Ashwath Narayan: 'ಇರೋ ಇಂಜಿನಿಯರಿಂಗ್ ಕಾಲೇಜಿನಲ್ಲೇ ವಿದ್ಯಾರ್ಥಿಗಳಿಲ್ಲ, ಹೊಸ ಸರ್ಕಾರಿ ಕಾಲೇಜು ತೆರೆಯೋದಿಲ್ಲ’

ಪ್ರಸ್ತುತ ಇರುವ ಕಾಲೇಜುಗಳಿಗೆ ಸಾಕಷ್ಟು ಪ್ರವೇಶ ಪಡೆಯದ ಕಾರಣ ಹೊಸ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ಸಚಿವ ಅಶ್ವತ್ಥ್​ ನಾರಾಯಣ್

ಸಚಿವ ಅಶ್ವತ್ಥ್​ ನಾರಾಯಣ್

  • Share this:
ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್​ (Engineering) ಮಾಡೋ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮನೆಗೊಬ್ಬರು ಇಂಜಿನಿಯರ್​ ವಿದ್ಯಾರ್ಥಿಗಳು ಸಿಗ್ತಾರೆ. ಆದ್ರೆ ನಮ್ಮ ಉನ್ನತ  ಶಿಕ್ಷಣ ಸಚಿವರು ಹೇಳಿದ ಮಾತು ಕೇಳಿದ್ರೆ ಹಲವು ಪ್ರಶ್ನೆಗಳು ಹುಟ್ಟುತ್ತಿವೆ. ರಾಜ್ಯದಲ್ಲಿರೋ  ಸರ್ಕಾರಿ ಇಂಜಿನಿಯರಿಂಗ್​ ಕಾಲೇಜಿನಲ್ಲಿ(Govt Engineering college)  ವಿದ್ಯಾರ್ಥಿಗಳೇ ಬರ್ತಿಲ್ವಾ.  ಕರ್ನಾಟಕದಲ್ಲಿ ಸರ್ಕಾರ ಹೊಸ ಇಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯುವುದಿಲ್ಲ. ಅಸ್ತಿತ್ವದಲ್ಲಿರುವ ಕಾಲೇಜುಗಳಿಗೆ ಸಾಕಷ್ಟು ಪ್ರವೇಶಗಳು ಸಿಗುತ್ತಿಲ್ಲ. ಹೀಗಿರುವಾಗ ಹೊಸ ಕಾಲೇಜುಗಳನ್ನು ಆರಂಭಿಸುವ ಪ್ರಶ್ನೆಯೇ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ (Higher Education Minister )  ಅಶ್ವತ್ಥ್​ ನಾರಾಯಣ್ (Ashwath Narayan) ಹೇಳಿದ್ದಾರೆ. ಇಂಜಿನಿಯರಿಂಗ್​ ವಿದ್ಯಾರ್ಥಿಗಳೆಲ್ಲಾ ಖಾಸಗಿ ಕಾಲೇಜುಗಳತ್ತ ಮುಖ ಮಾಡಿದ್ದಾರಾ? ಸರ್ಕಾರಿ ಇಂಜಿನಿಯರಿಂಗ್​ ಕಾಲೇಜಿಗೆ ಯಾಕೆ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿಲ್ಲ ಅನ್ನೋ ಹಲವು ಪ್ರಶ್ನೆಗಳು ಕಾಡುತ್ತಿವೆ.

‘ಹೊಸ ಸರ್ಕಾರಿ ಕಾಲೇಜು ತೆರೆಯೋದಿಲ್ಲ’

ವಿಧಾನಸಭೆಯಲ್ಲಿ ಮಾತಾಡಿದ ಉನ್ನತ ಶಿಕ್ಷಣ ಸಚಿವ ಸಿ.ಎನ್ ಅಶ್ವಥ್ ನಾರಾಯಣ್​ ಪ್ರಸ್ತುತ ಇರುವ ಕಾಲೇಜುಗಳಿಗೆ ಸಾಕಷ್ಟು ಪ್ರವೇಶ ಪಡೆಯದ ಕಾರಣ ಕರ್ನಾಟಕ ಹೊಸ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಇನ್ನು 10ದಿನದೊಳಗೆ ರಾಜ್ಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ; ಡಿಸಿಎಂ ಅಶ್ವತ್ಥ್​ ನಾರಾಯಣ

ಶಾಸಕ ರಮೇಶ್​ ಭೂಸನೂರ್​ ಬೇಡಿಕೆ

ವಿಧಾನಸಭೆಯಲ್ಲಿ ಸಿಂದಗಿ ಬಿಜೆಪಿ ಶಾಸಕ ರಮೇಶ ಭೂಸನೂರ್ ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾತಾಡಿದ್ರು. ಈ ವೇಳೆ  ತಮ್ಮ ಕ್ಷೇತ್ರದಲ್ಲಿ ಹೊಸ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ನಿರ್ಮಿಸುವಂತೆ ಅಶ್ವಥ್​ ನಾರಾಯಣ್​ ಬಳಿ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶ್ವಥ್ ನಾರಾಯಣ. ಇದು ಸಾಧ್ಯವೇ ಇಲ್ಲ ಎಂದಿದ್ದಾರೆ. ಪ್ರಸ್ತುತ ಇರೋ ಕಾಲೇಜುಗಳಿಗೆ ಸಾಕಷ್ಟು ಪ್ರವೇಶ ಸಿಗದ ಕಾರಣ ಕರ್ನಾಟಕ ಹೊಸ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

‘ಶೇ 50-75ರಷ್ಟು ಸೀಟುಗಳು ಖಾಲಿ’

ರಾಜ್ಯದಲ್ಲಿ ಇರುವ ಇಂಜಿನಿಯರಿಂಗ್ ಕಾಲೇಜುಗಳು ಸಾಕಷ್ಟು ಪ್ರವೇಶಗಳನ್ನು ಪಡೆಯುತ್ತಿಲ್ಲ. ಹೀಗಿರುವಾಗ ಹೊಸ ಕಾಲೇಜುಗಳನ್ನು ಆರಂಭಿಸುವ ಪ್ರಶ್ನೆಯೇ ಇಲ್ಲ ಎಂದು ನಾರಾಯಣ್ ಹೇಳಿದರು. ವಿಜಯಪುರ ಜಿಲ್ಲೆಯಲ್ಲಿ ಶೇ 50-75ರಷ್ಟು ಇಂಜಿನಿಯರಿಗ್​ ಕಾಲೇಜಿನಲ್ಲಿ ಸೀಟುಗಳು ಖಾಲಿ ಇವೆ. ಅದಕ್ಕಾಗಿಯೇ ನಾವು ಹೊಸ ಕಾಲೇಜು ತೆರೆಯುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ 15 ಸರ್ಕಾರಿ ಇಂಜಿನಿಯರಿಂಗ್

ಕರ್ನಾಟಕವು 15 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿದೆ. ಈ ಶೈಕ್ಷಣಿಕ ವರ್ಷದಲ್ಲಿ, ಕರ್ನಾಟಕವು ಎಲ್ಲಾ ವರ್ಗದ ಕಾಲೇಜುಗಳಲ್ಲಿ 23,000 ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿವೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮಾನದಂಡಗಳ ಪ್ರಕಾರ ಸರ್ಕಾರವು ಅಸ್ತಿತ್ವದಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಅವುಗಳನ್ನು ಬಲಪಡಿಸುತ್ತಿದೆ ಎಂದು ಅಶ್ವತ್ಥ್​ ನಾರಾಯಣ್​ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸ್‌, ಕುಲಪತಿಗಳಿಗೆ ಡಿಸಿಎಂ ಸಲಹೆ; ಶೈಕ್ಷಣಿಕ ಕ್ಯಾಲೆಂಡರ್‌ ಬಗ್ಗೆ ಸಮಾಲೋಚನೆ

ಈ ಹಿಂದೆ ಖಾಸಗಿ ಕಾಲೇಜಿನ ಆರ್ಭಟಕ್ಕೆ ಬ್ರೇಕ್​ ಹಾಕಿದ್ದ ಸಚಿವರು

ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳ ಇಂಜಿನಿಯರಿಂಗ್ ಕೋರ್ಸಿನ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡದೇ ಹಿಂದಿನ ದರವನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ರು. ಖಾಸಗಿ ಕಾಲೇಜುಗಳು ಇತರೆ ಶುಲ್ಕ ನೆಪದಲ್ಲಿ ಮಿತಿಮೀರಿ ಹಣ ಕಟ್ಟಿಸಿಕೊಳ್ಳುವುದಕ್ಕೂ ಕಡಿವಾಣ ಹಾಕಿ, ಗರಿಷ್ಠ ಮಿತಿಯನ್ನು 20 ಸಾವಿರ ರೂಪಾಯಿಕ್ಕೆ ನಿಗದಿಪಡಿಸಲಾಗಿದೆ. ಹಲವು ಕಾಲೇಜುಗಳು ಇತರೆ ಶುಲ್ಕದ ನೆಪದಲ್ಲಿ 70 ಸಾವಿರದವರೆಗೂ ಶುಲ್ಕ ವಸೂಲಿ ಮಾಡುತ್ತಿವೆ ಎನ್ನುವ ಆರೋಪಗಳ ಹಿನ್ನಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಇದಕ್ಕೆ ಕಾಲೇಜು ಸಂಘದ ಪ್ರತಿನಿಧಿಗಳು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವರು ವಿವರಿಸಿದರು.
Published by:Pavana HS
First published: