High Court Order:ಅಕ್ರಮ ಧ್ವನಿವರ್ಧಕ ಬಳಕೆ ಬಗ್ಗೆ ಉತ್ತರಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ನಿಯಮಗಳಿಗೆ ಅನುಸಾರವಾಗಿ ಔಪಚಾರಿಕ ಅನುಮೋದನೆ ಪಡೆಯುವವರೆಗೆ ಧ್ವನಿವರ್ಧಕಗಳು ಅಥವಾ ಸಾರ್ವಜನಿಕ ವಿಳಾಸ ವ್ಯವಸ್ಥೆಗಳನ್ನು ಬಳಸದಂತೆ ದೂರವಿರಬಹುದೇ ಎಂದು ಹೈಕೋರ್ಟ್ ಆಗಸ್ಟ್‌ ತಿಂಗಳಲ್ಲಿ 16 ಮಸೀದಿಗಳಿಂದ ಪ್ರಮಾಣ ಪತ್ರ ಕೋರಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶಬ್ದ ಮಾಲಿನ್ಯ(Sound Pollution) ಕಾಯಿದೆಗೆ ವಿರುದ್ಧವಾಗಿ ಧಾರ್ಮಿಕ ಕಟ್ಟಡಗಳಲ್ಲಿ ಬಳಸಲಾಗುವ ಧ್ವನಿವರ್ಧಕಗಳು(Speaker), ಆ್ಯಂಪ್ಲಿಫೈಯರ್‌ಗಳು ಮತ್ತು ಇತರ ಉಪಕರಣಗಳನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಜಪ್ತಿ ಮಾಡುವ ಅರ್ಜಿಗೆ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ. ಧಾರ್ಮಿಕ ಕಟ್ಟಡಗಳಲ್ಲಿ ಅನಧಿಕೃತವಾಗಿ ಆ್ಯಂಪ್ಲಿಫೈಯರ್‌ ಮತ್ತು ಧ್ವನಿವರ್ಧಕಗಳನ್ನು ಬಳಸುವುದನ್ನು ನಿಲ್ಲಿಸುವ ಉದ್ದೇಶದಿಂದ ಹಲವರು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದರು. ಈ ರೀತಿ ಆ್ಯಂಪ್ಲಿಫೈಯರ್‌, ಧ್ವನಿವರ್ಧಕ ಮುಂತಾದವುಗಳನ್ನು ಬಳಸುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದೂ ದೂರಿದ್ದರು. ಶಬ್ದ ಮಾಲಿನ್ಯ (ರೆಗ್ಯುಲೇಶನ್‌ ಮತ್ತು ನಿಯಂತ್ರಣ) ನಿಯಮಗಳು, 2000 ಕಾಯ್ದೆ ಉಲ್ಲಂಘನೆ ವಿಚಾರವಾಗಿ ಅರ್ಜಿದಾರರ ದೂರಿಗೆ ಸಂಬಂಧಪಟ್ಟಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿದ್ದು, ಉತ್ತರಿಸುವಂತೆ ಕೋರಿದೆ.

ಈ ಸಂಬಂಧ ರಾಜ್ಯಕ್ಕೆ ಪತ್ರ ಸಲ್ಲಿಸಿದ ಹಂಗಾಮಿ ಮುಖ್ಯ ನ್ಯಾಯಾಧೀಶರಾದ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಎಸ್.ಎಸ್. ಮಗದುಮ್ ನೇತೃತ್ವದ ಹೈಕೋರ್ಟ್‌ ವಿಭಾಗೀಯ ಪೀಠ, ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಿದ್ದು, ನವೆಂಬರ್‌ 16ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.

ಬೆಂಗಳೂರಿನ ಐಕಾನ್ ನಾರ್ತ್ ಅಪಾರ್ಟ್‌ಮೆಂಟ್‌ ನಿವಾಸಿಗಳು ಹೈಕೋರ್ಟ್‌ನಲ್ಲಿ ಈ ಅರ್ಜಿ ಸಲ್ಲಿಸಿದ್ದು, ಧಾರ್ಮಿಕ ಕಟ್ಟಡಗಳು ವ್ಯವಸ್ಥಿತ ನಿಯಮಗಳನ್ನು ಅನುಸರಿಸಲು ವಿಫಲರಾಗಿವೆ ಎಂದು ಆರೋಪಿಸಿದ್ದರು. ಅಲ್ಲದೆ, ಪೊಲೀಸರು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹ ಅರ್ಜಿದಾರರ ಆಕ್ಷೇಪಣೆಗಳನ್ನು ಕಾನೂನು ರೀತಿಯಲ್ಲಿ ಗಮನಿಸಲು ನಿರಾಕರಿಸಿದೆ ಎಂದೂ ಅರ್ಜಿದಾರರು ದೂರಿದ್ದಾರೆ.

ಇದನ್ನೂ ಓದಿ: ಸೆಕ್ಯೂಲರ್ ಮತ ವಿಭಜನೆ ಮಾಡಲು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿಲ್ಲ: ಸಿಂದಗಿಯಲ್ಲಿ ಹೆಚ್ಡಿಕೆ ಸ್ಪಷ್ಟನೆ

ಈ ದೂರಿನ ಸಂಬಂಧ ಆಡಿಯೋ-ವೀಡಿಯೋ ಮತ್ತು ಫೋಟೋ ಪುರಾವೆಗಳನ್ನು ಸಹ ಅರ್ಜಿದಾರರು ಹೊಂದಿದ್ದು, ಬೆಳಗಿನ ಜಾವ 5 ಗಂಟೆಗೆ ಮುಂಚಿತವಾಗೇ ಘೋಷಣೆಗಳು ಮತ್ತು ಭಾಷಣಗಳಿಗಾಗಿ ಧಾರ್ಮಿಕ ಕಟ್ಟಡಗಳು ಧ್ವನಿವರ್ಧಕಗಳನ್ನು ಬಳಸಿವೆ. ಈ ಮೂಲಕ ಅನುಮತಿಸಿದ ಸಮಯದ ನಿರ್ಬಂಧವನ್ನು ಉಲ್ಲಂಘಿಸಿವೆ ಎಂದು ಅಪಾರ್ಟ್‌ಮೆಂಟ್‌ ನಿವಾಸಿಗಳು ಆರೋಪಿಸಿದ್ದಾರೆ.

ನಿಯಮಗಳಿಗೆ ಅನುಸಾರವಾಗಿ ಔಪಚಾರಿಕ ಅನುಮೋದನೆ ಪಡೆಯುವವರೆಗೆ ಧ್ವನಿವರ್ಧಕಗಳು ಅಥವಾ ಸಾರ್ವಜನಿಕ ವಿಳಾಸ ವ್ಯವಸ್ಥೆಗಳನ್ನು ಬಳಸದಂತೆ ದೂರವಿರಬಹುದೇ ಎಂದು ಹೈಕೋರ್ಟ್ ಆಗಸ್ಟ್‌ ತಿಂಗಳಲ್ಲಿ 16 ಮಸೀದಿಗಳಿಂದ ಪ್ರಮಾಣ ಪತ್ರ ಕೋರಿತ್ತು.

ಇದಕ್ಕೆ ವಿಚಾರಣೆಯ ಸಮಯದಲ್ಲಿ ಪ್ರತಿಕ್ರಿಯೆ ನೀಡಿದ ಮಸೀದಿಯೊಂದು ಧ್ವನಿವರ್ಧಕಗಳು ಮತ್ತು ಆ್ಯಂಪ್ಲಿಫೈಯರ್‌ಗಳಲ್ಲಿ ವ್ಯವಸ್ಥೆಯೊಂದನ್ನು ಇರಿಸಿದ್ದೇವೆ. ಧ್ವನಿ ಮಟ್ಟಗಳು ಅನುಮತಿಸಿದ ಡೆಸಿಬಲ್ ಮಿತಿಗಳನ್ನು ಮೀರಿದರೆ ಸ್ಪೀಕರ್‌ಗೆ ಪೂರೈಕೆಯನ್ನು ಆಫ್ ಮಾಡುತ್ತದೆ ಎಂದೂ ಹೇಳಿಕೆ ನೀಡಿದ್ದರು.

ಈ ಮಧ್ಯೆ, ಜುಲೈ ತಿಂಗಳಲ್ಲಿ ನ್ಯಾಯಾಲಯವು ಧಾರ್ಮಿಕ ಕಟ್ಟಡಗಳಲ್ಲಿ ಆ್ಯಂಪ್ಲಿಫೈಯರ್‌ ಮತ್ತು ಧ್ವನಿವರ್ಧಕಗಳನ್ನು ಅಕ್ರಮವಾಗಿ ಬಳಸುವ ವಿಚಾರದಲ್ಲಿ ಒಂದು ಧರ್ಮವನ್ನು ಮಾತ್ರ ಪ್ರತ್ಯೇಕಿಸುವುದು ಸರಿ ಇಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು ಸೇರಿದಂತೆ ಎಲ್ಲ ಧಾರ್ಮಿಕ ಕಟ್ಟಡಗಳು ಶಬ್ದ ಮಾಲಿನ್ಯ ಮಾಡಬಾರದು, ಅನುಮತಿಗಿಂತ ಹೆಚ್ಚಿನ ಡೆಸಿಬಲ್‌ಗಳ ಬಳಕೆ ಮಾಡಬರದು ಎಂದು ಸರ್ಕಾರ 2000ರಲ್ಲಿ ಕಾಯ್ದೆ ಜಾರಿ ಮಾಡಿದೆ. ಆದರೆ, ಈ ನಿಯಮ ಪಲನೆಯಾಗುವಂತೆ ಪೊಲೀಸರು ಹಾಗೂ ಕರ್ನಾಟಕ ರಾಜ್ಯ ವಾಯುಮಾಲಿನ್ಯ ಮಂಡಳಿ ನೋಡಿಕೊಳ್ಳುತ್ತಿಲ್ಲ ಎಂಬುದು ಅರ್ಜಿದಾರರ ವಾದ.

ಇದನ್ನೂ ಓದಿ: ಜನರಲ್ಲಿನ ಒಗ್ಗಟ್ಟಿನ ಕಾರ್ಯದಿಂದಲೇ ಕೋವಿಡ್ ನಿಯಂತ್ರಣ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
First published: