HOME » NEWS » State » KARNATAKA HEALTH DEPARTMENTS INNOVATIVE WOMENS DAY CELEBRATION SKTV MAK

ಪಿಂಕ್ ಬೂತ್​ನಲ್ಲಿ ಮಹಿಳೆಯರಿಂದ, ಮಹಿಳಿಯರಿಗಾಗಿ ವ್ಯಾಕ್ಸಿನ್; ಆರೋಗ್ಯ ಇಲಾಖೆಯ ವಿನೂತನ ಮಹಿಳಾ ದಿನಾಚರಣೆ

ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆದ್ದರೆ ಅದಕ್ಕಿಂತ ದೊಡ್ಡ ಯಶಸ್ಸು ಮತ್ತೊಂದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದ್ದು ಅದಕ್ಕಾಗಿ ಮಹಿಳಾ ದಿನಾಚರಣೆಯ ದಿನವನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷವಾಗಿದೆ.

news18-kannada
Updated:March 8, 2021, 10:00 PM IST
ಪಿಂಕ್ ಬೂತ್​ನಲ್ಲಿ ಮಹಿಳೆಯರಿಂದ, ಮಹಿಳಿಯರಿಗಾಗಿ ವ್ಯಾಕ್ಸಿನ್; ಆರೋಗ್ಯ ಇಲಾಖೆಯ ವಿನೂತನ ಮಹಿಳಾ ದಿನಾಚರಣೆ
ಮಹಿಳೆಯರಿಗಾಗಿ ಪಿಂಕ್​ ಬೂತ್.
  • Share this:
ಬೆಂಗಳೂರು: ಇಂದು ವಿಶ್ವ ಮಹಿಳಾ ದಿನ.. ಅದೇ ರೀತಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣ ಮತ್ತು ವೇಗದಲ್ಲಿ ಕೊರೊನಾ ಲಸಿಕೆ ವಿತರಣೆಯ ಆರಂಭದ ದಿನ ಕೂಡಾ. ಈ ಎರಡೂ ವಿಶೇಷಗಳನ್ನು ಇಂದು ಒಂದೇ ಕಡೆ ಕಲರ್ ಫುಲ್ ಆಗಿ ಸೆಲಬ್ರೇಟ್ ಮಾಡಲಾಯ್ತು. ಎಲ್ಲೆಲ್ಲೂ ಗುಲಾಬಿ ಬಣ್ಣದ್ದೇ ಕಾರುಬಾರು. ದಾರಿಯುದ್ದಕ್ಕೂ ಅದೇ ಬಣ್ಣ ತೊಟ್ಟು ಸಾಲಾಗಿ ನಿಂತ ಕೊರೊನಾ ವಾರಿಯರ್ಸ್. ಬರುವವರಿಗೆಲ್ಲಾ ಚಪ್ಪಾಳೆ ತಟ್ಟಿ ಸ್ವಾಗತ ಕೋರುವ ಅವರ ಸಂತಸ ಜೋರಾಗಿತ್ತು. ಅಂದ್ಹಾಗೆ ಇದೆಲ್ಲಾ ಕಂಡುಬಂದಿದ್ದು ಸಿ ವಿ ರಾಮನ್ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ. ವಿಶೇಷವಾದ ಮಹಿಳಾ ದಿನಾಚರಣೆ ಸೆಲಬ್ರೇಶನ್ ನಲ್ಲಿ ಆರೋಗ್ಯ ಸಚಿವ ಸುಧಾಕರ್ ಭಾಗವಹಿಸಿದ್ರು. ಒಂದೇ ಕಡೆ ಮಹಿಳೆಯರಿಗಾಗಿ ಮಾಡಿರುವ ವ್ಯವಸ್ಥೆಗೆ ಮೆಚ್ಚುಗೆ ಸೂಚಿಸಿದ್ರು.

ಇಂದು ಈ ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿಯೇ ಒಂದು ವಿಶೇಷ ಲಸಿಕಾ ಬೂತ್ ಸಜ್ಜುಗೊಳಿಸಲಾಗಿದೆ. ಇಡೀ ಆಸ್ಪತ್ರೆ ಗುಲಾಬಿ ಬಣ್ಣದಲ್ಲಿ ಅಲಂಕೃತಗೊಂಡಿದ್ದು ಇದೊಂದು ಬೂತ್ ಒಳಗೆ ಮಹಿಳಾ ಸಿಬ್ಬಂದಿಯೇ ಇರಲಿದ್ದು ಇಲ್ಲಿ ಮಹಿಳೆಯರಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗುತ್ತದೆ. ಉಳಿದೆಡೆ ಎಂದಿನಂತೆ ಎಲ್ಲರಿಗೂ ಲಸಿಕೆ ಲಭ್ಯವಿದೆ. ಪ್ರತೀ ಜಿಲ್ಲೆಯಲ್ಲೂ ಇಂಥಾ ಒಂದು ಪಿಂಕ್ ಬೂತ್ ಸ್ಥಾಪಿಸಲಾಗಿದೆ. ಇದರ ಜೊತೆಗೆ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಸರ್ವೈಕಲ್ ಕ್ಯಾನ್ಸರ್ ಮತ್ತು ಬ್ರೆಸ್ಟ್ ಕ್ಯಾನ್ಸರ್ ಸ್ಕ್ರೀನಿಂಗ್ ಗೂ ವ್ಯವಸ್ಥೆ ಕಲ್ಪಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್ ಗಳಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ಗರ್ಭಕೋಶ ಮತ್ತು ಸ್ತನದ ಕ್ಯಾನ್ಸರ್ ನವೇ ಆಗಿರುತ್ತವೆ. ಅದರಲ್ಲೂ ನಗರ ಪ್ರದೇಶದ ಹೆಣ್ಣುಮಕ್ಕಳಲ್ಲಿ ಸ್ತನದ ಕ್ಯಾನ್ಸರ್ ಹೆಚ್ಚಾಗಿ ಕಂಡುಬಂದರೆ, ಗ್ರಾಮೀಣ ಭಾಗದ ಮಹಿಳೆಯರು ಸರ್ವೈಕಲ್ ಕ್ಯಾನ್ಸರ್ ಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಈ ಎರಡೂ ಬಗೆಯ ಕ್ಯಾನ್ಸರ್ ಗಳಿಗೆ ಚಿಕಿತ್ಸೆ ಲಭ್ಯವಿದೆ, ಆದರೆ ಆರಂಭಿಕ ಹಂತದಲ್ಲೇ ಅವರು ವೈದ್ಯರನ್ನು ಸಂಪರ್ಕಿಸಬೇಕು. ಆದರೆ ಯಾವುದೇ ಖಾಯಿಲೆಯಾದರೂ ತಡೆಗಟ್ಟುವಿಕೆ ಅತ್ಯಂತ ಮುಖ್ಯ. ಹಾಗಾಗಿ ವ್ಯಾಕ್ಸಿನ್ ಪಡೆಯಲು ಬರುವ ಮಹಿಳೆಯರು ಇಲ್ಲಿರುವ ಸ್ಕ್ರೀನಿಂಗ್ ಸೌಕರ್ಯದ ಉಪಯೋಗ ಪಡೆದುಕೊಂಡರೆ ಅವರಿಗೆ ತಿಳಿಯುವ ಮೊದಲೇ ಆರೋಗ್ಯದ ಏರುಪೇರುಗಳನ್ನು ಪತ್ತೆ ಹಚ್ಚಬಹುದಾಗಿದೆ.

ಇದನ್ನೂ ಓದಿ: Farmers Protest: ಅಂತಾರಾಷ್ಟ್ರೀಯ ಮಹಿಳಾ ದಿನ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟಕ್ಕೆ ಧುಮುಕಿದ ಲಕ್ಷಾಂತರ ಮಹಿಳೆಯರು

ಆದ್ದರಿಂದ ಮಹಿಳಾ ದಿನಾಚರಣೆಯ ದಿನವೇ ಈ ಕಾರ್ಯಕ್ರಮಗಳನ್ನೂ ಆರಂಭಿಸಲಾಯಿತು. ಇಡೀ ಕೋಣೆಯೆಲ್ಲಾ ಗುಲಾಬಿ ಬಣ್ಣದಲ್ಲಿ ತೋಯ್ದಂತೆ ಅಲಂಕಾರ ಮಾಡಲಾಗಿದೆ. ಕೋಣೆಯ ಕರ್ಟನ್, ತಪಾಸಣೆಗೆ ಬಳಸುವ ಸಲಕರಣೆಗಳು, ಬೆಡ್ ಶೀಟ್, ಕೊನೆಗೆ ಸ್ಯಾನಿಟೈಸರ್ ಇಡುವ ಡಬ್ಬಿ ಕೂಡಾ ಗುಲಾಬಿ ಬಣ್ಣದಲ್ಲೇ ಇರುವಂತೆ ಅಲಂಕರಿಸಲಾಗಿತ್ತು. ಇಂದಿನಿಂದ ರಾಜ್ಯಾದ್ಯಂತ 3000 ವ್ಯಾಕ್ಸಿನ್ ಬೂತ್ ಗಳು ಕಾರ್ಯನಿರ್ವಹಿಸಲಿದ್ದು ಪ್ರತಿದಿನ ಕನಿಷ್ಠ ಒಂದು ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು‌ ಆರೋಗ್ಯ ಸಚಿವ ಡಾ ಕೆ‌ ಸುಧಾಕರ್ ಹೇಳಿದರು.

ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆದ್ದರೆ ಅದಕ್ಕಿಂತ ದೊಡ್ಡ ಯಶಸ್ಸು ಮತ್ತೊಂದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದ್ದು ಅದಕ್ಕಾಗಿ ಮಹಿಳಾ ದಿನಾಚರಣೆಯ ದಿನವನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷವಾಗಿದೆ.
Published by: MAshok Kumar
First published: March 8, 2021, 10:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories