ನಾಡಿನೆಲ್ಲೆಡೆ ವರಮಹಾಲಕ್ಷ್ಮೀ (Varamahalakshmi) ಹಬ್ಬದ ಸಂಭ್ರಮ ಮನೆಮಾಡಿದೆ. ಆದರೆ ಹಬ್ಬದ ಸೆಲಬ್ರೇಷನ್ಗೆ (Celebration) ವರುಣ ಅಡ್ಡಿಯಾಗಿದ್ದಾನೆ. ಹಬ್ಬಕ್ಕೆ ಹೂವು ತರಲು ಹೋದವರು ನೀರುಪಾಲಾಗಿದ್ದಾರೆ. ಕೆಲವೆಡೆ ಹಬ್ಬಕ್ಕೆ ತಂದಿಟ್ಟ ಹೂವು-ಹಣ್ಣು, ಸಾಮಾಗ್ರಿಗಳು ಪ್ರವಾಹಕ್ಕೆ (Flood) ಪಾಲಾಗಿವೆ. ರಾಜ್ಯದ (Karnataka) ಬಹುತೇಕ ಕಡೆ ಭಾರೀ ವರ್ಷಧಾರೆಯಾಗ್ತಿದೆ. ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಬೆಂಗಳೂರಿನಲ್ಲೂ (Bangalore) ಮೋಡ ಕವಿದ ವಾರಾವರಣವಿದೆ. ಉತ್ತರ ಕರ್ನಾಟಕದಲ್ಲೂ (Uttara Karnataka) ಮಳೆರಾಯ ಅಬ್ಬರಿಸ್ತಿದ್ದಾನೆ. ಕರಾವಳಿಯಲ್ಲಿ (Costal) ಮೇಘ ಸ್ಫೋಟಕ್ಕೆ (Cloud burst) ಜನ ಆತಂಕದಲ್ಲಿ ದಿನದೂಡುತ್ತಿದ್ದಾರೆ. ಹಬ್ಬದ ದಿನವೂ ಬಿಡುವು ಕೊಡದ ವರುಣದೇವನಿಗೆ ಜನ ಹಿಡಿಶಾಪ ಹಾಕ್ತಿದ್ದಾರೆ. ಎಲ್ಲೆಲ್ಲಿ ಮಳೆಯಿಂದ ಅವಾಂತರವಾಗಿದೆ ಅನ್ನೋದರ ಸಂಪೂರ್ಣ ವಿವರ ಇಲ್ಲಿದೆ.
ಹಬ್ಬಕ್ಕೆ ತಾವರೆ ಹೂ ತರಲು ಹೋದ ವ್ಯಕ್ತಿ ಪ್ರವಾಹಕ್ಕೆ ಸಿಕ್ಕಿ ನಾಪತ್ತೆಯಾಗಿದ್ದಾರೆ. ಸತತ ವರ್ಷಧಾರೆಯಿಂದ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಮಳೆಗೆ ನೂರಾರು ಎಕರೆ ಬೆಳೆ ಹಾನಿಯಾಗಿದೆ.
ಹಬ್ಬಕ್ಕೆ ಹೂ ತರಲು ಹೋದವ ನಾಪತ್ತೆ
ದೊಡ್ಡಬಳ್ಳಾಪುರದಲ್ಲಿ ವರಮಹಾಲಕ್ಷ್ಮೀ ಪೂಜೆಗೆ ಹೂವು ತರಲು ಹೋದ ಕೃಷ್ಣಪ್ಪ (55) ಎಂಬುವವರು ಸಾವನ್ನಪ್ಪಿದ್ದಾರೆ. ಕೊನಘಟ್ಟದಲ್ಲಿ ಘಟನೆ ಸಂಭವಿಸಿದ್ದು ಕೆರೆ ಬಳಿ ಚಪ್ಪಲಿ ಪತ್ತೆಯಾಗಿದೆ. ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!
ಹಬ್ಬವೆಲ್ಲಾ ನೀರುಪಾಲು!
ರಾಯಚೂರು ಜಿಲ್ಲೆಯಲ್ಲಿ ಸುರಿದ ಮಳೆಗೆ ಜಾಲಿಬೆಂಚಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಹಬ್ಬಕ್ಕೆ ತಂದಿಟ್ಟಿದ ಸಾಮಾಗ್ರಿಗಳೆಲ್ಲಾ ನೀರುಪಾಲಾಗಿದೆ. ಮೈಸೂರಲ್ಲಿ ಮಳೆಗೆ ರೈತರು ಕಂಗಾಲಾಗಿದ್ದಾರೆ. ಹುಣಸೂರಿನ ಕೆಬ್ಬೆ ಕೊಪ್ಪಲು ಗ್ರಾಮದಲ್ಲಿ 2 ಮನೆಗಳು ಧರಾಶಾಹಿಯಾಗಿದೆ. ನದಿಯಂತೆ ನೀರು ಹರಿದು ಬಂದು ಮನೆಯೆಲ್ಲಾ ದ್ವೀಪದಂತಾಗಿದೆ. ಅಂಗಡಿಗಳಿಗೂ ನೀರು ನುಗ್ಗಿದೆ.
ನೂರಾರು ಎಕರೆ ಬೆಳೆ ಹಾನಿ
ಯಾದಗಿರಿಯಲ್ಲಿ ಭೀಮಾನದಿಗೆ 50 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಭೀಮಾ ನದಿ ತೀರದಲ್ಲಿ ಆತಂಕ ಎದುರಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಸುವರ್ಣಾವತಿ, ಚಿಕ್ಕಹೊಳೆ ಜೋಡಿ ಜಲಾಶಯಗಳಿಂದ ಅಧಿಕ ನೀರು ರಿಲೀಸ್ ಮಾಡಲಾಗಿದೆ. ಪರಿಣಾಮ ನೂರಾರು ಎಕರೆ ಕಬ್ಬು, ಟೊಮ್ಯಾಟೊ, ಬಾಳೆ ಅರಿಶಿನ ಬೆಳೆ ಹಾನಿಯಾಗಿದೆ.
ಮಂಡ್ಯದಲ್ಲಿ ಮಳೆ ಅವಾಂತರ ಮುಂದುವರಿದಿದೆ. ಭಾರೀ ಮಳೆಗೆ ಮಂಡ್ಯದ ಮೇಲುಕೋಟೆಯಲ್ಲಿರುವ ಪುರಾಣ ಪ್ರಸಿದ್ದ ಅಕ್ಕತಂಗಿ ಕೊಳದ ಗೋಡೆ ಕುಸಿತವಾಗಿದೆ. ಪಶ್ಚಿಮ ಭಾಗದಲ್ಲಿ 20 ಅಡಿಗಳಷ್ಟು ಗೋಡೆ ಕುಸಿತವಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ! ಎಲ್ಲೆಲ್ಲಿ ಚೆಕ್ ಮಾಡಿ
ಕೊಡಗು ಗಡಿಯಲ್ಲಿ ಮೇಘಸ್ಫೋಟ!
ಕರಾವಳಿ, ಕೊಡಗು ಗಡಿಭಾಗದಲ್ಲಿ ಮಳೆಯಾರ್ಭಟ ತಗ್ಗುತ್ತಿಲ್ಲ. ಸುಳ್ಯದಲ್ಲಿ ಮಳೆ ಅವಾಂತರ ಹೆಚ್ಚಾಗಿದೆ. ಭಾರೀ ಮೇಘ ಸ್ಫೋಟಕ್ಕೆ ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮ ನಲುಗಿದ್ದು, ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕಲ್ಮಕಾರಿನಿಂದ ಕೊಪ್ಪಡ್ಕ, ಗುಳಿಕಾನ, ಶೆಟ್ಟಿಕಟ್ಟ ಸೇರಿದಂತೆ ಮುಂತಾದ ಪ್ರದೇಶಗಳಿಗೆ ಸಂಪರ್ಕ ಕಟ್ ಆಗಿದೆ. ಮಳೆಗೆ 200ಕ್ಕೂ ಅಧಿಕ ಮನೆಗಳ ಸಂಪರ್ಕ ಕಡಿಗೊಂಡಿದೆ.
ಅಪಾಯದಲ್ಲಿದ್ದ ಕುಟುಂಬಗಳ ಸ್ಥಳಾಂತರ ಮಾಡಲಾಗಿದೆ. ಮೇಘಸ್ಫೋಟಕ್ಕೆ ಕಲ್ಮಕಾರಿನ ಸೇತುವೆಯೇ ಸಂಪೂರ್ಣ ಕೊಚ್ಚಿಹೋಗಿದೆ. ಗುಳಿಕಾನದಲ್ಲಿ ಅಪಾಯದಲ್ಲಿದ್ದ 6 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. 21 ಮಂದಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ಕಲ್ಮಕಾರು ಪ್ರದೇಶದಲ್ಲೇ ಎನ್ಡಿಆರ್ಎಫ್, ಅಗ್ನಿಶಾಮಕ ದಳದ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ. ಗ್ರಾಮದ ಜನರು ಸುರಕ್ಷಿತ ಸ್ಥಳದಲ್ಲಿರುವಂತೆ ಜಿಲ್ಲಾಡಳಿತ, ಎನ್ಡಿಆರ್ಎಫ್ ತಂಡ, ಅಗ್ನಿಶಾಮಕ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ