News18 India World Cup 2019

ಭಾರತ್​ ಬಂದ್: ರಾಜ್ಯಾದ್ಯಂತ ಜನ ಸಾಮಾನ್ಯರಿಗೆ ತಟ್ಟಲಿದೆ ಬಿಸಿ

news18
Updated:September 9, 2018, 10:46 PM IST
ಭಾರತ್​ ಬಂದ್: ರಾಜ್ಯಾದ್ಯಂತ ಜನ ಸಾಮಾನ್ಯರಿಗೆ ತಟ್ಟಲಿದೆ ಬಿಸಿ
news18
Updated: September 9, 2018, 10:46 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.9):  ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ನಾಳೆ ಭಾರತ್ ಬಂದ್‌ಗೆ ಕರೆ ನೀಡಿವೆ.

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಕೂಡ ಬಂದ್​ಗೆ ಬೆಂಬಲ ನೀಡಿದೆ ಎಂದು ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್​ ತಿಳಿಸಿದ್ದಾರೆ..ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಪೆಟ್ಟು ಬೀಳುತ್ತಿದ್ದು, ಈ ಬಂದ್​ಗೆ ನಮ್ಮ ಸಹಕಾರವಿದೆ ಎಂದು ಜೆಡಿಎಸ್​ ವರಿಷ್ಠ ದೇವೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.

ನಾಳೆ ನಡೆಯುವ ಭಾರತ ಬಂದ್‌ಗೆ ಬೆಂಬಲಿಸಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ ಎಂದು ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ತಿಳಿಸಿದ್ದಾರೆ

ಬಂದ್ ಕರೆಗೆ ಎಐಟಿಯುಸಿ ಸಂಯೋಜಿತ ಕೆಎಸ್ಆರ್'ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್, ಓಲಾ-ಉಬರ್ ಟ್ಯಾಕ್ಸಿ ಫಾರ್ ಶೂರ್ ಮಾಲೀಕರ ಸಂಘ, ಕೆಲ ಆಟೋ ಚಾಲಕರನ ಸಂಘಗಳು ಬಂದ್'ಗೆ ಬೆಂಬಲ ಘೋಷಿಸಿದ್ದು, ಇದಕ್ಕೆ ಸಹಕರಿಸುವಂತೆ ಪ್ರಯಾಣಿಕರಿಗೆ ಮನವಿ ಮಾಡಿದೆ.

ಖಾಸಗಿ ಶಾಲೆಗೆ ರಜೆ
Loading...

ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಜಿಲ್ಲೆಗಳಲ್ಲಿ ಬಂದ್​ ತೀವ್ರತೆ ನೋಡಿಕೊಂಡು ಸರ್ಕಾರಿ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಈ ಹಿಂದೆ ಸ್ಪಷ್ಟಪಡಿಸಿತ್ತು. ಆದರೆ ಈಗ  ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಈ ಜಿಲ್ಲೆಗಳಲ್ಲಿಯೂ ಸರ್ಕಾರಿ ಶಾಲೆ ಬಂದ್​ 

ವಿದ್ಯಾರ್ಥಿಗಳ ಸುರಕ್ಷೆ ದೃಷ್ಠಿಯಿಂದಾಗಿ ಬಳ್ಳಾರಿ, ಚಾಮರಾಜನಗರ, ವಿಜಯಪುರ, ರಾಯಚೂರು, ಬಾಗಲಕೋಟೆ,ಮೈಸೂರು, ರಾಮನಗರ, ಬಳ್ಳಾರಿ, ಬೆಳಗಾವಿ, ಚಿಕ್ಕಬಳ್ಳಾಪುರ, ಕಲಬುರ್ಗಿ, ಚಿಕ್ಕಮಗಳೂರು, ಹಾವೇರಿ, ಕೋಲಾರ, ಧಾರವಾಡ,ಚಿತ್ರದುರ್ಗ, ದಕ್ಷಿಣ ಕನ್ನಡ, ಯಾದಗಿರಿ, ಉಡುಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಎಲ್ಲಾ ಸರ್ಕಾರಿ ಶಾಲೆ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.ಬೀದರ್​, ಉತ್ತರ ಕನ್ನಡ, ಮಡಿಕೇರಿಗಳಲ್ಲಿ ಸರ್ಕಾರಿ ಶಾಲಾ ಕಾಲೇಜಿಗೆ ರಜೆ ಘೋಷಣೆ ಬಗ್ಗೆ ಈವರೆಗೆ ಜಿಲ್ಲಾಧಿಕಾರಿಗಳು ತಿಳಿಸಿಲ್ಲ.

ನಾಳಿನ 'ಭಾರತ್ ಬಂದ್'​ಗೆ ರಾಜ್ಯದಲ್ಲಿ ಯಾರೆಲ್ಲರ ಬೆಂಬಲವಿದೆ; ಯಾವೆಲ್ಲಾ ಸೇವೆಗಳು ಸ್ಥಗಿತಗೊಳ್ಳಲಿವೆ?

ಪ್ರತಿ ಜಿಲ್ಲೆಗಳಲ್ಲಿ ಕನ್ನಡ ಪರ ಸಂಘಟನೆ , ಎಐಸಿಟಿಯು ಸೇರಿದಂತೆ ಅನೇಕ ಸಂಘಟನೆಗಳು ಸಾಕೇಂತಿಕ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ದಿನ ಬಳಕೆ ವಸ್ತುಗಳು ಲಭ್ಯ: 

ದಿನಬಳಕೆ ವಸ್ತುಗಳಾದ ಹಾಲು, ತರಕಾರಿ, ಔಷಧಿಗಳು, ಆಸ್ಪತ್ರೆ, ವೈದ್ಯಕೀಯ ಸೇವೆಗಳು ಲಭ್ಯವಿದೆ.

ಇನ್ನು ಬಂದ್​ಗೆ ಹೋಟೆಲ್​ ಸಂಘ, ಬ್ಯಾಕಿಂಗ್​ ಸೇವೆಗಳು ಬೆಂಬಲ ನೀಡಿದ ಹಿನ್ನಲೆ ಎಂದಿನಂತೆ ಕಾರ್ಯನಿರ್ವಹಿಸಲಿದೆ.

ಯಾವೆಲ್ಲಾ ಸೇವೆ ಲಭ್ಯವಿಲ್ಲ: 

ಕೆಎಸ್​ಆರ್​ಟಿಸಿ, ಬಿಎಂಟಿಸಿ, ಕ್ಯಾಬ್​, ಶಾಲೆ ಸೇರಿದಂತೆ ಅನೇಕ ಸೇವೆಗಳು ಬಂದ್​ ಆಗಲಿದೆ. ಎಪಿಎಂಸಿ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲಿದೆ.

ಚಿತ್ರರಂಗದಿಂದ ನೈತಿಕ ಬೆಂಬಲ

ಚಿತ್ರರಂಗ ಕೂಡ ಬಂದ್​ಗೆ ಬೆಂಬಲ ನೀಡಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ತಿಳಿಸಿದ್ದಾರೆ.  ಚಿತ್ರಮಂದಿರ, ಮಾಲ್​ಗಳು ಕೂಡ ಬೆಂಬಲ ನೀಡಿದ್ದು, ನಾಳೆ ಎಲ್ಲಿ ಕೂಡ ಸಿನಿಮಾ ಪ್ರದರ್ಶನ. ಇಲ್ಲ ಎಂದು ಚಿತ್ರಮಂದಿರ ಮಾಲೀಕ ಕೆ.ವಿ.ಚಂದ್ರಶೇಖರ್ ತಿಳಿಸಿದ್ದಾರೆ.

ಬಿಜೆಪಿ ಬೆಂಬಲಿಗರಿಂದ ವಿರೋಧ: 

ಬಂದ್​ ವಿಫಲಗೊಳಿಸಲು ಬಿಜೆಪಿ ಬೆಂಬಲಗರು ನಿರ್ಧರಿಸಿದ್ದು, ಇದಕ್ಕಾಗಿ ತಮ್ಮ ಮಳಿಗೆ, ಕಚೇರಿಗಳ ಮುಂದೆ ಎಂದಿಗಿಂತ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದ್ದಾರೆ

ರಾಜ್ಯದ್ಯಾಂತ ಬಿಗಿ ಬಂದೋಬಸ್ತ್​

ಜಿಲ್ಲೆಗಳಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಮಾಡಲಾಗಿದ್ದು, ಹೆಚ್ಚುವರಿ ಪೊಲೀಸ್​ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.

ಬಂದ್‌ಗೆ ರಾಜ್ಯದ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಬೆಂಬಲ ನೀಡಿದ್ದು, ಸಾರಿಗೆ ಸಂಪರ್ಕವಿರದ ಕಾರಣ ಬಂದ್ ಸಂಪೂರ್ಣ ಯಶಸ್ವಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...