High Court New Rules: ಇನ್ಮುಂದೆ ಕೋರ್ಟ್​ನಲ್ಲಿ ಆರೋಪಿಗಳಿಗೆ ಮನಬಂದಂತೆ ಪ್ರಶ್ನೆ ಕೇಳುವಂತಿಲ್ಲ..!

ಪ್ರಶ್ನಾವಳಿ ಸಿದ್ದಪಡಿಸುವ ವೇಳೆ ಹೈಕೋರ್ಟ್​ ಹೊರಡಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ರಿಜಿಸ್ಟ್ರಾರ್​ ಜನರಲ್ ಈ ಆದೇಶ ಪ್ರತಿಯನ್ನು ರಾಜ್ಯದ ಎಲ್ಲಾ ವಿಚಾರಣಾ ನ್ಯಾಯಾಲಯಗಳಿಗೆ ಕಳುಹಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು(ಅ.19): ಇನ್ಮುಂದೆ ಕೋರ್ಟ್​ನಲ್ಲಿ(Courts) ಆರೋಪಿ(Accused)ಗಳಿಗೆ ವಕೀಲರು ಮನ ಬಂದಂತೆ ಪ್ರಶ್ನೆ ಕೇಳುವಂತಿಲ್ಲ ಎಂಬ ಹೊಸ ನಿಯಮವನ್ನು(New Rule) ಕರ್ನಾಟಕ ಹೈಕೋರ್ಟ್(Karnataka High court)​ ಜಾರಿಗೆ ತಂದಿದೆ. ಅಪರಾಧ ಪ್ರಕರಣಗಳ(Crime case) ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯಗಳು ಸೂಕ್ತ ರೀತಿಯಲ್ಲಿ ಪ್ರಶ್ನಾವಳಿ ಸಿದ್ಧಪಡಿಸದೆ ಇರುವುದನ್ನು ಮನಗಂಡಿರುವ ಹೈಕೋರ್ಟ್​, ಪ್ರಶ್ನಾವಳಿ ತಯಾರಿಸುವಾಗ ಅನುಸರಿಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ.

    ಹೊಸ ಪ್ರಶ್ನಾವಳಿ ಸಿದ್ಧವಾಗಿದ್ದು ಏಕೆ?

    ಮೈಸೂರಿನ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣವೊಂದರ ಆರೋಪಿಗಳಿಬ್ಬರಿಗೆ ವಿಚಾರಣಾ ನ್ಯಾಯಾಲಯ ಸೂಕ್ತ ರೀತಿಯಲ್ಲಿ ಪ್ರಶ್ನೆ ಕೇಳದ ಮತ್ತು ಅವರಿಗೆ ವಿವರಣೆ ನೀಡಲು ಅವಕಾಶ ನೀಡದ ಪ್ರಕರಣದಲ್ಲಿ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ನ್ಯಾಯಪೀಠ ಈ ಮಾರ್ಗಸೂಚಿಗಳನ್ನು ರಚಿಸಿದೆ.

    ಆರೋಪಿ ನೀಡಿದ ಉತ್ತರ ಮತ್ತು ವಿವರಣೆಯನ್ನು ವಿಚಾರಣಾ ನ್ಯಾಯಾಲಯ ದಾಖಲಿಸಿಕೊಳ್ಳಬೇಕೆ ಹೊರತು, ಸುಳ್ಳು ಮತ್ತು ಸತ್ಯ ಎಂಬುದಾಗಿ ಏಕ ಪದದಲ್ಲಿ ಉತ್ತರ ನೀಡುವಂತೆ ಆರೋಪಿಗೆ ಸೂಚಿಸಬಾರದು ಎಂಬಿತ್ಯಾದಿ ನಿಯಮಗಳು ಸೇರಿವೆ.

    ಇದನ್ನೂ ಓದಿ:Nalin Kumar Kateel: 'ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್': ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ

    ಹೈಕೋರ್ಟ್ ನಿರ್ದೇಶನವೇನು?

    ಪ್ರಶ್ನಾವಳಿ ಸಿದ್ದಪಡಿಸುವ ವೇಳೆ ಹೈಕೋರ್ಟ್​ ಹೊರಡಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ರಿಜಿಸ್ಟ್ರಾರ್​ ಜನರಲ್ ಈ ಆದೇಶ ಪ್ರತಿಯನ್ನು ರಾಜ್ಯದ ಎಲ್ಲಾ ವಿಚಾರಣಾ ನ್ಯಾಯಾಲಯಗಳಿಗೆ ಕಳುಹಿಸಬೇಕು. ರಾಜ್ಯ ನ್ಯಾಯಾಂಗ ಅಕಾಡೆಮಿ ಮಾದರಿ ಪ್ರಶ್ನಾವಳಿ ಸಿದ್ಧಪಡಿಸಿ ಮಾರ್ಗದರ್ಶನಕ್ಕಾಗಿ ಎಲ್ಲಾ ವಿಚಾರಣಾ ನ್ಯಾಯಾಲಯಗಳಿಗೆ ರವಾನಿಸಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ.

    ಪ್ರಕರಣದ ಆರೋಪಿಗಳಾದ ಮೀನಾಕ್ಷಿ ಮತ್ತು ತ್ರಿನೇತ್ರ ವಿರುದ್ಧ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 2021ರ ಫೆ.22ರಂದು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ(CRPC) ಸೆಕ್ಷನ್ 313 ಅಡಿಯಲ್ಲಿ ಆರೋಪಿಗಳ ವಿರುದ್ಧ ದಾಖಲಿಸಿದ್ದ ಹೇಳಿಕೆಗಳನ್ನು ರದ್ದುಪಡಿಸಿ, ಹೊಸದಾಗಿ ದಾಖಲಿಸಬೇಕು ಎಂದು ಆದೇಶಿಸಿದೆ.

    ಆರೋಪಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಶ್ನಾವಳಿ ಸಿದ್ಧಪಡಿಸುವುದು ವಾಡಿಕೆ. ಎಲ್ಲಾ ಪ್ರಶ್ನಾವಳಿ ಗುಚ್ಛದಲ್ಲಿ ಅದೇ ಪ್ರಶ್ನೆಗಳು ಪುನರಾವರ್ತೆಯಾಗಿರುತ್ತದೆ. ಪ್ರತೀ ಆರೋಪಿಗೂ ವೈಯಕ್ತಿಕವಾಗಿ ಪ್ರಶ್ನೆ ಕೇಳಲಾಗುತ್ತದೆ. ಪ್ರತಿಯೊಂದು ಪ್ರಶ್ನಾವಳಿ ಗುಚ್ಛಕ್ಕೆ ಕೇವಲ ಓರ್ವ ಆರೋಪಿಯ ಸಹಿ ಪಡೆಯಲಾಗುತ್ತದೆ. ಆರೋಪಿಗಳ ಸಂಖ್ಯೆಗೆ ಸಮಾನವಾಗಿ ಪ್ರಶ್ನಾವಳಿ ಸಿದ್ಧಪಡಿಸುವುದು ಸರಿಯಾದ ಪ್ರಕ್ರಿಯೆ ಅಲ್ಲ ಎಂದು ಹೈಕೋರ್ಟ್​ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

    ಹೈಕೋರ್ಟ್ ಮಾರ್ಗಸೂಚಿಗಳು:

    • ಸಾಮಾನ್ಯ ಭಾಷೆಯಲ್ಲಿ ಸಾಧ್ಯವಾದ ಮಟ್ಟಿಗೆ ಚಿಕ್ಕ ವಾಕ್ಯಗಳ ಪ್ರಶ್ನೆ ಸಿದ್ಧಪಡಿಸಬೇಕು.

    • ಪ್ರಶ್ನೆಯನ್ನು ಕೇಳಿ ಉತ್ತರ ನಮೂದಿಸಿಕೊಳ್ಳುವ ಬದಲಾಗಿ ಪ್ರಶ್ನೆಗಳಿಗೆ ಲಿಖಿತ ಉತ್ತರ ದಾಖಲಿಸಲು ಆರೋಪಿಗೆ ಸೂಚಿಸಬಹುದು.

    • ಮೌಖಿಕ ಹಾಗೂ ಲಿಖಿತ ಸಾಕ್ಷ್ಯಾಧಾರಗಳಿಂದ ದೋಷಾರೋಪ ಸಾಕ್ಷ್ಯಗಳನ್ನು ಮಾತ್ರ ಆಯ್ಕೆ ಮಾಡಬಹುದು.

    • ಎರಡು ಅಥವಾ ಅದಕ್ಕಿಂತ ಹೆಚ್ಚು ಸಾಕ್ಷಿದಾರರು ಆರೋಪಿಗಳ ಕೃತ್ಯದ ಬಗ್ಗೆ ಸಾಮೂಹಿಕ ಸಾಕ್ಷ್ಯ ನುಡಿಯುವ ಸಾದ್ಯತೆ ಇರುವಾಗ ಒಂದೇ ಪ್ರಶ್ನೆ ಕೇಳಬಹುದು.

    • ಸಾಕ್ಷಿದಾರ ಕೆಲವೊಮಮ್ಮೆ ಎರಡು/ಅದಕ್ಕಿಂತ ಹೆಚ್ಚು ಆರೋಪಿಗಳ ಕೃತ್ಯದ ಬಗ್ಗೆ ಸಾಕ್ಷ್ಯ ಹೇಳುವಾಗ ಒಂದೇ ಪ್ರಶ್ನೆ ಸಿದ್ದಪಡಿಸಬೇಕು.

    • ಪ್ರತೀ ಆರೋಪಿಯನ್ನು ವೈಯಕ್ತಿಕವಾಗಿ ಪ್ರಶ್ನೆ ಮಾಡಿ, ಅವರ ಉತ್ತರ ಪ್ರತ್ಯೇಕವಾಗಿ ದಾಖಲಿಸಬೇಕು.

    • ದೋಷಾರೋಪಣೆಗಳು ಇರುವ ಸಂದರ್ಭದಲ್ಲಿ ಪಟ್ಟಿ ಮಾಡಲಾಗಿರುವ ದಾಖಲೆ ಮತ್ತು ವಸ್ತುಗಳ ಕುರಿತು ಆರೋಪಿಗಳ ಗಮನ ಸೆಳೆಯಬೇಕು.

    • ಔಪಚಾರಿಕ ಸಾಕ್ಷಿಗಳು ನೀಡಿದ ಸಾಕ್ಷ್ಯದ ಬಗ್ಗೆ ಆರೋಪಿಯನ್ನು ಪ್ರಶ್ನೆ ಮಾಡುವ ಅಗತ್ಯವಿಲ್ಲ.

    Published by:Latha CG
    First published: