• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Step Mother: ಮಲತಾಯಿಗೆ ಮಲಮಕ್ಕಳಿಂದಲೂ ಜೀವನಾಂಶ ಕೇಳುವ ಹಕ್ಕಿದೆ: ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ

Step Mother: ಮಲತಾಯಿಗೆ ಮಲಮಕ್ಕಳಿಂದಲೂ ಜೀವನಾಂಶ ಕೇಳುವ ಹಕ್ಕಿದೆ: ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ

ಹೈಕೋರ್ಟ್‌

ಹೈಕೋರ್ಟ್‌

ಸಿಆರ್‌ಪಿಸಿ ಸೆಕ್ಷನ್‌ 125ರಡಿ ಮಲತಾಯಿ ಮಲ ಮಕ್ಕಳಿಂದ ಜೀವನಾಂಶ ಕೇಳುವ ವ್ಯಾಖ್ಯಾನದ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ ಹಿರಿಯ ನಾಗರಿಕರ ಕಾಯಿದೆ ಸೆಕ್ಷನ್‌ 9 (1)(2) ರಡಿ ಬರುವ ವ್ಯಾಖ್ಯಾನದಲ್ಲಿಪೋಷಕರು ಎಂದರೆ ಜೈವಿಕ ತಾಯಿ ಅಥವಾ ತಂದೆ ಅಥವಾ ಮಲ ತಂದೆ ಅಥವಾ ಮಲತಾಯಿ ಸೇರಿ ಅಯಾ ಪ್ರಕರಣದ ಅನುಸಾರ ಜೀವನಾಂಶವನ್ನು ಕೇಳಬಹುದಾಗಿದೆ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ.

ಮುಂದೆ ಓದಿ ...
 • Trending Desk
 • 4-MIN READ
 • Last Updated :
 • Bangalore, India
 • Share this:

ಬೆಂಗಳೂರು: ಮೃತ ಪತಿಗೆ ಆಸ್ತಿ ಇದೆ (Properties) ಎಂಬುದನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಸಾಕ್ಷಿ ಸಮೇತ ಸಾಬೀತುಪಡಿಸಿ ಮಲ ತಾಯಿ, ಮಲ ಮಕ್ಕಳಿಂದ ಜೀವನಾಂಶ ಕೇಳಬಹುದು ಎಂದು ಕರ್ನಾಟಕ ಹೈಕೋರ್ಟ್‌ (Karnataka High Court) ಆದೇಶ ನೀಡಿದೆ. ಮಲತಾಯಿ (Step Mother) ಮಲ ಮಕ್ಕಳಿಂದ ಜೀವನಾಂಶ ಪಡೆಯುವ ಸಂಬಂಧ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಆ ಮೂಲಕ ಮಲತಾಯಿ ಜೀವನಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಇದ್ದ ಗೊಂದಲಕ್ಕೆ ತೆರೆ ಎಳೆದಿದೆ.


ಕೌಟುಂಬಿಕ ನ್ಯಾಯಾಲಯ ಎರಡೂ ಪಕ್ಷಗಾರರ ಸಾಕ್ಷ್ಯವನ್ನು ದಾಖಲಿಸಬೇಕು ಮತ್ತು ಹೊಸದಾಗಿ ವಿಚಾರಣೆ ನಡೆಸಿ ದಾಖಲೆಗಳನ್ನು ಆಧರಿಸಿ ನಂತರ ತೀರ್ಮಾನಿಸಬೇಕು. ತೀರ್ಮಾನ ಕೈಗೊಳ್ಳುವಾಗ ಸುಪ್ರಿಂಕೋರ್ಟ್‌ ಅಪರಾಧ ದಂಡ ಸಂಹಿತೆ ಸೆಕ್ಷನ್‌ 125 ಮತ್ತು ಹಿರಿಯ ನಾಗರಿಕರ ಕಾಯಿದೆಯ ಅಂಶಗಳನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.


ಇದನ್ನೂ ಓದಿ: Education: ಪರೀಕ್ಷೆಯಲ್ಲಿ ಕನ್ನಡ ವಿಷಯ ಆಯ್ಕೆ ಮಾಡುವುದು ಕಡ್ಡಾಯವಲ್ಲ! 10ನೇ ತರಗತಿ ವಿದ್ಯಾರ್ಥಿಗೆ ರಿಲೀಫ್ ಕೊಟ್ಟ ಹೈಕೋರ್ಟ್


ಅರ್ಜಿದಾರರ ಅರ್ಜಿ ಅಂಗೀಕರಿಸಿದ ಹೈಕೋರ್ಟ್


ಮಲ ತಾಯಿಗೆ ಮಾಸಿಕ 25,000 ರೂಪಾಯಿ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿ ಮತ್ತು ಮಾರ್ಪಡಿಸಿ, ಖಲೀಲ್ ಉಲ್-ರೆಹಮಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ಏಕಸದಸ್ಯ ಪೀಠವು ಭಾಗಶಃ ಅಂಗೀಕರಿಸಿದೆ.


ಕೌಟುಂಬಿಕ ನ್ಯಾಯಾಲಯದ ತೀರ್ಪು ಸಮರ್ಥನೀಯವಲ್ಲ


ಜೀವನ ನಿರ್ವಹಣೆಗಾಗಿ ಕುಟುಂಬ ನ್ಯಾಯಾಲಯವು ರೂ 25,000 ವನ್ನು ಮಲತಾಯಿಗೆ ನೀಡಬೇಕು ಎಂದು ತೀರ್ಪು ನೀಡಿರುವ ಆದೇಶವು ಸರಿಯಾದುದಲ್ಲ ಹಾಗೂ ಗಂಡ ಸಾಕಷ್ಟು ಸ್ಥಿತಿವಂತರು ಮತ್ತು ಅವರಿಗೆ ಆದಾಯವಿದೆ ಎಂಬುದನ್ನು ತೋರಿಸುವ ಸಾಕ್ಷ್ಯಾಧಾರಗಳನ್ನು ಮಲತಾಯಿ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಬೇಕು ಎಂದು ತಿಳಿಸಿದೆ.


ವಿಚಾರಣಾ ನ್ಯಾಯಾಲಯದ ಪ್ರಕರಣವನ್ನು ಇತ್ಯರ್ಥಪಡಿಸುವವರೆಗೆ ಅರ್ಜಿದಾರರ ಮಲತಾಯಿ ತಿಂಗಳಿಗೆ ರೂ 10,000 ವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಆದೇಶವನ್ನು ನ್ಯಾಯಾಲಯ ಮಾರ್ಪಡಿಸಿದೆ.


ಇದನ್ನೂ ಓದಿ: Chicken Shop: ಚಿಕನ್‌ ಪ್ರಾಣಿಯೇ? ಕಸಾಯಿಖಾನೆಯಲ್ಲಿ ಕೋಳಿಯ ವಧೆ ಮಾಡಬೇಕು ಎಂದಿದ್ದಕ್ಕೆ ಗುಜರಾತ್ ಹೈಕೋರ್ಟ್ ಹೇಳಿದ್ದೇನು?


ವಿಷಯ ಇತ್ಯರ್ಥಗೊಳಿಸಲು ಕೌಟುಂಬಿಕ ನ್ಯಾಯಾಲಯಕ್ಕೆ ಆದೇಶ


ಸುಪ್ರೀಂ ಕೋರ್ಟ್‌ನ ತೀರ್ಪನ್ನು ಮುಂದಿಟ್ಟುಕೊಂಡು ಹಿರಿಯ ನಾಗರಿಕ ಕಾಯಿದೆ ಮತ್ತು Cr.P.C ಯ ಸೆಕ್ಷನ್ 125 ಅನ್ನು ಗಮನಿಸಿ, ಕಕ್ಷಿದಾರರ ಸಾಕ್ಷ್ಯವನ್ನು ದಾಖಲಿಸಲು, ಸಮಸ್ಯೆಯನ್ನು ನಿರ್ಧರಿಸಲು ಮತ್ತು ಈ ನ್ಯಾಯಾಲಯದ ಸಮನ್ವಯ ಪೀಠದ ತೀರ್ಪಿಗೆ ಅನುಸಾರವಾಗಿ ಕಾನೂನಿನ ಪ್ರಕಾರ ವಿಷಯವನ್ನು ಇತ್ಯರ್ಥಗೊಳಿಸಲು ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶಿಸಲಾಗಿದೆ. ಪ್ರತಿವಾದಿಗೆ ಮಾಸಿಕ ರೂ 25,000 ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.


ತನ್ನನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾಗಿ ಮಲತಾಯಿಯ ಹೇಳಿಕೆ


ಮೊದಲ ಪತ್ನಿ ಮರಣ ಹೊಂದಿದ ನಂತರ ಅರ್ಜಿದಾರರ ತಂದೆ ತನ್ನನ್ನು ಎರಡನೇ ವಿವಾಹವಾಗಿರುವುದಾಗಿ ಪ್ರತಿವಾದಿ ಮಲತಾಯಿಯು ಕೌಟುಂಬಿಕ ನ್ಯಾಯಾಲಯದ ಮುಂದೆ ಮನವಿ ಮಾಡಿದ್ದರು. ವಿವಾಹದ ಸಮಯದಲ್ಲಿ ಅರ್ಜಿದಾರರ ತಂದೆ ಚರ ಆಸ್ತಿಗಳನ್ನು ಹೊರತುಪಡಿಸಿ ಜಮೀನು ಆಸ್ತಿಯನ್ನು ಹೊಂದಿರುವುದಾಗಿ ಹಾಗೂ ಪ್ರತಿವಾದಿ ಮಲತಾಯಿಯನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಅದೂ ಅಲ್ಲದೆ ಆಕೆ ತಮ್ಮ ಪತಿಯ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರು.


ಜೀವನ ನಿರ್ವಹಣೆಗೆ ಬೇರೆ ಆದಾಯವಿಲ್ಲ


ಆಕೆಯ ಪತಿ ಮರಣ ಹೊಂದಿದ್ದು ಮೊಹಿದ್ದೀನ್ ಮುನಿರಿಯವರ ಮಕ್ಕಳು ಪ್ರಸ್ತುತ ಅರ್ಜಿದಾರರಾಗಿದ್ದಾರೆ. ಆಕೆ ಹಿರಿಯ ನಾಗರೀಕಳಾಗಿದ್ದು, ಅನಕ್ಷರಸ್ಥೆ ಹಾಗೂ ಉದ್ಯೋಗವಿಲ್ಲದ ಗೃಹಿಣಿಯಾಗಿದ್ದಾರೆ ಮತ್ತು ಯಾವುದೇ ಆದಾಯವನ್ನು ಆಕೆ ಹೊಂದಿಲ್ಲ. ಭಟ್ಕಳ್‌ನಲ್ಲಿರುವ ಬಾಡಿಗೆ ಮನೆಯಿಂದ ದೊರೆಯುವ ರೂ 4,000 ಹೊರತುಪಡಿಸಿ ಆಕೆಗೆ ಜೀವನ ನಿರ್ವಹಣೆಗೆ ಬೇರೆ ಯಾವುದೇ ಆದಾಯವಿಲ್ಲ ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ಮಲತಾಯಿ ತಿಳಿಸಿದ್ದಾರೆ.


ಅರ್ಜಿದಾರರು ತಿಳಿಸಿರುವ ಅಂಶಗಳೇನು?


ಅರ್ಜಿದಾರರ ಮಲತಾಯಿಯಾಗಿರುವುದರಿಂದ Cr.P.C ಯ ಸೆಕ್ಷನ್ 125 ಪ್ರತಿವಾದಿಗೆ ಅನ್ವಯವಾಗುವುದಿಲ್ಲ ಅಂತೆಯೇ ಜೀವನ ನಿರ್ವಹಣೆಗೆ ರೂ 25,000 ಪಾವತಿ ಮಾಡಲು ಆಕೆ Cr.P.C ಯ 125 ರ ಅಡಿಯಲ್ಲಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಮೊಹಿದ್ದೀನ್ ಮುನಿರಿಯವರ ಮಕ್ಕಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.


ಪಾಲಕರು ಮತ್ತು ಹಿರಿಯ ನಾಗರಿಕರ ವಿಶೇಷ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ 2007 ಮತ್ತು ನಿರ್ವಹಣೆಯ ಸೆಕ್ಷನ್ 9(2) ರ ಪ್ರಕಾರ ಪಾವತಿಸಬೇಕಾದ ಗರಿಷ್ಠ ಮೊತ್ತ ರೂ 10,000 ವಾಗಿದ್ದು ಇದಕ್ಕಾಗಿ ಪ್ರತಿವಾದಿಯು ತನ್ನ ಬವಣೆಗಳನ್ನು ತಿಳಿಸುವ ಮೂಲಕ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಂತೆಯೇ ಈ ಕಾಯ್ದೆಯು 2007 ರಲ್ಲಿ ಜಾರಿಗೆ ಬಂದಿದ್ದರಿಂದ ಆಕೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಬೇಕು ಎಂದು ಅರ್ಜಿದಾರರು ಮೊಕದ್ದಮೆಯಲ್ಲಿ ತಿಳಿಸಿದ್ದಾರೆ.

First published: