. ಅಷ್ಟರಲ್ಲಿ ಹೈಕೋರ್ಟ್ ಆದೇಶ ಕಟ್ಟುನಿಟ್ಟಾಗಿ ಪಾಲನೆ ಮಾಡದೇ ಇದ್ದಲ್ಲಿ ಸಂಬಂಧಿತ ಅಧಿಕಾರಿಗಳನ್ನು ಕೋರ್ಟ್‌ ಕಟಕಟೆಯಲ್ಲಿ ನಿಲ್ಲಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
'ನಿಮಗೆ ಆಗಲ್ಲ ಎಂದಾದರೆ ಸಾಯಿಸಿಬಿಡಿ'


ಮಕ್ಕಳಿಗೆ ಯೂನಿಫಾರ್ಮ್ ಇಲ್ಲದಿದ್ದರೆ ಅವರಿಗೆ ಬೇಸರ ಆಗುತ್ತದೆ ಅನ್ನೋದು ಅಧಿಕಾರಿಗಳಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ನ್ಯಾಯಾಲಯ, ಯೂನಿಫಾರ್ಮ್ ಕೊಡುವುದಾದರೆ ಸರಿಯಾದ ರೀತಿಯಲ್ಲಿ ಕೊಡಿ. ನಿಮಗೆ ಆಗೋಲ್ಲ ಎಂದಾದರೆ ಬೇಡ, ಪೂರ್ತಿಯಾಗಿ ಸಾಯಿಸಿಬಿಡಿ. ಅರ್ಧಂಬರ್ಧ ಸಾಯಿಸಬೇಡಿ. ಅಧಿಕಾರಿಗಳಿಗೆ ಸರ್ಕಾರಿ ಶಾಲಾ ಮಕ್ಕಳ ಬಗ್ಗೆ ಮಾನವೀಯತೆ ಅನ್ನೋದೇ ಇಲ್ಲ. ಅದೇ ಎಲ್ಲ ಸಮಸ್ಯೆಗೆ ಮೂಲ. ಯಾಕೆಂದರೆ ಅವರ ಮಕ್ಕಳು ಖಾಸಗಿ ಶಾಲೆಗೆ ಕಾರ್‌ನಲ್ಲಿ ಹೋಗಿ ಬರ್ತಾರೆ. ಸರ್ಕಾರಿ ಶಾಲೆಗೆ ಹೋಗೋದಿಲ್ಲ. ಮಕ್ಕಳ ವಿಚಾರದಲ್ಲಿ ತಾರತಮ್ಯ ಧೋರಣೆ ಸಹಿಸುವುದಿಲ್ಲ ಎಂದು ನ್ಯಾಯಾಲಯ ಖಾರವಾಗಿ ಹೇಳಿದೆ.

Published by:Avinash K
First published: