ಬೆಂಗಳೂರು: ಕರ್ನಾಟಕದಲ್ಲಿ ಪಂಚಮಸಾಲಿಗಳು (Karnataka Panchamasali Lingayats) 2ಎ ಮೀಸಲಾತಿ ಕೇಳಿದರು. ಒಕ್ಕಲಿಗರು (Vokkaliga Reservation) ಮೀಸಲಾತಿ ಹೆಚ್ಚಳ ಕೇಳಿದ್ದರು. ಮೀಸಲಾತಿ ಕೊಡಿ ಕೊಡಿ ಅಂತ ವರ್ಷಾನುಗಟ್ಲೆಯಿಂದ ಕೇಳಿದರೂ ಸರ್ಕಾರ (Karnataka Government) ಕೊಟ್ಟಿರಲಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಇಕ್ಕಟ್ಟಿನಿಂದ ಪಾರಾಗಲು 2ಸಿ ಮತ್ತು 2ಡಿ ಅನ್ನೋ ಹೊಸ ಕೆಟಗರಿ ಸೃಷ್ಟಿಸಿ ಬೀಸೋದೊಣ್ಣೆಯಿಂದ ತಪ್ಪಿಸಿಕೊಂಡಿತ್ತು. ಈಗ ಆ ಪ್ಲ್ಯಾನ್ಗೆ ಹೈಕೋರ್ಟ್ (Karnataka High Court) ಬ್ರೇಕ್ ಹಾಕಿದ್ದು, ಒಕ್ಕಲಿಗ ಹಾಗೂ ಪಂಚಮಸಾಲಿ ಲಿಂಗಾಯತ ಮೀಸಲಾತಿಗೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ.
ಮೀಸಲಾತಿಗೆ ಹೈಕೋರ್ಟ್ ಬ್ರೇಕ್
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದ ತೀರ್ಮಾನ ಪ್ರಶ್ನಿಸಿ ರಾಘವೇಂದ್ರ ಡಿ.ಜಿ. ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೂಕೋರ್ಟ್, ಮೀಸಲಾತಿಗೆ ಬ್ರೇಕ್ ಹಾಕಿದೆ. ಹೊಸದಾಗಿ ರಾಜ್ಯ ಸರ್ಕಾರದ 2ಸಿ ಹಾಗೂ 2ಡಿ ಕೆಟಗರಿ ಸೃಷ್ಟಿಸಲಾಗಿದೆ. ಈ 2 ಕೆಟಗರಿಗಳು ಹಲವು ಗೊಂದಲಗಳ ಗೂಡಾಗಿದೆ.
ಇದನ್ನೂ ಓದಿ: NATIONAL YOUTH DAY 2023: ರನ್ವೇ ರೆಡಿ ಇದೇ, ನೀವು ಟೇಕಾಫ್ ಆಗೋದು ಅಷ್ಟೇ ಬಾಕಿ; ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ
ಪಂಚಮಸಾಲಿಗಳು ಹೊಸ ಮೀಸಲಾತಿ ತಿರಸ್ಕರಿಸಿದ್ದಾರೆ. ಮೀಸಲಾತಿ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು . ಈಗಿರುವ ಮೀಸಲಾತಿ ನೀತಿಯನ್ನೇ ಮುಂದುವರಿಸಬೇಕು. ಪೂರ್ಣ ವಿಚಾರಣೆ ಬಳಿಕ ಮುಂದಿನ ತೀರ್ಪು ಪ್ರಕಟಿಸುತ್ತೇವೆ. ಆ ತೀರ್ಪು ಆಧರಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲಿವರೆಗೂ ಹೊಸ ಮೀಸಲಾತಿ ಘೋಷಣೆ ಮಾಡಬಾರದು ಎಂದು ಕೋರ್ಟ್ ಸೂಚನೆ ನೀಡಿದೆ.
SC-ST ಮೀಸಲಾತಿ ಹೆಚ್ಚಳಕ್ಕೆ ಅಡ್ಡಿ ಇಲ್ಲ, ಗೊಂದಲ ಬೇಡ
ಒಕ್ಕಲಿಗರು ಮತ್ತು ಲಿಂಗಾಯತರಿಗೆ ಘೋಷಿಸಿದ್ದ ಹೊಸ 2ಸಿ ಮತ್ತು 2ಡಿ ಕೆಟಗರಿಗಷ್ಟೇ ಹೈಕೋರ್ಟ್ ತಡೆ ನೀಡಿದೆ. ಎಸ್ಸಿ ಎಸ್ಟಿ ಮೀಸಲಾತಿ ಅಧಿವೇಶನದಲ್ಲಿ ಮಂಡನೆ ಆಗಿ ಒಪ್ಪಿಗೆ ಪಡೆದಿರುವುದರಿಂದ ಯಾವುದೇ ಸಮಸ್ಯೆ ಇಲ್ಲ.
ಶಿಗ್ಗಾವಿಯ ಸಿಎಂ ನಿವಾಸಕ್ಕೆ ಮುತ್ತಿಗೆ
ಇನ್ನೂ, ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಬೇಡಿಕೆ ಹಿನ್ನಲೆಯಲ್ಲಿ ಇಂದು ಶಿಗ್ಗಾವಿಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅಚವರ ನಿವಾಸ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ.
ಇದನ್ನೂ ಓದಿ: Janardhan Reddy: ಗಾಲಿ ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಸರ್ಕಾರ ಅಸ್ತು; ಬಳ್ಳಾರಿ ಗಣಿಧಣಿಗೆ ಬಿಗ್ ಶಾಕ್!
ಬೆಳಗ್ಗೆ 10 ಗಂಟೆಗೆ ಶಿಗ್ಗಾವಿಯ ಚೆನ್ನಮ್ಮ ಸರ್ಕಲ್ನಿಂದ ಸಿಎಂ ನಿವಾಸದವರೆಗೂ ಬೃಹತ್ ಪ್ರತಿಭಟನೆ ಹಾಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಪಟ್ಟಣದ ಪುರಸಭೆಯ ಮುಂಭಾಗ ಇರುವ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನೆಗೆ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ.
ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಕರೆ ಕೊಟ್ಟ ಸ್ವಾಮೀಜಿ
ಬಸವ ಜಯಮೃತ್ಯಂಜಯ ಸ್ವಾಮೀಜಿ ನೇತೃತ್ವದಲ್ಲಿ ಸುಮಾರು 2 ಕೀಮಿ ವರೆಗೂ ಪಾದಯಾತ್ರೆ ನಡೆಯಲಿದ್ದು, ಇದು ಕೊನೆ ಹೋರಾಟ, ಮಾಡು ಇಲ್ಲವೇ ಮಡಿ ಎಂದು ಸ್ವಾಮೀಜಿ ಸಮುದಾಯದ ಜನರಿಗೆ ಕರೆ ಕೊಟ್ಟಿದ್ದಾರೆ. ಶ್ರೀಗಳ ಸಮ್ಮುಖದಲ್ಲಿ ಅಂತಿಮವಾಗಿ ಸರ್ಕಾರಕ್ಕೆ ಪಂಚಮಸಾಲಿ ಸಮಾಜ ತನ್ನ ನಿರ್ಣಯ ತಿಳಿಸಲಿದೆ.
ಇನ್ನು, ಪ್ರತಿಭಟನೆ ಯಾತ್ರೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಅರವಿಂದ ಬೆಲ್ಲದ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಎಬಿ ಪಾಟೀಲ್, ವಿನಯ್ ಕುಲಕರ್ಣಿ,ವಿಜಯ್ ಕುಲಕರ್ಣಿ, ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ