HOME » NEWS » State » KARNATAKA HIGH COURT SAYS MARRYING PERSON OF CHOICE A FUNDAMENTAL RIGHT SESR

ಲವ್​ ಜಿಹಾದ್​ ಚರ್ಚೆ ನಡುವೆ ಇಷ್ಟಪಟ್ಟವರನ್ನು ಮದುವೆಯಾಗುವುದು ಮೂಲಭೂತ ಹಕ್ಕು ಎಂದ ಹೈ ಕೋರ್ಟ್​​

ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧದ ಸ್ವಾತಂತ್ರ್ಯವನ್ನು ಧರ್ಮ ಅಥವಾ ಜಾತಿಯ ಹೆಸರಿನಲ್ಲಿ ಅತಿಕ್ರಮಣ ಮಾಡಲು ಸಾಧ್ಯವಿಲ್ಲ-ಹೈ ಕೋರ್ಟ್​​

news18-kannada
Updated:December 2, 2020, 4:01 PM IST
ಲವ್​ ಜಿಹಾದ್​ ಚರ್ಚೆ ನಡುವೆ ಇಷ್ಟಪಟ್ಟವರನ್ನು ಮದುವೆಯಾಗುವುದು ಮೂಲಭೂತ ಹಕ್ಕು ಎಂದ ಹೈ ಕೋರ್ಟ್​​
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಡಿ.2):  ಮದುವೆಯ ಉದ್ದೇಶಕ್ಕಾಗಿ ಮತಾಂತರಗೊಳ್ಳುವ ಲವ್​ ಜಿಹಾದ್​ ವಿರುದ್ಧ ಕಾನೂನು ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಾರಿಯ ಚಳಿಗಾಲ ಅಧಿವೇಶನದಲ್ಲಿ ಈ ವಿಷಯ ಕುರಿತು ಮಸೂದೆ ಮಂಡಿಸಲು ಸಿದ್ದತೆ ಕೂಡ ನಡೆದಿದೆ. ರಾಜ್ಯದಲ್ಲಿ ಲವ್​ ಜಿಹಾದ್​ ವಿರುದ್ಧ  ಬಹುಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ಮಹತ್ವದ ಆದೇಶ ಹೊರಹಾಕಿದೆ. ಒಬ್ಬ ವ್ಯಕ್ತಿಯು ತನ್ನ ಇಷ್ಟ ಪಟ್ಟ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಹೊಂದಿರುತ್ತಾನೆ ಎಂದು ತಿಳಿಸಿದೆ. ಪ್ರಾಪ್ತ ವಯಸ್ಸಿನ ಬಳಿಕ ಪುರಷ ಅಥವಾ ಮಹಿಳೆ ತನ್ನ ಇಷ್ಟ ಬಂದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಹೊಂದಿರುತ್ತಾರೆ. ಇದನ್ನು ಸಂವಿಧಾನದ ಮೂಲಭೂತ ಹಕ್ಕಿನಲ್ಲಿಯೇ ತಿಳಿಸಿದೆ. ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧದ ಸ್ವಾತಂತ್ರ್ಯವನ್ನು ಧರ್ಮ ಅಥವಾ ಜಾತಿಯ ಹೆಸರಿನಲ್ಲಿ ಅತಿಕ್ರಮಣ ಮಾಡಲು ಸಾಧ್ಯವಿಲ್ಲ ಎಂದರು. ಇತ್ತೀಚೆಗೆ ಅಲಹಾಬಾದ್​ ಹಾಗೂ ದೆಹಲಿ ಹೈ ಕೋರ್ಟ್​ಗಳು ಇದನ್ನೇ ತಿಳಿಸಿದ್ದವು. ಈಗ ಕರ್ನಾಟಕ ಹೈ ಕೋರ್ಟ್​ನ ನ್ಯಾ. ಎಸ್​ ಸುಜಾತಾ ಮತ್ತು ಸಚಿನ್​ ಶಂಕರ್​ ಮಗದಮ್​ ಅವರನ್ನೊಳಗೊಂಡ ವಿಭಾಗೀಯ ಪೀಠ ಅದನ್ನೆ ಪ್ರತಿಧ್ವನಿಸಿದೆ.

ವಜೀದ್​ ಖಾನ್​ ಎಂಬುವವರು ಸಲ್ಲಿಸಿದ್ದ ಹೇವಿಯಸ್​ ಕಾರ್ಪಸ್​ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ಸಾಫ್ಟ್​ವೇರ್​ ಉದ್ಯೋಗಿಗಳಾಗಿದ್ದ ರಮ್ಯಾ ಮತ್ತು ವಜೀದ್​ ಖಾನ್​ ಅಂತರ ಧರ್ಮಿಯ ಮದುವೆಯಾಗಲು ಇಚ್ಛಿಸಿದ್ದಾರೆ. ಆದರೆ ಈ ಮದುವೆ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾಗಿದೆ. ಈ ವೇಳೆ ವಿವಾದವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿ ನಿರ್ಮಿಸಲಾಗಿರುವ ಕುಟುಂಬ ವಿವಾದ ಪರಿಹಾರ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಲು ನ.27ರಂದು ದೂರು ದಾಖಲಿಸಿದ್ದಾರೆ. ಕೋರ್ಟ್​ ಈ ಪ್ರಕರಣ ಅರ್ಜಿ ವಿಚಾರಣೆ ನಡೆಸುವವರೆಗೂ ರಮ್ಯಾ ಮನೆ ತೊರೆದು ಮಹಿಳಾ ದಕ್ಷತಾ ಸಮಿತಿ ಆಶ್ರಯದಲ್ಲಿ ವಾಸಿಸುತ್ತಿದ್ದರು. ಇದೀಗ ಕೋರ್ಟ್​ ನಿರ್ದೇಶನದ ಮೇಲೆ ಅವರನ್ನು ಬಿಡುಗಡೆಗೊಳಿಸಲಾಗಿದೆ.

ಇದನ್ನು ಓದಿ: ಬೆಂಗಳೂರಲ್ಲಿ ರೈತರು, ಕನ್ನಡ ಹೋರಾಟಗಾರರ ಪ್ರತಿಭಟನೆ; ಕರ ಏರಿಕೆ ವಿರುದ್ಧ ಆಪ್ ಚಳವಳಿ

ಇನ್ನು ಈ ಕುರಿತು ಕೋರ್ಟ್​ ಮುಂದೆ ಹೇಳಿಕೆ ದಾಖಲಿಸಿರುವ ರಮ್ಯಾ, ತಮ್ಮ ಈ ಮದುವೆಗೆ ಮನೆಯವರಿಂದ ವಿರೋಧ ವ್ಯಕ್ತವಾಗಿದ್ದು, ಅವರು ನನ್ನ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತಿದ್ದಾರೆ ಎಂದಿದ್ದಾರೆ. ಇದೇ ವೇಳೆ ವಾಜೀದ್​ ಮನೆಯವರಿಂದ ಈ ಮದುವೆಗೆ ಸಮ್ಮತಿ ಸಿಕ್ಕಿದೆ. ಆದರೆ, ತಮ್ಮ ಮನೆಯವರಿಂದ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

ಆದರೆ, ಲವ್​ ಜಿಹಾದ್​ ಎಂಬುದು ಒಂದು ಪಿತೂರಿ. ಮದುವೆ ಹೆಸರಿನಲ್ಲಿ ಮಹಿಳೆಯ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದೆ. ಪ್ರೀತಿಯ ನೆಪದಲ್ಲಿ ಆಕೆಯನ್ನು ಧಾರ್ಮಿಕವಾಗಿ ಮತಾಂತರ ನಡೆಸುವ ಹುನ್ನಾರ ಎಂದು ಬಲಪಂಥೀಯ ನಾಯಕರು ಆರೋಪಿಸಿದ್ದಾರೆ. ಅಲ್ಲದೇ, ಮಹಿಳೆಯರ ಸ್ವಾತಂತ್ರ್ಯ, ಘನತೆ ಕಾಪಾಡುವ ಉದ್ದೇಶದಿಂದ ಈ ಲವ್​ ಜಿಹಾದ್​ ವಿರುದ್ಧ ಕಾನೂನು ತರಲು ಮುಂದಾಗಿರುವುದಾಗಿ ಸಿಎಂ ಬಿಎಸ್​ ಯಡಿಯೂರಪ್ಪ ಸೇರಿದಂತೆ ಅನೇಕ ಬಿಜೆಪಿ ನಾಯಕರು ತಿಳಿಸಿದ್ದರು.
Published by: Seema R
First published: December 2, 2020, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories