ಬೆಂಗಳೂರು(ಡಿ. 30): ರಾಜ್ಯದ 5,728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳಿಗೆ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಹಣೆಬರಹ ಗೊತ್ತಾಗಲಿದೆ. ಮುಂದಿನ ರಾಜಕೀಯ ದಿಗ್ಸೂಚಿ ಎಂದು ಪರಿಗಣಿಸಲಾದ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಿಗೆ ಪ್ರತಿಷ್ಠೆಯ ವಿಚಾರವಾಗಿರುವ Karnataka Grama Panchayath ಚುನಾವಣೆಯ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿದೆ. ಬ್ಯಾಲಟ್ ಪೇಪರ್(Ballot Paper)ನಿಂದ ಮತದಾನ ಆಗಿರುವ ಹಿನ್ನೆಲೆಯಲ್ಲಿ ಮತ ಎಣಿಕೆ ತುಸು ಮಂದಗತಿಯಲ್ಲಿ ಸಾಗುತ್ತಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಅಂತಿಮ ಫಲಿತಾಂಶ ಸಿಗುವ ನಿರೀಕ್ಷೆ ಇದೆ. ನಮ್ಮ ನ್ಯೂಸ್18 ಕನ್ನಡದ ವೆಬ್ಸೈಟ್ನಲ್ಲಿ ನೀವು ಕ್ಷಣಕ್ಷಣಕ್ಕೂ ಕರಾರುವಾಕ್ ಫಲಿತಾಂಶದ ವಿವರ ಪಡೆಯಬಹುದು. ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ BJP ಬೆಂಬಲಿತ 20428, Congress ಬೆಂಬಲಿತ 19253, JDS ಬೆಂಬಲಿತ 12731 ಸದಸ್ಯರು ಮುನ್ನಡೆ ಅಥವಾ ಗೆಲುವು ಹೊಂದಿದ್ದಾರೆ. ಇತರರು ಹಾಗೂ ಪಕ್ಷೇತರರು 8062 ಕಡೆ ಮುಂದಿದ್ದಾರೆ.