ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ (Bengagaluru Traffic) ಕುರಿತಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಚರ್ಚೆಗೆ ಒಳಗಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಹಲವು ಮಿಮ್ಸ್ಗಳು ಬೆಂಗಳೂರಿನ ಟ್ರಾಫಿಕ್ ಕುರಿತಂತೆ ಹರಿದಾಡುವುದನ್ನು ನೋಡಿರುತ್ತೇವೆ. ನಗರ ನಿವಾಸಿಗಳಂತೂ ಬೆಳಗಾದರೆ ಈ ಟ್ರಾಫಿಕ್ ಜಾಮ್ ಸಮಸ್ಯೆ ಇದ್ದಿದ್ದೆ ಅಂತ ಮಾತನಾಡಿಕೊಂಡು ಸಾಕಾಗಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸರು (Bengaluru Traffic Police) ನಿರಂತರವಾಗಿ ಟ್ರಾಫಿಕ್ ಸಮಸ್ಯೆ ನಿವಾರಿಸಲು ಹೊಸ ಹೊಸ ಕ್ರಮಗಳು, ಯೋಜನೆಗಳೊಂದಿಗೆ ಜನರ ಸಮಸ್ಯೆ ನಿವಾಸಿರಲು ಪ್ರಯತ್ನಿಸುತ್ತಲೇ ಇರುತ್ತಾರೆ.
ಹೊಸ ಸಂಚಾರಿ ಪೊಲೀಸ್ ಠಾಣೆ ನಿರ್ಮಾಣ ಘೋಷಣೆ
ಬೆಂಗಳೂರು ನಗರದ ವಾತಾವರಣದಲ್ಲಿ (Bengaluru Weather) ಜೀವನ ಮಾಡಲು ಸಾಕಷ್ಟು ಮಂದಿ ಇಷ್ಟಪಡುತ್ತಾರೆ. ಟ್ರಾಫಿಕ್ ಕುರಿತಂತೆ ಏನೇ ದೂರು ಹೇಳಿದರೂ, ಸಾವಿರಾರು ಮಂದಿ ನಿತ್ಯ ನಗರಕ್ಕೆ ವಲಸೆ ಬರುತ್ತಲೇ ಇರುತ್ತಾರೆ.
ಪರಿಣಾಮ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ವಾಹನ ದಟ್ಟನೆ ಕಡಿಮೆ ಮಾಡಲು ನಮ್ಮ ಮೆಟ್ರೋ ಶುರು ಮಾಡಿ ನಗರದ ಬೇರೆ ಮಾರ್ಗಗಳಿಗೆ ವಿಸ್ತರಿಸಿರುವ ಟ್ರಾಫಿಕ್ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ.
ಬೆಂಗಳೂರು ಸಂಚಾರಿ ಪೊಲೀಸರು ಫುಲ್ ಅಪ್ಡೇಟ್
ಸದ್ಯ ಈ ಸಮಸ್ಯೆ ನಿವಾರಣೆ ಮಾಡಲು ಐದು ಹೊಸ ಸಂಚಾರಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದರು. ಅಲ್ಲದೇ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಐಟಿಎಂಎಸ್) ತಂತ್ರಜ್ಞಾನವನ್ನು ಬಳಸಲು ಸೂಚನೆ ನೀಡಲಾಗಿದೆ.
ಐಟಿಎಂಎಸ್ ತಂತ್ರಜ್ಞಾನ ಯಾವುದೇ ಸಂಚಾರ ನಿಯಮಗಳ ಉಲ್ಲಂಘನೆಗಳನ್ನು ಗುರುತಿಸುತ್ತದೆ ಮತ್ತು ವಾಹನ ಸವಾರರ ನಿಲುಗಡೆ, ಕಿರುಕುಳ, ಭ್ರಷ್ಟಾಚಾರ ಮತ್ತು ಸವಾರಿ ಮಾಡುವ ಸಾರ್ವಜನಿಕರಿಗೆ ಇತರ ಸಮಸ್ಯೆಗಳನ್ನು ನಿವಾರಿಸುತ್ತದೆ. ನಗರದ ಪ್ರಮುಖ 50 ಜಂಕ್ಷನ್ಗಳಲ್ಲಿ ಐಟಿಎಂಎಸ್ ತಂತ್ರಜ್ಞಾನ ಆಧಾರಿತ ಸಿಸಿಟಿವಿಗಳನ್ನ ಅಳಡಿಸಲಾಗಿದೆ.
ಇದನ್ನೂ ಓದಿ: Bengaluru Traffic: ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ITMS ತಂತ್ರಜ್ಞಾನ; ವಾಹನ ಸಂಚಾರ ಮತ್ತಷ್ಟು ಸುಗಮ
ಐಟಿಎಂಎಸ್ ತಂತ್ರಜ್ಞಾನ ಅಳವಡಿಸಿರುವ ಪ್ರಮುಖ ಜಂಕ್ಷನ್ಗಳು
ಐಟಿಎಂಎಸ್ ತಂತ್ರಜ್ಞಾನ ಅಳವಡಿಸಿಕೊಂಡಿಸುವ ಜಂಕ್ಷನ್ಗಳಲ್ಲಿ ಯಾರೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೂ ಕೇವಲ 5 ಸೆಕೆಂಡ್ಗಳಲ್ಲಿ ವಿಡಿಯೊ ಸಮೇತ ಅವರಿಗೆ ದಂಡದ ರಶೀದಿ ಕೈಸೇರುತ್ತದೆ.
ಹೈರೆಸಲ್ಯೂಷನ್ ಇರುವ ಹೈಯಂಡ್ ANPR (automatic number plate recognition) ಕ್ಯಾಮೆರಾ ದಿನದ 24 ಗಂಟೆ, ಪ್ರತಿ ಮೂಮೆಂಟ್ಅನ್ನು ರೆಕಾರ್ಡ್ ಮಾಡುತ್ತೆ. ಆ ಯಾವುದೇ ನಿಯಮಗಳ ಉಲ್ಲಂಘನೆ ಆದರೂ ಫೈನ್ ಬೀಳುತ್ತೆ.
ಕ್ಯಾಮೆರಾ ಎಲ್ಲೆಲ್ಲಿ ಅಳವಡಿಕೆ
ನಗರದ 80 ಫಿಟ್ ರೋಡ್-ಓಲ್ಡ್ ಮದ್ರಾಸ್ ರೋಡ್, ಆಡುಗೋಡಿ ಜಂಕ್ಷನ್, ಐಶ್ವರ್ಯ ಜಂಕ್ಷನ್, AXA ಜಂಕ್ಷನ್ (ಮಡಿವಾಳ ಕೆರೆ ಮತ್ತು ಬಿಟಿಎಂ ರೋಡ್ ಜಂಕ್ಷನ್), ಭಾಷ್ಯಂ ಸರ್ಕಲ್ ರಾಜಾಜಿನಗರ, ಭಟ್ಟರಹಳ್ಳಿ ರೋಡ್, ಬಜಾರ್ ಸ್ಟ್ರಿಟ್ ಜಂಕ್ಷನ್, ಭಾಷ್ಯಂ ಸರ್ಕಲ್,
ಬಿಆರ್ವಿ ಜಂಕ್ಷನ್, ಸಿಎಎಲ್ ಕ್ರಾಸ್, ಚಿಕ್ಕ ಪೇಟೆ ಟ್ರಾಫಿಕ್ ಪಿಎಸ್ ಜಂಕ್ಷನ್, ಚಂದ್ರಿಕಾ ಹೋಟೆಲ್ ಜಂಕ್ಷನ್-ಕನ್ನಿಂಗ್ಹ್ಯಾಮ್ ರೋಡ್, ಸಿಎಂಹೆಚ್ ಜಂಕ್ಷನ್, ಡಿ ಕೆನ್ಸನ್ ರೋಡ್-ಎಂಜಿ ರೋಡ್ ಜಂಕ್ಷನ್, ದೊಡ್ಡ ಬಾಣಸವಾಡಿ.
ಡಿಸೋಜಾ ಸರ್ಕಲ್, ಜಿಪಿಒ ಸರ್ಕಲ್, ಹೆಚ್ಎಎಲ್-ಎಎಸ್ಸಿ ಜಂಕ್ಷನ್, ಇಂದಿರಾ ನಗರ್ ಕೆಎಫ್ಸಿ ಜಂಕ್ಷನ್, ಜಯನಗರ 4ನೇ ಮುಖ್ಯ ರಸ್ತೆ, ಜಯನಗರ 4ನೇ ಬ್ಲಾಕ್ ಬಸ್ ಸ್ಟಾಪ್, ಜೆಪಿ ನಗರ 15ನೇ ಕ್ರಾಸ್, ಜೆಪಿ ನಗರ 8ನೇ ಮುಖ್ಯ ರಸ್ತೆ-9ನೇ ಕ್ರಾಸ್
ಕಳಾಸಿಪಾಳ್ಯ ಜಂಕ್ಷನ್, ಕೋರಮಂಗಲ 80 ಅಡಿ ರಸ್ತೆ, ಜಲೀಲಾ ಪ್ಯಾಲೇಸ್ ಜಂಕ್ಷನ್, ಮರಿಯಪ್ಪ ಸರ್ಕಲ್, ಮೋದಿ ಆಸ್ಪತ್ರೆ ರೋಡ್ ಜಂಕ್ಷನ್, ನವರಂಗ ಸರ್ಕಲ್, ಪ್ರೋಮ್ನರ್ ರೋಡ್.
ಇದನ್ನೂ ಓದಿ: Traffic Rules: ಟ್ರಾಫಿಲ್ ರೂಲ್ಸ್ ಬ್ರೇಕ್ ಮಾಡ್ತೀರಾ? 5 ಸೆಕೆಂಡ್ನಲ್ಲಿ ವಿಡಿಯೋ ಸಮೇತ ಬರುತ್ತೆ ಫೈನ್ ರಶೀದಿ!
ರಾಜ್ಕುಮಾರ್ ರೋಡ್-ಮನಿ ಕಾಂಪ್ಲೆಕ್ಸ್, ರಾಜಕುಮಾರ್ ಸ್ಟ್ಯಾಚು-ದೊಮ್ಮಲೂರು, ರಾಮಯ್ಯ ಆಸ್ಪತ್ರೆ ಜಂಕ್ಷನ್, ಸದಾಶಿವನಗರ ಜಂಕ್ಷನ್, ಸಂಘಂ ಸರ್ಕಲ್, ಸಂಪಿಗೆ ರೋಡ್, ಶಕ್ತಿ ದೇವಸ್ಥಾನ, ಶಿವಾನಂದ ಸರ್ಕಲ್
ಸಿದ್ದಯ್ಯ ರೋಡ್, ಶ್ರೀನಿವಾಗಿಲು ಜಂಕ್ಷನ್, ಸ್ವಾಮಿ ವಿವೇಕನಂದ ಜಂಕ್ಷನ್, ತರಳಬಾಳು ಜಂಕ್ಷನ್, ತವರೆಕರೆ ಮೈನ್ ಜಂಕ್ಷನ್, ಟಿಸಿ ಪಾಳ್ಯ ಜಂಕ್ಷನ್, ಟೀಚರ್ಸ್ ಜಂಕ್ಷನ್, ವಾಣಿ ವಿಲಾಸ್ ಜಂಕ್ಷನ್, ವಾಟರ್ ಟ್ಯಾಂಕ್ ಜಂಕ್ಷನ್, ವಿಪ್ರೋ ಜಂಕ್ಷನ್ ಸೇರಿ 50 ಪ್ರಮುಖ ಸ್ಥಳಗಳಲ್ಲಿ ಐಟಿಎಂಎಸ್ ತಂತ್ರಜ್ಞಾನ ಅಡಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ