ಸಾಗರಮಾಲ ಯೋಜನೆಯಡಿ ವಾಣಿಜ್ಯ ಬಂದರು ವಿಸ್ತರಣೆಗೆ ಕೊನೆಗೂ ಬ್ರೇಕ್; ಕಾಮಗಾರಿಗೆ ತಡೆ ನೀಡಿದ ಹೈಕೋರ್ಟ್

ಇನ್ನು ಹೈಕೊರ್ಟ್ ಕಾಮಗಾರಿಗೆ ತಡೆ ನೀಡಿದರೂ ಪ್ರತಿಭಟನೆ ಮುಂದುವರೆಸಲು ಮೀನುಗಾರ ಮುಖಂಡರು ನಿರ್ಧರಿಸಿದ್ದಾರೆ. ಕಾಮಗಾರಿ ಮಾಡಲು ಈಗಾಗಲೇ ಕಡಲ ತೀರದಲ್ಲಿ ಸಾಕಷ್ಟು ಕಲ್ಲುಗಳನ್ನ ಹಾಕಿದ್ದು ಆ ಕಲ್ಲುಗಳನ್ನ ತೆಗೆಯುವವರೆಗೂ ಪ್ರತಿಭಟನೆ ಮುಂದುವರೆಸಲು ತೀರ್ಮಾನಿಸಿದ್ದಾರೆ. 

HR Ramesh | news18-kannada
Updated:January 23, 2020, 7:41 PM IST
ಸಾಗರಮಾಲ ಯೋಜನೆಯಡಿ ವಾಣಿಜ್ಯ ಬಂದರು ವಿಸ್ತರಣೆಗೆ ಕೊನೆಗೂ ಬ್ರೇಕ್; ಕಾಮಗಾರಿಗೆ ತಡೆ ನೀಡಿದ ಹೈಕೋರ್ಟ್
ಸಾಗರಮಾಲ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು.
  • Share this:
ಕಾರವಾರ: ಸಾಕಷ್ಟು ವಿರೋಧಕ್ಕೆ ಕಾರಣವಾಗಿದ್ದ ಕಾರವಾರ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆಗೆ ಕೊನೆಗೂ ಬ್ರೇಕ್ ಬಿದ್ದಿದೆ. ಗುರುವಾರ ಹೈಕೋರ್ಟ್ ಕಾಮಗಾರಿಗೆ ತಡೆ ನೀಡುವುದರ ಜೊತೆಗೆ ಕಡಲ ತೀರ ಹಿಂದಿನಂತೆ ಸ್ಥಾಪಿಸುವಂತೆ ಆದೇಶ ನೀಡುವ ಮೂಲಕ ವಿಸ್ತರಣೆ ವಿರೋಧಿಸಿ ಹೋರಾಟ ನಡೆಸುತ್ತಿದ್ದವರಿಗೆ ಸಿಹಿ ಸುದ್ದಿ ನೀಡಿದೆ.

ಸಾಗರಮಾಲ ಯೋಜನೆಯಡಿ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆಗೆ ಬಂದರು ಇಲಾಖೆ ಮುಂದಾಗಿತ್ತು. ಕಳೆದ ಜನವರಿ 13 ರಂದು ಪೊಲೀಸ್ ಬಂದೋಬಸ್ತ್​ನಲ್ಲಿ ಸುಮಾರು 125 ಕೊಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನ ಸಹ ಪ್ರಾರಂಭಿಸಲಾಗಿತ್ತು. ಇನ್ನು ಯೋಜನೆಯಿಂದ ಮೀನುಗಾರಿಕೆಗೆ ಸಮಸ್ಯೆ ಆಗಲಿದೆ. ಜೊತೆಗೆ ಕಡಲ ತೀರಕ್ಕೆ ಹಾನಿಯಾಗಲಿದೆ ಎಂದು ಮೀನುಗಾರರು ಪ್ರತಿಭಟನೆಗೆ ಮುಂದಾಗಿದ್ದರು.

ಹನ್ನೊಂದು ದಿನದಿಂದ ಮೀನುಗಾರರ ಪ್ರತಿಭಟನೆ

ಕಳೆದ ಹನ್ನೊಂದು ದಿನಗಳಿಂದ ಮೀನು ಮಾರಾಟದ ಜೊತೆಗೆ ಮೀನುಗಾರಿಕೆಗೆ ಕಡಲಿಗೆ ಇಳಿಯದೇ ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಸರ್ಕಾರ ಮೀನುಗಾರರ ಸಮಸ್ಯೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಬೈತ್ಕೋಲ ಬಂದರು ನಿರಾಶ್ರಿತ ಮೀನುಗಾರರ ಸಹಕಾರ ಸಂಘದ ಮೂಲಕ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಗುರುವಾರ ಅರ್ಜಿಯ ವಿಚಾರಣೆ ಕೈಗೆತ್ತುಕೊಂಡ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ವಿಭಾಗೀಯ ಪೀಠ ಕಾಮಗಾರಿಗೆ ತಡೆ ನೀಡಿ ಆದೇಶ ನೀಡಿದರು.

ಅರ್ಜಿ ವಿಚಾರಣೆಯ ವೇಳೆ ಕಾಮಗಾರಿಗೂ ಮುನ್ನ ಪರಿಸರ ಪರಿಣಾಮ ಅಧ್ಯಯನ ಪ್ರಾಧಿಕಾರದ ಅನುಮತಿ ಪಡೆದಿಲ್ಲ ಎನ್ನುವ ವಿಚಾರ ಚರ್ಚೆಯಾಗಿದ್ದು, ಇದರೊಟ್ಟಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದ್ದರು ಕಾಮಗಾರಿ ಮುಂದುವರೆಸಿದ್ದಕ್ಕೆ ಹೈಕೋರ್ಟ್ ಅಸಮಾಧನಾ ವ್ಯಕ್ತಪಡಿಸಿದೆ. ಕಾಮಗಾರಿಗಾಗಿ ಈಗಾಗಲೇ ಕಡಲ ತೀರದಲ್ಲಿ ಕಲ್ಲುಗಳನ್ನ ಹಾಕಲಾಗಿದೆ. ಕಲ್ಲುಗಳನ್ನ ತೆಗೆದು ಕಡಲ ತೀರ ಹಿಂದಿನಂತೆ ಮರು ಸ್ಥಾಪಿಸಲು ಹೈಕೋರ್ಟ್ ಆದೇಶ ನೀಡಿದೆ.

ಪ್ರತಿಭಟನೆ ಮುಂದುವರೆಸಲು ಮುಂದಾದ ಮೀನುಗಾರರುಕಳೆದ ಹನ್ನೊಂದು ದಿನಗಳಿಂದ ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಹೈಕೊರ್ಟ್ ಕಾಮಗಾರಿಗೆ ತಡೆ ನೀಡಿದರೂ ಪ್ರತಿಭಟನೆ ಮುಂದುವರೆಸಲು ಮೀನುಗಾರ ಮುಖಂಡರು ನಿರ್ಧರಿಸಿದ್ದಾರೆ. ಗುರುವಾರ ಹೈಕೋರ್ಟ್ ತಡೆ ನೀಡುತ್ತಿದ್ದಂತೆ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ಮೀನುಗಾರರು ನಮಗೆ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿದೆ ಎಂದು ಸಂತಸ ಪಟ್ಟರು. ಅಲ್ಲದೇ ಕಾಮಗಾರಿ ಮಾಡಲು ಈಗಾಗಲೇ ಕಡಲ ತೀರದಲ್ಲಿ ಸಾಕಷ್ಟು ಕಲ್ಲುಗಳನ್ನ ಹಾಕಿದ್ದು ಆ ಕಲ್ಲುಗಳನ್ನ ತೆಗೆಯುವವರೆಗೂ ಪ್ರತಿಭಟನೆ ಮುಂದುವರೆಸಲು ತೀರ್ಮಾನಿಸಿದ್ದಾರೆ.

ಇದನ್ನು ಓದಿ: ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ ವಿರೋಧ: ಬಂದ್ ಯಶಸ್ವಿ

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮೀನುಗಾರ ಮುಖಂಡ ರಾಜು ತಾಂಡೇಲ ಹೈಕೋರ್ಟ್ ತಡೆ ನೀಡಿದ್ದರಿಂದ ಜನವರಿ 26ರಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದನ್ನ ಕೈ ಬಿಡಲಾಗಿದೆ. ಪ್ರತಿಭಟನೆ ಮುಂದುವರೆಸಲು ಮೂಲಕ ಕಾಮಗಾರಿ ರದ್ದು ಮಾಡುವ ಮೂಲಕ ಕಡಲ ತೀರ ಉಳಿಸುವಂತೆ ಆಗ್ರಹಿಸೋಣ ಎಂದು ಕರೆ ನೀಡಿದರು.
First published:January 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ