HOME » NEWS » State » KARNATAKA HIGH COURT HITS OUT AT STATE AND UNION GOVERNMENTS ABOUT VACCINE SHORTAGE LG

ಎರಡನೇ ಡೋಸ್​ ಪಡೆಯದಿದ್ದರೆ, ಅದು ನ್ಯಾಷನಲ್ ವೇಸ್ಟ್; ಲಸಿಕೆ ಒದಗಿಸದ ಸರ್ಕಾರಕ್ಕೆ ಹೈಕೋರ್ಟ್​ ತರಾಟೆ

ಕೇಂದ್ರ ಸರ್ಕಾರ ರಾಜ್ಯಗಳಿಗೆ ಮಾರ್ಗಸೂಚಿಯೊಂದನ್ನು ನೀಡಿತ್ತು. ನೀಡಲಾಗುವ ಲಸಿಕೆಯಲ್ಲಿ ಶೇ.70 ರಷ್ಟನ್ನು 2ನೇ ಡೋಸ್​​ಗೆ  ಬಳಸುವಂತೆ ಹೇಳಿತ್ತು. ಈ ಮಾರ್ಗಸೂಚಿ ಪಾಲಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಹೈಕೋರ್ಟ್ ಗೆ ಕೇಂದ್ರ ಸರ್ಕಾರದ ಎಎಸ್ ಜಿ ಐಶ್ವರ್ಯ ಭಾಟಿ ಹೇಳಿದ್ದಾರೆ.

news18-kannada
Updated:May 13, 2021, 2:07 PM IST
ಎರಡನೇ ಡೋಸ್​ ಪಡೆಯದಿದ್ದರೆ, ಅದು ನ್ಯಾಷನಲ್ ವೇಸ್ಟ್; ಲಸಿಕೆ ಒದಗಿಸದ ಸರ್ಕಾರಕ್ಕೆ ಹೈಕೋರ್ಟ್​ ತರಾಟೆ
ಕರ್ನಾಟಕ ಹೈಕೋರ್ಟ್
  • Share this:
ಬೆಂಗಳೂರು(ಮೇ 13): ರಾಜ್ಯದಲ್ಲಿ ಕೊರೋನಾ ಲಸಿಕೆ ಕೊರತೆ ಎದ್ದು ಕಾಣುತ್ತಿದ್ದು, ಜನರು ಲಸಿಕೆಗಾಗಿ ಪರದಾಡುವಂತಾಗಿದೆ. ಹೀಗಾಗಿ ಹೈಕೋರ್ಟ್​ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.  ರಾಜ್ಯದಲ್ಲಿ 6 ಕೋಟಿಗೆ ಹೆಚ್ಚು ಜನಸಂಖ್ಯೆ ಇದೆ. ನೀವು ಒಂದು ಪರ್ಸೆಂಟ್ ಜನರಿಗೂ ವ್ಯಾಕ್ಸಿನ್ ಒದಗಿಸಿಲ್ಲ. ಇದು ನಿಮ್ಮ ವ್ಯಾಕ್ಸಿನೇಷನ್‌ ಕಾರ್ಯಕ್ರಮದ ರೀತಿಯೇ ಎಂದು ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ.

2 ದಿನಗಳಲ್ಲಿ ವ್ಯಾಕ್ಸಿನೇಷನ್‌ ಮಾಡುವಂತೆ ಆದೇಶಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಎಚ್ಚರಿಕೆಯನ್ನೂ ನೀಡಿದೆ.

ಕೇಂದ್ರ ಸರ್ಕಾರದಿಂದಲೂ ಹೈಕೋರ್ಟ್​ ಮಾಹಿತಿ ಕೇಳಿದೆ. 1ನೇ ಡೋಸ್ ತೆಗೆದುಕೊಂಡವರಿಗೆ 2ನೇ ಡೋಸ್ ಸಿಕ್ಕಿಲ್ಲ. 2ನೇ ಡೋಸ್ ತೆಗೆದುಕೊಳ್ಳುವುದು ಜನರ ಹಕ್ಕಲ್ಲವೇ. 26 ಲಕ್ಷ ಜನರಿಗೆ ವ್ಯಾಕ್ಸಿನ್ ಕೊರತೆಯಿದೆ. ಈ ಅಂತರವನ್ನು ಹೇಗೆ ಸರಿಪಡಿಸುತ್ತೀರಿ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ.

ಇದಕ್ಕೆ ಉತ್ತರಿಸಿರುವ ಕೇಂದ್ರ ಸರ್ಕಾರದ ಎಎಸ್ ಜಿ ಐಶ್ವರ್ಯ ಭಾಟಿ,  ವ್ಯಾಕ್ಸಿನ್ ವಿಳಂಬವಾದರೆ 1ನೇ ಡೋಸ್ ನಿಷ್ಪಲವಾಗಲ್ಲ. ಕೋವ್ಯಾಕ್ಸಿನ್ 2ನೇ ಡೋಸ್​ಗೆ 6 ವಾರಗಳ ಕಾಲಾವಕಾಶವಿದೆ. ಕೋವಿಶೀಲ್ಡ್ ಗೆ 8 ವಾರಗಳ ಕಾಲಾವಕಾಶವಿದೆ. ಈ ಬಗ್ಗೆ ತಜ್ಞರ ಸಮಿತಿಯೂ ಪರಿಶೀಲನೆ ನಡೆಸುತ್ತಿದೆ. ಕಾಲಮಿತಿ ಹೆಚ್ಚಿಸುವ ಬಗ್ಗೆ ಎರಡು ದಿನದಲ್ಲಿ ಅಭಿಪ್ರಾಯ ತಿಳಿಸಲಿದೆ ಎಂದು ಹೇಳಿದ್ದಾರೆ.

ವ್ಯಾಕ್ಸಿನ್​ ಕೊರತೆಗೆ ವಿರೋಧ ಪಕ್ಷಗಳೇ ಕಾರಣ ಎಂದ ಕೋಲಾರ ಸಂಸದ ಮುನಿಸ್ವಾಮಿ

ಕೇಂದ್ರ ಸರ್ಕಾರ ರಾಜ್ಯಗಳಿಗೆ ಮಾರ್ಗಸೂಚಿಯೊಂದನ್ನು ನೀಡಿತ್ತು. ನೀಡಲಾಗುವ ಲಸಿಕೆಯಲ್ಲಿ ಶೇ.70 ರಷ್ಟನ್ನು 2ನೇ ಡೋಸ್​​ಗೆ  ಬಳಸುವಂತೆ ಹೇಳಿತ್ತು. ಈ ಮಾರ್ಗಸೂಚಿ ಪಾಲಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಹೈಕೋರ್ಟ್ ಗೆ ಕೇಂದ್ರ ಸರ್ಕಾರದ ಎಎಸ್ ಜಿ ಐಶ್ವರ್ಯ ಭಾಟಿ ಹೇಳಿದ್ದಾರೆ.

ಕೊರೋನಾದಿಂದ ಹೈಕೋರ್ಟ್ ಸಿಬ್ಬಂದಿ(ಚಾಲಕ) ಸಾವನ್ನಪ್ಪಿರುವ ವಿಚಾರವನ್ನು ಇದೇ ವೇಳೆ ಸಿಜೆ ಪ್ರಸ್ತಾಪಿಸಿದರು. ಮೇ 10 ರಂದೇ ಆರ್ ಟಿಪಿಸಿಆರ್ ಪರೀಕ್ಷೆಗೆ ನೀಡಿದ್ದರೂ ವರದಿ ಬಂದಿಲ್ಲ ಎಂದು ವಿಳಂಬ ವರದಿಗೆ ಸಿಜೆ ಎ.ಎಸ್.ಒಕಾ ಗರಂ ಆದರು. 24 ಗಂಟೆಯೊಳಗೆ ವರದಿ ನೀಡಬೇಕೆಂದು ಆದೇಶವಿದೆ. ಲ್ಯಾಬ್ ಗೆ ಮರುದಿನ ಸ್ಯಾಂಪಲ್ ಕಳುಹಿಸಿದ್ದಾರೆ. ಮೇ 12 ರಂದೇ ಪರೀಕ್ಷಾ ವರದಿಯಿದ್ದರೂ ಸೋಂಕಿತರಿಗೆ ತಲುಪಿಲ್ಲ. ಈ ವಿಳಂಬವೂ ಸಾವುಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದರು. ಇದೇ ವೇಳೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಆದೇಶ ನೀಡಿತು.ಜನ ವ್ಯಾಕ್ಸಿನ್ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯದೇ ಹಿಂದಿರುಗುತ್ತಿದ್ದಾರೆ. ನೀವು ರಾಜ್ಯದ‌ ಜನರಿಗೆ ಸತ್ಯ ಹೇಳಬೇಕು. ಸತ್ಯ ಹೇಳಿದರೆ ಜನರಿಗೆ ಗೊಂದಲವಾಗುವುದಿಲ್ಲ. ವ್ಯಾಕ್ಸಿನ್ ಲಭ್ಯತೆ, 2 ನೇ ಡೋಸ್ ಬಗ್ಗೆ ಮಾಹಿತಿ ನೀಡಬೇಕಿತ್ತು ಎಂದು  ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ರಾಜ್ಯ ಸರ್ಕಾರ ಜಾಗತಿಕ ಟೆಂಡರ್ ಕರೆಯಲು ನಿರ್ಧರಿಸಿದೆ. 1ಕೋಟಿ ವ್ಯಾಕ್ಸಿನ್ ಖರೀದಿಸಲು ನಿರ್ಧರಿಸಿದೆ. 1ನೇ ಡೋಸ್ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಇರುವ ಲಸಿಕೆ 2ನೇ ಡೋಸ್ ಗೆ ಬಳಸಲಾಗುವುದು ಎಂದು  ಹೈಕೋರ್ಟ್​​ಗೆ ಎಜಿ ಪ್ರಭುಲಿಂಗ್ ನಾವದಗಿ ಹೇಳಿದ್ದಾರೆ.

ಇಲ್ಲಿ ತನಕ ಎಷ್ಟು ಮಂದಿಗೆ ವ್ಯಾಕ್ಸಿನ್ ನೀಡಿದ್ದೀರಾ.? ಎಷ್ಟು ಮಂದಿ ಇಲ್ಲಿ ತನಕ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ  ಎಂದು ಹೈಕೋರ್ಟ್​ ಪ್ರಶ್ನಿಸಿತು. ಇದಕ್ಕೆ ಉತ್ತರವಾಗಿ ರಾಜ್ಯ ಸರ್ಕಾರ 22 ಲಕ್ಷ ಎಂದು ಹೇಳಿತು.  ಅಂದರೆ 6 ಕೋಟಿ ಜನರಲ್ಲಿ ಇಷ್ಟು..? ಎಂದು ಹೈಕೋರ್ಟ್​ ಪ್ರಶ್ನಿಸಿತು.  ಮೊದಲ ಡೋಸ್ ತಗೊಂಡು, ಎರಡನೆಯದು ಯಾವಾಗಾದ್ರೂ ತೆಗೆದುಕೊಳ್ಳಬಹುದಾ..? ತಡವಾದ್ರೂ ಪರವಾಗಿಲ್ವಾ.? ಎಂದು ಕೇಂದ್ರ ಸರ್ಕಾರದ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನೆ ಮಾಡಿತು. ರಾಜ್ಯದ ಜನ ಒಂದು ಡೋಸ್ ಪಡೆದು ಎರಡನೆಯದು ಪಡೆಯದಿದ್ದರೆ, ಅದು ನ್ಯಾಷನಲ್ ವೇಸ್ಟ್  ಎಂದು ಹೈಕೋರ್ಟ್​ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ಎರಡನೇ ಡೋಸ್ ಕೊಡುವುದು ನಮ್ಮ ಕರ್ತವ್ಯ. ಮೊದಲ ಡೋಸ್ ವೇಸ್ಟ್ ಆಗಬಾರದು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಮನವರಿಕೆ ಮಾಡಿತು. ಯಾಕೆ ರಾಜ್ಯ ಸರ್ಕಾರ ವ್ಯಾಕ್ಸಿನ್ ಮಾರ್ಗಸೂಚಿ ಪಾಲಿಸಿಲ್ಲ. ಇದು ನಿಜವಾಗಲು ತುಂಬಾ ಗಂಭೀರವಾದ ಲೋಪ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನಿಸಿತು.
Youtube Video

ನೀವು ಎರಡನೇ ಡೋಸ್​​ಗೆ ಶೇಕಡಾ 70% ರಿಸೀವ್ ಮಾಡಿಲ್ಲವಾ.? ಅದಷ್ಟು ಬೇಗ ಎರಡನೇ ಡೋಸ್ ನೀಡುವ ವ್ಯವಸ್ಥೆ ಮಾಡಬೇಕು. ಎರಡನೆಯ ಡೋಸ್​ ತೆಗೆದುಕೊಳ್ಳದಿದ್ದರೆ, ಮೊದಲನೆ ಡೋಸ್ ವೇಸ್ಟ್ ಆಗುತ್ತೆ. ಜನರಲ್ಲಿ ಇಮ್ಯುನಿಟಿ ಬೆಳೆಯುವುದಿಲ್ಲ ಎಂದು  ಹೈಕೋರ್ಟ್ ಹೇಳಿತು. ಆಗ, ನಾವು ನಮ್ಮ ಪ್ರಯತ್ನ ಮೀರಿ ಡೋಸ್ ನೀಡುತ್ತೇವೆ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಹೇಳಿದರು.
Published by: Latha CG
First published: May 13, 2021, 12:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories