HOME » NEWS » State » KARNATAKA HIGH COURT CANCELLED NITYANANAD BAIL WHO CONVICTED RAPE CASE TODAY GNR

ಅತ್ಯಾಚಾರ ಆರೋಪಿ ನಿತ್ಯಾನಂದ ಜಾಮೀನು ರದ್ದು: ಕರ್ನಾಟಕ ಹೈಕೋರ್ಟ್​ ಆದೇಶ

ನಿತ್ಯಾನಂದನ ಜಾಮೀನು ರದ್ದುಪಡಿಸಬೇಕು ಎಂದು ದೂರುದಾರ ಲೆನಿನ್‌ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಇದೀಗ ಲೆನಿನ್​​​ ಪರ ವಕೀಲರ ಮನವಿ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್​​ ನಿತ್ಯಾನಂದ ಜಾಮೀನು ರದ್ದುಗೊಳಿಸಿದೆ.


Updated:February 5, 2020, 3:17 PM IST
ಅತ್ಯಾಚಾರ ಆರೋಪಿ ನಿತ್ಯಾನಂದ ಜಾಮೀನು ರದ್ದು: ಕರ್ನಾಟಕ ಹೈಕೋರ್ಟ್​ ಆದೇಶ
ನಿತ್ಯಾನಂದ
  • Share this:
ಬೆಂಗಳೂರು(ಜ.05): ನಿತ್ಯಾನಂದ ಜಾಮೀನು ರದ್ದುಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಸಂಬಂಧ ಕರ್ನಾಟಕ ಹೈಕೋರ್ಟ್​ ತನ್ನ ತೀರ್ಪು ಪ್ರಕಟಿಸಿದೆ. ಎರಡು ದಿನಗಳ ಹಿಂದೆ ಫೆಬ್ರವರಿ 3ನೇ ತಾರೀಕಿನಂದು "ಅತ್ಯಾಚಾರ ಆರೋಪವೊತ್ತ ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಆತನ ಪಾಸ್‌ಪೋರ್ಟ್‌ ಅವಧಿ ಮುಗಿದಿದೆ. ಹೀಗಿದ್ದರೂ ವಿದೇಶ ಪ್ರವಾಸ ಕೈಗೊಂಡಿದ್ದಾನೆ. 2ನೇ ಆರೋಪಿಯೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ನಿತ್ಯಾನಂದನ ಜಾಮೀನು ರದ್ದುಪಡಿಸಬೇಕು" ಎಂದು ದೂರುದಾರ ಲೆನಿನ್‌ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಇದೀಗ ಲೆನಿನ್​​​ ಪರ ವಕೀಲರ ಮನವಿ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್​ ಏಕಸದಸ್ಯ ಪೀಠ​ ನಿತ್ಯಾನಂದ ಜಾಮೀನು ರದ್ದುಗೊಳಿಸಿದೆ.

ಇತ್ತೀಚೆಗೆ ಫೆ.3ನೇ ತಾರೀಕಿನಂದು ನಿತ್ಯಾನಂದ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ. ಹಾಗಾಗಿ ನ್ಯಾಯಲಯ ನೀಡಿದ ನೋಟಿಸ್​ ಸ್ವಾಮೀಜಿಗೆ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಪೊಲೀಸರು ಹೈಕೋರ್ಟ್​​ಗೆ ತಿಳಿಸಿದ್ದರು. ನಿತ್ಯಾನಂದನ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಿಕ್ಕಿರುವ ಜಾಮೀನು ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್​ಗೆ ಪೊಲೀಸರು ಹೀಗೆ ಅಫಿಡವಿಟ್‌ ಸಲ್ಲಿಸಿದ್ದರು.

ಕೋರ್ಟ್​ ನೀಡಿದ ನೋಟಿಸ್​​ ನಿತ್ಯಾನಂದ ಸ್ವಾಮೀಜಿಗೆ ನೀಡಲು ಆಗುತ್ತಿಲ್ಲ. ಆದರೆ, ನಾವು ನೋಟಿಸ್​​ ತನ್ನ ಸಹವರ್ತಿ ಕುಮಾರಿ ಅರ್ಚನಾನಂದರಿಗೆ ನೀಡಿದ್ದೇವೆ. ಸದ್ಯ ನಿತ್ಯಾನಂದ ಸ್ವಾಮೀಜಿ ಬಿಡದಿ ಆಶ್ರಮದಲ್ಲಿ ಲಭ್ಯವಿಲ್ಲ. ಅವರು ಆಧ್ಯಾತ್ಮ ಪ್ರವಾಸದಲ್ಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕುಮಾರಿ ಅರ್ಚನಾನಂದರಿಗೆ ಈ ನೋಟಿಸ್​ ನೀಡಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬಾಲರಾಜ್ ಬಿ. ಹೈಕೋರ್ಟ್‌ಗೆ ನೀಡಿದ ವರದಿಯಲ್ಲಿ ತಿಳಿಸಿದ್ದರು.

ಆಗ ಪೊಲೀಸರ ವಿರುದ್ಧ ಕಿಡಿಕಾರಿದ್ದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ತಮ್ಮ ಅಸಮಾಧಾನ ಹೊರಹಾಕಿದರು. ಕೋರ್ಟ್​ ನೋಟಿಸ್​ ನೀವು ತಲುಪಿಸುತ್ತಿರುವುದು ಇದೇ ಮೊದಲ ಸಲವೇ? ಹೀಗೆ ನ್ಯಾಯಲಯಕ್ಕೆ ಕ್ಷುಲ್ಲಕ ಕಾರಣ ನೀಡಲು ನಾಚಿಕೆಯಾಗುವುದಿಲ್ಲವೇ? ಏನು ಆಟವಾಡುತ್ತಿದ್ದೀರಾ ಎಂದು ಪೊಲೀಸರಿಗೆ ಪ್ರಶ್ನಿಸಿದ್ದರು.

ಇದನ್ನೂ ಓದಿ: ‘ನಿತ್ಯಾನಂದ ಆಧ್ಯಾತ್ಮ ಪ್ರವಾಸದಲ್ಲಿದ್ದಾರೆ; ಹೀಗಾಗಿ ನೋಟಿಸ್​​ ತಲುಪಿಸಲು ಸಾಧ್ಯವಿಲ್ಲ‘: ಹೈಕೋರ್ಟ್​ಗೆ ಪೊಲೀಸರು

ಹಿಂದಿನಿಂದಲೂ ನಿತ್ಯಾನಂದ ದೇಶದಿಂದ ಪರಾರಿಯಾಗಿದ್ದಾನೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಈ ವದಂತಿಯನ್ನು ತಳ್ಳಿಹಾಕಿದ್ದ ಅವರ ಶಿಷ್ಯರು ನಿತ್ಯಾನಂದ ಸ್ವಾಮಿಗಳು ದೀರ್ಘಕಾಲದ ತಪಸ್ಸಿಗಾಗಿ ಉತ್ತರ ಭಾರತಕ್ಕೆ ತೆರಳಿದ್ದಾರೆ ಎಂದು ಹೇಳಿದ್ದರು. ಬಳಿಕ ವಿವಾದಿತ ಸ್ವಾಮಿ ನಿತ್ಯಾನಂದ ದೇಶ ಬಿಟ್ಟು ಹೋಗಿರುವುದನ್ನು ಗುಜರಾತ್​ ಪೊಲೀಸರು ಸ್ಪಷ್ಟಪಡಿಸಿದ್ದರು.

ವಿವಾದಗಳಿಂದಲೇ ಹೆಸರಾಗಿರುವ ಸ್ವಾಮಿ ನಿತ್ಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬರುತ್ತಿದ್ದಂತೆ ಅವರು ಗುಜರಾತ್​ನ ಅಹಮದಾಬಾದ್​ನಲ್ಲಿರುವ ತಮ್ಮ ಆಶ್ರಮದ ಇನ್ನೊಂದು ಬ್ರಾಂಚ್​ಗೆ ಶಿಫ್ಟ್​ ಆಗಿದ್ದರು. ಅವರ ಆಶ್ರಮದ ಆಡಳಿತ ಮಂಡಳಿಯೂ ಅಹಮದಾಬಾದ್​ಗೆ ಸ್ಥಳಾಂತರವಾಗಿತ್ತು. ನಂತರ ಅವರು ಬೆಂಗಳೂರಿನ ಬಿಡದಿ ಆಶ್ರಮದಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ನಿತ್ಯಾನಂದ ಸ್ವಾಮಿ ಇತ್ತೀಚೆಗೆ ತಮ್ಮ ಪ್ರವಚನದ ಕೆಲವು ವಿಡಿಯೋ ತುಣುಕುಗಳನ್ನು ಕೂಡ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿದ್ದರು. ಆದರೆ, ಆ ಯಾವ ವಿಡಿಯೋಗಳೂ ಈಗ ರೆಕಾರ್ಡ್​ ಮಾಡಿರುವುದಲ್ಲ. ನಿತ್ಯಾನಂದ ಸ್ವಾಮಿ ಬೆಂಗಳೂರಿಗೆ ಬಾರದೆ ಅನೇಕ ವರ್ಷಗಳಾಗಿವೆ. ಆತನ ಮೇಲೆ ರಂಜಿತಾ ಸೇರಿದಂತೆ ಇನ್ನೂ ಕೆಲವು ಶಿಷ್ಯರು ಅತ್ಯಾಚಾರದ ಆರೋಪ ಮಾಡಿದ ನಂತರ ದೇಶ ಬಿಟ್ಟು ಹೋಗಿದ್ದಾರೆ. ಅವರನ್ನು ಭಾರತದಲ್ಲಿ ಹುಡುಕುವುದು ವ್ಯರ್ಥ ಎಂದು ಅಹಮದಾಬಾದ್​ ಪೊಲೀಸರು ಹೇಳಿದ್ದರು. 

ಕೆಲವು ದಿನಗಳ ಹಿಂದಷ್ಟೆ ನಿತ್ಯಾನಂದ ಆಶ್ರಮದ ಸಿಬ್ಬಂದಿಯ ವಿರುದ್ಧ ನಿತ್ಯಾನಂದನ ಶಿಷ್ಯರೊಬ್ಬರು ಗಂಭೀರ ಆರೋಪ ಮಾಡಿದ್ದರು. ಆಶ್ರಮದ ಗುರುಕುಲದಲ್ಲಿರುವ ತಮ್ಮ ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ, ಆಕೆಯನ್ನು ನೋಡಲು ಕೂಡ ಅವಕಾಶ ನೀಡುತ್ತಿಲ್ಲ ಎಂದು ಅಹಮದಾಬಾದ್​ ಆಶ್ರಮದ ಮುಂದೆ ಹೇಳಿಕೆ ನೀಡಿದ್ದರು. ನಂತರ ಈ ಪ್ರಕರಣ ಇನ್ನಷ್ಟು ತಿರುವುಗಳನ್ನು ಪಡೆದುಕೊಂಡಿತ್ತು.

2018ರಲ್ಲೇ ನಿತ್ಯಾನಂದ ಭಾರತದಿಂದ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿತ್ತು. 2018ರ ಮಧ್ಯದಲ್ಲಿ ಪಾಸ್​ಪೋರ್ಟ್​ ನವೀಕರಣಕ್ಕೆ ರಾಮನಗರ ಪೊಲೀಸರಿಗೆ ಮನವಿ ಮಾಡಿದ್ದ. ಆದರೆ ಅಂದು ಎಸ್​ಪಿಯಾಗಿದ್ದ ರಮೇಶ್​ ಬಾನೋತ್​ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹಲವು ಪ್ರಕರಣಗಳು ಬಾಕಿ ಇವೆ ಮತ್ತು ಕೋರ್ಟ್​ ಸಮನ್ಸ್​ ನೀಡಿದ ನಂತರವೂ ಕೋರ್ಟ್​ಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಪಾಸ್​ಪೋರ್ಟ್​ ನವೀಕರಣಕ್ಕೆ ಪೊಲೀಸರು ಪರವಾನಗಿ ನೀಡಿರಲಿಲ್ಲ. ಅದರ ಬೆನ್ನಲ್ಲೇ ಅವರು ಗುಜರಾತ್​ಗೆ ಹೋಗಿದ್ದರು.

ದೇಶದಿಂದ ಹೇಗೆ ಪರಾರಿ?: ಮೂಲಗಳ ಪ್ರಕಾರ, ನಿತ್ಯಾನಂದ ದೇಶದಿಂದ ಪರಾರಿಯಾಗಲು ಒಂದೋ ನಕಲಿ ಪಾಸ್​ಪೋರ್ಟ್​ ಮತ್ತು ಐಡೆಂಟಿಟಿ ಬಳಕೆ ಮಾಡಿರಬೇಕು. ಇಲ್ಲವಾದಲ್ಲಿ ಬೇರೆ ದೇಶದ ಪಾಸ್​ಪೋರ್ಟ್​ ಪಡೆದು ಭಾರತದಿಂದ ಆಚೆ ಹೋಗಿರಬೇಕು. ಅಥವಾ ರಾಮನಗರ ಪೊಲೀಸರು ನವೀಕರಣಕ್ಕೆ ಅವಕಾಶ ನೀಡದ ನಂತರವೂ ಇನ್ನಾವುದಾದರೂ ಮಾರ್ಗದಿಂದ ಪಾಸ್​ಪೋರ್ಟ್​ ನವೀಕರಿಸಿಕೊಂಡಿರಬೇಕು.
Youtube Video
First published: February 5, 2020, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories