ಬೆಂಗಳೂರು(ಫೆ.18): ಬೆಂಗಳೂರಿನಲ್ಲಿ ಇನ್ನೂ ಮರ ಗಣತಿ ಆರಂಭಿಸದ ಹಿನ್ನೆಲೆ, ಬಿಬಿಎಂಪಿ ಅಧಿಕಾರಿಗಳಿಗೆ ಹೈಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ. 'ಮರ ಸಂರಕ್ಷಣಾ ಕಾಯ್ದೆ' ಜಾರಿಯಾಗಿ 44 ವರ್ಷಗಳು ಕಳೆದಿವೆ. ಮರ ಗಣತಿ ಮಾಡುವಂತೆ 2019ರ ಆಗಸ್ಟ್ 28ರಂದು ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಈವರೆಗೂ ಒಂದೇ ಒಂದು ಮರ ಗಣತಿ ಮಾಡಿಲ್ಲ," ಎಂದು ಹೈಕೋರ್ಟ್ ವಿಭಾಗೀಯ ಪೀಠ ಬಿಬಿಎಂಪಿ ಅರಣ್ಯ ವಿಭಾಗ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಾಂಗ ನಿಂದನೆ ಮಾಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ಕೋರ್ಟ್ ನೀಡಿದೆ. ಒಂದು ವಾರದಲ್ಲಿ ಪ್ರಾಧಿಕಾರದಲ್ಲಿರುವ ಸದಸ್ಯರ ಹೆಸರನ್ನು ಕೋರ್ಟ್ಗೆ ಸಲ್ಲಿಸಬೇಕು ಎಂದು ಗಡುವು ನೀಡಿದೆ. ನಂತರ ಸದಸ್ಯರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿಜೆ ನೇತೃತ್ವದ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. ಬಳಿಕ ಪ್ರಕರಣದ ವಿಚಾರಣೆಯನ್ನು ಮಾರ್ಚ್ 4ಕ್ಕೆ ಮುಂದೂಡಲಾಯಿತು.
ಮುಂಬೈ ದಾಳಿ ನಂತರ ಕಸಬ್ ನಕಲಿ ಹಿಂದು ವ್ಯಕ್ತಿಯಾಗಿ ಸಾಯಲು ನಡೆದಿತ್ತು ಪ್ಲಾನ್; ಸತ್ಯ ಬಿಚ್ಚಿಟ್ಟ ಮಾಜಿ ಕಮೀಷನರ್
ಈ ಮಧ್ಯೆ ಬಿಎಂಆರ್ಸಿಎಲ್ ಪರ ವಕೀಲರು ವಾದ ಮಂಡಿಸಿದರು. ಮೆಟ್ರೋ ರೈಲು ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ನಗರದಲ್ಲಿ ಮರಗಳನ್ನು ಕತ್ತರಿಸಲು ತಜ್ಞರ ವಿಶೇಷ ಸಮಿತಿ ಶಿಫಾರಸು ಮಾಡಿದೆ. ಆದರೆ, ಮರಗಳನ್ನು ಕತ್ತರಿಸಬಾರದು ಎಂದು 2020ರ ಜನವರಿಯಲ್ಲಿ ಹೈಕೋರ್ಟ್ ಆದೇಶ ನೀಡಿದೆ. ಇದರಿಂದ ಮೆಟ್ರೋ ರೈಲು ಮಾರ್ಗ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ. ಈಗಾಗಲೇ ಕಾಮಗಾರಿ ವೆಚ್ಚ 52 ಕೋಟಿ ರೂಪಾಯಿ ಹೆಚ್ಚಾಗಿದೆ. ಆದ್ದರಿಂದ ಮರ ಕತ್ತರಿಸಿದಂತೆ ಮೆಟ್ರೋ ನಿಗಮಕ್ಕೆ ಸೂಚಿಸಿರುವ ಮಧ್ಯಂತರ ಆದೇಶವನ್ನು ತೆರವುಗೊಳಿಸಬೇಕು ಎಂದು ಬಿಎಂಆರ್ಸಿಎಲ್ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದರು.
ವಕೀಲರ ಮನವಿ ಪರಿಗಣಿಸಿದ ನ್ಯಾಯಾಲಯವು, ವಿಶೇಷ ಸಮಿತಿ ಶಿಫಾರಸಿನ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮಧ್ಯಂತರ ಆದೇಶ ತಿದ್ದುಪಡಿಗೆ ಕೋರಿ ಸೂಕ್ತ ಅರ್ಜಿ ಸಲ್ಲಿಸಿ ಎಂದು ಬಿಎಂಆರ್ ಸಿ ಎಲ್ ಗೆ ಸೂಚನೆ ನೀಡಿತು.
ಎಲ್‍ಪಿಜಿ ದರ ಏರಿಕೆ: ಎಲ್ಲಿದ್ದೀಯಕ್ಕಾ ಸ್ಮೃತಿ ಇರಾನಿ? ಎಂದು ಆಪ್ ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ
ಮರ ಕಡಿಯದಂತೆ ಆದೇಶ ಪ್ರಕರಣದ ಹಿನ್ನೆಲೆ:
ಮೆಟ್ರೋ ರೈಲು ಮಾರ್ಗ ನಿರ್ಮಾಣ ಸೇರಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ನೂರಾರು ಮರಗಳನ್ನು ಕತ್ತರಿಸಲಾಗುತ್ತಿದೆ ಎಂದು ಆರೋಪಿಸಿ ದತ್ತಾತ್ರೇಯ ಟಿ.ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮರ ಕಡಿಯದಂತೆ ಜನವರಿಯಲ್ಲಿ ಆದೇಶ ನೀಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ