Hijab Hearing: ಹಿಜಾಬ್ ಪ್ರಕರಣದ ವಾದ-ಪ್ರತಿವಾದ ಮುಕ್ತಾಯ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ಹಕ್ಕನ್ನು ರಕ್ಷಿಸುವಂತೆ ಕೋರಿ ಹಾಗೂ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕೆ ಪ್ರವೇಶ ನಿರಾಕರಿಸಿದ ಸರ್ಕಾರಿ ಪಿಯು ಕಾಲೇಜಿನ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಲಾಗಿದೆ. 

ಕರ್ನಾಟಕ ಹೈಕೋರ್ಟ್​​

ಕರ್ನಾಟಕ ಹೈಕೋರ್ಟ್​​

  • Share this:
ಬೆಂಗಳೂರು: 11 ದಿನಗಳ ಕಾಲ ಹಿಜಾಬ್(Hijab) ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ (High Court of Karnataka) ನ್ಯಾಯಮೂರ್ತಿಗಳ ಪೀಠ ಇಂದು ವಾದ-ಪ್ರತಿವಾದಗಳನ್ನು ಮುಕ್ತಾಯಗೊಳಿಸಿ,  ತನ್ನ ತೀರ್ಪುನ್ನು ಕಾಯ್ದಿರಿಸಿದೆ. ಹೈಕೋರ್ಟ್ ನಿನ್ನೆಯೇ ಹಿಜಾಬ್ ಪ್ರಕರಣದ ವಕೀಲರಿಗೆ ಶುಕ್ರವಾರದೊಳಗೆ ತಮ್ಮ ವಾದವನ್ನು ಮುಕ್ತಾಯಗೊಳಿಸುವಂತೆ ಕೇಳಿಕೊಂಡಿದ್ದು, ಶೀಘ್ರದಲ್ಲೇ ಆದೇಶವನ್ನು ನೀಡುವುದಾಗಿ ಸೂಚಿಸಿತ್ತು. ತ್ರಿಸದಸ್ಯ ಪೀಠದ ಭಾಗವಾಗಿರುವ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಅವರು ಶುಕ್ರವಾರದೊಳಗೆ ವಾದಗಳನ್ನು ಪೂರ್ಣಗೊಳಿಸಬೇಕು ಎಂದು ವಕೀಲರಿಗೆ ತಿಳಿಸಿದ್ದರು. ಎರಡು ಮೂರು ದಿನಗಳೊಳಗೆ ಲಿಖಿತ ಸಲ್ಲಿಕೆಗಳನ್ನು ನೀಡುವಂತೆಯೂ ಅವರು ಇಂದು ಎರಡೂ ಕಡೆಯ ವಕೀಲರಿಗೆ ಸೂಚಿಸಿದರು.

ಕೊನೆ ದಿನದ ವಾದ-ಪ್ರತಿವಾದ

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ಹಕ್ಕನ್ನು ರಕ್ಷಿಸುವಂತೆ ಕೋರಿ ಹಾಗೂ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕೆ ಪ್ರವೇಶ ನಿರಾಕರಿಸಿದ ಸರ್ಕಾರಿ ಪಿಯು ಕಾಲೇಜಿನ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಲಾಗಿದೆ.  ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠದ ಮುಂದೆ 11 ದಿನಗಳಿಂದ ವಿಚಾರಣೆ ನಡೆಯುತ್ತಿತ್ತು.  ಮಂಗಳವಾರ, ಕರ್ನಾಟಕ ಸರ್ಕಾರವು ನಿರ್ಬಂಧಗಳೊಂದಿಗೆ ಹಿಜಾಬ್ ಧರಿಸಲು ಯಾವುದೇ ನಿರ್ಬಂಧವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಹಿಜಾಬ್ ಧರಿಸುವುದನ್ನು ನಿರಾಕರಿಸುವುದು ಸಂವಿಧಾನದ 15 ನೇ ವಿಧಿಯ ಉಲ್ಲಂಘನೆಯಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದೆ.

ಇದನ್ನೂ ಓದಿ: Hijab Hearing: ಆಧಾರ್ ಕಾರ್ಡ್​​​ನಲ್ಲಿ ಹಿಜಾಬ್ ಧರಿಸದ ಫೋಟೋ ಇದೆ: ಹೈಕೋರ್ಟ್​​ನಲ್ಲಿ ವಾದ-ಪ್ರತಿವಾದ

ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಉಡುಪಿ ಜಿಲ್ಲೆಯ ಮುಸ್ಲಿಂ ಬಾಲಕಿಯರ ಅರ್ಜಿಯನ್ನು ಪ್ರತಿವಾದಿಸಿದ್ದು, ಸ್ಕಾರ್ಫ್ ಧರಿಸುವ ಹಕ್ಕು 19(1)(ಎ) ಅಡಿಯಲ್ಲಿ ಬರುತ್ತದೆಯೇ ಹೊರತು ಅರ್ಜಿದಾರರು ವಾದಿಸಿದಂತೆ 25ನೇ ವಿಧಿಯಡಿ ಅಲ್ಲ ಎಂದು ವಾದಿಸಿದ್ದಾರೆ.

ಇಂದು ವಾದ-ಪ್ರತಿವಾದ ಮುಕ್ತಾಯಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ವೈ.ಎಚ್.ಮುಚ್ಚಾಳ ಅವರು ವಾದ ಮಂಡಿಸಿ, ತಲೆಗೆ ಸ್ಕಾರ್ಫ್ ಎಂದರೆ ಮುಖ ಮುಚ್ಚುವ ಬಟ್ಟೆಯಲ್ಲ, ಅದನ್ನು ಬಳಸಲು ಅನುಮತಿ ನೀಡಬೇಕು.  ಅದನ್ನು ಮಾಡದಂತೆ ಕಾಲೇಜು ತಡೆಯುವುದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲ ವೈ.ಎಚ್.ಮುಚ್ಚಾಳ ಹೇಳಿದರು.

ಲಿಖಿತ ವಾದ ಸಲ್ಲಿಸುವಂತೆ ಸಿಜೆ ಸೂಚನೆ

ಅರ್ಜಿದಾರರ ಪರ ಮೊಹಮ್ಮದ್ ತಾಹೀರ್ ವಾದ ಮಂಡಿಸಿ, ಕಾಲೇಜಿನಲ್ಲಿ ಸಿಡಿಸಿಯಿಂದ ಸಮವಸ್ತ್ರ ಸಂಹಿತೆಯನ್ನು ಕೇಸ್ ಗಾಗಿಯೇ ಸೃಷ್ಟಿಸಲಾಗಿದೆ ಎಂದರು. ಇದಕ್ಕೆ ಕಾಲೇಜು ಪ್ರಿನ್ಸಿಪಾಲ್ ಪರ ವಕೀಲ ನಾಗನಂದ್ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಬೇಕಾದ ದಾಖಲೆಗಳು ನನ್ನ ಬಳಿ ಇದೆ. 2014 ರಲ್ಲ ಸಿಡಿಸಿಯನ್ನು ಜಾರಿಗೆ ತರಲಾಗಿದೆ ಎಂದು ಮೊಹಮ್ಮದ್ ತಾಹೀರ್ ಪ್ರತಿಪಾದಿಸಿದರು. ಹಾಗದ್ರೆ ಅದಕ್ಕೆ ಮುಂಚೆ ಏನಿತ್ತು ಎಂದು ಸಿಜೆ ಪ್ರಶ್ನಿಸಿದರು. ಜೊತೆಗೆ ಮಧ್ಯಂತರ ಅರ್ಜಿದಾರರು ಲಿಖಿತ ವಾದ ಸಲ್ಲಿಸುವಂತೆ ಸಿಜೆ ಸೂಚಿಸಿದರು.

ಇದನ್ನೂ ಓದಿ: Hijab Hearing: ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ: ಹೈಕೋರ್ಟ್​​ಗೆ ಸರ್ಕಾರದ ಉತ್ತರ

ಹಿಜಾಬ್​​​ ಸಂಬಂಧ ಸರ್ಕಾರದ ನಿಲುವೇನು?

ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಕರ್ನಾಟಕ ಸರ್ಕಾರ ಸೋಮವಾರ ಹೈಕೋರ್ಟ್‌ನ ಪೂರ್ಣ ಪೀಠದ ಮುಂದೆ ಪುನರುಚ್ಚರಿಸಿದೆ. ಶಿಕ್ಷಣ ಸಂಸ್ಥೆಗಳ ಹೊರಗೆ ಧಾರ್ಮಿಕ ಗುರುತುಗಳನ್ನು ಇಡಬೇಕು ಎಂದು ಸರ್ಕಾರ ಹೇಳಿದೆ. "ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬುದು ನಮ್ಮ ನಿಲುವು. ಧಾರ್ಮಿಕ ಸೂಚನೆಗಳನ್ನು ಶಿಕ್ಷಣ ಸಂಸ್ಥೆಗಳ ಹೊರಗೆ ಇಡೋಣ ಎಂದು ಹೇಳಿಕೆ ನೀಡಿದ್ದಾರೆ ಎಂದು ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಪೂರ್ಣ ಪೀಠಕ್ಕೆ ತಿಳಿಸಿದರು.
Published by:Kavya V
First published: