ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು

ಇದು ನನ್ನ ಉಸ್ತುವಾರಿ ಜಿಲ್ಲೆಯಾಗಿದ್ದು ರೋಗಿಗಳಿಗೆ , ಹೆರಿಗೆಯಾದ ತಾಯಂದಿರಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಆ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ ಬಳ್ಳಾರಿ ಸೇರಿದಂತೆ ವಿವಿಧ ಪ್ರಕರಣಗಳ ವರದಿ ತರಿಸಿಕೊಂಡು ಯಾರೇ ಕರ್ತವ್ಯ ಲೋಪ ಎಸಗಿದ್ರು ಅವರ ಮೇಲೆ ಶಿಸ್ತು ಕ್ರಮ ಕೈಗೊಂಡು ಅಮಾನತು ಮಾಡುತ್ತೇನೆ

G Hareeshkumar | news18-kannada
Updated:January 24, 2020, 8:35 AM IST
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು
ಸಚಿವ ಬಿ ಶ್ರೀರಾಮುಲು
  • Share this:
ಚಿತ್ರದುರ್ಗ (ಜ.24) : ಆರೋಗ್ಯ ಇಲಾಖೆ ಸಚಿವ ಬಿ.ಶ್ರೀರಾಮುಲು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ರಾತ್ರಿ ವಾಸ್ತವ್ಯ ಮಾಡಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿದ್ದ ರೋಗಿಗಳ ಯೋಗ ಕ್ಷೇಮ ವಿಚಾರಿಸಿ ಉತ್ತಮ ಚಿಕಿತ್ಸೆಯ ಭರವಸೆ ನೀಡಿದ್ದಾರೆ.

ಕೋಟೆ ನಾಡು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ವಾಸ್ತವ್ಯ ಹೂಡಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯಷ್ಟೆ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಬೇಕಿದ್ದ ಸಚಿವರು ವಾಸ್ತವ್ಯವನ್ನ ಮುಂದೂಡಿದರು. ಆದರೆ, ನಿನ್ನೆ ರಾತ್ರಿ ವಾಸ್ತವ್ಯಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಶ್ರೀರಾಮುಲು ಹೊರಗುತ್ತಿಗೆ ನೌಕರರ ಸಮಸ್ಯೆ ಆಲಿಸಿದ್ರು. ಬಳಿಕ ನೇರವಾಗಿ ಆಸ್ಪತ್ರೆ ವಾರ್ಡ್ ಗಳಿಗೆ ಭೇಟಿ ನೀಡಿ ರೋಗಿಗಳಿ ಉತ್ತಮ ಚಿಕಿತ್ಸೆ ಸಿಗುತ್ತದೆಯೇ ಎಂಬುದರ ಬಗ್ಗೆ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಸ್ಪತ್ರೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಮಾತನಾಡಿದ ಸಚಿವರು, ನಾನು ಬರುತ್ತೇನೆ ವಾಸ್ತವ್ಯ ಹೂಡುತ್ತೇನೆ ಎಂಬ ಕಾರಣಕ್ಕೆ ಆಸ್ಪತ್ರೆಯನ್ನ ಸುಚಿಯಾಗಿ ಇಡುತ್ತಾರೆ. ಇನ್ನು ಮುಂದೆ ಈ ಪ್ರಕ್ರಿಯೆ ಪ್ರತಿನಿತ್ಯ ನಡೆಯಬೇಕು, ಇದು ನನ್ನ ಉಸ್ತುವಾರಿ ಜಿಲ್ಲೆಯಾಗಿದ್ದು ರೋಗಿಗಳಿಗೆ , ಹೆರಿಗೆಯಾದ ತಾಯಂದಿರಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಆ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ ಬಳ್ಳಾರಿ ಸೇರಿದಂತೆ ವಿವಿಧ ಪ್ರಕರಣಗಳ ವರದಿ ತರಿಸಿಕೊಂಡು ಯಾರೇ ಕರ್ತವ್ಯ ಲೋಪ ಎಸಗಿದ್ರು ಅವರ ಮೇಲೆ ಶಿಸ್ತು ಕ್ರಮ ಕೈಗೊಂಡು ಅಮಾನತು ಮಾಡುತ್ತೇನೆ. ಬೆಳಗ್ಗೆ ವರೆಗೆ ಆಸ್ಪತ್ರೆಯಲ್ಲಿಯೇ ವಾಸ್ತವ್ಯ ಮಾಡಿ ಬೆಳಿಗ್ಗೆ ಭೋವಿ ಗುರುಪೀಠದಲ್ಲಿ ಯೋಗ ಮತ್ತು ಪೂಜೆ ಮುಗಿಸಿ ಮತ್ತೆ ಬಂದು ರೋಗಿಗಳು ಹಾಗೂ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡುತ್ತೇನೆ ಎಂದಿದ್ದಾರೆ.

ಇನ್ನೂ ಮಂಗಳೂರು ಬಾಂಬ್ ಪತ್ತೆ ಪ್ರಕರಣ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು, ಬಾಂಬ್ ಸಿಕ್ಕಿರುವುದು ಗಂಭೀರ ವಿಚಾರ, ಯಾವುದೇ ರಾಜಕಾರಣಿಗಳು ಇದನ್ನ ಗಂಭೀರವಾಗಿ ಯೋಚನೆ ಮಾಡಬೇಕು. ಕುಮಾರಸ್ವಾಮಿಯವರನ್ನು ಯಾವತ್ತೂ ಸಿರಿಯಸ್ ಪೊಲಿಟಿಷಿಯನ್ ಎಂದುಕೊಂಡಿಲ್ಲ , ಸೈನಿಕರು ಹೊಟ್ಟೆ ಪಾಡಿಗೆ ಸೇನೆ ಸೇರುತ್ತಾರೆ ಎಂದು ಹೇಳಿದ್ದರು. ಈಗ ಬಾಂಬ್ ವಿಚಾರವಾಗಿ ಕೂಡಾ ತಮಾಷೆಯಾಗಿ ಗೇಲಿಯಾಗಿ ಮಾತನಾಡಿದ್ದಾರೆ.

ಸಿರಿಯಸ್ ವಿಚಾರ ಇದ್ದಾಗ ಸಿರಿಯಸ್ಆಗಿಯೇ ವರ್ತಿಸಬೇಕಾಗುತ್ತೆ. ಯಾರೇ ತಪ್ಪಿತಸ್ಥರಾದರು ಸರ್ಕಾರ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳುತ್ತದೆ. ಮಾನಸಿಕ ಸ್ಥಿತಿ ಕಳೆದುಕೊಂಡ ನಂತರ ಈ ರೀತಿ ಮಾತನಾಡುತ್ತಾರೆ. ಬಿಜೆಪಿ- ಹಿಂದೂ ಸಂಘಟನೆಗಳು ಸಕ್ರಿಯವಾಗಿ ಕೆಲಸ ಮಾಡುತ್ತವೆ, ಕಲ್ಲಡ್ಕ ಪ್ರಭಕರ್ ಭಟ್ ಬಗ್ಗೆ ಕಾಂಗ್ರೆಸ್ ಸರ್ಕಾರದ ವೇಳೆ ಇಂತಹ ಆರೋಪ ಮಾಡಿದ್ದರು. ಇದೆಲ್ಲವೂ ರಾಜಕೀಯ ಶಡ್ಯಂತ್ರ , ಏನು ಮಾಡಿದರು ಬಿಜೆಪಿ ಸಕ್ರಿಯವಾಗಿ ಕೆಲಸ ಮಾಡುತ್ತದೆ.

ಇದನ್ನೂ ಓದಿ : ಮೌಢ್ಯ ವಿರೋಧಿ ಕಾಯ್ದೆ ಜಾರಿಗೊಳಿಸಿದ ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಅಭಿನಂದನೆ; ಬಿಜೆಪಿಗೆ ಈಗ ಜ್ಞಾನದೋಯವಾಗಿದೆ ಎಂದ ಮಾಜಿ ಸಿಎಂ

ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿದ್ದು ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸ್ವಚ್ಚತೆ ಇಲ್ಲದೆ ಗಬ್ಬು ನಾರುತ್ತಿದ್ದ ಜಿಲ್ಲಾಸ್ಪತ್ರೆ ಸಚಿವರ ಆಸ್ಪತ್ರೆ ವಾಸ್ತವ್ಯದ ಕಾರಣಕ್ಕೆ ಸ್ವಚ್ಚಗೊಂಡಿದೆ. ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡಿ ರೋಗಿಗಳ ಸಮಸ್ಯೆ ಕೇಳಿರುವ ಸಚಿವರು ಆಸ್ಪತ್ರೆ  ಸುವ್ಯವಸ್ತೆಯ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.(ವರದಿ : ವಿನಾಯಕ ತೋಡರನಾಳ್)
First published:January 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading