HOME » NEWS » State » KARNATAKA HEALTH DEPARTMENT ANNOUNCE NEW TUFF RULES TO CONTROL COVID SESR

ರಾಜ್ಯದಲ್ಲಿ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ: ಸರ್ಕಾರದಿಂದ ಮತ್ತಷ್ಟು ಕಠಿಣ ಕ್ರಮ; ನಿಯಮ ಮೀರಿದರೆ ಭಾರೀ ದಂಡ

ಒಂದು ವೇಳೆ ಈ ನಿಯಮ ಮೀರಿದರೆ ಹಾಲ್​ ಓನರ್​ ಹಾಗೂ ಹೊರಾಂಗಣ ಕಾರ್ಯಕ್ರಮ ಆಯೋಜಕರಿಗೆ ದಂಡ 5000 ದಿಂದ 10000ದವರೆಗೂ ದಂಡ ವಿಧಿಸಲಾಗುವುದು ಎಂದು ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದೆ.

news18-kannada
Updated:March 24, 2021, 9:53 PM IST
ರಾಜ್ಯದಲ್ಲಿ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ: ಸರ್ಕಾರದಿಂದ ಮತ್ತಷ್ಟು ಕಠಿಣ ಕ್ರಮ; ನಿಯಮ ಮೀರಿದರೆ ಭಾರೀ ದಂಡ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಮಾ. 24):  ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚಾಗಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇದೇ ಹಿನ್ನಲೆ ಸರ್ಕಾರ ಸೋಂಕು ನಿಯಂತ್ರಣಕ್ಕೆ ಮುಂದಾಗಿದ್ದು, ಮತ್ತಷ್ಟು ಕಠಿಣ ನಿಯಮವನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಎರಡು ಸಾವಿರ ಗಡಿ ದಾಟಿ ಕೊರೋನಾ ಮುನ್ನಗುತ್ತಿದ್ದು, ಈ ಹಿನ್ನಲೆಯಲ್ಲಿ ಈ ನಿಯಮ ಅನಿವಾರ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ. ಕೊರೋನಾ ನಿಯಂತ್ರಣಕ್ಕೆ ಸಾಮಾಜಿ ಅಂತರ, ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ. ಇದೇ ಹಿನ್ನಲೆ ಮಾಸ್ಕ್​ ಧರಿಸದೇ ಇದ್ದರೆ ಕಟ್ಟುನಿಟ್ಟಿನ ದಂಡ ವಿಧಿಸಲು ಸೂಚನೆ ನೀಡಲಾಗಿದೆ. ಮಾಸ್ಕ್​ ಹಾಕದಿದ್ದರೆ ರಾಜಧಾನಿ ಬೆಂಗಳೂರಿನಲ್ಲಿ 250 ರೂ ದಂಡ, ಇತರೆ ಪಟ್ಟಣದಲ್ಲಿ 100 ದಂಡ ಕಡ್ಡಾಯವಾಗಿದೆ. ಇನ್ನು ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಕೂಡ ಕ್ರಮಕ್ಕೆ ಮುಂದಾಗಲಿದ್ದು, ಒಂದು ವೇಳೆ ಸರ್ಕಾರದ ಈ ನಿಯಮಾವಳಿ ಮೀರಿದರೆ, ಭಾರೀ ದಂಡ ತೆರಬೇಕಾಗಿದೆ.

ಹೊರಾಂಗಣ ಮದುವೆಯಲ್ಲಿ 500 ಜನ ಮೀತಿ ಇದ್ದು, ಒಳಾಂಗಣ ಮದುವೆಗೆ 200 ಜನ ಮಾತ್ರ ಅವಕಾಶ ನೀಡಲಾಗಿದೆ. ಹೊರಾಂಗಣ ಬರ್ತ್​ ಡೇ ಪಾರ್ಟಿಯಲ್ಲಿ 100 ಮೀತಿ ಇದ್ದು, ಒಳಾಂಗಣ ಬರ್ತ್​ ಡೇ ಪಾರ್ಟಿಯಲ್ಲಿ 50 ಜನಕ್ಕೆ ಅವಕಾಶ ನೀಡಲಾಗಿದೆ.ಹೊರಾಂಗಣ ಅಂತ್ಯಕ್ರಿಯೆಗೆ 100 ಜನಕ್ಕೆ ಸೀಮಿತವಾಗಿದ್ದು, ಒಳಾಂಗಣ ಅಂತ್ಯಕ್ರಿಯೆಗೆ 50 ಜನ ಮಾತ್ರ ಭಾಗಿಯಾಗಬೇಕು.  ಇತರೆ ಕಾರ್ಯಕ್ರಮಗಳಿಗೆ 100 ಜನ, ಧಾರ್ಮಿಕ ಕಾರ್ಯಕ್ರಮಗಳಿಗೆ 500 ಜನ, ರಾಜಕೀಯ ಕಾರ್ಯಕ್ರಮಗಳಿಗೆ 500 ಜನರಷ್ಟೇ ಪಾಲ್ಗೊಳ್ಳಬಹುದು. ಒಂದು ವೇಳೆ ಈ ನಿಯಮ ಮೀರಿದರೆ ಹಾಲ್​ ಓನರ್​ ಹಾಗೂ ಹೊರಾಂಗಣ ಕಾರ್ಯಕ್ರಮ ಆಯೋಜಕರಿಗೆ ದಂಡ 5000 ದಿಂದ 10000ದವರೆಗೂ ದಂಡ ವಿಧಿಸಲಾಗುವುದು ಎಂದು ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದೆ.

Youtube Videoಕಳೆದ ಡಿಸೆಂಬರ್​ನಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಸಾವಿರದಿಂದ ಕೆಳಗೆ ಇಳಿದಿದ್ದವು. ಆದರೆ, ಕಳೆದೊಂದು ವಾರದಿಂದ ಪ್ರಕರಣಗಳ ಏರಿಕೆ ಕಾಣುತ್ತಿದ್ದು, ಸಾವಿರದ ಗಡಿ ಮುಟ್ಟುತ್ತಿದೆ. ಇಂದು ರಾಜ್ಯದಲ್ಲಿ 2298 ಸಕ್ರಿಯ ಪ್ರಕರಣಗಳು ದಾಖಲಾಗಿದೆ. 16,886 ಜನರು ಸದ್ಯ ಕೋವಿಡ್​ ಚಿಕಿತ್ಸೆ ಪಡೆಯುತ್ತಿದ್ದರೆ, ಇಂದು 995 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 143 ಜನ ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಕೊರೋನಾ ಸೋಂಕಿನಿಂದಾಗಿ 12 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಏರಿಕೆಯಾಗುತ್ತಿದ್ದು, ಇಂದು 398 ಜನರಲ್ಲಿ ಸೋಂಕು ದೃಢವಾಗಿದೆ.
Published by: Seema R
First published: March 24, 2021, 9:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories