Reserves: ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸಿ COVID ವಿರುದ್ಧ ಹೋರಾಟಕ್ಕೆ ರಾಜ್ಯ ಸರ್ಕಾರ ಅಣಿ

ಈ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ, ಇದನ್ನು ಯುದ್ಧದ ಸಿದ್ಧತೆಯ ಆಧಾರದ ಮೇಲೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
‌ಕೋವಿಡ್ -19 ಪ್ರಕರಣಗಳ (Covid-19 cases) ಹೆಚ್ಚಳದ ಕಾರಣದಿಂದಾಗಿ ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ತುರ್ತು(Urgency) ಪ್ರಜ್ಞೆಯಿಂದ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯುದ್ಧೋಚಿತ ರೀತಿಯಲ್ಲಿ ನಡೆಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕೋವಿಡ್ -19 ರೋಗಿಗಳಿಗೆ ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ(Health Centers) 75% ರಷ್ಟು ಹಾಸಿಗೆಗಳನ್ನು(Beds) ಕಾಯ್ದಿರಿಸುವಂತೆ ಬುಧವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣದ ಆರಂಭಿಕ ಲಕ್ಷಣಗಳು ಕಂಡು ಬರುತ್ತಿರುವ ಜೊತೆಗೆ ಓಮೈಕ್ರಾನ್ (Omicron cases) ಪ್ರಕರಣಗಳು ಹೆಚ್ಚಾಗುತ್ತಿರುವ ಲಕ್ಷಣಗಳು ಪತ್ತೆಯಾಗಿವೆ ಎಂದು ರಾಜ್ಯ ಸರ್ಕಾರ ಹೇಳಿಕೆ ನೀಡಿದೆ.

ಸವಲತ್ತು ಉತ್ತಮಗೊಳಿಸುವ ಅಗತ್ಯ
ಸರ್ಕಾರದ ಪ್ರಕಾರ, ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳು ಗಮನಾರ್ಹ ರೀತಿಯಲ್ಲಿ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ, ಇದನ್ನು ಯುದ್ಧದ ಸಿದ್ಧತೆಯ ಆಧಾರದ ಮೇಲೆ ಮಾಡಲಾಗಿದೆ. ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ, ಕೋವಿಡ್ -19 ಸೋಂಕಿತ ಜನರಿಗೆ ಆಸ್ಪತ್ರೆಗಳಲ್ಲಿ ಪರಿಣಾಮಕಾರಿ ಚಿಕಿತ್ಸೆ ಒದಗಿಸಲು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಸೇರಿದಂತೆ, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು , ಸೋಂಕಿನ ತೀವ್ರತೆ ಮತ್ತು ಪರಿಸ್ಥಿತಿ ವಿಶ್ಲೇಷಿಸಿ ಸದ್ಯಕ್ಕೆ ಅಸ್ತಿತ್ವದಲ್ಲಿರುವ ಸವಲತ್ತುಗಳನ್ನು ಉತ್ತಮಗೊಳಿಸುವ ಅಗತ್ಯವನ್ನು ಅದು ಒತ್ತಿಹೇಳಿತು.

ಇದನ್ನೂ ಓದಿ: Weekend Curfew ವೇಳೆ ಮೆಟ್ರೋ ಸಂಚಾರಕ್ಕಿಲ್ಲ ಅಡ್ಡಿ: ಶಕ್ತಿ ಸೌಧ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ

ಕೇಂದ್ರ ಆರೋಗ್ಯ ಸಚಿವಾಲಯವು ನಿಗದಿಪಡಿಸಿದ ದರಗಳ ಪ್ರಕಾರ ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಹಾಸಿಗೆಗಳನ್ನು ಸರ್ಕಾರಿ-ಉಲ್ಲೇಖಿತ ಮತ್ತು ಖಾಸಗಿ ರೋಗಿಗಳ ನಡುವೆ ವಿಂಗಡಿಸಲು ರಾಜ್ಯ ಸರ್ಕಾರವು ಮುಂದಿನ ಸೂಚನೆಯವರೆಗೆ ಆದೇಶಗಳನ್ನು ಹೊರಡಿಸಿದೆ.

ಹಾಸಿಗೆಗಳ ತಕ್ಷಣವೇ ಸಿದ್ಧಪಡಿಸಿ
ಸಾರ್ವಜನಿಕ ಆರೋಗ್ಯ ಅಧಿಕಾರಿಗಳ ಮಾರ್ಗ ಸೂಚಿಯಂತೆ, ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳು, ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಪ್ರತಿ ವಿಭಾಗದಲ್ಲಿ 30%ನಷ್ಟು ಹಾಸಿಗೆಗಳನ್ನು ತಕ್ಷಣವೇ ಸಿದ್ಧಪಡಿಸಿ ಕಾಯ್ದಿರಿಸುತ್ತವೆ, ಅಂದರೆ ICU, ವೆಂಟಿಲೇಟರ್‌ನೊಂದಿಗೆ ICU, ಎಚ್‌ಡಿಯು /ಆಮ್ಲಜನಕ ಮತ್ತು ಸಾಮಾನ್ಯ ಹಾಸಿಗೆಗಳು.

ಖಾಸಗಿ ಆಸ್ಪತ್ರೆಯಲ್ಲಿ, ಪ್ರತಿ ವಿಭಾಗದಲ್ಲಿ 50% ಹಾಸಿಗೆಗಳನ್ನು, ಅಂದರೆ, ಐಸಿಯು, ವೆಂಟಿಲೇಟರ್‌ನೊಂದಿಗೆ ಐಸಿಯು, ಎಚ್‌ಡಿಯು/ಆಮ್ಲಜನಕ ಮತ್ತು ಸಾಮಾನ್ಯ ಹಾಸಿಗೆಗಳನ್ನು, ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಸೂಚಿಸಿದ COVID-19 ರೋಗಿಗಳ ಚಿಕಿತ್ಸೆಗಾಗಿ ಕಾಯ್ದಿರಿಸಲಾಗುತ್ತದೆ. ಇದರಿಂದ ಜನವರಿ 7 ರೊಳಗೆ ಎಲ್ಲಾ ಹಾಸಿಗೆಗಳು ರೋಗಿಗಳ ಚಿಕಿತ್ಸೆಗೆ ಸಿದ್ಧವಾಗುತ್ತವೆ.

75% ವರೆಗೆ ಕಾಯ್ದಿರುವಿಕೆ
ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಉಲ್ಲೇಖಿಸಿದ ಪ್ರಕರಣಗಳಿಗೆ, ಖಾಸಗಿ ವೈದ್ಯಕೀಯ ಕಾಲೇಜುಗಳು ಜನವರಿ 7 ರಿಂದ 50% ಹಾಸಿಗೆಗಳನ್ನು ಪ್ರತಿ ವರ್ಗದ ಅಡಿಯಲ್ಲಿ, ಅಂದರೆ ಐಸಿಯು, ವೆಂಟಿಲೇಟರ್, ಎಚ್‌ಡಿಯು/ಆಮ್ಲಜನಕಯುಕ್ತ ಮತ್ತು ಸಾಮಾನ್ಯ ಹಾಸಿಗೆಗಳೊಂದಿಗೆ ಐಸಿಯು ಹಾಸಿಗೆಗಳನ್ನು ಸಿದ್ಧಪಡಿಸಿ ಕಾಯ್ದಿರಿಸುತ್ತವೆ. ಜನವರಿ 10ರ ವೇಳೆಗೆ 75% ವರೆಗೆ ಈ ಕಾಯ್ದಿರುವಿಕೆಯನ್ನು ಹೆಚ್ಚಿಸಲಾಗುವುದು .
ಯಾವುದೇ ಖಾಸಗಿ ಆರೋಗ್ಯ ಕೇಂದ್ರಗಳು ಮತ್ತು ವೈದ್ಯಕೀಯ ಕಾಲೇಜುಗಳು ಈ ಆದೇಶಗಳನ್ನು ಕಟ್ಟುನಿಟ್ಟಾಗಿ ಅನುಸರಿಸದಿದ್ದಲ್ಲಿ, 2005ರ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು IPC ಸೆಕ್ಷನ್‌ಗಳ ಅಡಿಯಲ್ಲಿ ಕಠಿಣವಾದ ಕಾನೂನು ಕ್ರಮ ಜರುಗಿಸಲಾಗುವುದು.

ಇದನ್ನೂ ಓದಿ: RTPCR: ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ 20 ಬಸ್ ಗಡಿಯಲ್ಲೇ ವಾಪಸ್

ಕೋವಿಡ್ ಮಾರ್ಗಸೂಚಿ
ಕೈಗಾರಿಕಾ ಕೇಂದ್ರಗಳು ಸೇರಿದಂತೆ, ಕಾರ್ಖಾನೆಗಳು ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೋವಿಡ್‍ನ ಎರಡೂ ಲಸಿಕೆಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಮತ್ತು ತಮ್ಮ ಕಾರ್ಯ ಕ್ಷೇತ್ರದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಠಿಣವಾಗಿ ಅನುಸರಿಸುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಕಾರ್ಮಿಕ ಇಲಾಖೆಯು ಹೊತ್ತುಕೊಂಡಿದೆ. ಎಲ್ಲಾ ಉದ್ಯೋಗಿಗಳ ಲಸಿಕಾ ಮಾಹಿತಿಯನ್ನು ಸ್ಥಳೀಯ ಕಾರ್ಮಿಕ ಅಧಿಕಾರಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸುವರು ಎಮದೂ ತಿಳಿದುಬಂದಿದೆ.
Published by:vanithasanjevani vanithasanjevani
First published: