ಸಿಹಿಸುದ್ದಿ: ಪೊಲೀಸರ ಸಂಬಳ ಏರಿಕೆಗೆ ಮುಂದಾದ ರಾಜ್ಯ ಸರ್ಕಾರ

ವೇತನ ತಾರತಮ್ಯ, ರಜೆ, ಹಿರಿಯ ಅಕಾರಿಗಳ ಕಿರುಕುಳ ತಪ್ಪಿಸಿ ಗೌರವಯುತ ಜೀವನಕ್ಕೆ ಒತ್ತಾಯಿಸಿ ಹಿಂದಿನಿಂದಲೂ ಪೊಲೀಸರು ಹೋರಾಟ ಮಾಡುತ್ತಾ ಬಂದಿದ್ದಾರೆ.

Ganesh Nachikethu | news18
Updated:June 19, 2019, 8:03 PM IST
ಸಿಹಿಸುದ್ದಿ: ಪೊಲೀಸರ ಸಂಬಳ ಏರಿಕೆಗೆ ಮುಂದಾದ ರಾಜ್ಯ ಸರ್ಕಾರ
ಗೃಹ ಸಚಿವ ಎಂ.ಬಿ. ಪಾಟೀಲ್
Ganesh Nachikethu | news18
Updated: June 19, 2019, 8:03 PM IST
ಬೆಂಗಳೂರು(ಜೂನ್​​.19): ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪೊಲೀಸರಿಗೆ ಸಿಹಿಸುದ್ದಿ ನೀಡಿದೆ. ಪೊಲೀಸರ ವೇತನ ಮತ್ತು ಸೌಲಭ್ಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಔರಾದ್ಕರ್ ಸಮಿತಿ ಶಿಫಾರಸು ಜಾರಿಗೆ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಪೊಲೀಸರ ಕಷ್ಟ ಪರಿಹಾರ ಭತ್ಯೆಯನ್ನಾಗಿ ಮೊದಲು ಸಾವಿರ ರೂಪಾಯಿ ನೀಡಲಾಗಿತ್ತು. ಸದ್ಯ ಇದನ್ನು 1 ರಿಂದ 2 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇನ್ಮುಂದೆ 2000 ರೂ. ಪೊಲೀಸರ ಕಷ್ಟ ಪರಿಹಾರ ಭತ್ಯೆ ನೀಡಲಾಗುವುದು. ಮುಂದಿನ ಜುಲೈ 1ರಿಂದಲೇ ಈ ಆದೇಶ ಜಾರಿಯಾಗಲಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಈ ಹಿಂದೆಯೇ ಪೊಲೀಸ್‌ ವೇತನ ಪರಿಷ್ಕರಣೆಗಾಗಿ ಉನ್ನತ ಸಮಿತಿಯೊಂದನ್ನು ರಚಿಸಲಾಗಿತ್ತು. ಪೊಲೀಸರ ಸಂಬಳ-ಭತ್ಯೆಯಲ್ಲಿ ಶೇ.15ರಿಂದ 20ರಷ್ಟು ಏರಿಕೆಗೆ ಶಿಫಾರಸು ಮಾಡಬೇಕು. ಇನ್ಸ್‌ಪೆಕ್ಟರ್‌ಗಳಿಗೆ ತಹಸೀಲ್ದಾರ್‌ ಮಟ್ಟದ ಸೌಕರ್ಯವನ್ನಾದರೂ ಕಲ್ಪಿಸುವತೆ ಸಮಿತಿ ಸರ್ಕಾರಕ್ಕೆ ಮನವಿ ಮಾಡಿತ್ತು.

ಇದನ್ನೂ ಓದಿ: ಕೊಲೆಯತ್ನ ಪ್ರಕರಣ​: ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಪುತ್ರನ ಬಂಧನ

ಸಮಿತಿಯ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದೆ. ಇದನ್ನು ವೇತನ ಆಯೋಗದ ಮುಂದೆ ಇರಿಸಲಾಗಿದೆ. ಅಲ್ಲಿ ಪೊಲೀಸರ ವೇತನ ಹೆಚ್ಚಳ ಕುರಿತು ಅಂತಿಮ ತೀರ್ಮಾನ ಕೈಗೊಂಡ ಬಳಿಕವೇ, ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಅಂತಿಮ ಸಭೆ ನಡೆದಿದೆ. ಈ ಸಭೆಯಲ್ಲಿ ಔರಾದ್ಕರ್‌ ವರದಿ ಜಾರಿಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ.

ವೇತನ ತಾರತಮ್ಯ, ರಜೆ, ಹಿರಿಯ ಅಕಾರಿಗಳ ಕಿರುಕುಳ ತಪ್ಪಿಸಿ ಗೌರವಯುತ ಜೀವನಕ್ಕೆ ಒತ್ತಾಯಿಸಿ ಹಿಂದಿನಿಂದಲೂ ಪೊಲೀಸರು ಹೋರಾಟ ಮಾಡುತ್ತಾ ಬಂದಿದ್ದಾರೆ. ಇವರ ಸಮಸ್ಯೆ ಪರಿಹಾರಕ್ಕಾಗಿ ಎಡಿಜಿಪಿ ರಾಘವೇಂದ್ರ ಔರಾದ್ಕರ್‌ ನೇತೃತ್ವದಲ್ಲಿ ಪೊಲೀಸ್‌ ವೇತನ ಪರಿಷ್ಕರಣೆ ಉನ್ನತ ಪೊಲೀಸ್‌ ಅಕಾರಿಗಳ ಸಮಿತಿ ರೂಪಿಸಲಾಗಿತ್ತು.
Loading...

ಇದನ್ನೂ ಓದಿ: "ಪ್ರಧಾನಿ ಮೋದಿ ಇವಿಎಂ ಬಗ್ಗೆ ಸಭೆ ಕರೆದಿದ್ದಲ್ಲಿ ನಾನೇ ಹೋಗುತ್ತಿದ್ದೆ": ಮಾಯಾವತಿ ವ್ಯಂಗ್ಯ

ಕೆಎಸ್‌ಆರ್‌ಪಿ ಎಡಿಜಿಪಿ ಕಮಲ್‌ ಪಂಥ್‌, ಸಿಐಡಿ ಎಡಿಜಿಪಿ ಪ್ರತಾಪ ರೆಡ್ಡಿ, ಐಜಿಪಿ ಹೇಮಂತ ನಿಂಬಾಳ್ಕರ್‌ ಹಾಗೂ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಉಮೇಶ್‌ ಅವರನ್ನೊಳಗೊಂಡ ಸಮಿತಿ ಇದಾಗಿತ್ತು.
-----------
First published:June 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...