Child Adoption: ಇನ್ಮುಂದೆ ಪೋಷಕರಿಂದ ನೇರವಾಗಿ ಮಗುವನ್ನು ದತ್ತು ಪಡೆದುಕೊಳ್ಳುವುದು ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್ ಸ್ಪಷ್ಟನೆ

ಪೋಷಕರಿಂದ ನೇರವಾಗಿ ಮಗುವನ್ನು ದತ್ತು ಪಡೆಯುವುದು ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಕಠಿಣ ಸಂದರ್ಭಗಳಲ್ಲಿ ದತ್ತು ನಿಯಮಗಳನ್ನು ಪಾಲಿಸದೆ ನೇರವಾಗಿ ಜೈವಿಕ ಪೋಷಕರಿಂದ ಮಕ್ಕಳನ್ನು ತೆಗೆದುಕೊಂಡು ಸಾಕಿಕೊಳ್ಳುವವರಿಗೆ ಇದು ಉಪಯುಕ್ತ ತೀರ್ಪಾಗಿದ್ದು, ಮಗುವಿನ ತಂದೆ ತಾಯಿಯಿಂದ ನೇರವಾಗಿ ಮಗುವನ್ನು ಪಡೆದು ಸಾಕುವುದು ಬಾಲ ನ್ಯಾಯ ಕಾಯಿದೆ 2015ರ ಸೆಕ್ಷನ್ 80 ರಡಿ ಅಪರಾಧವಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

  • Share this:
ಪೋಷಕರಿಂದ (Parents) ನೇರವಾಗಿ ಮಗುವನ್ನು ದತ್ತು (Adoption of Child) ಪಡೆಯುವುದು ಅಪರಾಧವಲ್ಲ (Crime) ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಹೇಳಿದೆ. ಕಠಿಣ ಸಂದರ್ಭಗಳಲ್ಲಿ ದತ್ತು ನಿಯಮಗಳನ್ನು ಪಾಲಿಸದೆ ನೇರವಾಗಿ ಜೈವಿಕ ಪೋಷಕರಿಂದ (Biological parent) ಮಕ್ಕಳನ್ನು ತೆಗೆದುಕೊಂಡು ಸಾಕಿಕೊಳ್ಳುವವರಿಗೆ ಇದು ಉಪಯುಕ್ತ ತೀರ್ಪಾಗಿದ್ದು, ಮಗುವಿನ ತಂದೆ (Father) ತಾಯಿಯಿಂದ (Mother) ನೇರವಾಗಿ ಮಗುವನ್ನು ಪಡೆದು ಸಾಕುವುದು ಬಾಲ ನ್ಯಾಯ ಕಾಯಿದೆ (Child Justice Act) 2015ರ ಸೆಕ್ಷನ್ 80 ರಡಿ ಅಪರಾಧವಲ್ಲ ಎಂದು ನ್ಯಾಯಾಲಯ (Court) ಆದೇಶಿಸಿದೆ. ಪರಿಚ್ಛೇದ 80ರ ಅನ್ವಯ ನಿಬಂಧನೆಗಳು ಅಥವಾ ಕಾರ್ಯವಿಧಾನಗಳನ್ನು ಅನುಸರಿಸದೆ ಯಾವುದೇ ಅನಾಥ (Orphanage), ಪರಿತ್ಯಕ್ತ ಅಥವಾ ಶರಣಾದ ಮಗುವನ್ನು ದತ್ತು ತೆಗೆದುಕೊಂಡರೆ ಜೆಜೆ ಆಕ್ಟ್ ಅಡಿಯಲ್ಲಿ ಶಿಕ್ಷೆಯನ್ನು ಒದಗಿಸಲಾಗುತ್ತದೆ. ಧಾರವಾಡದ ನ್ಯಾಯಮೂರ್ತಿ ಹೇಮಂತ ಚಂದನಗೌಡ (Hemantha Chandana Gowda) ಅವರಿದ್ದ ಏಕಸದಸ್ಯ ಪೀಠ ಪೋಷಕರಿಂದ ನೇರವಾಗಿ ಮಗುವನ್ನು ದತ್ತು ಪಡೆಯಲು ಅನುಮತಿ ನೀಡಿ ಆದೇಶಿಸಿದೆ.

ದತ್ತು ನಿಯಮ ಉಲ್ಲಂಘಿಸಲಾಗಿದೆಯೆಂದು ತಮ್ಮ ವಿರುದ್ಧ ಹೂಡಿದ್ದ ಪ್ರಕರಣ ರದ್ದು ಕೋರಿ ಬಾನು ಬೇಗಂ W/O ಖಾಜಾಸಾಬ್ ಅಲಿಯಾಸ್ ಮೆಹಬೂಬಸಾಬ್ ದಂಪತಿ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ಕೈಗೊಂಡ ಧಾರವಾಡ ಏಕಸದಸ್ಯ ಪೀಠ ದಂಪತಿ ಸಲ್ಲಿಸಿದ ಅರ್ಜಿ ಮತ್ತು ಅವರ ವಿರುದ್ಧ ಆರಂಭಿಸಲಾದ ಪ್ರಕ್ರಿಯೆಗಳನ್ನು ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?
ಪ್ರಕರಣದಲ್ಲಿ ಆರೋಪಿ ನಂ.3 ಹೆಣ್ಣು ಮಗುವೊಂದನ್ನು ಯಾವುದೇ ದತ್ತು ನಿಯಮದ ನಿಬಂಧನೆಗಳು ಅಥವಾ ಕಾರ್ಯವಿಧಾನವನ್ನು ಅನುಸರಿಸದೆ ಆರೋಪಿ ಸಂ.1 ಮತ್ತು 2 ( ಜೈವಿಕ ಪೋಷಕರು) ರಿಂದ ದತ್ತು ತೆಗೆದುಕೊಂಡಿದ್ದಾನೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.

ಅಲ್ಲದೇ ಸೆಕ್ಷನ್ 80ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನು ರೂಪಿಸುವ ಕಾಯಿದೆಯಡಿಯಲ್ಲಿ ಪ್ರಕರಣವನ್ನು ಸೂಚಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಅವರು ಅಪರಾಧದ ಪ್ರಕರಣವನ್ನು ಕೈಗೆತ್ತಿಕೊಂಡು ದಂಪತಿಗಳಿಗೆ ಸಮನ್ಸ್ ನೀಡಿದರು.

ಇದರ ಬೆನ್ನಲ್ಲೇ ನಾಲ್ವರು ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಮಗುವನ್ನು ನಮ್ಮಿಂದ ಕರೆದುಕೊಂಡು ಹೋಗಲಾಗಿದೆ ಎಂದು ಅರ್ಜಿದಾರರು ಮನವಿ ಸಲ್ಲಿಸಿದ್ದರು. ಆರೋಪಿ ನಂ.3 ದತ್ತು ಪಡೆದುಕೊಂಡ ಮಗು ಅನಾಥ, ಪರಿತ್ಯಕ್ತ ಅಥವಾ ಶರಣಾದ ಮಗು ಅಲ್ಲ ಎಂದು ಕೋರ್ಟಿಗೆ ತಿಳಿಸಿದರು ಮತ್ತು ಇದನ್ನು ಪ್ರಶ್ನಿಸಿ, ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ:  Bengaluru: ಮನೆ ಮನೆಗಳಲ್ಲಿ ಮೊಳಗಿತು ರಾಮ ಜಪ, ಹನುಮಾನ್ ಚಾಲೀಸ್ ಮಂತ್ರ!

ಈ ಎಲ್ಲಾ ವಿಚಾರಗಳನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿ ಅರ್ಜಿದಾರರ ವಿರುದ್ಧ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯಲಯ ಹೇಳಿದೆ.

ಕಾಯಿದೆಯಲ್ಲೇನಿದೆ?
ಪ್ರಸಕ್ತ ಪ್ರಕರಣದಲ್ಲಿ ಮಗು ಅನಾಥ ಅಥವಾ ನಿರಾಶ್ರಿತ ಮಗುವಲ್ಲ ಅಥವಾ ಬಾಲ ನ್ಯಾಯ ಕಾಯಿದೆಯ ಸೆಕ್ಷನ್ 2(1),2(42) ಮತ್ತು 2(60)ರಡಿ ವಶಕ್ಕೆ ಒಪ್ಪಿಸಿರುವ ಮಗುವಲ್ಲ. ಹಾಗಾಗಿ ಆರೋಪ ಪಟ್ಟಿ ಸಲ್ಲಿಕೆಯಲ್ಲಿ ಹುರುಳಿಲ್ಲ ಎಂದು ಹೇಳಿರುವ ನ್ಯಾಯಪೀಠ ದಂಪತಿಯ ವಿರುದ್ಧದ ಪ್ರಕರಣವನ್ನು ರದ್ದು ಮಾಡಿ ಪೋಷಕರಿಂದ ನೇರವಾಗಿ ಮಗುವನ್ನು ದತ್ತು ಪಡೆಯುವುದು ಅಪರಾಧವಲ್ಲ ಎಂದು ಹೇಳಿದೆ.

"ಬಾಲ ನ್ಯಾಯ ಕಾಯಿದೆ (ಆರೈಕೆ ಮತ್ತು ಮಕ್ಕಳ ರಕ್ಷಣಾ) ಕಾಯಿದೆ 2015ರ ಸೆಕ್ಷನ್ 80ರಲ್ಲಿ ಮಗು ಅನಾಥವಾಗಿದ್ದರೆ, ನಿರಾಶ್ರಿತವಾಗಿದ್ದರೆ ಅಥವಾ ಬಾಲಮಂದಿರಗಳಿಗೆ ಒಪ್ಪಿಸಿರುವ ಮಗುವಾಗಿದ್ದರೆ ಆ ಮಗುವನ್ನು ದತ್ತು ಪಡೆದರೆ ಅಂತಹ ವೇಳೆ ನಿಯಮಗಳು ಅನ್ವಯವಾಗುತ್ತವೆ" ಎಂದು ಆದೇಶಿಸಿದೆ.

ಇದನ್ನೂ ಓದಿ: Children name: ಆಗ್ಲೇ ತಮ್ಮ ಮಕ್ಕಳಿಗೆ ಏನು ಹೆಸರಿಡೋದು ಅಂತ ದೊಡ್ಡ ಲಿಸ್ಟ್ ರೆಡಿ ಇಟ್ಕೊಂಡಿದಾರೆ ರಣ್ವೀರ್ ಸಿಂಗ್! ಯಾವಾಗ ಸಿಹಿಸುದ್ದಿ?

ಯಾರದೋ ಮಕ್ಕಳನ್ನು ತಂದು ಸಾಕಿಕೊಳ್ಳುವುದು, ದತ್ತು ನಿಯಮ ಅನುಸರಿಸದೆ ಬೇರೊಂದು ಪ್ರಕ್ರಿಯೆ ಮೂಲಕ ಮಕ್ಕಳು ಎಂದು ಘೋಷಿಸಿಕೊಳ್ಳುವುದು, ಆಸ್ಪತ್ರೆಗಳಿಂದ ಮಕ್ಕಳನ್ನು ತರುವುದು, ಅನಾಥ ಕುಟೀರಗಳಿಂದ ತಂದು ಸಾಕಿಕೊಳ್ಳುವುದು ಇವೆಲ್ಲವೂ ಕಾನೂನಿಗೆ ವಿರುದ್ಧವಾಗಿರುವ ನಿಯಮಗಳು.

ಕಾನೂನು ಮೀರಿ ನಡೆದುಕೊಂಡರೆ ನಿಯಮಾವಳಿ ಪ್ರಕಾರ ದತ್ತು ಪಡೆದವರು ಮತ್ತು ಕೊಟ್ಟವರು ಇಬ್ಬರಿಗೂ ಶಿಕ್ಷೆ ವಿಧಿಸುವ ಅವಕಾಶವಿದೆ. ಆದರೆ ನೇರವಾಗಿ ಮಕ್ಕಳನ್ನು ಹೆತ್ತವರಿಂದ ತೆಗೆದುಕೊಳ್ಳುವುದು ಅಪರಾಧವಲ್ಲ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶ ನೀಡಿದೆ.
Published by:Ashwini Prabhu
First published: