HOME » NEWS » State » KARNATAKA HIGH COURT DISMISSES WRIT PETITION OF AMAZON FLIPKART AGAINST CCI PROBE LG

ಸಿಸಿಐ ತನಿಖೆ ವಿರುದ್ಧ ಅಮೆಜಾನ್​, ಫ್ಲಿಪ್​ಕಾರ್ಟ್​ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್​

ರಿಟ್​​ನಲ್ಲಿ ಅರ್ಜಿದಾರರು ಎತ್ತಿದ ಸಮಸ್ಯೆಗಳನ್ನು ಈ ಹಂತದಲ್ಲಿ ಪೂರ್ವಾಗ್ರಹ ಮಾಡುವುದು ಹಾಗೂ ತನಿಖೆಯನ್ನು ತಡೆಯುವುದು ಅವಿವೇಕದ ಸಂಗತಿಯಾಗಲಿದೆ ಎಂದು ಹೈಕೋರ್ಟ್​ ಹೇಳಿದೆ.

news18-kannada
Updated:June 12, 2021, 6:54 AM IST
ಸಿಸಿಐ ತನಿಖೆ ವಿರುದ್ಧ ಅಮೆಜಾನ್​, ಫ್ಲಿಪ್​ಕಾರ್ಟ್​ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್​
ಅಮೆಜಾನ್​​
  • Share this:
ನವದೆಹಲಿ(ಜೂ.12): ಸಿಸಿಐ ತನಿಖೆ ವಿರುದ್ಧ ಅಮೆಜಾನ್ ಹಾಗೂ ಫ್ಲಿಪ್​ಕಾರ್ಟ್​ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ಕರ್ನಾಟಕ ಹೈ ಕೋರ್ಟ್​ ವಜಾಗೊಳಿಸಿದೆ. ಆ ಮೂಲಕ ಭಾರತ ಸ್ಪರ್ಧಾ ಆಯೋಗ(ಸಿಸಿಐ) ಇ-ಕಾಮರ್ಸ್​ ಕಂಪನಿಗಳಾದ ಅಮೆಜಾನ್​ ಮತ್ತು ಫ್ಲಿಪ್​ಕಾರ್ಟ್​​ನ ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳ​​ ವಿರುದ್ಧ ತನಿಖೆ ನಡೆಸಬಹುದು ಎಂದು ಜೂನ್​ 11ರಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಇದರೊಂದಿಗೆ ಭಾರತದ ಅತೀ ದೊಡ್ಡ ಇ-ಕಾಮರ್ಸ್​ ಕಂಪನಿಗಳಿಗೆ ಹಿನ್ನಡೆಯಾಗಿದೆ. ನ್ಯಾಯಾಲಯದ ಈ ತೀರ್ಪು ಭಾರತದಲ್ಲಿ ವಿಸ್ತರಣೆಯಾಗುತ್ತಿರುವ ಇ-ಕಾಮರ್ಸ್​ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.

ಸ್ಪರ್ಧೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾರತ ಸ್ಪರ್ಧಾ ಆಯೋಗ ತನಿಖೆಗೆ ನೀಡಿದ ಆದೇಶಕ್ಕೆ ಸಂಬಂಧಿಸಿದಂತೆ ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್​ ರಿಟ್​​ ಅರ್ಜಿ ಸಲ್ಲಿಸಿದ್ದವು. ಆದರೆ ಕರ್ನಾಟಕ ಹೈಕೋರ್ಟ್ ಶುಕ್ರವಾರ​ ಈ ಅರ್ಜಿಯನ್ನು ವಜಾ ಮಾಡಿದೆ. ನ್ಯಾಯಮೂರ್ತಿ ದಿನೇಶ್​ ಕುಮಾರ್ ಈ ಎರಡು ಕಂಪನಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ:Astrology: ಸಂಬಂಧಿಕರಿಂದ ಸಮಸ್ಯೆ ಎದುರಾಗಲಿದೆ ಈ ರಾಶಿಯವರಿಗೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ರಿಟ್​​ನಲ್ಲಿ ಅರ್ಜಿದಾರರು ಎತ್ತಿದ ಸಮಸ್ಯೆಗಳನ್ನು ಈ ಹಂತದಲ್ಲಿ ಪೂರ್ವಾಗ್ರಹ ಮಾಡುವುದು ಹಾಗೂ ತನಿಖೆಯನ್ನು ತಡೆಯುವುದು ಅವಿವೇಕದ ಸಂಗತಿಯಾಗಲಿದೆ ಎಂದು ಹೈಕೋರ್ಟ್​ ಹೇಳಿದೆ.

2020ರ ಜನವರಿ 13ರಂದು ಫ್ಲಿಪ್​ಕಾರ್ಟ್​​ ಮತ್ತು ಅಮೆಜಾನ್​ ಉದ್ಯಮ ನಡೆಸುವ ರೀತಿಯು ಸರಿಯಲ್ಲ ಎಂಬ ಆರೋಪ ಕೇಳಿಬಂದಿತ್ತು. ಹೆಚ್ಚಿನ ರಿಯಾಯಿತಿಗಳು ಹಾಗೂ ತಮ್ಮ ಫ್ಲಾಟ್​ಪಾರ್ಮ್​​ನಲ್ಲಿ ಕೆಲವೇ ಮಾರಾಟಗಾರರ ಜೊತೆ ಕೈ ಜೋಡಿಸುತ್ತಿದೆ ಎಂದು ಸಿಸಿಐ ತನಿಖೆಗೆ ಆದೇಶಿಸಿತ್ತು.

ಸುಮಾರು 18 ತಿಂಗಳ ಹಿಂದೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಣ್ಣ ಮತ್ತು ಮಧ್ಯಮ ವ್ಯಾಪಾರ ಮಾಲೀಕರನ್ನು ಪ್ರತಿನಿಧಿಸುವ ದೆಹಲಿ ವ್ಯಾಪಾರ್​ ಮಹಾಸಂಘ್​(ಡಿವಿಎಂ) ದೇಶದ ಇಬ್ಬರು ಅತೀ ದೊಡ್ಡ ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್​ ಮತ್ತು ಫ್ಲಿಪ್​​ಕಾರ್ಟ್​​ ವಿರುದ್ಧ ದೂರು ​ಸಲ್ಲಿಸಿತ್ತು. ಸ್ಮಾರ್ಟ್​​ಫೋನ್​ಗಳು ಹಾಗೂ ಸಂಬಂಧಿತ ಆಕ್ಸೆಸರಿಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಡಿವಿಎಂ ಆರೋಪ ಮಾಡಿತ್ತು.
Youtube Video
ಈ ದೂರಿನ ಆಧಾರದ ಮೇಲೆ ಸಿಸಿಐ 2020ರ ಜನವರಿಯಲ್ಲಿ ತನಿಖೆಗೆ ಆದೇಶಿಸಿತ್ತು. ಆದರೆ ಇ-ಕಾಮರ್ಸ್​ ಕಂಪನಿಗಳು ಸಿಸಿಐ ತನಿಖೆ ವಿರುದ್ಧ ರಿಟ್​ ಅರ್ಜಿ ಸಲ್ಲಿಸಿದ್ದವು. ಈಗ ಕರ್ನಾಟಕ ಹೈ ಕೋರ್ಟ್​ ಅಮೆಜಾನ್​ ಮತ್ತು ಫ್ಲಿಪ್​ಕಾರ್ಟ್​​ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ವಜಾಗೊಳಿಸುವ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಇದರಿಂದ ದೇಶದ ಬೃಹತ್​ ಇ-ಕಾಮರ್ಸ್​ ಕಂಪನಿಗಳಿಗೆ ಹಿನ್ನಡೆಯಾಗಿದೆ.
Published by: Latha CG
First published: June 12, 2021, 6:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories